ಮನು ಗೌಡ  
25 Followers · 9 Following

ತಾಯಿಯನ್ನು ಪ್ರೀತಿಸಲು ಸಾಧ್ಯವಾಗದವನು
ಬೇರೆ ಯಾವುದೇ ಹೆಣ್ಣನ್ನು ಪ್ರೀತಿಸಲು ಅನಹ೯
Joined 29 March 2020


ತಾಯಿಯನ್ನು ಪ್ರೀತಿಸಲು ಸಾಧ್ಯವಾಗದವನು
ಬೇರೆ ಯಾವುದೇ ಹೆಣ್ಣನ್ನು ಪ್ರೀತಿಸಲು ಅನಹ೯
Joined 29 March 2020
29 JUN 2023 AT 20:58

ಒಬ್ಬ ಇದ್ನಂತೆ
ದೇವರನ್ನ ನೀರು ಕೇಳುದ್ನಂತೆ
ಆಗ ದೇವರು ಅವನಿಗೆ ಕಾವೇರಿ ನದೀನ ಕೊಟ್ನಂತೆ
ಮತ್ತೆ ದೇವರನ್ನ ಬೆಳಕು ಬೇಕು ಅಂತ [ light ]ಕೇಳುದ್ನಂತೆ
ದೇವರು ಸೂರ್ಯನ ಉದಯಿಸುದ್ನಂತೆ
ಮತ್ತೆ ದೇವರನ್ನ ನನ್ನ ಪ್ರೀತಿ ಮಾಡೋರು ಬೇಕು ಅಂತ ಕೇಳುದ್ನಂತೆ
ದೇವರು ಸುಮ್ಮನೆ ಇದ್ನಂತೆ
ಅವನಿಗೆ ಕೋಪ ಬಂದು ದೇವರನ್ನ ಬೈಕೊಳ್ತಾನೆ
ನಂತರ ಅವನಿಗೆ ದೇವರು ಹೇಳ್ತಾನೆ ಏನಂತ ಗೊತ್ತಾ.......
ನೀನು ಹುಟ್ಟೋಕು ಮುಂಚೆನೇ ನಿನ್ನ ತುಂಬಾ ಪ್ರೀತಿ ಮಾಡೋರ್ನ
ನಿನ್ಗೆ ಕೊಟ್ಟಿದೀನಿ ನಿನಗೆ ಅದು ಗೊತ್ತಾಗ್ತಿಲ್ಲ
ಕಣ್ಣು ಮುಚ್ಚಿಕೊಂಡು ತಾಯಿಯ ನೆನೆದಿಕೋ ಆಗ ನಿನಗೆ
ಗೊತ್ತಾಗುತ್ತೆ ನಿಮ್ಮ ತಾಯಿ ನಿನ್ನ ಎಷ್ಟು ಪ್ರೀತಿಸುತ್ತಾರೆ ಅಂತ
ಆಗ ತಾಯಿಯ ನೆನೆದು ಮಗ ಕಣ್ತುಂಬಿಕೊಳ್ಳುತ್ತಾನೆ........

ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ

-


10 APR 2023 AT 8:56

ಇರುವ ತಾಯಿಯ ನೆನೆದುಕೋ
ದುಡಿವ ತಂದೆಯ ಮಿಡಿದುಕೋ
ಬಾರದ ಹುಡುಗಿಗೆ
ಬಂಧಿಯಾಗಬೇಡ

-


4 APR 2023 AT 15:13

ತಿಳಿಯದ ಮನದಲ್ಲಿ
ತಿರುವಿನ ಅಲೆಯೊಂದು
ತಿಳಿಯಾಗಿ ಎದುರಾಗಿದೆ
ಸೆಳೆಯುವ ಒಲವೆಲ್ಲಿದೆ

-


9 MAR 2023 AT 22:11

ಮನದಲ್ಲೇ ನಿನ್ನೊಡನೆ ಮಾತನಾಡುವಾಸೆ
ನೀ ಕಾಣೆಯಾಗಿದ್ದರು ನನ್ನ ಕಣ್ಣಿಗೆ ಕಾಣದಿದ್ದರೂ
ನಿನ್ನ ಮುತ್ತಿನ ಮತ್ತಿನಿಂದ
ಕಡಲಾಳದ ಮುತ್ತನ್ನು ತಂದುಕೊಡುವಾಸೆ
ಸಮುದ್ರ ಎಷ್ಟೇ ಆಳವಿದ್ದರು
ಪ್ರೀತಿಯ ತೀರ ಎಷ್ಟೇ ದೂರವಿದ್ದರೂ

-


6 MAR 2023 AT 14:40

ಕಾರಣ ಯಾವುದೆಂದು ತಿಳಿಯದು
ನಿನ್ನ ಪ್ರೀತಿಸಲು ನನ್ನ ಪುಟ್ಟ ಹೃದಯಕೆ
ಬಿಟ್ಟು ಹೋದ ಕಾರಣವು ಅರೆಯದು
ಈ ನನ್ನ ಪುಟ್ಟ ಗೂಡಿಗೆ
ನೆನೆದಿಕೋ ನನ್ನ ನಾ ಜೀವ ಬಿಡುವ ಮುನ್ನ

-


5 MAR 2023 AT 16:00

ಕಾರಣಗಳೇ ಸಿಗದ ಕೈ ತೋಟದಲ್ಲಿ
ದುಂಬಿಯಂತೆ ನನ್ನೊಲವ ಸ್ಪರ್ಶಿಸಿದ್ದೆ
ನಿನ್ನದರಗಳು ನನ್ನದರಗಳ ತಾಕುವ ಮುನ್ನ
ಯಾರದೋ ಹೂದೋಟಕ್ಕೆ ಹಾರಿಹೋದೆ
ಅಂದಿನಿಂದ ಇಂದಿನವರೆಗೆ ಹುಡುಕುತ್ತಲೇ ಇರುವೆ
ಬರುವ ಚಿಟ್ಟೆಗಳ ಸಾಲಿನಲ್ಲಿ ನೀ ಬಂದು ಹೋದ ದಾರಿಯಲ್ಲಿ
ಇಂತಿ ನಿನ್ನ ಪ್ರೀತಿಯ......

-


5 FEB 2023 AT 9:47

ನಿನ್ನ ಪ್ರೀತಿಯ ಜಗದೊಳು
ನನ್ನ ಏಕೆ ಕೈದಿಮಾಡಿರುವೆ
ನಿನ್ನೊಂದು ಸ್ಪರ್ಶ ಸಾಕು
ನಾನೇ ನಿನಗೆ ಶರಣಾಗುವೆ

-


26 JUL 2022 AT 22:50

ಹೃದಯದ ಮೂಲೆಯಲಿ ಬರೆದಿರುವೆ ನಿನ್ನ ಹೆಸರ
ನೀ ಸಿಗದೆ ಹೋದರೆ ಬಿಡುವೆನು ನನ್ನ ಉಸಿರ

-


18 JUN 2022 AT 18:43

ಪ್ರೀತಿಯ ಗೆಳತಿ,


ನಿನ್ನ ಮನದ ಮಹಲಿಗೆ ನನ್ನನ್ನೊಮ್ಮೆ ಆಮಂತ್ರಿಸು....

-


18 JUN 2022 AT 18:38

ಪ್ರೀತಿಯ ಹೃದಯ ಬಡಿತ
ನನಗೆ ನಿನದೆ ತುಡಿತ..💙

-


Fetching ಮನು ಗೌಡ Quotes