26 DEC 2020 AT 22:47

ಬೀಸೋ ತಂಗಾಳಿಗು ಅವಳ ಮುಂಗುರುಳು ಮುಟ್ಟೋ ಆಸೆ,
ಆಗಾಗ ಬಂದು ಅವಳ ಚಂದ ಹೆಚ್ಚಿಸುತ್ತವೆ....
ನನಗೆ ಅವಳ ನೋಡೋ ಕೆಲ್ಸ ಕೊಡ್ತವೆ....

ಹುಟ್ಟೋ ಸೂರ್ಯನ ಕಿರಣಗಳಿಗೂ ಅವಳ ಸ್ಪರ್ಶಿಸೋ ಆಸೆ,
ನಾ ಅವಳಿಗೆ ನೆರಳಾಗಿ ನಿಲ್ಲುವೆ....
ಅವುಗಳಿಗೆ ವಿಪರೀತ ಸ್ಪರ್ಧೆ ಕೊಡುವೆ....

ಅರಳೋ ಹೂವಿಗು ಅವಳೊಡನೆ ಇರುವಾಸೆ,
ಅವುಗಳಿಗಿಂತ ಹತ್ತಿರ ನಾನವಳಿಗೆ....
ಅದಕ್ಕೆ ಹೊಟ್ಟೆಕಿಚ್ಚು ಹೂಗಳಿಗೆ....

- ನಾ_ಪರಿಚಿತೆ