Netra Patil   (Netra Patil)
460 Followers · 3 Following

read more
Joined 26 September 2017


read more
Joined 26 September 2017
12 OCT 2023 AT 9:33

ನಿನ್ನ ಗೀತೆಗೆ ಸ್ವರವಾಗಲು
ಹೊರಟ ಅವಳ ದಾರಿ,
ಕಾಲ ತಂತಿಯನ್ನೆ ಬಿಡಿಸಿ ಅಪಸ್ವರ
ಕೇಳುವ ಮೊದಲೇ, ಸರಿಪಡಿಸಲು ಸಾಧ್ಯವೇ
ಎಂಬ ಮಾತು ಮನಸನ್ನು ತಲುಪಿದೆ;
ಉತ್ತರವೇನಿದೆ ಊಹಿಸಿದ ಕನಸು ನನಸು
ಆಗದೆ ಅವಳ ಮನದ ಮಾತು
ನಿನ್ನ ತಲುಪುವುದೇ!!?

-


11 OCT 2023 AT 23:33


ನಾ ನಿನಗೆ, ನೀನೆನಗೆ ಜೇನಾಗುವಾ…
ನಾ ನಿನಗೆ, ನೀನೆನಗೆ ಜೇನಾಗುವಾ…
ರಸದೇವ ಗಂಗೆಯಲಿ ಮೀನಾಗುವ,
ಹೂವಾಗುವ, ಹಣ್ಣಾಗುವ,
ಪ್ರತಿರೂಪಿ ಭಗವತಿಗೆ ಮುಡಿಪಾಗುವ..

-


11 OCT 2023 AT 23:21

೧೨೩೪ ಕವಿತೆ:
ಕಾಯುತಿರುವೆ!
ಹೇಗೆ ಹೇಳಲಿ
ಈ ಕ್ಷಣದ ಮೌನದ
ಅಲೆಯೊಂದು ತಲುಪುವುದೇ ನಿನ್ನ ಸನಿಹ....

-


3 OCT 2023 AT 20:27

ಕಾಲವು ಎಲ್ಲವನ್ನೂ ಎಲ್ಲರನ್ನೂ ಅರ್ಥೈಸುತ್ತದೆ,
ಸೋಲು ಇರದೆ, ಗೆಲುವಿಗೆ ಬೆಲೆ ಇರುವುದೇ!
ಪ್ರತಿ ರಾತ್ರಿಯ ನಂತರ ಬೆಳಕು ನಿರಂತರ...
ಎಲ್ಲವನ್ನೂ ಮೀರಿ ಜೀವನದಲ್ಲಿ ಸಾಗುವುದು
ತುಂಬ ಮಹತ್ವ.
ಪರಿಸ್ಥಿತಿ ಹಾಗೂ ಸಮಯ ಕಲಿಸುವ ಪಾಠ
ಯಾರೂ ಕಲಿಸಲು ಸಾಧ್ಯವಿಲ್ಲ...
ಗೆಲುವು ನಿಶ್ಚಿತ ಎಂದು ಗಟ್ಟಿಯಾಗಿ ನಮ್ಮನು
ನಾವು ನಂಬಿದರೆ ಸಾಕು,
ಅರ್ಧ ವಿಜಯ ಸಾಧಿಸಿದಂತೆ ಅಲ್ಲವೇ?
ಇನ್ನು ಅರ್ಧ ವಿಜಯ ನಮ್ಮ ನಿರಂತರ ಹಗಲು
ರಾತ್ರಿಯೆನ್ನದೆ ಇರುವ ಪರಿಶ್ರಮ ಅಗತ್ಯವೇ ಸರಿ...

-


26 SEP 2023 AT 1:44

ನನ್ನ ಒಲವಿನ ಮುದ್ದು ಬಂಗಾರ
ನಗುತಿರು ನೀನು ಸದಾ,
ನಮ್ಮ ಮನೆಯ ನಗುವಿನ ದೀಪ ನೀನು,
ನೀನು ಅಮೋಘ ಹಾಗೂ ಅದ್ಭುತ ಸಹೋದರಿ
ನಿನ್ನ ನಗುವು ಹೂವಂತೆ,
ನಿನ್ನ ಮನಸು ಹೂವಿನ ಹಾಗೆ ಪರಿಶುದ್ಧ,
ಎಲ್ಲರ ಕಲ್ಪನೆಗೆ ಮೀರಿದ್ದು...
ನನ್ನ ಪಯಣದಲಿ ಜೊತೆಯಾದ ನೀನು
ನನಗೆ ಒಲವಿನ ಗೆಳತಿ ಎನ್ನಲೇ,
ಮುದ್ದಿನ ತಂಗಿ ಎನ್ನಲೇ !!?
ಎಲ್ಲರಿಗೂ ಸಹಾಯ ಮಾಡೋದು ನಿನ್ನ ಹುಟ್ಟುಗುಣ,
ನೀನೊಂದು ಪುಟ್ಟ ಚೀವ್ ಚೀವ್ ಗುಬ್ಬಿ..
ನನ್ನ ಎಲ್ಲ ನೋವು ನಲಿವಿನಲಿ
ಸದಾ ಜೊತೆಗಿರುವ ಮುದ್ದು ಸ್ನೇಹಿತೆ,
ಹೇಗೆ ಹೇಳಲಿ ನಿನ್ನ ಪ್ರೀತಿಯನ್ನು ಸಾಲುಗಳಲಿ,
ನನ್ನ ಪುಟ್ಟ ತಂಗಿಗೆ ಜನುಮ ದಿನದ ಶುಭಾಶಯಗಳು...

-


22 SEP 2023 AT 23:27

ಎಲ್ಲವೂ ಹೇಳಲು ಚಂದ.. ಅನುಭವಿಸಲು ಕಷ್ಟ..
ಸಮಯ ಹೇಗೆ ಉತ್ತರ ಕೊಡುವುದೂ ದೇವರಿಗೆ ಗೊತ್ತು
ಕೊನೆಗೆ ನಿರಾಸೆ ಅಷ್ಟೇ..
ಸಾವಿರ ಕನಸು ಹೊತ್ತು
ಯಾವುದು ನನಸಾಗದ ಕನಸು...
ಸುಮ್ಮನೇ ಉಳಿದ ಮೌನದ ಮಾತಿನ ಸಾಲುಗಳು
ಕಂಗಳು ತುಂಬಿರಲು ಕಂಬನಿ ಮಿಡಿದಿದೆ..
ಹೃದಯ ಭಾರವಾಗಿ ನಿಂತಿದೆ
ಎಲ್ಲವೂ ಅಂದುಕೊಂಡಂತೆ ಸಾಗದು ಈ ಜೀವನ
ವಿಧಿ ಮುಂದೆ ಮನುಜನ ಲೆಕ್ಕಾಚಾರ ಏನಿದೆ !!??
ಬದುಕಿಗೆ ತಿರುವುಗಳು ಅನಿರೀಕ್ಷಿತ ....!!!

-


21 SEP 2023 AT 17:17

ಪರಿಸ್ಥಿತಿ ಸಮಯದ ಜೊತೆ ಬದಲಾವಣೆಯಾಗುತ್ತದೆ
ಮನಸ್ಥಿತಿ ಬದಲಾಗಬೇಕಿದೆ,
ಸುಳ್ಳಿನ ಮೇಲೆ ಕಟ್ಟಿದ ಸಂಬಂಧಗಳು ಅಶಾಶ್ವತ
ಹಾಗೂ ಜಾಸ್ತಿ ಸಮಯ ಉಳಿಯುವುದಿಲ್ಲ,
ಕೊನೆಗೆ ಸತ್ಯ ಅರ್ಥವಾದರೆ, ಮನಸ್ಸು ನೊಂದು
ಹೃದಯ ಭಾರವಾಗಿ ಕಣ್ಣೀರು ಸುರಿಸುತ್ತ
ಜೀವನ ಸಾಗುವುದು ಕನಸಿನಂತೆ...
ತಿರುಗಿ ನೋಡದೆ ಹೋದರೂ ನೆನಪು ಕಾಡುವುದು ಸಹಜ ಕೂಡ,
ಮೌನವೂ ಎಲ್ಲವನು ತಿಳಿಸುವುದು,
ಮರೆಯದಿರು ಮನಸ್ಥಿತಿ ಬದಲಾಗುವುದೆಂದು!!!

-


11 SEP 2023 AT 21:43

ನನ್ನೊಲವೇ,
ನೀನು ಇಲ್ಲದ,,
ಕ್ಷಣಗಳು ಮುಗಿಯದ ಮೌನ,,,
ಯಾರಿಗಾಗಿ ಯಾಕಾಗಿ ಇದೆಲ್ಲಾ ತಿಳಿಯದಾಗಿದೆ....

-


10 SEP 2023 AT 14:21

ಏನೋ ಮಾಡಲು ಹೊರಟಿದೆ ಮನಸು ಯಾಕೆ
ಸುಮ್ಮನೇ ಕುಳಿತೆ ಹಳೆಯ ನೆನಪುಗಳ
ಪುಟ ತೆರೆದು ಇಣುಕಿದೆ
ಬಾರದು ಮತ್ತೊಮ್ಮೆ ಸಮಯ ನಿನ್ನೊಂದಿಗೆ
ಇರುವೆ ಹೀಗೆ ಎಲ್ಲನ್ನೂ ನೆನೆಯುತ
ನನ್ನದೇ ನಿರ್ಧಾರಕ್ಕೆ ನಾನೇ ಹೊಣೆ
ಕಾರಣವ ತಿಳಿಯದೇ ಹೋದರು ಕಣ್ಣಿರು ನಿಲ್ಲದು
ಕೊನೆ ಏನು ಉಳಿದಿದೆ ಅರ್ಥೈಸಲು....!!

-


1 SEP 2023 AT 19:08

Thoughts are important...
Thoughts are powerful...
Choose the thoughts wisely...

-


Fetching Netra Patil Quotes