ಎದೆಯ ಕೊಳಕ ಹಾಳೆಗಿಳಿಸಿ ಹಗುರಾಗುತ್ತೀನಿ,
ಹಾಳು ಹಾಳೆಯೀಗ ಹೆಣಭಾರ.......-
ಹಾಳು ಹಾರ್ಟು ಹರ್ದಾಗ, ಉರ್ದಾಗ, ಸೀದಾ ಹೇಳ್ಬೇಕಂದ್ರೆ, ತೀರಾ ಅವ್ಳು ನ... read more
ಕಡೆಗೊಂದು ಕವನ
ಕಣ್ಣಿಂದ ಜಾರಿತ್ತು
ಶಾಹಿಗಿಳಿಯುವ ಮುನ್ನ
ಯಾಕೋ ಆವಿಯಾಗಿತ್ತು
ಹೇಳಿಬಿಡು ಹುಡುಗಿ
ತೀರಾ ತಾಪಮಾನಕ್ಕೂ
ಹತ್ತಿರದವಳಾಗಿದ್ದಾದರೂ ಹೇಗೆ ನೀನು.....-
ನಮ್ಮ ಜನ ಎಷ್ಟು ಮುಗ್ಧರು ಅಂದ್ರೆ,
ಬೆಂಕಿಯಿಂದ ದೂರ ಇರ್ತಾರೆ ಆದ್ರೆ
ಬೆಂಕಿ ಹಚ್ಚೋರನ್ನ ತೀರಾ ಪಕ್ಕದಲ್ಲಿಟ್ಟಿರ್ತಾರೆ-
ಎದೆ ತುಂಬ ಪಿರೂತಿ ಮಡಿಕ್ಕಂಡ್
ಹೇಳೋಕೆ ಒದ್ದಾಡೋ ಶಾಪ
ಗಂಡ್ಮಕ್ಳಿಗೆ ಹುಟ್ತಾನೇ ಬಂದಿರುತ್ತೋ ಏನೋ..?
(Full piece in caption)-
ನೀರ ಗುಳ್ಳೆಯವನು
ಅದರೊಳಗಿನ ಗಾಳಿಯವಳು
ಹಾ..., ಇಲ್ಲಿ ಒಬ್ಬರು ಮುಕ್ತರಾಗಲು
ಇನ್ನೊಬ್ಬರು ಒಡೆಯಲೇ ಬೇಕು......!-
ಗಲಿ ಬಿಲಿ ಶಹರು
ಅರೆ ಬರೆ ಶಾಯರಿ
ಗೀಚಿ ಎಸೆದ ಪೇಪರು
ಅವಳ್ಭುಜ ತಾಕದ ಸಂಜೆ
ಅರೆಗಳಿಗೊಮ್ಮೆ ನೆನಪಾಗೋ "ಅಪ್ಪ❤️"
ಕರೆದು ಕೊರೆವ ಅಲೆಗಳ ಆ ಶಾಂತಿ ಗೀತೆ
ಅರ್ಧ ಹೀರಿ ತಣ್ಣಗಾದ "ಚಹಾ"
ನಿನ್ನೆಯಲ್ಲೇ ಕಳೆದ "ನಾನು"
ಬದಲಾಗದೆ ಉಳಿದದ್ದು.... ಇಷ್ಟೆ... ಇಷ್ಟೆ....-
ಎದೆ ಮೇಲಿನ ಅಂಗಿಯ
ಬುಡ್ಡಿ ಕಿತ್ತಿಕೊಂಡಷ್ಟು ಸುಲಭವಲ್ಲ..
ಎದೆಗೊರಗಿ ಬುಡ್ಡಿ ಅಂಟಿಸುವವಳ
ಕಣ್ಣಲಿ ಕಣ್ಣು ಮಿಲಾಯಿಸೋದು...-
ಅವಳೆನ್ನ ಮೊಗದ
ಮೊದಲ ಮೊಡವೆ...,
ತಿಕ್ಕಿ, ತೀಡಿ ಉಳಿಸಿಕೊಂಡದ್ದನ್ನ
ಕಲೆ ಎನ್ನುತ್ತಾರ ಹೇಳು....-
ಅವಳು ಸುಖಾಸುಮ್ಮನೆ
ತಾರೆಗಳೊಂದಿಗೆ ಹರಟೆಗಿಳಿಯುತ್ತಾಳಂತೆ......
ಛೇ., ಆತುರವೆನಗೆ ಚುಕ್ಕಿಯಾಗುವ ಮುನ್ನ
ಒಮ್ಮೆಯಾದರೂ ಕತ್ತನೆತ್ತಿ ಚುಕ್ಕಿಗಳೆಣಿಸಬೇಕಿತ್ತು.......-
ತನ್ನೆಲ್ಲ ಆಸೆಗಳ
ಹಂಗಂಗೆ ಮುಚ್ಚಿಡುತ್ತಾಳವಳು......
ನಗು ಮೊಗದ ಹಿಂದೆ
ದಣಿವ ಬಚ್ಚಿಡುತ್ತಾಳವಳು......
ಮುಗ್ಧೆಯವಳು, ಈಗಲೂ
ಉಮ್ಮಳಿಸಿ ಬಂದ ದುಃಖಕ್ಕೂ
ಒಲೆಯ ಹೊಗೆಯನ್ನೋ,
ಹೆಚ್ಚಿದ ಉಳ್ಳಾಗಡ್ಡಿಯನ್ನೋ ದೂರುತ್ತಾಳವಳು......-