ನಮ್ಮ ಹಾಗೆ ನಾವು ಇರಬೇಕೆಂದರೆ,
ಮೊದಲು
ನಾವು......
ನಮ್ಮೊಳಗೆ ನಾವಾಗಿರಬೇಕು....
Nikhita magadum-
"YOU WILL GROW BEAUTIFULLY IN YOUR OWN WAY"🌼
ಶಿಕ್ಷಣ ಪಡೆಯುವ ಪ್ರತಿಯೊಬ್ಬರು ಸಮಾನರು
ಎಂದು ಗುರುತಿಸುವುದು ಸಮವಸ್ತ್ರ,
ಯಾರೇ ಯಾಗಿರಲಿ,ಅದಕ್ಕೆ ಬದ್ದರಾಗಿರಬೇಕು,
ಇಲ್ಲಿ ಯಾರಲ್ಲೂ ಮೇಲು:ಕೀಳು
ಎಂಬ ಭಾವನೆ ಇರಬಾರದು,
ಶಾಲೆಗಳಿಗೆ ಹೋಗುವುದು ಶಿಕ್ಷಣ ಪಡೆಯುವುದಕ್ಕೆ
ಹೊರತು,ಧರ್ಮ ಪ್ರಚಾರಕ್ಕಲ್ಲಾ....
Nikhita magadum-
ಏನು ತಿಳಿಯದೆ ಜಾರುವ ಕಂಬನಿಗೆ,
ಸಾಕು ನಿಲ್ಲಿಸು ಎನ್ನುವ ಮನಸ್ಸು.
ಮನಸ್ಸಿಗೆ ಏನ್ ಗೊತ್ತು-ಜಾರುವ ಕಂಬನಿಗೆ ಕಾರಣವೇ
ಈ ಸಾಕು ನಿಲ್ಲಿಸು ಎನ್ನುವ ಮನಸ್ಸು.
ಮನಸ್ಸಿಗೆ ಬುದ್ಧಿ ಹೇಳುವೆ ಎಂಬ ಮೆದುಳು,
ಕಣ್ಣೀರಿಗೆ ಸಮಾಧಾನ ಹೇಳಿತು.
ಇಷ್ಟೆಲ್ಲಾ ಆಗುತ್ತಿದ್ದರು,ತನ್ನದೇನು ತಪ್ಪಿಲ್ಲ ಎಂದೂ
ನಗುತ್ತಿರುವ ಅನುಕ್ತ ಭಾವನೆಗಳು.
ಇದೊಂದು ವಿಚಿತ್ರವಾದ ಪಂಜರ..
ಇದರಲ್ಲಿ ಸಿಲುಕಿರುವ
(ಮನಸ್ಸು,ಮೆದುಳು,ಹೃದಯ, ಅನುಕ್ತ ಭಾವನೆಗಳು)
Nikhita magadum-
ನಮ್ಮನ್ನು ನಿರ್ಲಕ್ಷಿಸಿದವರನ್ನು,
ನಾವು ಕೂಡ ನಿರ್ಲಕ್ಷಿಸಿಯೆ ಮುಂದೆ ನಡೆಯಬೇಕು,
ನಿರ್ಲಕ್ಷ್ಯಕ್ಕೆ-- ನಿರ್ಲಕ್ಷ್ಯವೇ ಉತ್ತರ.....
Nikhita magadum-
ಬದುಕು ಸುಂದರವೇ...
ಯಾವುದು ಶಾಶ್ವತವಲ್ಲ
ಎಂದು ನಾವು ಅರಿತಿದ್ದರೆ...
ಸಂಪತ್ತು,ಸ್ನೇಹ,ಪ್ರೇಮ
ಕೊನೆಯಾಗುವುದು
ಒಂದಿನ...
Nikhita magadum-
ನೀನಿಲ್ಲದ ಬದುಕು ಕಲ್ಪನೆಗು ನಿಲುಕದು,
ನಿನಗಲ್ಲದೆ ಮತ್ಯಾರಿಗು
ಈ ಹೃದಯ ಜಾರದು....
Nikhita magadum-
ಪರಿಸ್ಥಿತಿ ಎಂಬ ದೊಡ್ಡ ಸರೋವರದಲ್ಲಿ,
ಮನಸ್ಥಿತಿ ಎಂಬ ಆ ಪುಟ್ಟ ದೋಣಿ ದಿಕ್ಕನ್ನು ಬದಲಿಸುವುದು ಸಹಜ ,
ಆದರೆ ಸರಿ ದಾರಿ ಗೊತ್ತಾದ ಮೇಲೆ ಸರಿಯಾದ ದಿಕ್ಕಿನಲ್ಲಿ ಚಲಿಸಬೇಕು ಅಷ್ಟೇ...
Nikhita magadum-
ಎಲ್ಲರನ್ನು ನಗಸೋದು ಜೀವನವಲ್ಲ,
ನಮ್ಮನ್ನ ನಗಸೋರನ್ನ ನಗಸ್ತಾ ಕಾಪಾಡಕೊಂಡು ಹೋಗುವುದು ಜೀವನ...
Nikhita magadum-
ಕೆಲವೊಮ್ಮೆ ನಮ್ಮ ಮನಸ್ಸು ಕೇಳೋ ಪ್ರಶ್ನೆಗಳಿಗೆ
ಉತ್ತರ ನೀಡಲು ಆಗುವುದಿಲ್ಲ,
ಆಗಿರೋ ಗಾಯಕ್ಕೆ ಮತ್ತಷ್ಟು ಬರಿ ಎಳೆದಂತಾಗುವುದು...
Nikhita magadum-
ಪುಸ್ತಕದ ಹಿಂದಿನ ಪುಟಗಳನ್ನ ತಿರುವಿದರೆ,
ಮತ್ತದೆ ಹಳೆ ಸುಂದರ ಕ್ಷಣಗಳ ನೆನಪುಗಳು,
ಕೊನೆಯದಾಗಿ ಕಂಬನಿಯ ಪೂರ್ಣ ವಿರಾಮ.
ಹಳೆ ನೆನಪುಗಳನ್ನು ಎಷ್ಟೇ ಉಜ್ಜಿದರು,
ಅದರ ಹೊಳಪು ಯಾವತ್ತೂ ಮಾಸಲ್ಲ...
Nikhita magadum
-