ಸ್ನೇಹಕ್ಕೆ ಋಣ ಬೇಕಿಲ್ಲ ..
ಮಾತಿಗೆ ಸಂಬಂಧವೆನಿಲ್ಲಾ...
ಈ ಪ್ರೀತಿಗೆ ಹೆಸರೇನಿಲ್ಲ....
ಒಪ್ಪಿಸು ಇಲ್ಲ ಒಪ್ಪಿಸಿಕೊ....
ನಿನ್ನ ತನುಮನವ.....!
ಕಾಯುತ್ತಿರುವೆ ನಿನ್ನ ಮುಂದಿನ ಜನುಮದಿನವ...
ಮೊದಲೇ ತಿಳಿಸಲು ಶುಭಾಶೆಯವ...
- Manu(ಮನು ಗೌಡ)-
ಕರೆಯೆದೇ ಕನಸಲಿ ಬಂದವಳು
ಅವಳು!!
ಮನಸಿಗೆ ಮಗುವಾಗಿ ಕಂಡವಳು
ಅವಳು!!
ಕಣ್ಣಿಗೆ ಕಾಣದೆ ಇರುವಳು
ಅವಳು!!
ಮನಸಿಗೆ ಹಿತವಾಗಿ, ಪ್ರೀತಿಗೆ ಹೆಸರಾಗಿ
ಇರುವಳು ಅವಳು ...
' ನನ್ನವಳು '-
ಬರಯದ ಕಾಗದವು ಗೀಚಿ ಹೇಳಲು..
ನಿನ್ನ ಮೊಗದ ಸಿರಿಯ ಚೆಲುವ..
ಬರಹವು ನಾಚಲು ನಿನ್ನ ಗುಣಗಾನವ..
ಹೇಳಲೇನು ಹೆಣ್ಣೇ ನಿನ್ನ ಹೌದರ್ಯವ..
ತಿಳಿ ಹಾಳೆಯ ಮೇಲೂ ಕಂಡೆ ನಿನ್ನ ಮೊಗವ..
ಮನಸೂಪ್ಪದು ಹೊಗಳಲು ನಿನ್ನ ಸೌಂದರ್ಯವ...-
ಪ್ರಕೃತಿ ಎಂಬೆನೆಗೆ
ನೀಡಿಂದು ಒನ್ನ ಬದುಕ,
ತಾಯೆಂಬೇ ಪಡೆದು ಮರುಜನ್ಮವ..
ಹರಸಿಹಳು ಬದುಕು ನೂರ್ವಾರರುಷ..
ಅದುವೇ ನಮ್ಗೆ ಜೀವ್ನದ ಹರುಷ..-
ನಿನ್ನ ಮನ ದನಿಸಲು..
ಎನ್ನ ಹಿರಿಮೆ ಗರಿಗೆದರಲು..
ತನ್ನ ಸಿರಿಯ ಬಯಕೆ ಬೆನ್ನೇರಿ
ಮನ ಬಿಚ್ಚಿ ಹಾರಬೇಕಿದೆ ಜೊತೆಗೆ ಬಾನಾರಿ..
ಸಾಗ ಬೇಕು ನಿನ್ನೊಡ ಕೂಡಿ..
ಆ ಜವನು ನಿಲ್ಲಿಸುವತನಕ ನಮ್ಮ ನಾಡಿ.-
ಅವಳ ಮಾತುಗಳೇ ಸಾಕು
ನನ್ನೆಲ್ಲಾ ನೋವ ಮರೆಯಲು...
ಮಾತಾಡದೆ ಮೌನ ಸರಿಸುವಳು.
ಎದುರೇ ನಡೆದರು
ತಿರುಗಿ ನೋಡದೆ ಹೋದವಳು.
ನೊಡದಿರಳವಳು ಬಳಿಬರುವಾಗಲು.
ನೋಡಿದರೂ ನೋಡದಾಗೆ ಇದ್ದವಳು.
ಇದ್ದು ನನ್ನ ಮನಸ ಕದ್ದವಳು..!!-
ಹೂ ವಾಗುವ ಹಣ್ಣಾಗುವ
ಆ ದೇವನ ಪಾದದಡಿ.
ಹೊನ್ನಾಗುವ ಮಣ್ಣಾಗುವ
ದುಡಿಯುವ ಒಡೆಯನಡಿ.
ತೇರಾಗುವ ಸೂರಗುವ
ನಿನ್ನ ನಂಬಿದವರಿಗೆ ಜೇನಾಗುವ.....!!-
ಕನಸಿನ ಗೋಡೆಗೆ
ಬಣ್ಣವನ್ನಚ್ಚಿದೋಳೆ..
ಎದೆ ಬಡಿತದ ಸದ್ದಿಗೆ
ರಾಗವನ್ನೀಡಿದೋಳೆ..
ನನ್ ಉಸಿರ ಏರಿಳಿತದ
ರುವಾರಿಯೋಳೆ...
ನೀಡಿರುವ ಆ ಭ್ರಮ್ಮ
ಈ ಜನುಮಕ್ಕೆ ಇವಳೇ...-
ಪ್ರೀತಿಯ ರಾಯಭಾರಿಯೆ..
ಎಂದು ನೀ...ನಿರುವೆ ಬಂಧನದಲ್ಲಿ
ಬಿಡುಗಡೆ ಏತಕೆ ..?
ಬಿಟ್ಟು ಬಿಡುವಾಸೆ ನನ್ನಾಸೆ.!
ಹೋಗುವೆ ನೀ ಎಲ್ಲಿಗೆ ಮನಸೆ.?
ಹೋಗಲೇ ಬೇಕು,
ಎಲ್ಲರ ಮನಸಿಗೂ ನೀ.. ನಿರಾಸೆ
ಅದೆ ನಿನ್ನ ಕೊನೆಯುಸಿರು ಓ... ಮನಸೆ!!-
ಬಿಡದೆ ಕಾಡುವ ನೆನಪುಗಳೆ ಬೀಸಣಿಗೆ,
ದಹಿಸುವ ಮನಕೆ.
ತಂಪೆರೆಯುವ ನಿನ್ನ ಆಲಿಕೆ,
ತಂದಿದೆ ನನ್ನ ಮನಕ್ಕೆ ಹೊಸ ಪೀಠಿಕೆ...-