ದಿನಕೊಂದು ಮುಖವಿಲ್ಲಿ, ಏನೊಂದು ಸುಖವಿಲ್ಲ
ಅರೆಗಳಿಗೆ ಅನುಭವಕೆ ಬಾನಗಲ ಕೂಟ!
ಆಸೆಗಳ ಮಿತಿಯಿರದೆ ಬದುಕಿನಲಿ ತಿರುಳಿಲ್ಲ
ಕಲಿಯದ ತಲೆಗಳಿಗೆ ಪ್ರತಿಯೊಂದೂ ಪಾಠ!-
ತೋಚಿದ್ದು ಗೀಚಿದ್ದು..
ಕೃಷ್ಣ_ಸಖಿ
ಕನ್ನಡತಿ�... read more
ಓಡುತ್ತಿದ್ದರೆಲ್ಲರು ಆಸೆಯ ಬೆನ್ನತ್ತಿ
ಕಾಲೆಡವಿ ಬೀಳಿಸಿತ್ತು ಕಾಣದ ಕತ್ತಿ!
ಕವಲೊಡೆದ ಮನಸಿದು... ಪಾತರಗಿತ್ತಿ
ಬಿತ್ತಿತ್ತು ಚಿಂತನೆಯ ತಾಡುತಂತಿ!-
ಬಹುದಿನಗಳಿಂದ ಕಾಡುವ ಪ್ರಶ್ನೆ ಒಂದು..
ಕೇಳುವ ಮನಸಾಗಿದೆ ಇಂದು!
ಕರ್ತವ್ಯವಂತೆ ಅವನಿಗೆ ಅವನ ಹೆತ್ತವರ ಪಾಲನೆ!
ಹೆಣ್ಣೆತ್ತವರಿಗೇಕಿಲ್ಲ ಅವರ ಮಗಳಿಂದ ಪೋಷಣೆ?
ಉತ್ತರವಿಲ್ಲದ ಪ್ರಶ್ನೆ ಇದು.. ವಿಪರ್ಯಾಸ!
ಹೆಣ್ಣಿಗೇ ಏಕೆ ತಿರುಗಿ ಬರದ ವನವಾಸ!-
ಅವನ ನೋಟದಲಿ..
ಅದೇನೋ ಮಿಂಚು !
ಒಮ್ಮೆಲೇ ದಿಗಿಲಾಗಿಸೋ,
ಆ ತುಂಟ ಸಂಚು.
ತುಸು ಕಾಡಿಸಿ ,ಬೇಕಂತಲೇ
ಕಡೆಗಾಣಿಸೋ ಕಿಲಾಡಿ ಅವನು!
ಮಿಸುಕಾಡದೆ ನಿಂತು
ಅಮಾಯಕನಂತೆ ನಟಿಸುವನು!
ಸಿಹಿಯಾಗಿ ಸುಡುವ ಸ್ಪರ್ಶಕ್ಕೆ ,
ಸೋತಿದ್ದೇಕೋ ಈ ಮನ,
ಇದ್ದರೆ ಸಾಕೆನಿಸಿದೆ ನಾ ಇವನ ಬಳಿ,
ಇಡೀ ದಿನ!-
ಅವನ ಕೊಳಲಗಾನದ ಸುತ್ತ
ಗಾಳಿಯ ಕಂಪನ!
ಅವಳ ಕಾಲ್ಗೆಜ್ಜೆಯ ಸುತ್ತ
ಭೂಮಿಯ ನರ್ತನ!-
ಬಿಟ್ಟಿಯಾಗಿದ್ದ ಭೂಮಿಯನ್ನು
ದುಡ್ಡಿನಿಂದ ಹರಿದು ಹಂಚಿದ್ದರ ಪರಿಣಾಮ...
ಮಹಾಸಮರದ ಸ್ಮಶಾನದೆಡೆಗೆ ದಾರಿಯೊಂದಾಗಿತ್ತು!-
ಬೇಕಾಗಿದೆ ಇನ್ನು ಒಂಟಿತನದ ಒಲವು,
ಚದುರಂಗದಾಟಕೆ ಅಂತರಾಳದ ಸುಳಿವು!
ಅರ್ಥವಾಗದ ಕನವರಿಕೆ ಕೆಲವು ,
ಅರ್ಥವಾದದ್ದು ಒಂದೇ....
ನನ್ನೊಳಗೆ ನಾನು ಒಂದಲ್ಲ... ಹಲವು !-
ಅಭಿಮಾನಿಯಾದೆ ಕ್ಷಮಿಸು ನಿನ್ನ ನಗುವಿಗೆ!
ಅಪರಾಧಿ ನೀನೆ ನನ್ನ ಮನದ ಗೊಂದಲಕೆ!!-