ತಂಗಿ ಮತ್ತು ಬಾವ ನವರಿಗೆ🌼 3ನೇಯ ವರ್ಷದ ವಿವಾಹ ವಾರ್ಷಿಕೋತ್ಸವ ಹಾರ್ಧಿಕ ಶುಭಾಶಯಗಳು🌼 ... ನಿಮ್ಮ ಬಾಳಪಯಣ ಸುಂದರವಾಗಿ ಹೀಗೆಯೇ ಸಾಗುತ್ತಿರಲಿ ... ನಿಮ್ಮ ಒಲವ ರಥವು ಸಂತೋಷದಿಂದ ತುಂಬಿರಲಿ ... ( ಅನುದಿನವೂ ನಿಮ್ಮ ಬಾಳ ಬಾಂಧವ್ಯವು ಸುಮಧುರ ಸಂಗೀತದಲಿ ಕೂಡಲ, ...ಅದೇವರು ನಿಮ್ಮಗೆ ಒಳ್ಳೇದು ಮಾಡಲಿ.😍
-
" ಕಡಲ ಮುತ್ತು ನನ್ನ ಮಿತ್ರ " ಸ್ವಚ್ಛ ಮನಸು, ನಿರ್ಮಲ ಸ್ನೇಹ, ನಗಿಸಲು ಚೇಷ್ಟೆ ಮಾಡುವ ಈತನದು ಬಂಗಾರಕ್ಕಿಂತ ಶುದ್ಧ ಮನಸ್ಸು ,,,,,ಮಕ್ಕಳ ಪ್ರೀತಿಯಲಿ, ಪ್ರಶಿಕ್ಷಣಾರ್ಥಿಗಳ ಒಲವಿನಲಿ, ಹಾಗೂ ಅಲ್ಲಿನ ಶಿಕ್ಷಕರ ವಿನಯದಿ ಮನಗೆದ್ದ ಈತನ ಬುದ್ಧಿಮತ್ತೆಗೆ ನಾ ಕೊಟ್ಟ ಬಿರುದು ಕೋಲಾರದ ಚಿನ್ನ,,,,,,, ಆತನೇ ನಲ್ಮೆಯ ಗೆಳೆಯ ನವೀನ (caset) ನಿನಗಾಗಿ ಪ್ರಾರ್ಥಿಸುವೇ ನಾ ಯಶಸ್ಸು ನಿನ್ನನು ಹುಡುಕಿ ಬರಲೆಂದು ❤️❤️🤝
-
ಬೋಧನೆಯೊಂದು ಅತ್ಯದ್ಭುತ
ಕಲೆ ಕಲಿತ ಜ್ಞಾನವನ್ನು ವಿದ್ಯಾರ್ಥಿಗಳಿಗೆ
ಉದಾಹರಣೆಯೊಂದಿಗೆ ಪ್ರಸ್ತುತ ಪಡಿಸುವ
ಕೌಶಲ್ಯವಿರಬೇಕು , ಹೊಸ ಮಾಹಿತಿಗಳೊಂದಿಗೆ
ಮಕ್ಕಳ ಮನಸ್ಸನ್ನು ಆಕರ್ಷಿಸುವ
ಸೂಕ್ಷ್ಮತೆಯಿರಬೇಕು , ಮಕ್ಕಳಲ್ಲಿ ಆಸಕ್ತಿ
ಹುಟ್ಟಿಸುವ ವಿಷಯಗಳ ಬಗ್ಗೆ ಚರ್ಚಿಸುತ್ತ
ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು
ಗುರುತಿಸಿ ಉತ್ತೇಜಿಸುತ್ತ ಬೆಳಕಿಗೆ ತರಬೇಕು..
ಅಂತ ಹೋಗಿರುವ ಪ್ರಶಿಕ್ಷಣಾರ್ಥಿಗಳಿಗೆ ಶುಭವಾಗಲಿ.
ಹಾಗೂ ಮುಂದಿನ ನಿಮ್ಮ ಜೀವನದಲ್ಲಿ
ಉತ್ತಮ ಶಿಕ್ಷಕ & ಶಿಕ್ಷಕಿ
ಆಗಲಿ ಎಂದು ಹಾರೈಸುವೆ..ಸ್ನೇಹಿತರೆ..🙏-
🎂ನನ್ನ ಪ್ರೀತಿಯ ಅಳಿಯನಿಗೆ ಹುಟ್ಟುಹಬ್ಬದ ಶುಭಾಶಯಗಳು 🎂
ನೀನೆಂದರೆ ಅರ್ಥ *
ಸಹನೆಯ ಒಂದು ಸತ್ವಾರ್ಥ ಪ್ರೀತಿಯಲಿ ನೀನು ತತ್ವಾರ್ಥ ಸ್ನೇಹದ ಒಂದು ಸಮನಾರ್ಥ ಮಮತೆಯಲಿ ನೀನು ನಾನಾರ್ಥ ವ್ಯಕ್ತಿತ್ವದ ಒಂದು ಪದಾರ್ಥ ಗುಣದಲಿ ನೀನು ನಿಸ್ವಾರ್ಥ ಮೌನದ ಒಂದು ಸೂಚ್ಯಾರ್ಥ ಮಾತಿನಲಿ ನೀನು ಒಳಾರ್ಥ ನೋವಿನಲಿ ಒಂದು ಮುಖ್ಯಾರ್ಥ ನಗುವಿನಲಿ ನೀನು ಸೌಮ್ಯಾರ್ಥ ನಿನ್ನ ಸಂಗ ಬಯಸದ ಸಮಯ ವ್ಯರ್ಥ ಬಯಸಿದರೆ ಆಗದು ಬಾಳು ಅನರ್ಥ ಈ ದಿನ ನಿನಗೆ ಒಂದು ವಿಶೇಷಾರ್ಥ ಬರೆದೆ ನಾನೊಂದು ಕವಿತೆಯ ಪ್ರತ್ಯರ್ಥ ನಿನ್ನ ಹುಟ್ಟಬ್ಬಕ್ಕೆ ನನ್ನ ಶುಭಾಷಯದ ' ಸವಿತೀರ್ಥ ' ಬದುಕಲಿ ಸದಾ ಆಗಿರು ವಿಜಯದ " ಪಾರ್ಥ " # ಜನುಮದಿನದ ಶುಭಾಶಯಗಳು 😍ತಿಪ್ಪೇಶ್. ಎಸ್ ಇಂತಿ ನಿಮ್ಮ.-
ನೆರೆಯವರೆಲ್ಲರು ನಮ್ಮವರೇ ನಮ್ಮ ಹತ್ತಿರ ಹಣವಿದ್ದಾಗ ... ನೆರೆಯವರೆಲ್ಲರು ನಮ್ಮವರೇ ನಮ್ಮ ಹತ್ತಿರ ಸಂತೋಷವಿದ್ದಾಗ ... ನೆರೆಯವರೆಲ್ಲರು ನಮ್ಮವರೇ ನಮ್ಮ ಹತ್ತಿರ ನೆಮ್ಮದಿಯಿದ್ದಾಗ ... ನೆರೆಯವರೆಲ್ಲರು ನಮ್ಮವರೇ ನಮ್ಮ ಹತ್ತಿರ ಖುಷಿಯಿದ್ದಾಗ ... ನೆರೆಯವರೆಲ್ಲರು ನಮ್ಮವರೇ ನಾವು ಚೆನ್ನಾಗಿದ್ದಾಗ ಮಾತ್ರ .. ಸ್ವಾರ್ಥದ ಪ್ರಪಂಚ , ನಮ್ಮಿಂದ ಅವಶ್ಯಕತೆ ಇದೆ ಎಂದಾಗ ಮಾತ್ರ ನಮ್ಮವರು ಎಂದು ಬರ್ತಾರೆ . ಅವಶ್ಯಕತೆ ಇಲ್ಲಾ ಅಂದರೆ ಯಾರು ಅಂಥಾ ಕೇಳ್ತಾರೆ ಅಷ್ಟೇ..ಈ ಜೀವನದಲ್ಲಿ ನಮ್ಮ ಬಗ್ಗೆ ನಾವು ಮೊದಲು ಅರಿಯಬೇಕು...
-
ಪ್ರಕೃತಿಯ ಗಾಳಿಗೆ ಮೌನವಾಗುವ ಆಸೆ.
ಮೌನಕ್ಕೆ ಮಾತಾಡುವ ಆಸೆ
ಮಾತುಗಳಿಗೆ ಮೌನವಾಗುವ ಆಸೆ
ಭಾವನೆಗಳಿಗೆ ಹಂಚಿಕೊಳ್ಳುವ ಆಸೆ
ನಿದ್ರೆಗೆ ಸ್ವರ್ಗಲೋಕ ತೋರಿಸುವ ಆಸೆ.
😴ಶುಭರಾತ್ರಿ😴
-
"ಎಲ್ಲಾ ದೈವಿಚ್ಚೆ "
ಬದುಕೊಂದು ನಾಟಕ ರಂಗ
ನಾವೆಲ್ಲರೂ ಅದರ ಪಾತ್ರಧಾರಿಗಳು
ಮೇಲಿರುವನು ಸೂತ್ರದಾರಿ..
ಅವನು ಆಟ ಆಡಸ್ತಾನೆ
ನಾವು ಆಡ್ತಾ ಇರಬೇಕು ಅಷ್ಟೇ
ಪ್ರತಿ ನಡೆಯು ನಿರ್ಧಾರಿತವೇನೋ
ಎಲ್ಲ ನಮ್ಮಿಚ್ಛೆಯಂತೆ ನಡೆದರೂ
ಆ ಭಗವಂತನ ಕೃಪೆ ನಮ್ಮ ಮೇಲೆ ಇರುತ್ತೆ..-
"ಮನಸ್ಸಿಗೆ ಮುದ ನೀಡುವ ಹಬ್ಬ"
ನಿಮ್ಮ ಹೃದಯವೆಂಬ ಹಣತೆಯಲ್ಲಿ .. ಸ್ನೇಹ - ಪ್ರೀತಿಯೆಂಬ ಬತ್ತಿ ಇರಿಸಿ .. ಕರುಣೆಯೆಂಬ ತೈಲ ಉಣಿಸಿ . ನಂಬಿಕೆಯೆಂಬ ದೀಪ ಉರಿಯಲಿ ... ಬದುಕಿನ ಜ್ಯೋತಿ ಪ್ರಜ್ವಲಿಸಲಿ .. ನಿಮ್ಮ ಮನದ ಕತ್ತಲೆ ಸರಿದು ಹೊಂಬೆಳಕು ಮೂಡಲಿ ... ಮನಸ್ಸಿಗೆ ಮುದ ನೀಡುವ ಹಬ್ಬ ... ಬೆಳಕಿನ ದೀಪಾವಳಿ ಹಬ್ಬವು ಎಲ್ಲರ ಮನ - ಮನೆಗಳನ್ನು ಬೆಳಗಲಿ-
ಬದುಕೆಂಬ ಮಾಯೆಯೊಳಗೆ ಮೂರು ದಿನದ ಬಾಳಸಂತೆ ತಾತ್ಕಾಲಿಕ ಬಂಧನದೊಂದಿಗೆ ಬೆಸೆಯುವ ಮನುಜನ ಭಾವಯಾನ ಪ್ರಯಾಣ ಮುಗಿದ ಮೇಲೆ ಆಪ್ತ ಆತ್ಮಗಳೊಂದಿಗೆ ಬೆಸೆದ ಮೂರು ದಿನದ ಪಯಣದ ನೆನಪುಗಳನ್ನು ಉಳಿಸಿ,ಹೃದಯದೊಳಗೆ ಮರಳಿ ಬಾರದ ಜಗಕೆ ತಲುಪುವ...ಆತ್ಮಕ್ಕೆ ಬದುಕಿನಲ್ಲಿ ಕಳೆದ ಆ ಸವಿ ನೆನಪುಗಳೇ ವಿಸ್ಮಯ.
😴ಶುಭರಾತ್ರಿ😴-
ನೊಂದವರಿಗೆ ನೆರಳಾಗಿ,
ಬಂದವರಿಗೆ ಬೆಳಕಾಗಿ,
ಬಡವರ ಪಾಲಿನ ಬಂಧುವಾಗಿ,
ವೃದ್ಧರ ಪಾಲಿಗೆ ಆಸರೆಯಾಗಿ,
ಅನಾಥರಿಗೆ ಆಶ್ರಯದಾತನಾಗಿ,
ಅದ್ಭುತ ನಟನಾ ಚತುರನಾಗಿ,
ಅತ್ಯುತ್ತಮ ನಿರೂಪಕನಾಗಿ,
ಮಾನವೀಯತೆ ತುಂಬಿದ
ಮನುಜನಾಗಿ.
ಈ ಬದುಕಿನ ಪಯಣವನ್ನು
ಅರ್ಧದಲ್ಲೇ ನಿಲ್ಲಿಸಿ,
ಪರಮಾತ್ಮನ ಸನ್ನಿಧಿಗೆ
ಪುನೀತನಾದ ರಾಜಕುಮಾರನಿಗೆ
"ಭಾವಪೂರ್ಣ ಶ್ರದ್ಧಾಂಜಲಿ"-