ವಿಶಾಲ ಹೃದಯದಿ ವೈಚಾರಿಕ ನಲೆಯಲಿ
ತೆರೆಯಿತು ನಮ್ಮಯ ಸಲಿಗೆಯ ಸಂಪುಟ !
ಹಾರಿತು ಒಲುಮೆಯು ಬಾನಲಿ ತೇಲುತ
ಸ್ನೇಹದ ಹಿರಿಮೆಯ ಸಾರುತ !!
ಮೌನದಿ ಬಂಗಾರ ಬೆಳೆಯುತ ಇದ್ದರೂ
ತುಸು ತುಸು ಖುಷಿಯು ಹುಸಿ ಹುಸಿ
ಸ್ನೇಹದ ಶೃಂಗಾರ ಮಾಡಿತು ಮೋಡಿ !
ಸೋತಿತು ಮೌನ !
ಬೆರೆಯಿತು ಸ್ನೇಹ ! ಚಿರ ನೂತನ ಸುಂದರ
ಸಮ್ಮೋಹನ ಮಾಲೆಯಾಗಿ !!
ಮಾತೆಲ್ಲ ಹೂವಂತೆ ಸೋಂಪಾಗಿ ತನುಯೆರಗಿ ಸಂತೋಷದ ತಂಗಾಳಿ ನವೀರಾಗಿ ಮನಸೇರಿ
ಮನೋಲ್ಲಾಸ !
ನವೋಲ್ಲಾಸ ! ಸಿರಿ ಸಿಂಚನ ಪಸರಿಸಿ
ಸುತ್ತೆಲ್ಲಾ ಸ್ನೇಹದ ಚೆಂದದ ಹಂದರ !!
ನಿಷ್ಕಾಮ ಮೃದು ಅದರಗಳಿಂದ ಉದುರಿದ ಹೃದಯಾಂತರಾಳದ ಆ ಮಾತುಗಳಲ್ಲವೇ !
ಕಚಗುಳಿ ಇಟ್ಟು ತನಿಸಿದವು ಮೈ ಮನ ಪುಳಕಗೊಳಿಸಿ ರೊಮಾಂಚನ !!
ಕಾಲದ ಕನವರಿಕೆ ಕೇಳಿಸದೆ ಉರುಳಿದ ವರ್ಷಗಳು ಕ್ಷಣವಾದವಲ್ಲ ಸಲಿಗೆಯ ಸುಮಧುರ ಗಳಿಗೆಯಲಿ ! ಸಲಿಗೆಯು ಸೋತರು ! ಸ್ನೇಹವು ಸವೆದರು !
ಸ್ಮರಣೆಯ ಆಸರೆಯಿಂದರಲಿ
ಮರುಗದಿರಲಿ ಈ ಮನಗಳು ಅರೆಗಳಿಗೆ !!
ಒಲ್ಲದ ಒಲವನು ಕಸೆಯುವ ಧೋರಣೆ
ಸಲ್ಲದ ಅಸುರರ ಸಂಸ್ಕಾರ !
ಹರಿವಿಗೆ ಸೇರಿವ ನದಿಗಳ ತರಹ
ಬೆರೆಯುವ ಒಲವ ಹೃದಯಗಳು !
ಕಾಲನ ತಿರುವಿಗೆ ಕವಲಲಿ ಹರಿದರೂ
ಸಾಗರ ಸಂಗಮ ಸಾಕಾರ !!
ನಿಂರಾಮ
.-
ಮನಸು ಮಲ್ಲಿಗೆ ಹೂವು ಆಗಿ ಈಗ ನಿತ್ಯ ಹೊಸ ಕಾವ್ಯ ಕನವರೆಕೆ ಕನಸು ....ಮನಸು ಮಾತು ಕೇಳಿ ಕೇಳಿ
ಸೊಗಸು ಸಾವಿರ ಹೊಂಗಿರಣ ಸೂಸಿ ಈ ಜೀವ ನಿತ್ಯ ಪಾವನ .....
ನೂರು ಜನುಮಗಳ ಶೇಷ ಸಲಿಗೆ ಕಾರಣ ನಿಮ್ಮ ಈ ಆತ್ಮ ಸನೀಹ ತಾನ.....
ಮೌನ ಮರೆಸುವ ಮಾಯಾ ಜಾಣ .......ನಗೆಯ ಹಣತೆ ನಿತ್ಯ ಬೆಳಗಿ ಹೃದಯ ಮಂದಿರ ದಾನಿ ನೀವು ....
ಲಿಂಗ ಬೇಧದಲ್ಲೂ ನೂರು ಸಂತರ ಸಂಗೀತ ನಿಮ್ಮ ಮಾತು ...
ಗಳಿಗೆ ಗಂಟೆಗಳು ನಿಮಿಷಗಳಾಗಿರಲು ಸಾಲದಲ್ಲ ಉಳಿದ ಈ ಬದುಕು....
ಮರಳಿ ಬರುವ ಆಸೆ ಮತ್ತೆ ನಿಮ್ಮ ಮಧುರ ಮಾತಿಗೆ....ಭಾಷೆ ನೀಡಿ ಮರಳಿ ಬಂದು ಪೂರ್ಣಗೊಳಿಸುವಿರೆಂದು......ಸಂಬಂಧ ಯಾವುದಾರೇನು ಅಮರ ಪ್ರೀತಿ, ವಿಸ್ವಾಸ, ನಂಬಿಕೆ ಆದರಗಳ
ಗೆಲುವು ಕಂಡ ಒಲವು ಸಾಕು ಯಾವ ಕಾಣಿಕೆ ಯಾಕೆ ಬೇಕು....
ನಿಂರಾಮ
-
ಕವನ
ನಿನ್ನ ಗೌರವಿಸಿಲ್ಲವೆಂದು
ಅವರನ್ನ ನೀನು ಗೌರವಿಸದಿರಬೇಡ
ನಿನ್ನ ದುರುಪಯೋಗ ಆಗುತಿಹುದೆಯೆಂದು
ನೀನು ಕೊರಗುವುದು ಬೇಡ
ಅದಕ್ಕಾದರೂ ಉಪಯೋಗ ಆದೆಯೆಂದು
ಖುಷಿಪಡು ಕಳೆದುಕೊಳ್ಳುವುದೇನಿಲ್ಲ
ಗಲಿಬಿಲಿ ಪಡಬೇಡ ಬಲಿಯಾದೆ ನಾನೆಂದು
ಬಲಿಕೊಟ್ಟ ಅವನು, ನಾಳೆ ಇನ್ನೋಬ್ಬರ
ಬಿಲದಲ್ಲಿ ಮರಿಬೇಡ ನೀ ಎಂದೂ
ಕರೆಯದೇ ಬರುವ ಕಷ್ಟಗಳಿಗೆ ಅಂಜುವುದೇಕೆ
ಕರೆದರೂ ಬಾರದ ಸುಖಃದ ನಿರೀಕ್ಷೆ ನಿನಗೇಕೆ
ಕಣ್ಣಿಗೆ ಕಾಣದ ಹಗುರ ಮನಕೆ
ಸಲ್ಲದ ಆಲೋಚನೆಗಳ ಮಹಾಭಾರಬೇಕೆ
ಬರುವ ಬದುಕನ್ನು ಬಂದಂತೆ ಸ್ವೀಕರಿಸು
ಹುಸಿ ಖುಷಿಯ ಭಾವನೆಗಳನ್ನು ನಿನ್ನ ಇತಿ ಮಿತಿಯಲಿ ಬಂಧಿಸು
ಅನಿಷ್ಠ ಮನಕೆ ನಿತ್ಯ ಅಳುಕಿಸುವುದೇ ಕಾಯಕ
ನಿರ್ಮಲ ಅಂತರಾತ್ಮದ ಮಾತು ಕಷ್ಟವಾದರೂ ಕೇಳು ಸಾಕು ನೀ.....
ಇದು ನಿನ್ನ ನುಡಿಯಾದರೆ ಇದು ನಿನ್ನ ನಡೆಯಾದರೆ
ನಿನ್ನ ಹೆತ್ತ ಹೊತ್ತ ತಾಯಿ ಭೂಮಿ ಪಾವನ ನೋಡು !!!
ನಿಂರಾಮ
-
ಶಿವ " ಕುಮಾರ"
ದಯೆಯಲಿ ಧರ್ಮವ ಕಂಡವ ನೀನು
ಅಣ್ಣ ಬಸವನ ಕಾಯಕ ನಿಷ್ಠೆಯ ಪಾಲಕನು
ದೀನರ ದಾಹವ ಅರಿತವ ನೀನು
ಅನ್ನ ಅಕ್ಷರ ಜ್ಞಾನದ ತ್ರಿವಿಧ ದಾಸೋಹದ ಸಾಧಕನು
ಅಂಧ ಮಕ್ಕಳ ದಾರಿಗೆ ಬೆಳಕು
ಆಸರೆ ಬಯಸಿದ ದೀನರಿಗೆ ಎಲ್ಲವೂ ನೀಡಿದ ಭಗವಂತ
ಖಾವಿಯ ಧರಿಕೆ ಘಾಡ ವಿಭೂತಿ ಧಾರಣ ನಿಜ ಶರಣ
ಸರಳ ಸಜ್ಜನಿಕೆ ಶಿವಾರಾಧನೆಯ ಸಂತ
ಜಾತಿ ಮತಗಳ ಎಣಿಸಲಿಲ್ಲ ಆಡಂಬರ ಹತ್ತಿರ ಸುಳಿಯಲಿಲ್ಲ .....ದಾಸೋಹ ಒಂದೇ ಕರತಲ
ನಿತ್ಯವು ಹೆಗಲಿಗೆ ಅಕ್ಷಯ ಜೋಳಿಗೆ
ದನಿವರಿಯದೇ ಪರರಿಗಾಗಿ ದುಡಿದ ವಜ್ರಕಾಯ
ನೂರ ಹನ್ನೆರಡು ವಸಂತಗಳ ಬದುಕಿನ ಸಾರ್ಥಕ ಪ್ರಾಯ
ತೊರೆಯಲು ಇಚ್ಛಿಸಿದ ಮರುಕ್ಷಣ ಈ ಭವ
ಕೈಲಾಸ ಬಾಗಿಲ ತೆರೆದಿಹ ಪರಶಿವ
ಮೇಳೈಸಿ ಸಡಗರ ಸಂಭ್ರಮ
ನಿನ್ನಯ ಹೆಜ್ಜೆಗೆ ಪಾವನ ಈ ನೆಲ
ದರ್ಶನ ಭಾಗ್ಯಕೆ ಧನ್ಯವು ಮನುಕುಲ
ಸಿದ್ಧಗಂಗೆಯ ಸೂರ್ಯ ಶಿವಕುಮಾರ ಶ್ರೀ ಶ್ರೀ ಶ್ರೀ
ಮರಳಿ ಬಾ ಧರೆಗೆ ನಿನ್ನ ದಯೆ ಬೇಕು ನಮ್ಮಂತ ದೀನರಿಗೆ
ನಿಂರಾಮ
-
ಚಿಕ್ಕವರಿಂದ ಬುದ್ಧಿ ಹೇಳಿಸಿಕೊಳ್ಳತಿದಿವಿ ಅಂದರೆ ಭವಿಷ್ಯ ಸರಿಯಾದ ದಾರಿಯಲಿ ನಡಿತಿದೆ ಅಂತ ಅರ್ಥ........
ಹಿರಿಯರಾದವರಿಂದ ಯುವಕರು ಪದೇ ಪದೇ ಬುದ್ಧಿ ಹೇಳಿಸಿಕೊಳ್ಳುವ ಪರಿಸ್ಥಿತಿ ತಂದಕೋತಿದಾರೆ ಅಂದರೆ ಭವಿಷ್ಯ ಪ್ರಶ್ನಾರ್ಥಕ ಎಂದರ್ಥ...
ನಿಂರಾಮ.....-
ತಾಯಿ ಕರೆಗೆ ಬೇಸರದಿಂದಲೇ
ಆಟ ಮುಗಿಸಿ ಓಡುತಿರುವ ನೇಸರ
ವನಕೆ ಕೂಗಿ ಹೇಳಿ ಹೋರಟಿಹ ನೋಡು
ನಾಳೆ ಮರೆಯದೇ ಬರುವೆನೆಂದು....
ತಿರುಗೋ ಭುವಿಯ
ಒಡಲಲಿ ಎರಗಲು
ಕೆಂಡ ಕಿರಣಗಳ ಕಳಚಿ
ಕರುಣೆ ಕಿರಣಗಳ ಧರಿಸಲು ಆತ
ಹರಿದು ಹರಡಿದ ಮೋಡಕೆ ನೋಡು
ಅಬ್ಭಾ ಎಂಥಾ ಶೃಂಗಾರ !!
ನಿಂರಾಮ...
-
ಬಾಳ ಕುದುರೆ ಸಾಗಿ ಬಂದ
ದಾರಿ ನೂರು ತರಹ
ಕಂದ ಕೇಳು ಚೆಂದದಿಂದ
ನನ್ನ ಬಾಳ ಸಹಚರ ......
ಮೊಗ್ಗಿನ ಆ ಹಿಗ್ಗಿನ ದಿನ
ಸುಗ್ಗಿಯ ತರ
ಕಪಟ ಅರಿಯದ ಆಟ
ಜ್ಞಾನ ವೃದ್ಧಿಯ ಪಾಠ
ಚೆಂದ ಆ ದಿನ ಕಂದ ನಮಗೆ
ಸಂಘ ತಂದ ಸಡಗರ .......
ನಂದ ಗೋಕುಲ ಅದು
ನಾವು ಆಡಿ ಬೆಳೆದ ಪರಿಸರ
ಅಣ್ಣ ಅಕ್ಕರ ಅಕ್ಕರೆ
ನನ್ನ ಬಾಯಿಗೆ ಸಕ್ಕರೆ
ಅಪ್ಪ ಅಮ್ಮಗೆ ಅದುವೇ ಸ್ವರ್ಗ
ನಾವು ಆಡಿ ನಕ್ಕರೆ .......
ನಿಂರಾಮ
-
ಹೆಣ್ಣು ಯಾವಳೋ ಈ ಕನ್ನೆ ಯಾವಳೋ
ಮಲ್ಲೆ ಹೂವು ದಂಡೆ ಧರಿಸಿ
ನೀಳ ಜಡೆಯಲಿ ನಲಿವ ಯುವತಿ
ಜೋಡಿ ಕಿವಿಗೆ ಜೋತ ಮುತ್ತಿನ ಓಲೆ
ತೇಲಿ ತೇಲಿ ಕೆಂಪು ಕೆನ್ನೆಗೆ ಮುತ್ತು
ಹೆಣ್ಣು ಯಾವಳೋ ಈ ಕನ್ನೆ ಯಾವಳೋ
ನೆಟ್ಟ ಮೂಗಿಗೆ ಮೂರು ಮುತ್ತು
ಹೊಳೆವ ಚುಕ್ಕೆಯ ಚೊಕ್ಕ ಚಿತ್ತಾರ
ತಿದ್ದಿ ತೀಡಿದ ಕಣ್ಣ ಹುಬ್ಬು
ಅದಕೆ ಕಾಡಿಗೆ ಅಂದ ಚೆಂದ
ಹೆಣ್ಣು ಯಾವಳೋ ಈ ಕನ್ನೆ ಯಾವಳೋ
ಹಸಿರು ಬಣ್ಣದ ಸೀರೆ ಉಟ್ಟ
ಅದಕೆ ಹೋಲುವ ರವಿಕೆ ತೊಟ್ಟ
ನವಿಲ ನಡಿಗೆಯ ಹುಡುಗಿ
ತರುಣ ಮನಗಳ ಕೆದಕೋ ಬೆಡಗಿ
ಹೆಣ್ಣು ಯಾವಳೋ ಈ ಕನ್ನೆ ಯಾವಳೋ
ಬಟ್ಟಲಳತೆಯ ಹಣೆಯ ನಡುವೆ
ಹೊಳೆವ ಬದುಕಿನ ಬಣ್ಣ ಧರಿಸಿ
ಅರಳಿ ನಗುವ ಹೂವು ಇವಳು
ನನ್ನ ಬಯಕೆಯ ಸವಿ ಸಿಹಿ ಹಣ್ಣು
ಹೆಣ್ಣು ಯಾವಳೋ ಈ ಕನ್ನೆ ಯಾವಳೋ
ನಿಂರಾಮ-
ಭವ ಬಂಧನದ ಬಿರುಗಾಳಿ ಅಲೆಯೊಳಗಿನ ಯೋಗಿ ಬದುಕು....ಯಾರು ಸಹಿಸದ ಸರಳ ಸರಕು.........
ಎದೆಆಳದಲಿ ಮಡುಗಟ್ಟಿದ ಅನುರಾಗದ ಹೊಸ ಪಲ್ಲವಿ ಹೊರಹೊಮ್ಮಿಸಿ ನೀವೊಮ್ಮೆ ....ವೈರಾಗ್ಯದ ಹಳೆ ಹಾಡುಗಳ ಹಂಗು ತೊರೆದು...
ಸೌಭಾಗ್ಯದೊಂದಿಗಿನ ಆ ನಿಮ್ಮ ನಗುಮೊಗವು...ಹುಣ್ಣಿಮೆ ಚಂದಿರಗೆ ಸಾಟಿ
ಸಕಲ ಸುಗುಣಗಳ ಸಾಕಾರವು....
ಕಣಿಕರ ಮಮಕಾರಗಳ ಆಕಾರವು....
ಆಳ ಅರಿವಿನ ಅಂಗಳವು ನೀವು.......ಅದಕೆ ಸಹಿಸಿ ಸೋಲಿಸಿ ಸಾಗುತಿಹಿರಿ ದುಗುಡ ದುಃಖಗಳ ಸಾಲು ಸಾಲು...
ಬರುವದು ಬರಲೆಂದು ನೋವಲಿ ಬಾಡದಿರಿ ನೀವು......ಕಷ್ಟ ಕಡಲು ದಾಟಿಹ ನಿಮಗೆ ಸುಃಖದ ಸೋಪಾನವೇ ಕಾದಿದೆ ಇನ್ನು....ಅರಳಿ ನಿಂತು ಮಕರಂದ ಸುವಾಸನೆ ಹೊಮ್ಮಿ ಮೈದಡವಿ ಸೆಳೆಯಿರಿ..
ಉಂಡು ಹಾಯಾಗಿ ಮಲಗಿರುವ ಆ ನಿಮ್ಮ ಕನಸಿನ ದುರುಳ ದುಂಬಿಯೊಮ್ಮೆ
... .......ನಿಂರಾಮ
-
ಕರುಳ ಬಳ್ಳಿಯ ನಂಟಿಗಂಟಿ
ಕರಿಯ ಕೊರಳಿಗೆ ಬಂಧನ
ತರುಣ ಮನಗಳ ಆಸೆ ಅರಿಯದ
ಹಿರಿಯ ಜನಗಳ ನಂದನ
ಸರಸ ಸರಿದು ವಿರಸ ಬೆರೆತು
ಒಲಿದ ದೇಹಗಳ ಅಂತರ
ಸೆಳೆದ ಸಂಘದ ಸುಳಿಗೆ ಸಿಲುಕಿ
ಬಯಲ ಬಣ್ಣಕೆ ಆಸರ
ಕಪ್ಪು ನೀರಳೆ ರುಚಿ ನೋಡದೆ
ಹುಳದ ಹೂಗಳ ಸ್ಪಂದನ
ಕ್ಷಣಿಕ ಸುಖದ ನಂಜು ತಂದಿದೆ
ನಿತ್ಯ ನೋವಿನ ಆಕ್ರಂದನ
ಮದುವೆ ಮಡದಿ ವೇದನೆ
ದ್ವಿಗುಣವಾಗಿದೆ ದಿನೇ ದಿನೇ
ಆಸೆ ಹೂವು ನಕ್ಕು ಅರಳದೆ
ಮೊಗ್ಗಿನಲ್ಲಿಯೇ ಮುದುಡಿದೆ
ಒಡೆದ ಮನಗಳ ತೇಪೆ ಬೆಸುಗೆ
ವ್ಯರ್ಥ ಸಾಹಸ ಖಂಡಿತ
ಹಸಿದ ಹರೆಯ ಹದವ ಅರಿತು
ಬೆಸೆದ ಬಂಧನ ಸಾರ್ಥಕ
ನಿಂರಾಮ
-