Meghana Hegde   (Dreamgirl 🤩)
67 Followers · 18 Following

read more
Joined 8 September 2020


read more
Joined 8 September 2020
24 MAR 2023 AT 9:31

ಕೊಡಬಾರದೇ ಇನಿಯಾ, ಹಣೆಗೊಂದು ಹೂಮುತ್ತು..
ಪ್ರೀತಿಯಲ್ಲಿ ಏಕಿಂತ ಅರಿಯಲಾರದ ಗಮ್ಮತ್ತು..!
ಕುಳಿತಿರುವೆ ನಾನಿಂದು ಬರಿ ನೆನಪುಗಳ ಹೊತ್ತು..
ಹೊರಟೋದೆ ಯಾಕೆ? ಅಷ್ಟೊಂದು ಪ್ರೀತಿಯ ನೀನಿತ್ತು...??

-


5 DEC 2022 AT 7:55

ಅರ್ಥೈಸಿಕೊಳ್ಳದ ಜನರ ಮುಂದೆ,
ಅರ್ಥವನ್ನು ಅಪಾರ್ಥ ಮಾಡುವುದಕ್ಕಿಂತ
ನಮಗರ್ಥವಾದರೂ ಅರ್ಥವಾಗದವರಂತೆ..
ಅವರಿಗೆ ಅರ್ಥಮಾಡಿಸಲು ಪ್ರಯತ್ನಿಸದೇ
ಅರ್ಥವತ್ತಾಗಿ ಬದುಕುವುದು ಲೇಸು..

-


4 DEC 2022 AT 23:05

ಮೌನವ ಬಯಸುತಿದೆ ನನ್ನ ಹೃದಯ
ಮಾತಿಂದಲೇ ಶುರುವಾಗುವುದು ಅಪಾಯ
ಮಾಡುವುದೇ ಸಹಾಯ ಈ ಕಾಯ..
ಸಹ್ಯವೇ..? ಹೃದಯಕೆ ಮಾಡುವ ಅನ್ಯಾಯ

-


10 AUG 2022 AT 11:54

ನರಳುತಿದೆ ಹೃದಯ
ಇಂಚಿಂಚಾಗಿ..
ಸಾಯುತಿವೆ ಬಯಕೆ
ಒಂದೊಂದಾಗಿ..

ಬಹು ಸುಲಭ ಗೆಳೆಯಾ..
ಮರೆತಂತೆ ನಟಿಸುವುದು
ಕಠಿಣವಿದು ಇನಿಯಾ..
ಒಳಗೊಳಗೆ ಕೊರಗುವುದು

-


21 JUL 2022 AT 7:38

ನಿನ್ನ ನೋಡಿದ ಆ ಮೊದಲ ಕ್ಷಣದಲ್ಲಿ
ಹೂವೊಂದು ಅರಳಿತ್ತು ನನ್ನ ಮನದಲ್ಲಿ
ಆದರೆ ಬರೆದಿತ್ತೇನೋ ವಿಧಿ ಈ ಹಣೆಯಲ್ಲಿ
ಚಿವುಟಿ ಹೋಗಿತ್ತು ಹೂ ನನ್ನ ಎದೆಯಲ್ಲಿ..
ಯಾರಿಗೂ ಕಾಣದೇ ಹೃದಯದ ಮೂಲೆಯಲ್ಲಿ

-


26 JUN 2022 AT 7:42

ಬಸವಳಿದು ಬೇಸತ್ತ ಮನದಲ್ಲೀಗ
ಇರುವುದೊಂದೇ ಮೂಕರೋಧನೆ
ಮರೆಯಲಾಗದ ನೆನಪುಗಳ ಮೂಟೆಯೀಗ
ಕಿತ್ತು ತಿನ್ನುತ್ತಿದೆ ನನ್ನನೇ.... 🙃

-


30 MAY 2022 AT 17:57

ಸ್ನೇಹದಿಂದ ಒಲವಿನೆಡೆಗೆ..💕

-


30 MAY 2022 AT 17:55

ಸ್ನೇಹದಿಂದ ಒಲವಿನೆಡೆಗೆ..💕

-


30 MAY 2022 AT 17:52

ಸ್ನೇಹದಿಂದ ಒಲವಿನೆಡೆಗೆ..💕

-


20 MAY 2022 AT 8:49

ಅತಿಯಾಗಿ ಹಚ್ಚಿಕೋ ಮನಸೇ..
ಆದರೆ, ಚಿರಕಾಲ ಉಳಿಯುವವರ.
ಅತಿಯಾಗಿ ಪ್ರೀತಿಸು ಮನಸೇ..
ಆದರೆ, ಭಾವನೆಗೆ ಬೆಲೆ ಕೊಡುವವರ.

-


Fetching Meghana Hegde Quotes