✍️ನೀಲಾ💙   (✍️ನೀಲಾ💙)
2 Followers · 7 Following

Joined 3 May 2021


Joined 3 May 2021
25 SEP 2021 AT 17:13

@neela682_




ಫೋನೆಂಬ ಬೋನಿನೊಳು ಯಾರೂ ಬಂಧಿಸಿರದ ಬಂಧಿ ನಾನು!!
ಯಾರೂ ಕಟ್ಟಿರದ ಸರಪಳಿಯನ್ನು
ನನಗೂ-ಫೋನಿಗೂ ಸೇರಿಸಿ ಕಟ್ಟಿಕೊಂಡು, ಬಿಡಿಸಿಕೊಳ್ಳಲಾರೆನೆಂದು ಪರದಾಡುವ ಕೈದಿ ನಾನು!!

-


24 SEP 2021 AT 8:48

ನನ್ನ ಸುತ್ತ ವೃತ್ತ ಹಾಕಿ ಪರಿಧಿಯ ದಾಟದಿರೆಂದು ಬೆದರಿಸುವ ಸಮಾಜದ ಕಣ್ಣಿಗೆ ಕಾಣದಂತೆ
ತ್ರಿಜ್ಯವನ್ನು ಹೆಚ್ಚಿಸಿ ವ್ರತ್ತವನ್ನೇ ದೊಡ್ಡದಾಗಿಸಿ ನಾನು ಪರಿಧಿಯ ದಾಟಿಲ್ಲವೆಂದು ಬಾಯಿಮುಚ್ಚಿಸುವ ಜಾಣ್ಮೆಯಿಂದ ನನ್ನ ಮಿತಿ ಮೀರುತ್ತೇನೆ!!

ಅನಂತರ ನನ್ನ ಬಂಧಿಸಲು ಪ್ರಯತ್ನಿಸಿದ ಸಮಾಜದ ಬಾಯಿಗೆ ಬೀಗ ಹಾಕಿ ಒಂದು ಗತಿ ಕಾಣಿಸುತ್ತೇನೆ!🤙👿


@neela682_

-


22 SEP 2021 AT 17:12

@neela682





ಕೇಳಿದ್ದನ್ನೆಲ್ಲ ಕೊಡಿಸುವ ನೀನು,
ನಿನಗೆ ಎದುರಾಡುವ ನನ್ನ ನಾಲಿಗೆಗೆ ಒಂದು ಲಗಾಮನ್ನು ಬೇಗ ಕೊಡಿಸು ಅಮ್ಮಾ...!!
🥺❤️


-


22 SEP 2021 AT 16:16

ಓ ದೇವರೆನಿಸಿಕೊಂಡವನೇ.....
ನಿನ್ನ ಹಸ್ತಗಳಿಗೂ ಸುಸ್ತಾಗಿರಬಹುದಲ್ಲವೇ?
ಕಾಣಿಕೆಯೆನ್ನುವ ಲಂಚಕೊಟ್ಟು ಪಾಪಿಷ್ಠ ಕೆಲಸಕ್ಕೆ ದಿಕ್ಕುತೋರಿಸೆನ್ನುವ ಸ್ವಾರ್ಥಿಗಳಿಗೆ,
ಒಲ್ಲದ ಮನಸ್ಸಲ್ಲಿ 'ಅಸ್ತು' 'ಅಸ್ತು' ಎಂದು!!



@neela682_

-


21 SEP 2021 AT 4:38

ಚಿಂತಕಿಯಾಗಬೇಕಿಲ್ಲ ನಾ;
ದುರಾಲೋಚನೆಗಳುಳ್ಳ ದುಷ್ಟರನ್ನು ಕಟುನುಡಿಯಲ್ಲೇ ತಿಂದು ತೇಗುವ
ಹಂತಕಿಯಾಗಬೇಕಿದೆ!!👿





@neela682_

-


19 SEP 2021 AT 14:13

ಕೋಳಿಯ ಆಸೆಗಳೆಲ್ಲವೂ ಅದರ ರಕ್ತದಂತೆ ಹೆಪ್ಪುಗಟ್ಟಿತ್ತು;
ತನ್ನವರ ನೆನೆಯುತ್ತಾ ಕೊನೆಸಲ'ಕೊಕ್ಕಕ್ಕೋ'ಎಂದು
ಭೀತಿಯಿಂದ ಅರಚಿತ್ತು!!
ನನ್ನ ನಾಲಿಗೆ ಕೋಳಿರುಚಿ ಚಪ್ಪರಿಸುವ ಕಾತುರದಲ್ಲಿರುವಾಗ,
ಕಿವಿ ಹೇಗೆ ಕೇಳಿಸಿಕೊಂಡೀತು ಕೋಳಿಯ
ಅಂತರ್ಯದ ನೋವು?!
ತಿಂದು ತೇಗಿದ್ದೆ ನಾ ಒಂದು ಜೀವಿಯ ಬದುಕನ್ನು,
ನನ್ನ ಬದುಕಿಗಾಗಿ!!
ತದನಂತರ 'ಕೊಂದ ಪಾಪ ತಿಂದು ಪರಿಹಾರ'ವೆಂದು
ನನ್ನ ತಪ್ಪನ್ನು ಸರಿಯೆಂದು ಸಮರ್ಥಿಸಿಕೊಂಡೆ!!
@neela682_

-


18 SEP 2021 AT 15:26

ಅವಳು....
ಮುತ್ತಿಟ್ಟು,ತುತ್ತಿಟ್ಟು ಪೋಷಿಸುವಳು,
ನನ್ನ ತಪ್ಪುಗಳ ದೂಷಿಸುವಳು,
ನನ್ನ ಯಶಸ್ಸಿಗೆ ಹಾರೈಸುವವಳು.

ಮೊದಲು ತೊದಲುತ್ತಾ ನುಡಿದ ನುಡಿಯದು;
ನನ್ನ ಬದುಕಿನ ಮುನ್ನುಡಿಯದು.....,
'ಅಮ್ಮಾ' 'ಅಮ್ಮಾ'
😍😍




-


18 SEP 2021 AT 14:50

ಅಂದು ನನ್ನ ಅತಿಯಾದ ಮಾತು ಹಿತವೆನಗೆ ಅಂದವರು,
ಇಂದು ಮಿತಿಮೀರಿತೆಂದು,ನನ್ನ ಬಾಯಿಗೊಂದು
ಬೀಗ ಜಡಿದು ಹೊರಟೊದರು...!!
😟😟

-


16 SEP 2021 AT 15:49

ಗುರಿ ತಲುಪುವ ಹೆದ್ದಾರಿ ಬಿಟ್ಟು ಕಿರುದಾರಿಯೆಡೆಗೆ ಒಲವು;
ಸೋಲಿನ ಭಯವಿದ್ದ ನನಗೆ ಇನ್ನೆಲ್ಲಿಯ ಗೆಲುವು?!
ಎಲ್ಲೂ ಮರೆಯಾದಂತಿದೆ ನನ್ನ ಆ ಛಲವು!!
ಸಹಿಸಲಾರೆ ನಾ ಗೆಲುವಿಲ್ಲದ ಅಳಿವು!!
:(


-


16 SEP 2021 AT 15:07

ಮೂಕಪ್ರೇಕ್ಷಕಿಯಂತಿರುವೆ ನಾ..!!
ಕೆಲವರ ಭಂಡತನ ಕಂಡು ಕಾಣದಂತೆ,
ತಿಳಿದು ತಿಳಿಯದಂತೆ;
ನನ್ನ ಕೆಣಕಿದರೆ ಭಕ್ಷಿಸುವ ರಾಕ್ಷಸಿಯಂತೆ!!👿

-


Fetching ✍️ನೀಲಾ💙 Quotes