ಮನು ಎಮ್ ಟಿ   (Manu gowda)
163 Followers · 39 Following

Joined 1 December 2018


Joined 1 December 2018
18 MAY 2019 AT 16:09

ಜೀವನವೆಂಬ
ಚದುರಂಗದಲ್ಲಿ
ಸಮಯವನ್ನೇ ಸೋಲಿಸಿ
'ಬಾಜಿ಼ಗಾರ'
ನಾವೇ ಆಗ್ಬೇಕು✌

-


18 MAY 2019 AT 16:05

ನೀ ಬಿಟ್ಟು
ಹೋದ ದಾರಿಯ
ಕೊನೆಯಲ್ಲೇ,
ಗೆಳೆತಿ..
ಸಿಕ್ಕಿದೆ ನನ್ನ
ಪಯಣಕೆ ವಿರಾಮ?.

-


18 MAY 2019 AT 16:01

ನನ್ನವಳು ಪಾರಿಜಾತ,
ಶುಭ್ರ
ಸುಂದರ
ತಾಜಾ
ವರ್ಣಭರಿತ
ಶ್ರೇಷ್ಠ
ಆಕರ್ಷಕ
ಮನಮೋಹಕ
ವಿರಳ ಹಾಗೂ
ಅತಿ ಸರಳ☺

-


18 MAY 2019 AT 15:58

ಒಮ್ಮೆ ತಿರುಗಿ ನೋಡು ಗೆಳೆತಿ,
ನಿನ್ನ ನೆನಪುಗಳ ಅಲೆಯಲ್ಲಿ ಈ ಮನಸು ಕೊಚ್ಚಿ ಹೋಗಿದೆ ಆ ಕಡಲ ಆಳಕೆ....
ಮತ್ತೆಂದಾದರೂ ಸಿಗಬಹುದೇ
ನಿನ್ನ ಪ್ರೀತಿಯ ಹೊತ್ತು..
ಆ ಸ್ವಾತಿ ಮುತ್ತಿನ ಹಾಗೇ😍

-


18 MAY 2019 AT 15:53

ಒಂಟಿ ಜೀವಕೇ.. ಜಂಟಿಯಾದವಳು,
ಕನಸಿನ ಬುತ್ತಿಯ ಹೊತ್ತು ತಂದವಳು,
ಮನಸಿಗೆ ಪ್ರೀತಿಯ ಅಚ್ಚೆ ಹಾಕಿದವಳು,
ಹೃದಯಕೆ ಏಕಾಂತದ ಉಡುಗೊರೆ ಕೊಟ್ಟವಳು
ನೆನಪುಗಳ ರಂಗನು ಸುರಿದು ಹೋದವಳು,
ಮಧ್ಯದಾರಿಯಲ್ಲೇ ಬಿಟ್ಟು ಹೋದವಳೆ
ಮತ್ತೆ ತಿರುಗಿ ಬರುವೆಯಾ ಗೆಳತಿ....

-


18 MAY 2019 AT 15:49

ಮಳೆಯೇ ಇಳೆಗೆ
ಬರಲು ನೀ ಮೆಲ್ಲಗೆ
ಮಣ್ಣ ಘಮಲು ಇಲ್ಲಿ
ಹರಡಿರಲು ಎಲ್ಲೆಡೆಗೆ
ಈ ಹೃದಯದಲ್ಲಿ
ಏನೋ ಸಂತೋಷ
ನನ್ನವಳು ಬರುವ ವೇಳೆ
ಏನೋ ಉಲ್ಲಾಸ
ಬಾ ಬಳಿ ಬಾ ನೀ ಬಾ
ನನ್ನಲ್ಲಿಗೆ ಕಾದಿಹೆನು
ನಾ ನಿನ್ನ ಆಗಮನಕೆ .

-


29 APR 2019 AT 15:25

ಅವಳೆಂದರೆ ನನಗೆ ಆ ಆಗಸದಷ್ಟು ಪ್ರೀತಿ,
ಬರಿದಾದ ಬಾಳಲ್ಲಿ ಬಂದ ಅವಳು ತಂಗಾಳಿ ರೀತಿ,
ಕೋಲ್ಮಿಂಚಂತೆ ಅವಳ ಮಾತು..
ನನ್ನ ನಗುವೇ ಬೆಳದಿಂಗಳು.
ಹಸಿರೆಲೆಗಳ ಮೇಲೂ ಬರೆದೆ ಅವಳಿಗಾಗಿ..
ಒಂದೆರಡು ಪ್ರೀತಿಯ ಸಾಲು..
ಬರಬಾರದೆ ಒಮ್ಮೆ ಮೊದಲ ಮಳೆಯಂತೆ,
ಕುಳಿತಿರುವೆನು ಕಾದು ನಾ..ಈ ಇಳೆಯಂತೆ.

-


29 APR 2019 AT 15:20

ಪ್ರೀತಿ ಬಜಾರಿನಲ್ಲಿ ನಿನ್ನೊಂದಿಗೆ ವ್ಯವಹರಿಸಬೇಕು..

ನಿನ್ನ ಹಣೆಗೊಂದು ಸಿಹಿಮುತ್ತು ಇಡುವೆ,
ನಾ ತುಸು ಒರಗಲು ನಿನ್ನ ಹೆಗಲ ಕೊಡುವೆಯಾ?

-


29 APR 2019 AT 15:15

ನಿಂತ ನೀರ ಕಲುಕ ಬೇಡಿ ಕಲ್ಲುಗಳೇ....
ಹೂದಳಗಳ ಇರಿಯಬೇಡಿ ಮುಳ್ಳುಗಳೇ....
ಏನಿವೆಯೋ ನೋವುಗಳು ಅವುಗಳಿಗೆ,
ಬದುಕಲು ಬಿಡಿ ತಮ್ಮಷ್ಟಕೆ ಸುಮ್ಮನೆ🙁

-


29 APR 2019 AT 15:12


ಆ ದಿನಕರನ,
ಕರೆದವರ್ಯಾರು ಈ ಕಡಲ ಅಂಚಿಗೆ..
ತಳ್ಳಿದವರ್ಯಾರು ಆ ದಟ್ಟ ಕಾಡಿಗೆ..
ಏರಿಸಿದವರ್ಯಾರು ಆ ಬೆಟ್ಟಗಳ ತುದಿಗೆ..

ಹೇಳುಬಾರೇ ಗೆಳತಿ.

-


Fetching ಮನು ಎಮ್ ಟಿ Quotes