ನೀನಿರದೇ ಇದ್ದಾಗಲೂ ಇದ್ದೆ ನಾನು ಹೇಗೋ
ಆದರೀಗ ನೀನಿರದೆ ಕಳೆಯಲಾಗದು ಒಂದು ಕ್ಷಣವೀಗ...
-
ಕಳೆದು ಹೋದ ದಿನ್ನಗಳಲ್ಲೇಕೋ ನಿನ್ನಿರುವಿಕೆಯೆಡೆಗೆ ಸಾಗದ ಗಮನ ಇಂದು ನಿನ್ನಲ್ಲೇ ಕಳೆದುಹೋದಂತಿದೆ ತಿಳಿಯದೇ ಕಾರಣ....
-
ಆ ನಿನ್ನ ಕಂಗಳೆಷ್ಟು ಅಪಾಯಕಾರಿ, ನಿನ್ನ ದೃಷ್ಟಿಯೊಂದೆ ಸಾಕು ಈ ಹೃದಯವ ಕೊಲ್ಲಲು...
-
ನಿದ್ರೆ ಹೊತ್ತ ನಿನ್ನ ನೆನಪುಗಳು ನಿದ್ರಿಸುವುದಾದರೂ ಯಾವಾಗ ?
ಕಣ್ಣಂಗಳದಲ್ಲೆಲ್ಲ ನೀ ಚೆಲ್ಲಿ ಹೋದ ಕನಸುಗಳ ರಾಶಿಯೇ ಇರುವಾಗ....-
ನೀನೆದುರಾದ ಕ್ಷಣವೆಲ್ಲಾ ನನ್ನೆದೆಯಲ್ಲೇನೋ
ಖಾಸಗಿ ಕಾರ್ಯಕ್ರಮ,ಕಂಗಳಿಗೇನೋ ಸಂಭ್ರಮ
ಆ ತುಸು ಸಂಭ್ರಮದ ಕೊನೆಯ ಹಾದಿಯೇ ಕಣ್ಣೀರು...
-
If someone does something and we do the same thing, is there any difference between us and them? We all have our own, we should know and act according to the time and situation.
-
In the modern world,
money is all that matters,
money is the
driving force behind
everything,
if you can survive
with the little bit of
humanity that is left,
that is all that matters.-
ಅವರ ತಪ್ಪುಗಳನ್ನು ಅವರೇ ಯಾರಾದರೂ ಒಪ್ಪಿಕೊಳ್ಳುತ್ತಾರೆಯೇ ?
ತಮ್ಮ ತಪ್ಪಿಗೆ ಸಮರ್ಥನೆ ನೀಡುವುದನ್ನು ಬಿಟ್ಟು
ಮತ್ತೇನನ್ನು ಆಲೋಚಿಸುವುದು ಇಲ್ಲ,
ತಮ್ಮ ತಪ್ಪಿದ್ದರೂ ಅದನ್ನು ಮುಚ್ಚಿ ಎದುರಿನವರ ಸರಿಯನ್ನು ತಪ್ಪಾಗಿಸುವುದಕ್ಕೆ ಯತ್ನ ನಡೆಸುತ್ತಿರುತ್ತಾರೆ.-