ನಾನ್ಯಾರು!   (7)
1.9k Followers · 252 Following

Joined 20 January 2019


Joined 20 January 2019

ಪರಿಶುದ್ಧ ಸಂತೋಷದ ಭಾವ ರೂಪ
ಸತ್ಯದ ದಾರಿ ತೋರುವ ಒಳಗಣ್ಣಿನ ದೀಪ

-ಮುಂಜಾನೆಯ ಮೌನ
ಮನಸ್ಸು ತೆರೆದು ಕೇಳಲು
ಸಾಯಂಸಂಧ್ಯೆಯ ಧ್ಯಾನ
ಹೃದಯ ಬಡಿತ ಹಾಡಲು
ಮತ್ತು ಭಾವಗಳು ಸುತ್ತಲೂ
ಇನ್ನೇನು ಬೇಕು
ನನ್ನೊಳಗೆ ನನ್ನ ನಾ ಹುಡುಕಲು

-ಮಾತು ಮುದ್ದು
ಮೌನ ಕೋಪ
ಪ್ರೀತಿಯೊಂದು
ಮಾಯಾ ಲೋಕ

-ಪ್ರೀತಿ ಮಾಡಿ
ಮಾಯಾವಾಗಿ ಹೋದಳು
ಏಕಾಂತ ನೋಡಿ
ಕವಿತಾದೇವಿ ಹೆಗಲೇರಿದಳು

-ಶಾಂತಿಗೆ ನೆಲೆಯಿದೆ
ಸಂತೋಷಕು ಸೂರಿದೆ
ನೋವಿನ ದೂರ ತೀರ
ಪರಮಾತ್ಮನ ವಲಯ
ನಮ್ಮದೇ ಸವಿ ಹೃದಯ

-ಜೀವನದ ಸುಖ ದುಃಖಗಳಿಗೆಲ್ಲ
ಕಾರಣ ಇಷ್ಟೆ
ಬಂಧನ

-ಬಂಧನ ಮುಕ್ತ ಮುಗ್ಧ ಭಾವ
ಸರ್ವಪಾಪ ಕಳೆಯುವ ದೇವ

-ಅವನು
ಬಂಗಾರದ ಬೆಳಕು
ನಮ್ಮ ಆನಂದ ಬೆಳಗುವವನು

-ಸದಾಕಾಲ
ಸ್ಮರಿಸಬೇಕು
ಪರಮಾತ್ಮನನ್ನು
ಅವನೆ ತಾನೆ
ಹೃದಯದ ಬಂಧು
ನಮಗೆಂದು

-ಭುವಿಗೆ ಬಂದ ಮೇಲೆ
ಬಂಧನ
ನೀ ಸಿಕ್ಕರಷ್ಟೆ
ಮುಕ್ತಿಯ ಅನಾವರಣ

-


Fetching ನಾನ್ಯಾರು! Quotes