Nandini C   (ಡಾ. ನಂದಿನಿ ಸಿ)
415 Followers · 141 Following

Joined 19 June 2017


Joined 19 June 2017
10 MAY 2021 AT 15:55

ಜೀವದಲೊಂದು ಜೀವ

ಹರಕೆಗಳ ಕೇಳುತ....ವರವನು ನೀಡುತ...
ಸೃಷ್ಟಿಸಿದ ಆ ದೇವ...ಜೀವದಲೊಂದು ಜೀವ...
ಕಾಯುತಿದೆ ಮನ ...ನಿನ್ನಯ ಆಗಮನ ...|ಪ|

ಮೂಡುತಿಹುದು ಚಂದಿರಾಮ ಬೆಳದಿಂಗಳಾಗಿ,
ತೋರುತ ಹೊಸತನವ ಬೆಳಕಾಗಿ,
ತಾಯ ಗರ್ಭದಲಿ ಮಿನುಗುತಾರೆಯಾಗಿ,
ನಗುತಿರುವ ಕಂದಂಗೆ ಅಮ್ಮನ ಲಾಲಿ...     |೧|

ಸೂರ್ಯನ ನೋಡಲು ದಿನವೂ ಕಾಯುತ,
ಆತುರದಿ ಮೆಲ್ಲಗೆ ಒದೆಯುತ,
ತಾಯ ಬೆಚ್ಚನರಮನೆಯಲಿ ಆಡುತ,
ತುಂಟಾಡುತಿರುವ ಮಗುವಿಗೆ ಅಮ್ಮನ ಲಾಲಿ...  |೨|

ಅಪ್ಪ-ಅಮ್ಮನ ಜೀವನದ ಕನ್ನಡಿಯಾಗಿ,
ಕನ್ನಡ ನಾಡಿನ ಮುದ್ದಿನ ಕೂಸಾಗಿ,
ತಾಯ್ನಾಡಿಗೆ ಕಾಲಿಡಲು ಸಜ್ಜಾಗಿ,
ಹೆಮ್ಮೆಯಲಿ ಹಿಗ್ಗುತಿರುವ ಜೀವಕೆ ಅಮ್ಮನ ಲಾಲಿ...|೩|

ಲಾಲಿ ಕಂದ ಲಾಲಿ ಲಾಲಿ ...

-


11 MAR 2021 AT 11:29

ವಿಷಹಾರಕ ..ಅಮೃತ...
ವಿಷ್ಣುಪ್ರಿಯ...ವೈರಾಗಿ...
ತ್ರಿನೇತ್ರ ...ತಪಸ್ವಿ...
ಗಂಗಾಧರ...ನಟರಾಜ...
ಭಕ್ತಿಪ್ರಿಯ...ಲಯಕಾರಕ...
ದೇವತೆಗಳ ರಕ್ಷಕ ...ಸ್ಮಶಾಣವಾಸಿ...
ಲೋಕಹಿತಚಿಂತಕ ...ಬಾಲಚಂದ್ರ...
ಶಕ್ತಿಯ ಮಿಲನಕೆ ...ಜನುಮಗಳ ಕಾಯುವ...
ಸತಿಯ ಪ್ರಿಯಕರ...ಗೌರಿಯ ಈಶ್ವರ...
ಪಾರ್ವತಿಯ ಪತಿಯಾದ...ಶಿವರಾತ್ರಿಯ ದಿನ...
ಅರ್ಧನಾರೇಶ್ವರ...
ಶಿವ ....ಶಿವ ...ಶಿವ ...

-


19 NOV 2020 AT 13:12

ಹೂವಿನ ಭಾಷೆ
ಅರಳದ ಹೂವೊಂದು,
ಮೊಗ್ಗಲಿ ಅಡಗಿಸಿ ಚೆಲುವನಿಂದು,
ಮುನಿಸಿಕೊಂಡಿಹುದೆಂದು,
ತಿಳಿಯದು ಹೂವಿನ ಭಾಷೆ....|ಪ|

ಇತರರ ಖುಷಿಗಾಗಿ ನಾನೆಂದು,
ಒಂದು ಕ್ಷಣ ಭೀಗುವಿಕೆಯೇ,
ತನ್ನ ಸೊಬಗು ತನಗೆಂದು,
ಮರು ಕ್ಷಣ ಸ್ವಾರ್ಥವೇ..........|೧|

ಕಾಣಿಸದ ವಿಸ್ಮಯಕೆ ನೀನೆ ಅಲಂಕಾರ,
ಬೇಡಿಕೆಗಳ ಸಾಲುಗಳಿಗೆ ನೀನೆ ಕಾಣಿಕೆ,
ಅಂದ ಚೆಂದದಿ ಅರಳಿ ತೋರು ಪ್ರತಿಕಾರ,
ವೈಭವದ ಬದುಕನಾಳೆಂದು ಕೋರಿಕೆ...|೨|

ಅರಳದ ಹೂವೊಂದು,
ಮೊಗ್ಗಲಿ ಅಡಗಿಸಿ ಚೆಲುವನಿಂದು...


-


29 SEP 2020 AT 19:41

ಮುಗುಳುನಗೆ

ಮರೆಮಾಚದಿರಲಿ ಮುಗುಳುನಗೆ,
ಅತಿಯಾದ ಕಣ್ಣಿನ ನೋಟದಾಸರೆಗೆ,
ಸರೆದು ಬೀಸಲಿ ಕಂಪು ಪ್ರೀತಿಯ ಬಳಿಗೆ...|ಪ|

ಬೆಳಕಲೂ ಕಾಣುವುದು ಕತ್ತಲು,
ಪ್ರೀತಿಯ ಅರಿಯದ ಮನದಲಿ,
ಬಣ್ಣದ ರಂಗಿನರಮನೆ ಸುತ್ತಲು,
ಸಿಗದ ಸಂತಸವ ಹುಡುಕುತಲಿ...|೧|

ಅಂತರಾಳದ ಮನದ ನೋವು,
ಧ್ವನಿ ಕೇಳುವ ಮನವ ಬೇಡುತಲಿ,
ಮೊಗದಿ ನಗುವರಳಿಸುವ ಜೀವವು,
ಸೃಷ್ಟಿಯ ವಿಸ್ಮಯವೆಂಬ ಭಾವದಲಿ...|೨|

ಮರೆಮಾಚದಿರಲಿ ಮುಗುಳುನಗೆ,
ಅತಿಯಾದ ಕಣ್ಣಿನ ನೋಟದಾಸರೆಗೆ...


-


8 SEP 2020 AT 16:06

ಮನದ ಬಾಗಿಲಲಿ ಗಾಳಿಯ ಕಂಪನ,
ಕನವರಿಕೆಯ ಮಾತಲಿ ಪ್ರೀತಿಯ ತನನ ..|ಪ|

ಕಾಣದಂತೆ ಬಡಿಯುತಿಹ ಜೀವದ ಮಿಡಿತ,
ಸನಿಹವಿರಲು ಸರಿದೂಡುತ ಮನದ ದುಗುಡ,
ಭಾವನೆಗಳ ಅನುಭಂದಕೆ ಬೆಸುಗೆಯ ಅಂಕಿತ,
ಓಡುತ್ತಿದೆ ಜೀವನ ಸಹನೆಯ ಸಂಗಡ ...|೧|

ಏರಿಳಿತದಲು ಮುಗ್ದ ಮನದ ನಂಟು,
ಕತ್ತಲೆಯ ತೊರೆವ ಕಾಳಜಿಯ ಕನಸು,
ಕೇಳುವ ಹೃದಯಕೆ ಹೇಳುವ ನಿಘಂಟು,
ಹೃದಯ ಶ್ರೀಮಂತಿಕೆ ತೋರುವ ಮನಸು..|೨|

ಮನದ ಬಾಗಿಲಲಿ ಗಾಳಿಯ ಕಂಪನ,
ಕನವರಿಕೆಯ ಮಾತಲಿ ಪ್ರೀತಿಯ ತನನ...

-


27 AUG 2020 AT 11:48

ಮತ್ತೆ ಮತ್ತೆ ತಿರುಗಿ ನೋಡಲು ಪುಟವ..
ಪುನಃ ಪ್ರೀತಿ ತೋರುವುದು ಜಗವ...... |ಪ|

ಒಂದೊಂದು ನೆನಪು ..ಒಂದೊಂದು ಪದವು..
ಪ್ರೀತಿ ಪ್ರೇಮವನು ಮೊಳಗುತಿಹವು...
ಜಾರುವ ಕಂಬನಿಯು ಆನಂದವ ಕಂಡಿಹವು..
ಗಡಿಯಾರದ ಸಮಯ ಹಿಂದೋದಂತೆ ಭಾಸವು..|೧|

ಪ್ರೀತಿಯಾನುಭವ ಕಟು ಕಷ್ಟಗಳ ನಡುವೆ ಸಿಗಲಿ...
ಪ್ರೀತಿಯ ಸೇವೇಲಿ ಪುಣ್ಯಗಳ ಸಾಲು ತುಂಬಲಿ..
ಸ್ಪೂರ್ತಿಯ ನಗುವಾಗಿ ತಲೆಮಾರುಗಳಿಗೆ ದಾರಿಯಾಗಲಿ...
ಸೃಷ್ಟಿಯ ಸುಂದರವ ಅನುಭವಿಸಿದಂತೆ ಬದುಕು ಕೊನೆಯಲಿ... |೨|

ಮತ್ತೆ ಮತ್ತೆ ತಿರುಗಿ ನೋಡಲು ಪುಟವ..
ಪುನಃ ಪ್ರೀತಿ ತೋರುವುದು ಜಗವ......

-


15 AUG 2020 AT 14:01

ದೇಶ

ಬಣ್ಣದ ತೆನೆಯೊತ್ತ ಪಚ್ಚ ಸೂರ್ಯಕಾಂತಿ,
ತಲೆ ಎತ್ತದೇಕೆ ನೋಡ...
ಸುಡು ಸುಡುವ ..ಸೂರ್ಯನಿರದೆ..

ಸುತ್ತಲೂ ನೀರಿರಲು,
ಮಧ್ಯದಿ ಕಪ್ಪಾದ ಮರ ನೋಡ...
ಪಳ ಪಳ ಹೊಳೆಯದು... ಹಸಿರಿರದೆ...

ಚದುರಿರುವ ನೀಲಿ ಆಕಾಶ,
ಗುಡುಗಿದರು ಮಳೆ ಬರದು ನೋಡ..
ಬಿಡಿ ಬಿಡಿಯು ...ಸೇರಿ ಕೂಡಿರದೆ..

ಎತ್ತರಕ್ಕೇರಿರಲು ನಿನ್ನ ಹೆಸರು,
ದೇಶದ ಒಳಿತಿಗೊಮ್ಮೆ ಹಿಂತಿರುಗಿ ನೋಡ..
ಅಮರ ಅಮರವಾಗ...ನಿನ್ನ ಜನನ..

-


3 AUG 2020 AT 22:44

ಲೇ ಬಂಗಾರಿ....
ಸ್ಪೋರ್ತಿಯ ಸಿಂಗಾರಿ....
ಮುಗಿಲ ಮ್ಯಾಲಿನ ಮೋಡ ನಾಚ್ಯಾವ,
ಲೇ ..ನಿನ್ನ ಮನಕ......
ಚಿಗುರಿನ ನಗುವ ಹೂವಿನ ಕಣ್ಣಿಗ,
ಲೇ ...ಸೋತಿವಿ ಚೆಲುವಿಗ...
ಬಿಟ್ಟುಬಿಡದಂಗ ಇರುತ್ತೈತಿ ಹೆಂಗ ಹುರುಪು...
ಲೇ ..ಸುಸ್ತಾಗಲ್ಲೇನ ನಿನಗ..
ನಿನ್ನ ಸಂಗಡದ ಸ್ನೇಹ ಬಲು ಚೊಲೊ ನಮಗ..
ಲೇ ..ಆತ್ಮೀಯ ಗೆಳತಿ..
ಬಂಗಾರದಂಗ ನಿನ್ ಹೆಸ್ರು ಗುಣ ..
ಲೇ ..ಅಂತಾಳ ನೋಡ ನಿನ್ ಗೆಳತಿ..
ಹುಟ್ಟುಹಬ್ಬ ತರಲಿ ನಿಂಗ,
ಲೇ... ನೀ ಬಯಸಿದ್ ಖುಷಿಯ...

-


18 JUL 2020 AT 11:41

ಬಾ ನೇಸರನೆ

ಬೇಗನೆ ಬಾರೋ ನೇಸರನೇ,
ಕಾಯುತ್ತಿದೆ ಮನವು ನಿನ್ನನೇ,
ನನ್ನೊಲವ ನೀ ತೋರಲು ..ಬಾ ಬೇಗನೇ..|ಪ|

ಮುಂಜಾವಿನ ಮಂಜಿನಾವ್ರತದಿ,
ಮುಸುಕಾಗಿ ಕಾಣಿಸೋ ನನ್ನರಸನ,
ಹೊಳೆಸುತ ಕರಗಿಸು ಬೆಳಕಿನ ಚಮತ್ಕಾರದಿ,
ತಿಳಿಯಾಗುತಲಿ ನೋಡಲು ನನ್ನವನ.... | ೧|

ನಾನಿರಲವನ ಪ್ರೀತಿಯ ಆಗಸದಡಿಯಲಿ,
ನಿಶಬ್ದದಲಿ ಮಳೆ ಹನಿಯ ಸದ್ದು ತರಿಸು,
ಮಗುವಂತವನ ಕಾಳಜಿಯ ಕವಚದಲಿ,
ಒಲವಗೆ ಸೋತು ನಿನ್ನ ಗೆಲುವಂತೆ ಮಾಡಿಸು..| ೨|

ಬೇಗನೆ ಬಾರೋ ನೇಸರನೇ...
ಕಾಯುತ್ತಿದೆ ಮನವು ನಿನ್ನನೇ...

-


23 JUN 2020 AT 12:38

ದುಂಬಿಗೆ ಕಾಣದು,
ಹೂವಿನ ತಲ್ಲಣ,
ಒಗಟಿನ ಮನಸಿದು,
ಮೌನದ ಲಕ್ಷಣ. |ಪ|

ಕೇಳಿ ಬಾ ಗಾಳಿಯೆ,
ಹೇಳದ ಮಾತನು,
ಮಣಿಸು ಬಾ ಮಾಯೆಯೆ,
ತವಕದ ಮನಸನು.

ತಿಳಿಯದ ಇನಿಯನ,
ಕನಸಲು ಅವಲೋಕನ. |೧|

ಮಿಡಿಸು ನನ್ನೆದೆಯನು,
ನಿನ್ನೆದೆ ಬಡಿತದ ಸದ್ದಿಗೆ,
ನುಡಿಸೆನ್ನ ಮನಸನು,
ನಿನ್ನ ಮನಸಿನ ನಾದಕೆ.

ತಿಳಿಯದ ಇನಿಯನ,
ಕನಸಲು ಅವಲೋಕನ. |೨|

ದುಂಬಿಗೆ ಕಾಣದು,
ಹೂವಿನ ತಲ್ಲಣ........

-


Fetching Nandini C Quotes