Nagaraj V.G.   (ನಾಗರಾಜ ಗುನಗ)
637 Followers · 644 Following

read more
Joined 13 January 2019


read more
Joined 13 January 2019
27 JUN 2022 AT 18:56

ಕೆಲ ಕ್ಷಣಗಳು ಎಚ್ಚರಿಸುತ್ತವೆ ಬಂದು ಬಾಳಿನಲ್ಲಿ;
ಮರೆಯದಿರು ನಡೆದು ಬಂದ ದಾರಿ ನೀನು ಇಲ್ಲಿ!

ದೇಹ ಸಿರಿ, ನುಡಿಯ ಝರಿ ಕ್ಷಣಿಕ ಲೋಕದಲ್ಲಿ;
ಕಾಯಕವು ಮಿಡಿಯಬೇಕು ವೀಣೆ ಎದೆಯಲ್ಲಿ!

-


25 JUN 2022 AT 20:03

ಬಹು ಬೇಗನೆ ಬಂದೆಯಲ್ಲೋ ಭಗವಂತಾ;
ಬಲಶಾಲಿ ದೇಹವು_ಹೇಗೆ ಮಾಡಲಿ ವ್ಯರ್ಥ ?

ನೀ ಕೊಟ್ಟ ಸಮಯದ ಸಾಲಾವಧಿ ಮುಗಿದ್ಹೋಯ್ತಾ;
ವಸೂಲಿ ಮಾಡದಿರು_ಅಳಿದಿಲ್ಲ ನನ್ನ ಸ್ವಾರ್ಥ!

-


24 JUN 2022 AT 16:37

ಬದಲಾದಂತೆ ಭಾಸವಾಗಿದೆ ಸಮಯ;
ಕೆಲಸಕ್ಕೆ ಬಾರದು ಇನ್ನು ನಯ ವಿನಯ,
ಹೋರಾಟವೇ ಜೀವನ _ಬಿಡು ಎಲ್ಲಾ ಭಯ!

-


24 JUN 2022 AT 13:16

ಯಾಕಿಷ್ಟು ಬೇಸರ ?

ಮಂದಹಾಸವ ಬೀರು ಪ್ರಶಾಂತ ಅಲೆಗಳ ಜೊತೆಗೆ,
ಮಹಾದ್ವಾರವ ತೋರು ಬರಲು ನಿನ್ನುದರದೊಳಗೆ!

ಮತ್ಸ್ಯ ಲೋಕದ ಪಯಣ ಜೀವನದ ಮಹದಾಸೆ,
ವ್ಯರ್ಥ ಬದುಕಿನ ಪಯಣ ತುಸು ನಿಂತರೂ ಕೂಸೆ!

ಮಾನವನ ಆಮಿಷದೊಳು ಕಲುಷಿತವಾಗಿದೆ ಇಂದು,
ಪ್ರಕೃತಿಯ ಪ್ರತಿ ಮಡಿಲು_ ಶಿಕ್ಷಿಸಲಾರದೇ ನೊಂದು ?

-


24 JUN 2022 AT 13:06

ಕಾಡುವುದೇಕೆ ಬಂದು ಸುಡುವ ರವಿ ?

ಪದಗಳ ಹುಡುಕುತ್ತಲಿಹನು ಇಲ್ಲಿ ಕವಿ,
ಹಸಿರಾದರೂ,ಹದಗೆಟ್ಟರೂ ಮಣ್ಣಿನ ಸಿಹಿ!

-


24 JUN 2022 AT 13:01

ನೆರಳನ್ನೇ ಹಿಂಬಾಲಿಸಿಕೊಂಡು_
ನೇರವಾಗಿ ಬಂದರೂ ಕೊನೆಗೆ,
ಎದುರಿನಲ್ಲಿ ಕಂಡೆ ಕಾಣಬಾರದನ್ನು!

-


24 JUN 2022 AT 12:59

ತಡೆಹಿಡಿದು ತೆವಳಲು ದಾರಿ ತೋರಲು;
ಸವೆದ ಹಾದಿಯೂ ಕಾಲುವೆಯಾಗಿಲ್ಲಿ...
ಸಾರ್ಥಕತೆ ಕಾಣುವುದು ಕಡಲ ದಡದಲ್ಲಿ!

-


24 JUN 2022 AT 12:54

ಒಳಗೊಂದು ಭಾವನೆಗಳ ಬಾವಿ ಬಾಯ್ತೆರೆದು,
ಬಿಡದೇ ಸುರಿಯುವ ಹನಿಗಳ ಬಳಿ ಬಾ ಎಂದು;
ಮುಗುಳ್ನಗೆಯ ಮೊಗದಿಂದ ಸನ್ನೆಯೊಳು ಕರೆದು,
ಕಡಲ ತೀರವ ತಲುಪಿತು ಕಣ್ಣೀರ ಹನಿಯಾಗಿ ಹರಿದು!

-


13 JUN 2022 AT 21:55

ಚೂರಾದ ಭರವಸೆಯ ತುಣುಕುಗಳ ಒಗ್ಗೂಡಿಸಿ,
ಚಂದಿರನ ಬೆಳಕಿನಲ್ಲಿ ಭಾವನೆಗಳಿಗೆ ಹೊದಿಸಿ;
ಚಂಚಲವಾದ ಮನವು ಕಾಣ ಬಯಸಿದೆ ಕನಸು,
ಚಪಲತೆ ತೀರದು ಮುಗಿದು ಹೋದರೂ ವಯಸ್ಸು!

-


7 JUN 2022 AT 8:46

ಕಾಡಿನೊಳಗೋಡಾಡಿಕೊಂಡಿದ್ದ ಜೀವವೊಂದು,
ಸಂಬಂಧ ಬೆಳೆಸಿತ್ತು ನಾಡಿನ ಮೋಹದಡಿ ಬಂದು;
ಕೆಲ ಬದಲಾವಣೆಗಳಿಗೆ ತಲೆಬಾಗಿತು ಸಂಗಾತಿಗೆಂದು,
ತುಸು ಹೊಂದಾಣಿಕೆ ಬಯಸಿತ್ತು ಭರವಸೆಯ ಭ್ರಮೆಯಲ್ಲಂದು!
ಕೊಂಚವೂ ಗಡಿ ದಾಟದ ಮನಸ್ಥಿತಿಗೆ ಮನನೊಂದು,
ಮತ್ತೆ ಮತ್ತೆ ಚಡಪಡಿಸಿತು ಅಸಹಾಯಕತೆಯಾ ನೆನೆನೆನೆದು;
ಮಾನಸಿಕ ವೇದನೆಯೊಳು ಮರೆತು ಘರ್ಜಿಸಿತು ಕೊನೆಗೊಮ್ಮೆ,
ನಾಡೇ ನಿಮಗಿಷ್ಠವಾದರೆ ಕತ್ತಲೆಯ ಕಾಡೇ ನಮ್ಮ ಹೆಮ್ಮೆ!

-


Fetching Nagaraj V.G. Quotes