ಹೆರ್ಬಲ್ ಲೈಫ್ ನೋಬೆಲ್ ಲೈಫ್
ಹಗುರವಾಗಿದೆ ದೇಹ ಮಧುರವಾಗಿದೆ ಜೀವನ
ನಿತ್ಯ ಹೆರ್ಬಲ್ ಲೈಫ್ ಕಮ್ಯೂನಿಟಿ ಜೊತೆಯಲಿ !!
ನಿಧಾನಿಸಿ ಕುಡಿಯಲು ಆರಂಭದ ಅಫ್ರೆಶ್
ಜಡ ಮನ ತಾಗಿ ಉಲ್ಲಾಸ ಉನ್ಮಾದದ ತನನ
ಪಾವನ ಪರಿಶುದ್ಧ ಪವಿತ್ರ ಪಾನೀಯ
ಪ್ರೋಟೀನ ಶೇಕ ಫಾರ್ಮುಲಾಗಳ ಮಿಶ್ರಣ !
ನರಳಾಡಿದ ನರಗಳಲೀಗ ಯಾಕೋ ಸಂಭ್ರಮ
ಸ್ಥಿತಿ ಲಯದ ಭವ ಬೀಜಗಳ ಅಮೃತ ಬೆರೆತು
ಶಾಂತಿ ಸಹನೆ ಸಂಸ್ಕಾರಗಳು ಸಹ ಸಂಗಮ
ಆಹಾರ ನಿರಾಹಾರ ಸಮತೂಕ ತತ್ವ ಅರಿತು !
ಅಪರಿಮಿತ ಆಹಾರ ಅನಿಯಮಿತ ಆಯಾಸ
ನಿತ್ಯ ನಿಸ್ವಾಧ ನಿಷ್ಕ್ರಿಯತೆ ಬವನೆಗಳ ಬದುಕು
ವಿಕಲಾಂಗ ಸಿಥಿಲಾಂಗ ಸಕಲ ರೋಗಗಳ ಭಾಗ್ಯ ವಿನಾಕಾರಣ ವಿಕಾರ ಆಲೋಚನೆಗಳಲಿ ತೇಲಿ
ಬಳಸುವ ಬಾ ಹೆರ್ಬಲ್ ಲೈಫ ಉತ್ಪನ್ನ ಮನುಕುಲವಾಗಲು ಸಕಲ ಕಲಾ ವೈಭವದ ಸಂಪನ್ನ
ಆರೋಗ್ಯ ಪರಿಹಾರಿ ಸಮೃದ್ಧಿಯ ಸಹಕಾರಿ
ಸಿರಿಕಾಯ ಸಿರಿಭಾವ ಧನಾತ್ಮಕ ಸಾಮ್ರಾಜ್ಯದ ಗುರಿ
ಹಗುರವಾಗಿದೆ ದೇಹ ಮಧುರವಾಗಿದೆ ಜೀವನ
ನಿತ್ಯ ಹೆರ್ಬಲ್ ಲೈಫ್ ಕಮ್ಯೂನಿಟಿ ಜೊತೆಯಲಿ !!
ನಿಂರಾಮ.....
-
ಸ್ವರಚನೆ
ಹೇಳುವ ನೀತಿ ಸಾಗುವ ರೀತಿ
ಸುಗುಣ ಸ್ಫೂರ್ತಿ ತನು ಮನ ಕಾಂತಿ
ರೀತಿನೀತಿಗಳಲಿ ಇದ್ದರೆ ಕ್ರಾಂತಿ
ನೆಮ್ಮದಿ ನಿನಗೆ ಅದು ಕೇವಲ ಭ್ರಾಂತಿ....!
ಬಹುವಿಧ ಬಯಸುವ ಬೇಗುದಿ ಬಯಕೆ
ಆರದ ಹಸಿವಿನ ಆಹಾಕಾರ....,
ಇತಿ ಮಿತಿ ಇಲ್ಲದ ಸುಳ್ಳಿನ ಸಂಭ್ರಮ
ಬೆನ್ನಿಗೆ ಬೀಳುವ ಭೀತಿ ಅದು ಭಯಂಕರ
ತಿರುಗುವ ಕಾಲನು ಹೂಡುವ ದಾಳಲಿ
ಸಾಯದು ಸತ್ಯ ಬಾಳದು ಮಿತ್ಯ
ಕರ್ಮದ ಫಲದಲಿ ಧರ್ಮದ ದಾರಿ
ಕಂಡರವರೆಷ್ಟೋ ಕಾಣದೇ ಅಳಿದವರೆಷ್ಟೋ
ದಾಹದ ದೋಣಿಗೂ ಇತಿ ಮಿತಿ ಉಂಟು
ಮೀರುವ ಭಂಟರಿಗೆ ಬಿಡದು ಮುಳುಗುವ ನಂಟು
ಸೌಗಂಧ ನೋಡಲ್ಲಿ ಸಂತೃಪ್ತಿ ಮೊಗದಲ್ಲಿ
ದುರ್ಗಂಧವೇ ಸೂಸುವುದು ದಾಹದ ದೇಹದಲಿ....
ನಿಂರಾಮ...
-
ಸಾಗುವ ಜೀವನ ಚಕ್ರದ ತಳದಲಿ
ಕ್ರೋಧವು ಸಾಯಲಿ ಬೇಧವು ಬಾಡಲಿ
ಕೆಡುಕನು ಬಯಸದ ಸ್ನೇಹದ ಸಂಭ್ರಮ
ನೆನಪಿನ ಆಳಲಿ ಅಳಿಯದೇ ಉಳಿಯಲಿ...!
ಬಂಧನ ಬಿಗಿಯಲು ಭಾವವು ಸೂಸಲು
ಕಾರಣ ಪಾವನ ಪ್ರಕೃತಿಯು
ಹಂಗಿನ ಬದುಕಿನ ಜಾಲವ ಬೆಳೆಸಿದೆ
ಅನುಭಾವ ಆಸೆಗೆ ಸಂಘವ ಸೃಷ್ಟಿಸಿದೆ....!
ಶೂನ್ಯ ತೀರ ಸೇರುವ ಬರದಲಿ
ಮರೆಯುವ ತೊರೆಯುವ ಸಾಹಸ ಸಾಕು
ಜೀವನ ಜಾಣ್ಮೆಯ ಜೋಕಾಲಿ
ತಾಳ್ಮೆಯು ತೂಗಲು ಉಪಕಾರಿ
ತನ್ಮನ ತಂಗಲು ಹುಡುಕಲು ಸಹಗುಣ
ಸಲಿಗೆ ಸಂವನ ಅದರ ಸಹಜ ಋಣ
ಸುದ್ಧಿ ಶೂರರಿಗೆ ಸಾವಿರ ಸೋಲು
ಸಿರಿಗಂಧದ ಗಾಳಿಯೇ ಯಾವತ್ತು ಮೇಲು....!
ನಿಂರಾಮ್....-
ಸಹಜ ಮತ್ತು ಸಕಾರಾತ್ಮಕತೆಯೇ ಪ್ರಾಕೃತಿಕ
ಅಸಹಜ ಮತ್ತು ನಕಾರಾತ್ಮಕತೆ
ವಿಕಾರತೆಯ ಮೂಲ
ಭಾವನೆ ಆಗಿರಬಹುದು ದೇಹ ಆಗಿರಬಹುದು ಸಹಜ ಸಕಾರವಾಗಿದ್ದಲ್ಲಿ
ಪ್ರಶಾಂತ ಪ್ರಫುಲ್ಲ ತೇಜಸ್ಸಿನಿಂದ ಕೂಡಿದ್ದಾಗಿರುತ್ತದೆ.
ಭಾವನೆಗಳನ್ನು ಸಂಸ್ಕಾರ ಯೋಗದಲ್ಲಿ ಸಮೀಕರಿಸಿ ನಕಾರತೆಗಳನ್ನ ನಾಶ ಮಾಡಬೇಕು .......
ನಿಂರಾಮ್.....
-
ಸೌಜನ್ಯ
ಸೌಹಾರ್ಧ
ಸಂಪ್ರೀತಿ
ಸಹಯೋಗ
ಪರಿಭೃಮಿಸಿ
ಪರಿಧ್ಯಾನಿತ,
ಅಭಿಮಾನ
ಸಿರಿಗಾನ
ಸಿಂಚನದಲಿ
ಮಿಂದೆದ್ದ
ಪರಿಚಯ
ಪರ್ವ
ಪರಿಮಳ
ಪರಿವಾರವಾಗಿ
ಅನುದಿನ
ಅನುಕ್ಷಣ
ಅನುಭಾವದ
ಅನುರಾಗ
ಅರುಣೋದಯ
ಸಂಭ್ರಮ....!
ಕಂಗೆಟ್ಟ
ಕಾಲದ
ಕವಲಿಗೆ
ಸಿಲುಕಿ
ಪರಿಚಯ
ಪರಕೀಯವಾಗಿ
ಅವಸರಿಸಿ
ಅವತರಿಸಿ
ಅಳಿದು ಉಳಿದು
ಹಾಳು ಹಂಪೆ
ರೀತಿ
ಮರೆಯಲಾಗದ
ಮಾನಸ
ಮೌನ
ಗಾನ ಯಾನ....!!
ನಿಂರಾಮ್
-
ಅಭಿನಂದನಾ ಸಾಲು...
ಸಲಿಗೆ ಎಂದು ಕೂಗಿ ಕರೆದು
ಕಸವಿಸಿಗೆ ತಳ್ಳಲಾರೆ ನಿರ್ಮಲವಾಗಿರಿ
ದೂರದಿಂದಲೇ ಕೇಳಿ ತಿಳಿಯುವೆ
ಗತ್ತಿನ ಠೀವಿಯ ಆ ಅಂತಸ್ತಿನ
ಆಸೀನದ ನಿಮ್ಮ ಧರ್ಮಾಧಿಕಾರ
ಸಹಿಸಿ ಸಾಗುವ ಬರದಲಿ
ನಿಮ್ಮತನಕೆ ಧಕ್ಕೆಯಾಗದಿರಲಿ
ಒಂಟಿ ಎಂದು ಕೊರಗಿ ನಡೆ ಇಡದಿರಿ
ದೈವರಕ್ಷಾ ಕಂಕಣ ಇದ್ದೇ ಇದೆ ನಿಮ್ಮ ಕೈಯಲಿ
ಪ್ರಾವಧಾನದ ಪ್ರಮೆಯಿರಲಿ
ಅವ್ಯವಸ್ಥೆಯಲ್ಲೂ ನೀವು ಸುವ್ಯವಸ್ಥೆಯಾಗಿರಿ
ದುಷ್ಟರ ದೊಷಗಳ ಕಡೆ ಸದಾ ನಿಗಾ ಇರಲಿ
ದಯೆ ಅಂತೂ ಇದ್ದೇ ಇರಲಿ ನಿಷ್ಠ ನಮ್ರ ಆಧೀನರಲಿ
ನಿಂರಾಮ್....
-
ಸಾವಿರ ಸಾವಿರ
ಸಂವಹನ
ಸಾಕಾರದಿಂದ
ನಿಷ್ಕಲ್ಮಷ ನಿಷ್ಕಾಮ
ನಿಮ್ಮಭಾವಗಳ ಭಂಗಿ
ನನ್ನಂತರಾಳದಲಿ
ಸದಾ ಹಸಿರಾಗಿ ಪ್ರಜ್ವಲ
ಬೆಳಕಾಗಿ
ಉಳಿದು ಬಿಟ್ಟಿವೆ
ಸ್ಮರಿಸುವ ಸ್ಪಂದಿಸುವ
ಸಂವಹನ ಸಾಧಿಸುವ
ಅನಿವಾರ್ಯತೆ ದೂರವಾಗಿಸಿವೆ......
ನಿಂರಾಮ್-
ಬುದ್ದಿ ಜೀವಿ ತಾನು ಹೇಳಿದ್ದೇ ಸರಿ
ಅಂತಾ ಸಾಧಿಸುತ್ತಾ ತನ್ನ ಬುದ್ಧಿವಂತಿಕೆಯ
ಪ್ರದರ್ಶನ ಮಾಡುತ್ತಾ ಇರುತ್ತಾನೆ
ವ್ಯವಹಾರಿಕ ಜೀವಿ ಪ್ರತಿ ಘಟನೆ
ಒಡನಾಟಗಳ ಲಾಭದ ಕಡೆಗೆಯೇ
ಆಲೋಚಿಸಿ ಸಾಂದರ್ಭಿಕ ವ್ಯಕ್ತಿಯಾಗುತ್ತಾನೆ
ಆದರೆ ಭಾವಜೀವಿಗಳು ಮಾತ್ರವೇ ಸಂಬಂಧ ಸಂದರ್ಭಗಳನ್ನ
ಭಾವನಾತ್ಮಕವಾಗಿಸಿ ಸಹೃದಯತೆ ಮೆರೆಯುತ್ತಾರೆ
ಹೃದಯ ಸ್ಪರ್ಷಿ ಒಗ್ಗೂಡುವಿಕೆಯಿಂದ
ಸುತ್ತಲ ವಾತಾವರಣ ಸ್ನೇಹಪರ ಮತ್ತು
ಭಾವಸ್ಪರ್ಷಿಯಾಗಿಸುತ್ತಾರೆ ಮತ್ತು ಸದಾ ಸ್ಮರಣೀಯರಾಗುತ್ತಾರೆ.
ನಿಂರಾಮ್-
"ಸಂಕೋಲೆಯೊಳಗಿನ ಬಂಧಿ"
ನೂರು ಕನಸಿನ ನವ ತರುಣಿ ನಾನು
ಸಾವಿರ ಸಂಕೋಲೆಯೊಳಗೆ ಬಂಧಿ
ದೈವ ದೂರ ಮಾಡಿದರೆ ತಾಳಿ
ಮುಡಿದ ಹೂ ಹೊಸಕಿದಿರಿ
ಹಣೆಯ ಸಿಂಧೂರ ಅಳಿಸಿದಿರಿ
ಬಿತ್ತಿದ ಭಾವನೆಗಳ ಬೇರು ಕೀಳದೇ...
ಶೃಂಗಾರ ಕಸಿದರೆ ಸಾಕೆ ? ವಿರಹ ಸುಡದೆ
ಬೀಳುವ ಕನಸುಗಳ ಕಳೆ ಕೀಳದೆ
ಉಕ್ಕಿ ಬರುವ ಬಯಕೆಗಳಿಗೆ ಏನೆಂದು ಹೇಳಲಿ
ಹದಿ ಹರೆಯ ದೇಹವಿದನು ಹೇಗೆ ಸಂತೈಸಲಿ
ಎದೆಯ ಹರೆಯ ಭಾರ ಚಡಪಡಿಸಿ ತಡವರಿಸಿ
ಬಿಡಿಸಿಕೊಳ್ಳಲೆತ್ನಿಸಿಕೊಳ್ಳುತಿದೆ ಕವಿಕೆ ಕುಣಿಕೆ
ಇರುಳುಗಳು ಯುಗಗಳಾಗಿವೆ ನಿದ್ರೆ ಬಾರದೆ
ಮನೆ ಮಾಳಿಗೆ ಏರಿ ಮೌನ ಮುರಿದು ಅಳುವೆ
ಬಿಕ್ಕಿ ಬಿಕ್ಕಿ ದುಃಖ ಉಕ್ಕಿ ಉಕ್ಕಿ
ಮೈಸೋಕುವ ತಂಗಾಳಿಯೇ ಮುದ ನೀಡುವ ಬೆಳದಿಂಗಳೇ
ಒಪ್ಪಿಸುವೆ ನಿಮಗೆ ತವಕಿಸುವ ಈ ದೇಹ
ಉಟ್ಟ ಈ ಬಿಳಿ ಉಡುಗೆ ಸರಿಸಿ
ತಣಿಸಿರಿ ವಿರಹದುರಿ ಉಣಿಸಿರಿ ರತಿಸುಖದ ರಸದೂಟ
ಚಂದ್ರ ಮೋಡ ಮರೆಗೆ ಸರಿಯುವ ಮುನ್ನ
ಅಮ್ಮ ಕೂಗಿ ನನ್ನ ಕರೆಯುವ ಮುನ್ನ.
ನಿಂರಾಮ....
-
ಯಾಚಿಸುವ ಮೊದಲು ಯೋಚಿಸು
ಪ್ರೀತಿ ವಿಶ್ವಾಸ ನಂಬಿಕೆ ಎಂಬ ಭಾವನಾತ್ಮಕ
ಸಂಪನ್ಮೂಲಗಳನ್ನು
ವ್ಯವಹಾರಿಕ ಆಲೋಚನೆಯಿಂದ
ಬಂಧಿಸಲಾರೆವು....!
ಅವುಗಳಿಂದ ಅವುಗಳಿಗಾಗಿ ಅವುಗಳಗೊಸ್ಕರ ವಿನಿಯೋಗವಾದರಷ್ಟೇ ಪರಮಾನಂದದ ಪ್ರತಿಫಲ
ಅವಿಶ್ವಾಸ ಅಪನಂಬಿಕೆಗಳ ಒಳ ಸುಳಿಯಿಂದ
ಸಂಪ್ರೀತಿ ಸೌಧ ನಿರ್ಮಿಸಲಾರೆವು...!!
ನಿಂರಾಮ್
-