ಏನೋ ಕುಸಿಯಾದಾಗ
ಮತ್ತ್ ಎಚ್ಚಿ ಓದಾಗ
ಅಂಗೇನೆ ಪರಪಂಚದ್ ಅಂಚ
ದಾಟ್ಕಂಡಿ ಆರಾಡ್ತ
ಕನ್ನಡದಲ್ ಪದವಾಡ್ತ
ಇಗ್ಗೋದು ರತ್ನನ್ ಪರ್ಪಂಚ
- ಜಿ ಪಿ ರಾಜರತ್ನಂ ಜನ್ಮ ದಿನದ ನೆನಪುಗಳು-ನಮನಗಳು-
ಹಾಲುಂಡ ತವರೀಗಿ ಏನೆಂದು ಹಾಡಲೆ
ಹೊಳೆದಂಡಿಲಿರುವ ಕರಕೀಯ ಕುಡಿಯಂಗ
ಹಬ್ಬಲೆ ಅವರ ರಸಬಳ್ಳಿ
ಸಹೋದರಿಯರೆಂಬ, ಅಮೂಲ್ಯ ಜೀವಗಳ ಅಮೋಘ ಪ್ರೀತಿಗೆ ರಕ್ಷಾಬಂಧನದ ಶುಭಾಶಯ❤-
ನತದೃಷ್ಟ ಶಬ್ದಗಳಷ್ಟೆ ಕವಿತೆಯ
ತಲೆಬರಹಗಳಾಗುತ್ತವೆ
ಕೈದಿಯ ಕೊರಳಿನ ಸ್ಲೇಟಿನ ನಂಬರಿನಂತೆ
- ಜಯಂತ್ ಕಾಯ್ಕಿಣಿ
('ಕೊನೇ ಶಬ್ದ' ಕವಿತೆಯ ಆಯ್ದ ಸಾಲುಗಳು)-
ಕತ್ತಲನ್ನು ಉಂಡು ನೀಗುವ ಧ್ಯಾನಸ್ಥ ಮನಸ್ಸಿಗೆ ಬರೀ ಕನವರಿಕೆಗಳ ಹೊದ್ದು ಮಲಗುವ ಸಹಜತೆ ಇದೆ.
-
ಹಸಿರು ಮುರಿವ ಎಲೆಗಳಲ್ಲಿ
ಬಸಿರ ಬಯಕೆ ಒಸರುವವಳು
ತುಟಿ ಬಿರಿಯುವ ಹೂಗಳಲ್ಲಿ
ಬೆಂಕಿ ಹಾಡು ಉಸುರುವವಳು
ಸದಾ ತಪ್ತ ಗಾಮಿನಿ
ನನ್ನ ಶಾಲ್ಮಲಾ
-✍ ಚಂಪಾ-
ಹುಣ್ಣಿಮೆ,
ಈಗ ನಿನ್ನ ಹಂಗಿಲ್ಲ..
ಆ ಬೆಳದಿಂಗಳಲ್ಲಿ ಮೀಯುವುದಷ್ಟೂ
ಸಸಾರವಿಲ್ಲ..!
ಕೋಟಿ ಕನವರಿಕೆಗಳಿಗೆ ಅಜಮಾಸು
ಪ್ರೀತಿಯ ರೇಟು ಗಿಟ್ಟುವುದೂ ಇಲ್ಲ...!!-
ಸುಟ್ಟೆ
ಇಡೀ ನೆನಪುಗಳನ್ನು ಹಿಡಿ ಹಿಡಿಯಾಗಿ
ಇನ್ನೂ ಉರಿಯುತ್ತಲೇ ಇದೆ ಹಚ್ಚಿದ ಬೆಂಕಿ
ಇದೇ ಹೊತ್ತಿನಲಿ ಮಾಗಿಯ ಚಳಿ ಬೇರೆ
ಅದೇ ಬೆಂಕಿಗೆ ಮೈಯೊಡ್ಡಿದೆ
ಈಗ
ಒಳಗೂ ಬಿಸಿ ಹೊರಗೂ ಬಿಸಿ
-
ಶತಶತಮಾನಗಳ ತಡಕಾಟದಲಿ
ಪರಿಷ್ಕೃತಗೊಂಡ ಕನಸುಗಳಿಗೆ
ಮಥಿತ ಅಮೃತವನ್ನಿಷ್ಟು ಉಣಬಡಿಸುವ
ಹುಂಬತನಕೆ ಕೈ ಹಾಕದೇ ಇದ್ದಿದ್ದರೆ
ನಿರಾಳವಾಗಿ ಉಸಿರಾಡಬಹುದಿತ್ತು ಈಗ-
ನಿನಗೆ ಗೊತ್ತಿರಲಿಕ್ಕಿಲ್ಲ
ವರ್ತಮಾನವ ಹೊರತುಪಡಿಸಿ ಭೂತದ ವ್ಯಂಗ್ಯ ವನ್ನೇ ಧ್ಯಾನಿಸುವ ನಿನ್ನ ನೆನಹುಗಳು ನಿನ್ನಂತೆಯೇ..-
ಜೀನ್ಸು ತೊಟ್ಟ ಹುಡುಗಿಗೆ ಕೊಟ್ಟ ಪ್ರೇಮ ಪತ್ರ
ಥೇಟ್ ಅವಳಂತೆಯೇ..
ತರಹೇವಾರಿ ಸರಕುಗಳ ಆಮದು- ರಪ್ತು ವಹಿವಾಟು
ಒಲವೆಂಬುದು ಅರ್ಥವ್ಯವಸ್ಥೆಯ ಅವಿಭಾಜ್ಯ ಮಾರ್ಕೆಟ್ಟು..-