ದಿನಕ್ಕೊಂದು, Sorry.. ಮೂರು ಹೈಕುಗಳು.
'ಓಲ್ಡ್ ಮಾರ್ಕೆಟ್' ಗೋಡೆ;
ಮೂತ್ರದ, ಕವಳದ
ಬಟ್ಟೆ ಉಟ್ಟಿತ್ತು.
ರಣ ಬಿಸಿಲು;
ಸೋತ ನೆರಳುಗಳು
ಬಸ್ ಕಾಯುತ್ತಿವೆ.
ಹೊಟ್ಟೆ ಬಿರಿದು
ತಿಂದ ಕಸದ ಡಬ್ಬಿ
ಸುತ್ತ ಕಕ್ಕಿದೆ.
~ ಮಕರಂದ ಮನೋಜ್ ಎಂ.-
ದಿನಕ್ಕೊಂದು, Sorry.. ಮೂರು ಹೈಕುಗಳು.
ಮಾಲೀಕನನ್ನೇ
ರಸ್ತೆ ದಾಟಿಸೊ ನಾಯಿ;
ಪಕ್ಕ ಸರಿದೆ.
ಅಪ್ಪನ ಮೊಗ;
ಪುಟ್ಟಿಯ ಪ್ರಸಾದನ
ಕಲಾಸಾಧನ.
ನಿರ್ಜನ ರಸ್ತೆ.
ಸ್ತಬ್ಧ ಮಧ್ಯಾಹ್ನ. ಬುಲೆಟ್
ಅಬ್ಬರಿಸಿದೆ.
- ಮಕರಂದ ಮನೋಜ್ ಎಂ-
ಗಾಳಿ ಕ್ರೌರ‌್ಯಕ್ಕೆ
ಮಳೆಯ ಹನಿಸಾಲು;
ಛೇ.. ಮಣ್ಣುಪಾಲು.
ನೀರ ಛೇದಿಸಿ
ಕಪ್ಪೆ; ಕೊಳದಲೆಲ್ಲ
ಭಾವತರಂಗ.. (ಪ್ರೇರಣೆ: ಜಪಾನ್ ಹೈಕು)
ಪ್ರೇಮದ ಗುಂಗು;
ಚಿಟ್ಟೆ ರೆಕ್ಕೆಗಳಲ್ಲಿ
ಹೂವಿನ ರಂಗು.
ಕಾಲ- ಗಾಣದ
ಎತ್ತು; ಸುಖಾಸುಮ್ಮನೆ
ತಿರುಗಿ ಗೊತ್ತು.
- ಮಕರಂದ ಮನೋಜ್ ಎಂ.
-
Both plains and mountains
Have been captured by the snow—
There is nothing left.
- Joso
ಬಯಲು, ಬೆಟ್ಟ;
ಹಿಮದ ಬಂಧಿ. ಏನೂ
ಉಳಿದೂ ಇಲ್ಲ.
ಬಯಲು, ಬೆಟ್ಟ;
ಹಿಮದ ಬಂಧಿ. ನಾನು
ಸ್ವತಂತ್ರನಲ್ಲ.
- ಮಕರಂದ ಮನೋಜ್ ಎಂ-
“The bright moon
lifts from the mountains’ shadow
and stands alone in the sky”
- Li Bai
ಪರ್ವತ ಛಾಯೆ
ಎತ್ತಲ್ಪಟ್ಟ ಉಜ್ವಲ
ಚಂದ್ರ ಏಕಾಂಗಿ.
- ಮಕರಂದ ಮನೋಜ್ ಎಂ-
Brilliant morning,
a blank canvas ready
for ghees formation.
- Philip nobel
ಜಾಣ ಬೆಳಗು
ಸಿದ್ಧ ಖಾಲಿ ಪಟವು
ದೇವರು ರುಜು.
- ಸ್ನೇಹ ಬಸಮ್ಮ
ಬೆಣ್ಣೆ ಕಾಯಿಸಿ
ತುಪ್ಪದಂತೆ ಕತ್ತಲು
ನೀಗಿ ಬೆಳಕು.
- ಮಕರಂದ ಮನೋಜ್ ಎಂ
-
ದಿನಕ್ಕೊಂದು, Sorry.. ಮೂರು ಹೈಕುಗಳು
ಬಟ್ಟೆಯ ಸುಕ್ಕು,
ಸೊಕ್ಕು ಮಾಯ; ಅಪ್ಪಿದ್ದು
ಬಿಸಿ ಐರನ್ ಬಾಕ್ಸ್.
ಶೂಗಳೊಂದಿಗೆ
ಮಾತಿಗಿಳಿದ ಪಾಲಿಶ್
ಶುದ್ಧ ಹೊಳಪು.
ಆಫೀಸ್ ಬ್ಯಾಗ್, ಐಡಿ
ಕಾರ್ಡ್, ಬಾಟಲ್, ಲಂಚ್ ಬಾಕ್ಸ್; ಒಂದೇ
ಬಳ್ಳಿ ಹೂಗಳು.
- ಮಕರಂದ ಮನೋಜ್ ಎಂ
-
ದಿನಕ್ಕೊಂದು, Sorry.. ಮೂರು ಹೈಕುಗಳು..
ರೈಲು, ಕಿಟಕಿ;
ಹೊರಗೆ ಫ್ಲಾಟ್ ಫ್ರಾಂನಲ್ಲಿ
ಕೂಗು, ಹೋರಾಟ.
ಲಗೇಜುಗಳ
ಮಧ್ಯೆ ಬರ್ತ್‌ನಲ್ಲಿ ನಾನು
ಒಂದು ಲಗೇಜು.
ಪರಸ್ಪರದೀ
ಮಾತಿಗಿಳಿದ ಜೋಡಿ
ಸಿಂಗಲ್ ವಿಂಡೋ ಸೀಟ್..
- ಮಕರಂದ ಮನೋಜ್ ಎಂ-