ಈ ಜಟಿಲ ಮನಸಿನ ಜನರೊಳಗೆ ಒಳ್ಳೆಯದನ್ನ ನಿರೀಕ್ಷಿಸಬೇಡ ಸ್ವಾರ್ಥ ಸುಖಕಾಗಿ ಅಹಅಪಿಸುವರೆಲ್ಲ. ಒಳ್ಳೆಯತನ ನಿನ್ನಲಿ ಬೆಳೆಸಿಕೊಂಡು ಅದರೊಂದಿಗೆ ನಡೆ
ನೆಮ್ಮದಿಗೆ ಇದೆ ನಿನಗೆ ದಾರಿ...-
ನಂಬುವುದು ಅರ... read more
ಯಾರೇ ಆಗಲಿ ಯಾವುದೇ ಸಂಬಂಧವಾಗಲಿ
ವ್ಯಕ್ತಿಯಿಂದಾಗೊ ಬೇಸರ ನೋವು ನಿಮಗೆ ಹೆಚ್ಚಾದರೆ
ಆ ಸಂಬಂಧ ಕಳೆದುಕೊಳ್ಳಿ ನಿಮ್ಮ ನೋವು
ದುಃಖಕ್ಕಿಂತ ನಿಮಗೆ ವ್ಯಕ್ತಿ ಮುಖ್ಯವಾದರೆ ಬೇಸರ
ಮರೆತು ಆ ಸಂಬಂಧ ಉಳಿಸಿಕೊಳ್ಳಿ-
ನನ್ನೆದೆ ಮಂದಿರದಲ್ಲಿ ನಿನ್ನ ಚೆಲುವಿನ
ಮೆರವಣಿಗೆ ನೆಡೆಯುತಿತ್ತು
ನಿನ್ನ ಚೆಲುವನು ನೋಡುತ ಹೃದಯ
ಸೋಲುತ ಮಿಡಿಯುತಿತ್ತು
ನಿನ್ನ ಹೂ ನಗೆಯ ಮನಸೂರೆಗೊಂಡ
ಈ ಹೃದಯಾ ಹಾಡುತಿತ್ತು
ನಿನ್ನ ಚಂದುಟಿಯ ಸವಿಮಾತನು ಈ
ಕಿವಿ ಕೇಳಲು ಕಾಯುತ್ತಿತ್ತು-
ಮಾತು,ಗುಣ,ನಡತೆ ಇಷ್ಟವಾಗಿ
ಮನಸಿಗೆ ಅಚ್ಚಿಕೊಂಡೆ
ಎಂದರೆ ನಮ್ಮನ್ನ ದೂರ ಇಟ್ಟು
ನೋವಿನ ಭಾರ ಹೊರಿಸಿ
ಅವರ ಮನಸಿನ ಭಾರ ಕಡಿಮೆ
ಮಾಡಿಕೊಳ್ಳುತಾರೆ-
ನೀನು ಕಂಗಳ ತೆರೆದಾಗ ನೀ ನನ್ನೆ
ನೋಡಬೇಕೆಂಬ ಆಸೆ
ನೀನು ರೆಪ್ಪೆ ಮುಚ್ಚೊ ವೇಳೆ ನಿನ್ನ
ಕಣ್ತುಂಬಿಕೊಳೊ ಆಸೆ
ನೀನು ಹಾಡುವಾಗ ಆ ಪದಗಳೆಲ್ಲ
ನಾನಾಗುವ ಆಸೆ
ನೀನು ಕನಸುಗಳ ಕಾಣುವಾಗ
ಆ ಚಿತ್ರಗಳಾಗುವಾಸೆ-
ಯಾವುದೆ ಸಂಬಂಧದಲ್ಲೂ ವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಇರಬಾರದು ಎಲ್ಲವನ್ನೂ ಹೇಳಿ ಕೇಳಿಯೆ ಮಾಡಬೇಕೆಂದರೆ
ಆ ಸಂಬಂಧಕ್ಕೂ ಆ ವ್ಯಕ್ತಿಗೂ ಸಿಗುವ
ಬೆಲೆ ಗೌರವವೇನು?-
ಸಂಬಂಧ ಅಂದ್ರೆ ಬರಿ ಕಾಲ್,
ಮೆಸೇಜ್ ಮಾಡೊದಲ್ಲ ತಮ್ಮವರ ಮನಸನ್ನ ಭಾವನೆಗಳನ್ನ ಅರ್ಥ ಮಾಡ್ಕೊಂಡು ಸಮಯಕ್ಕೆ ಸರಿಯಾಗಿ ಸ್ಪಂದಿಸುತ ನಮ್ಮನ್ನ ನಾವು ಅರ್ಥಮಾಡಿಸಬೇಕು ಭಾವನೆ ಸ್ಪಂದನೆಗಳೆರಡು ಸಂಬಂಧಕ್ಕೆ ಜೀವನಾಡಿಗಳಂತೆ-
ಮನಸೋತು ನಿನ್ನೆದುರು
ನಿಂತೆ ನಾ ಭುವಿಯಾಗಿ ನೀ ಬಾನಾಗಿ
ನನ್ನೊಲವ ಕಿರುನೋಟಕೆ ನೀನು
ಕರಗಿ ಸುರಿಸಿದ ಪ್ರೀತಿಯ ಮಳೆಯಲಿ
ಒಂದಾದೆವು ನಾನು ನೀನು-
ಸ್ನೇಹ,ಪ್ರೀತಿ ಹಾಗೂ ಸಾಂಸಾರಿಕ
ಸಂಬಂಧಗಳು ಬಿಳಿ ಹಾಲಂತೆ ಕೋಪ, ಬೇಸರ,
ಮನಸ್ತಾಪವೆಂಬ ಕಸ ಬಿದ್ದರೂ ಅನುಮಾನವೆಂಬ
ಹುಳಿ ಬೀಳದಿರಲಿ ಒಂದು ತೊಟ್ಟು ಹುಳಿ
ಬಿದ್ದರೂ ಇಡಿ ಹಾಲೆ ಕೆಟ್ಟೊಗತ್ತೆ
-
ನೆನಪಿನ ಹಾದಿಯಲಿ
ನಿನ್ನೊಲವಿನದೆ ರಂಗಾವಳಿ
ನಿದಿರೆಯ ಕನಸಿನಲಿ
ನಿನ್ನ ನಗುವಿನದೆ ಕಚಗುಳಿ
ನನ್ನೆದೆಯ ಗೂಡಿನಲಿ
ನಿನ್ನ ಚೆಲುವಿನ ಚಿತ್ರಾವಳಿ
ಈ ನನ್ನ ಬದುಕಿನಲಿ
ನೀನು ಒಲವಿನ ತಂಗಾಳಿ
-