ಮಂಜು  
123 Followers · 232 Following

09 o4 1993
Joined 25 February 2019


09 o4 1993
Joined 25 February 2019
30 JUL 2022 AT 8:07

🌹ಹುಟ್ಟು ಹಬ್ಬದ ಶುಭಾಶಯಗಳು ಮದರ್ ಇಂಡಿಯಾ 🌹

ಜೊತೆ ಹುಟ್ಟದ ಬಂಧು
ಆದರೂ ಚಿತೆವರೆಗೂ ಬೆಳೆದ ನಂಟು,
ಅಭಿಮಾನದ ಕನ್ನಡಿ ಮನವು
ಸ್ವಾಭಿಮಾನದ ಮುನ್ನುಡಿ ಜೀವವು,
ಆರತಿಯ ಗುಣ
ಎಲ್ಲೊ ಬೇಸರದ ಸಣ್ಣ ಕ್ಷಣ,
ಭೂಮಿತಾಯಿಯ ಮಡಿಲು
ನಿನ್ನ ವಾತ್ಸಲ್ಯ ಬಾನಿಗಿಂತ ಮಿಗಿಲು,
ನಿನ್ನ ಗೆಳತಿ ಅಂದಿದ್ದಕ್ಕೆ ನಾ ಪುಣ್ಯವಂತ
ನಿನ್ನ ಗೆಳೆತನವೆ ನನಗೆ ಜೀವಂತ,
ಸಕಲ ಸದ್ಗುಣಗಳ ಒಡತಿ
ಸಾಗರದಷ್ಟು ವಿಷಲವಾದ ಮನಸಿನ ಮಮತೆಯ ಕನ್ನಡತಿ, 🌹
ನಿನಗಿಂದು ಹುಟ್ಟು ಹಬ್ಬದ ಸಂಭ್ರಮ,,, ಆ ದೇವರು ಸಕಲ ಆರೋಗ್ಯ ಆಯಸ್ಸು ಐಶ್ವರ್ಯ ನೆಮ್ಮದಿ ಸಂತೋಷ ಎಲ್ಲವೂ ನಿನ್ನ ಪಾಲಿಗೆ ಕರುಣಿಸಲಿ ಎಂದು ಹಾರೈಸುವೆ.... 🌹 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹ಹುಟ್ಟು ಹಬ್ಬದ ಶುಭಾಶಯಗಳು 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹ನಗು ಎಂಬುದು ಛಾವಣಿಯಾಗಿ ನೀ ಕಟ್ಟಿದ ಕನಸು ಮನೆಯಾಗಿ
ನಾಳೆಗಳೆಲ್ಲವೂ ಹೊಂಬೆಳಕಾಗಿ
ನೀ ಬಾಳು ನೂರು ವರುಷ ಸಂತೋಷವಾಗಿ.. 🌹 Happy birthday 🎂 🌹

-


10 APR 2022 AT 23:56

ನಿನ್ನೊಳು ನಲಿವಿರಲಿ
ನಯನದೊಳೂ
ನಗುವಿರಲಿ
ನುಡಿಯಲ್ಲಿ ನುಣುಪಿರಲಿ
ನಡೆಯಲ್ಲಿ ನಜೂಕಿರಲಿ
ನಲ್ಮೆಯ ನಿನಗೆಂದಿಗೂ ನೋವಾಗದಿರಲಿ 🌹

🌹 ಹುಟ್ಟು ಹಬ್ಬದ ಶುಭಾಶಯಗಳು ಬಂಗಾರ 🌹

-


2 APR 2022 AT 12:48

🌹ಯುಗಾದಿ🌹

ಋತು ಚಕ್ರವು ಉರುಳಿದೆ ಯುಗಾದಿ ಮರಳಿದೆ
ಸಸ್ಯಸಂಕುಲವು ನಳನಳಿಸಿ ಬೆಳೆಯಲು
ನಾಡ ಜನರಲಿ ಹೊಸತನವ ತುಂಬಲು
ಹೊಸ ವರುಷದ ಹರುಷಕೆ ಯುಗಾದಿ ಬಂದಿದೆ.

ಎಣ್ಣೆ ಸ್ನಾನದಿ ಮಿಂದು
ಬೇವು ಬೆಲ್ಲವ ಮೆದ್ದು
ನವ ಧಿರುಷಗಳ ಹೊದ್ದು
ಹೊಸತನವ ನೀಡಲು ಯುಗಾದಿ ಬಂದಿದೆ.

ಬೇವಿನ ಕಹಿಯ ಕಳೆದು
ಮಾವಲಿ ಚಿಗುರ ತುಂಬಿ
ಹೊಂಗೆಯ ತೊಂಗಿಲಕೆ ಹಸಿರು ತಂದು
ಸೃಷ್ಟಿಯ ಸೊಬಗಿಗೆ ಯುಗಾದಿ ಬಂದಿದೆ.

ನಾಡ ಜನರ ಹಳೆತನವ ಮರೆಸಿ
ಹೊಸತನವ ನಾಡ ಮನದಲಿ ಬೆರೆಸಿ
ಮರೆತ ಸಂಬಂಧಗಳನು ಬೆಸೆದು
ಗಟ್ಟಿತನವ ನಾಡಲಿ ತುಂಬಲು ಯುಗಾದಿ ಬಂದಿದೆ.

ಜಗದ ಬಾಳಿಗೆ ನಿತ್ಯನೂತನ
ಮನದ ಭಾವಕೆ ಸತ್ಯಚೇತನ
ಧರಣಿಯ ಭ್ರಾತೃತ್ವಕೆ ಪ್ರೇಮತನ
ಬೆಳೆಸಲು ಯುಗಾದಿ ಮತ್ತೆ ಬಂದಿದೆ.

-


16 MAR 2022 AT 18:10

ನಿನ್ನೊಳು ನಲಿವಿರಲಿ
ನಯನದೊಳೂ ನಗುವಿರಲಿ
ನುಡಿಯಲ್ಲಿ ನುಣುಪಿರಲಿ
ನಡೆಯಲ್ಲಿ ನಜೂಕಿರಲಿ
ನಲ್ಮೆಯ ನಿನಗೆಂದಿಗೂ
ನೋವಾಗದಿರಲಿ....
🌹ಹುಟ್ಟು ಹಬ್ಬದ ಶುಭಾಶಯಗಳು ಬಂಗಾರ 🌹 💞

-


2 APR 2020 AT 13:44

ಗುರು ಶಿಷ್ಯರು ಶಬ್ದದೊಳಗಿನ ಅರ್ಥದಂತೆ..
ಅರ್ಥದೊಳಗಿನ ಶಬ್ದದಂತೆ ಎಂದು ಅರಿವು ಮೂಡಿಸಿದವರು ಗುರುವೆ... ಗುರುವಿನ ಕಾಯ ಶಿಷ್ಯ ಎಂದಿರಿ ಶಿಷ್ಯನ ಪ್ರಾಣ ಗುರುವೆಂದಿರಿ...

ಕಂಡುದ ಹಿಡಿಯಲೊಲ್ಲದೆ ಕಾಣುದ ಹಿಡಿದೆನೆಂದು ಸಿಕ್ಕದೆಂಬ ಬಳಲಿಕೆಯ ನೋಡ.. ಕಂಡುದೆಯ ಕಂಡು ಗುರುಪಾದವ ಹಿಡಿದಲ್ಲಿ ಕಾಣದುದ ಕಾಣಬಹುದು...
..... ಶರಣು ಶ್ರೀ ಗುರುವೆ....

-


6 JAN 2022 AT 18:27

"ಇವಳಿಗೊಂದು ಮನ"

ಮನವ ಗೆದ್ದಾಗ ನೀ ಬೆರತೆ ನನ್ನಯ ಈ ಹೆಸರಿನಲ್ಲಿ ನಾವಿಬ್ಬರು ಒಂದಾದಾಗ ಬೆರೆತೆ ನನ್ನಯ ಈ ಉಸಿರಿನಲ್ಲಿ, ಹೆಗಲಿಗೆ ನೀ ಹೆಗಲು ಕೊಟ್ಟಾಗ ಎಂಥಾಶಕ್ತಿ ನನ್ನ ಕತ್ತಿನಲ್ಲಿ ನೋವುಗಳೆಲ್ಲ ಮಾಯವಾಗಿವೆ ನಿನ್ನ ಪ್ರೀತಿಯ ಮತ್ತಿನಲ್ಲಿ,
ನನ್ನಯ ಆ ಹಸಿವು ನೀಗಿಸಿದಿ ನೀ ದಾಹದ ಹೊತ್ತಿನಲ್ಲಿ ಎಂತಹ ಸವಿಯ ಅಮೃತವಿತ್ತು ನೀ ಉಣಿಸಿದ ಪ್ರೀತಿಯ ತುತ್ತಿನಲ್ಲಿ,


-


10 SEP 2021 AT 6:23

ಆದರೂ ಮೌನ ಆವರಿಸಿದೆ ಮನದ ತುಂಬಾ...

-


27 AUG 2021 AT 8:07

Wish you a year filled
with
love laughter
and
lots of sweet
moments..... 🌹 💞 🌹

Advance Happy birthday 🎂 ಮುದ್ದು 🎂🌹

-


30 MAY 2021 AT 17:48

ನನ್ನ ಆತ್ಮೀಯರೆ ನಮ್ಮ ಮನೆಯ ಪುಟಾಣಿಗಳಿಗೆ ಹೆಸರು ಇಡುವ ಸಲುವಾಗಿ ತಿ. ತೆ. ತು ತೋ. ಅಕ್ಷರ ದಿಂದ ಪ್ರಾರಂಭವಾಗುವ ಮುದ್ದಾದ ಎರಡು ಹೆಣ್ಣು ಮಗುವಿನ ಹೆಸರು ಮತ್ತೆ ಒಂದು ಗುಂಡುಮಗುವಿನ ಹೆಸರು ತಿಳಿಸಿ...

-


26 NOV 2020 AT 11:36

ರುದ್ರನ ದೇವೆರೆಂದು ಆರಾಧಿಸಿ,
ಶಿಲೆಯೊಳಗೆ ಹೋರಟೆಗೊಂಡು, ಕೆಟ್ಟರಲ್ಲಾ ಭಕ್ತಜನಂಗಳು.
ವಿಷ್ಣುವ ದೇವರೆಂದು ಆರಾಧಿಸಿ,
ಮರನ ಸುತ್ತಿ ಕಾಲುಗೆಟ್ಟರಲ್ಲಾ ಭೂಸುರಾದಿಗಳು.
ಬ್ರಹ್ಮನ ದೇವರೆಂದು ಆರಾಧಿಸಿ,
ಬೆಂಕಿಯಲ್ಲಿ ಬೆಂದಿರಲ್ಲಾ ಮತ್ರ್ಯಲೋಕದ ಮಹಾಜನಂಗಳು.
ಇಂತೀ ಮೂವರು ಗಂಪಧಾರಿಗಳೆಂಬೆ ಧರೆಯೊಳಗೆ.
ಹೇರಿನ ಅಕ್ಕಿ, ಲಳಿಗೆಯ ಎಣ್ಣೆ, ಹೂವು ಕಾಯಿ ಹಣ್ಣು ಮೊದಲಾದವನು,
ತಪ್ಪ ಸಾಧಿಸಿ ತರಿಸಿಕೊಂಡುಂಬ ಚಿಕ್ಕಮಕ್ಕಳಿಗೆಲ್ಲಿಯದೊ ನೆಟ್ಟನೆಯ ದೇವತ್ವ?
ಎನ್ನ ದೇವಂಗೆ ಇಂತಿವರಂಗ ಒಂದೂ ಇಲ್ಲ.
ಕಾಲದೊಳಗಾದ ಪ್ರಳಯವಿರಹಿತ, ಕರ್ಮದೊಳಗಾದ ಚತುರ್ವಿಧರಹಿತ,
ಗಂಗೆವಾಳುಕಸಮಾರುದ್ರರೊಳಗಾದ ಬಂಧನವಿರಹಿತ.
ಲೀಲೆಗೆ ಹೊರಗಾದ ಸ್ವಯಂಭುವಯ್ಯಾ ಎನ್ನ ದೇವ.
ಇಂತಿವರೆಲ್ಲರೂ ಪ್ರತಿಷೆ*ಯನಾರಾಧಿಸಿ ಪ್ರಸನ್ನರಾದರಯ್ಯಾ.
ಇಂತೀ ಪುಣ್ಯದ ಫಲ ಎನಗೊಂದೂ ಬೇಡ.
ಇದ್ದವರೆಲ್ಲ ಒಳಗಿರಲಿ, ನಾ ಹೊರಗಯ್ಯಾ.
ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ಅಲಸಿದೆನಲಸಿದೆ, ನಿಮ್ಮ ಕಾಷ*ದ ಸೇವೆಯನಯ್ಯಾ.
ಕಾಷ*ದವನ ಕಾಷ*ವ ಮಾಡದೆ, ಎನ್ನ ಹೊರಗಿರಿಸಿ ನಿನ್ನೊಳಗಾದ,
ನಿಃಕಳಂಕ ಮಲ್ಲಿಕಾರ್ಜುನಾ.... 🌹
ಮೋಳಿಗೆ ಮಾರಯ್ಯ

-


Fetching ಮಂಜು Quotes