Mehanaz Begum  
704 Followers · 38 Following

A forever learner. Help me in learning more..
Joined 22 December 2017


A forever learner. Help me in learning more..
Joined 22 December 2017
22 JUN 2024 AT 0:48

Can you make my heart a bit lighter?
I have many griefs and sorrows to share.
Can you listen to me and care?

-


19 JUN 2024 AT 23:09


Your every smile!
My dear,
Makes my heart smile! 💕

-


1 MAR 2024 AT 15:06

You do come in my thoughts everyday,
But there is no place in my heart for you to stay,
I do wish you were my own,
But all the dreams don't come true anyway.

-Mehanaz Begum

-


26 OCT 2022 AT 18:20

You need to shine bright
To reach the sky's height

But if you want to rest,
Others would take your nest..

-


8 MAR 2018 AT 23:46

This loneliness is making me so weak
And the feelings in my heart are playing hide and seek..
Sweetheart, I don't know how to express it to you,
The depression and the heartbreaks I'm going through..

-


17 AUG 2020 AT 17:10

ಅಂದು ಅವಳ ಜನ್ಮದಿನ. ಗೆಳೆಯ-ಗೆಳತಿಯರು, ಸಂಬಂಧಿಕರು ಸೇರಿ ಮನೆ ತುಂಬಾ ಜನ. ಗುಲಾಬಿ ಬಣ್ಣದ ಆ ದಿರಿಸಿನಲ್ಲಿ ದೇವತೆಯಂತೆ ಕಂಗೊಳಿಸುತ್ತಿದ್ದ ಅವಳಿಗೆ ಅದೆಷ್ಟು ಜನರ ಕಣ್ಣು ತಾಕಿತೋ ತಿಳಿಯದು. ರಾತ್ರಿ, ಎಲ್ಲಾ ಸಂಭ್ರಮ ಸಡಗರ ಮುಗಿಸಿ ಕೊನೆಗೆ, ಮನೆಯ ಹಾಲ್ ನಲ್ಲಿ ಉಳಿದವರು ಅವಳು ಮತ್ತು ಅವನು ಮಾತ್ರ.

ಅವಳ ಕಣ್ಣುಗಳಲ್ಲಿ ಜಿನುಗುತ್ತಿರುವ ಕಣ್ಣೀರ ಹನಿಗಳು. ಅವಳ ಜನ್ಮದಿನದ ಹೊಸದಿರಿಸು ಅಲ್ಲಲ್ಲಿ ಹರಿದಿತ್ತು. ಅವಳ ತುಟಿ ಭಯದಿಂದ ಕಂಪಿಸುತ್ತಿತ್ತು. "ಇದೇನು ಮಾಡಿಬಿಟ್ಟೆಯೋ ನೀನು?" ತೊದಲುತ್ತಾ ನೋವಿನೊಂದಿಗೆ ಅವನಲ್ಲಿ ಕೇಳಿದಳು. ಅವನು ಹುಟ್ಟುಡುಗೆಯಲ್ಲಿದ್ದ. ಅವಳು ಕೇಳಿದ ಪ್ರಶ್ನೆಗೆ ಏನೆಂದು ಉತ್ತರಿಸಬೇಕೆಂದು ತಿಳಿಯದೆ, ಅವಳನ್ನೇ ಶೂನ್ಯದೃಷ್ಟಿಯಿಂದ ನೋಡಿದ. ಅವಳು ಜೋರಾಗಿ ಅಳತೊಡಗಿದಳು. ಇದನ್ನು ನಿರೀಕ್ಷಿರದಿದ್ದ ಅವನು, ಒಮ್ಮೆಲೇ ಅವಳಿಗಿಂತಲೂ ಜೋರಾಗಿ ಅಳತೊಡಗಿದ.

ಇಬ್ಬರ ಅಳು ಕೇಳಿ ಅಡುಗೆಮನೆ ಸಾರಿಸುತ್ತಿದ್ದ ಅವರಮ್ಮ ಹಾಲ್ ಗೆ ಓಡಿ ಬಂದಳು. ಎರಡು ವರ್ಷ ಪ್ರಾಯದ ಮಗನ ಕೈಯಲ್ಲಿದ್ದ ಕತ್ತರಿಯನ್ನು ಕಿತ್ತೆಸೆದು, " ಅಯ್ಯೋ, ನಿನ್ನಕ್ಕನ ಅಷ್ಟು ಚಂದದ ಬಟ್ಟೆಯನ್ನು ಹರಿದುಹಾಕಿದೆಯಲ್ಲೊ? ಅವಳಿಗೆ ಗಾಯವಾಗಿದ್ದರೆ ಏನು ಗತಿ? ಕತ್ತರಿ ಯಾರು ಇಲ್ಲಿ ತಂದು ಇಟ್ಟವರು? ನಿನ್ನ ತುಂಟತನ ದಿನದಿಂದ ದಿನಕ್ಕೆ ಜಾಸ್ತಿಯಾಯಿತು" ಎಂದು ಅವನನ್ನು ಗದರಿಸಿದಳು. ನಾಲ್ಕು ವರ್ಷ ಪ್ರಾಯದ birthday girl ತನ್ನ ಪುಟ್ಟ ತಮ್ಮನಿಗೆ ತಕ್ಕ ಶಾಸ್ತಿಯಾದದ್ದನ್ನು ಕಂಡು, ತನ್ನ ಬಟ್ಟೆ ಹರಿದುಹೋದದ್ದನ್ನೂ ಮರೆತು ಜೋರಾಗಿ ನಗತೊಡಗಿದಳು. ಅವಳ ನಗುವನ್ನು ಕಂಡ ಅವನೂ ನಗತೊಡಗಿದ.

-


8 JUL 2019 AT 11:51

ಸಿಗಬಹುದೇನೋ ನಿನ್ನ ಹೃದಯದಲ್ಲಿ ಜಾಗ.
ಆದರೇಕೋ ಮನಸಿಂದು ಹಟತೊಟ್ಟಿದೆ,
ನೀನೇ ಬರಲೆಂದು ಬಳಿ ಈಗ.

-


21 JUN 2019 AT 20:14

ನಿನ್ನ ಕಣ್ಣುಗಳ ತುಂಟಸನ್ನೆಗಳಿಂದು
ಹೊಸಕಥೆಯೊಂದನು ಹೇಳುತಿವೆ.
ನಮ್ಮಿಬ್ಬರ ಹಳೆಯ ಗೆಳೆತನವಿಂದು
ಮದುವೆಯ ಚಪ್ಪರವೇರುತಿದೆ.

-


15 JUN 2019 AT 15:38

ನಿನ್ನ ಬಿಟ್ಟಿರಲು ಹುಡುಗ,
ನಿನ್ನ ಪ್ರತಿಯುಸಿರು ನನ್ನೆದೆಯ ಅಮೃತಬಿಂದು.
ನೀ ಸನಿಹವಿರೆ ಪ್ರತಿಕ್ಷಣ ಸ್ವರ್ಗಸಮ,
ನಿನ್ನ ತುಂಟ ಮಾತುಗಳೇ ಗಿರಕಿಹೊಡೆಯುತಿವೆ ಕಿವಿಯಲೆನ್ನ.
ನೀಯೆನ್ನ ಜೀವದ ಗೆಳೆಯ, ಅಂತರಾಳದ ಒಡೆಯ, ನೀನಿಲ್ಲದೆ ನಾನಿಲ್ಲ
ನನ್ನ ಪ್ರತಿ ಹೃದಯಬಡಿತದ ಅಂತರಾತ್ಮವ ನಿನಗಿಂತ ಅರಿತವರಿಲ್ಲ ಹುಡುಗ,
ಬರಬಾರದೇ ಒಮ್ಮೆ, ಬರಡಾದ ನನ್ನೆದೆಯ ತಣಿಸಲು,
ನಿನಗಾಗಿ ಸುರಿದೆನ್ನ ಕಣ್ಣೀರಹನಿಗಳನೊರೆಸಲು,
ಪ್ರತಿಕ್ಷಣ ಪ್ರತಿನಿಮಿಷ ಕಾದಿರುವೆ ನಿನಗಾಗಿ,
ನಿನ್ನ “ಅಮ್ಮಾ” ಎಂಬ ಒಂದು ದನಿಗಾಗಿ.

-ಇಂತಿ,
ನೀ ಬಿಟ್ಟುಹೋದ ನಿನ್ನ ಹೆತ್ತವಳು.

-


24 MAY 2019 AT 21:35

ತಾಯಿಯ ಮಮತೆಯಾಸರೆಯು
ತಂದೆಯ ಅಪ್ಪುಗೆಯ ಜೊತೆಬೆಸೆದರೆ
ಜೀವನವದು ಸೊಗಸು

-


Fetching Mehanaz Begum Quotes