Mr Udde   (ಆಂತರ್ಯ😊☹️)
35 Followers · 20 Following

Joined 17 September 2019


Joined 17 September 2019
7 FEB 2022 AT 8:08

ಬಯಸದೇ ಬಂದ ಕುಸುಮ ನೀನು..

ಬಯಸದೇ ಬಂದ ಕುಸುಮ ನೀನು..

ಬಾಡಲು ಬಿಡೆನು ಬಾಳದಾರಿಯಲ್ಲಿ ಇನ್ನೂ..

ಸೇರಿಬಿಡು ಮನಸ ಬದುಕ ದಾರಿಯಲ್ಲಿ..

ಕಾಪಾಡುವೆ ನಿನ್ನ ಕಣ್ಣ್ ರೆಪ್ಪೆಯಂಚಿನಲ್ಲಿ..❤️❤️

:-ಆಂತರ್ಯ

-


3 SEP 2020 AT 9:52

ಕೆಲವು ಜನರಿಗೆ ನಮ್ಮ
ಅವಶ್ಯಕತೆ ಇದ್ದಾಗ
ನಾವು ಬೇಕು..

ಅವಶ್ಯಕತೆ ಇದ್ದಾಗ ಮಾತ್ರ
ನಾವು ಬೇಕು..

ಅವಶ್ಯಕತೆ ಮುಗಿದಮೇಲೆ
ನೀನ್ ಯಾವನಿಗೆ ಬೇಕು...!!!

-


20 JUL 2020 AT 20:26

#ಕಾಲ

ಒಳ್ಳೆಯವರಿಗೆ ಯಶಸ್ಸು ಸ್ವಲ್ಪ Late ಆಗಿ ಸಿಕ್ಕರೆ
ಕೆಟ್ಟವರಿಗೆ ಯಶಸ್ಸು ತುಂಬ Fast ಆಗಿ ಸಿಗುತ್ತದೆ

ಆದರೆ

ಕೆಟ್ಟತನದಿಂದ ಸಿಕ್ಕ ಯಶಸ್ಸಿಗಿಂತ ಒಳ್ಳೆತನದಿಂದ ಸಿಕ್ಕ ಯಶಸ್ಸು ಸಾಯೊವರೆಗೂ ಸಿಹಿಯಾಗಿರುತ್ತದೆ

-


20 JUL 2020 AT 20:19

#ವಾಸ್ತವ

ನೀನೆ ಎಲ್ಲಾ ನಿನ್ನಿಂದನೇ ಎಲ್ಲಾ ಖುಷಿ, ನಗು, ಸಂತೋಷ... ಎನ್ನುವ ಜನ ನಾವಿಲ್ಲದೇ ಇದ್ದಾಗ ಆಡ್ಕೊಂಡು ನಗ್ತಾಇರ್ತಾರೆ

ಆದರೆ

ಅವರ ಬಗ್ಗೆ ಇನ್ಯಾರೋ ಆಡ್ಕೊಂಡು ನಗ್ತಾ ಇರ್ತಾರೆ ಅನ್ನೊದನ್ನೇ ಮರೆತು ಹೋಗಿರುತ್ತಾರೆ

-


19 JUL 2020 AT 20:28

#ಇವ್ಳು ಯಾರು ಗುರೂ

ಕನ್ನಡಕ ಹಾಕಿಕೊಂಡು ಮಲಗಿದ್ದಳು
ಕನ್ನಡಕ ತೆಗೆದಿಟ್ಟು ಮಲ್ಕೊ ಎಂದು ಹೇಳಿದೆ
ಅದಿಕ್ಕೆ
ಕನಸು ಬಿದ್ದರೆ ಕಾಣಲ್ಲ ಅಂತವ್ಳೇ...

-


19 JUL 2020 AT 20:20

ಆಸೆಯೂ ನೀನೆ, ಆಸರೆಯೂ ನೀನೆ..

ನನ್ನೆಲ್ಲಾ ಆಸೆ ಆಕಾಂಕ್ಷೆಯ ಭರವಸೆಯೂ ನೀನೆ..

ನನ್ನ ಬಾಳ ದಾರಿಯಲ್ಲಿ ಸಿಕ್ಕ ಸ್ಪೂರ್ತಿ ನೀನು..

ಬದುಕಬಲ್ಲೇ ನಾನೀಗ ನಿನ್ನೊಂದಿಗೆ ಜೀವನ ಪೂರ್ತಿ ನಾನು

ಹೆಚ್ಚೇನು ಹೇಳಲಾರೆ ನಿನ್ನ ವರ್ಣಿಸಲು ನಾನು

ವರ್ಣನೆಗೂ ಮೀರಿದ ವ್ಯಕ್ತಿತ್ವ ನಿನದು

ಹಸಿರಾಗಿಸಿರುವೆ ನನ್ನ ಮನಸ ಮುಂಗಾರು ಬರುವ ಮುಂಚೆಯೇ.....

-


10 JUL 2020 AT 21:04

If You want to be successful in your life

Just move on in your own way
(Sometimes and in some situations)

ನಿಮ್ಮ ಜೀವನದಲ್ಲಿ ಯಶಸ್ವಿಯಾಗಲು ನೀವು ಬಯಸಿದರೆ ನಿಮ್ಮದೇ ಆದ ದಾರಿಯಲ್ಲಿ ಸಾಗಿರಿ
(ಕೆಲವೊಮ್ಮೆ ಮತ್ತು ಕೆಲವು ಸಂದರ್ಭಗಳಲ್ಲಿ)

-


10 JUL 2020 AT 20:53

ಮನಸುಗಳ ಸಂಘರ್ಶದಿ
ಕನಸುಗಳು ಮರೆಯಾಯಿತು

ಕನಸುಗಳ ಜೋಳಿಗೆಯಲಿ
ನೆನಪುಗಳು ಓಂದಾಯಿತು

ಜೀವನದ ಬಾಳ ದಾರಿಯಲಿ
ನಗುವು ಬರಿದಾಯಿತು

ನೋವುಗಳು ಹೆಚ್ಚಾಗಿ ಮನದಿ
ನಿನ್ನ ನೆನಪು ಅಚ್ಚಾಯಿತು....

-


2 JUL 2020 AT 20:36

ಕನಸಲ್ಲೂ ಕಾಣುತಿರುವೆನು ನಾ ನಿನ್ನ😊
ಕಸದಂತೆ ನೋಡುತಿರುವೆ ನೀ ನನ್ನ☹️

-


1 JUL 2020 AT 20:31

#ಅವಳ ನಗು

ಅವಳ ತುಟಿಯಂಚಿನ ಕಿರು ನಗೆಗೆ
ಮಾರು ಹೋದೆನಲ್ಲಾ ನಾ ಭುವಿಯಲ್ಲಿ
ಆ ನಗುವ ಕಂಡು ನಾಚುತಿಹನು
ಹುಣ್ಣಿಮೆ ಚಂದ್ರನೂ ಕೂಡಾ ಬಾನಂಗಳದಲ್ಲಿ

ನಗುವ ಅಲಂಕರಿಸಿದ ಮುಖವ ಕಂಡು
ನನ್ನೆಲ್ಲಾ ನೋವ ಮರೆತಿಹೆನು
ಬಿಡದೇ ಕಾಡುತಿಹುದು ಆ ಮೊಗವು
ಕತ್ತಲ ರಾತ್ರಿಯಲ್ಲೂ, ನನ್ನ ಕನಸಲ್ಲೂ

ಉಳಿದಿರಲಿ ಆ ನಿನ್ನ ನಗುವು
ನಮ್ಮ ಅಂತ್ಯದೂರೆಗೂ...
ಜೋಪಾನ ಮಾಡುವೆನು ನಿನ್ನ
ನನ್ನ ಅಂತ್ಯದೊರೆಗೂ...

-


Fetching Mr Udde Quotes