ಅವ್ವ ಎಂದರೇ
ಅನು ಕ್ಷಣವು ನನ್ನ ಬಗ್ಗೆ ಯೋಚಿಸಾಕಿ
ಅರೆ ಗಳಿಗೆಯು ನನ್ನ ಬಿಟ್ಟಿರಲು ಆಗದಾಕಿ
9 ತಿಂಗಳ ನೋವು ಸಹಿಸಿ ಜನ್ಮ ನೀಡಿದಾಕಿ
ಹೊಟ್ಟೆ ಹಸಿದಾಗ ಊಟ ತಿನಿಸಿದಾಕಿ
ನಿದ್ದೆ ಮಾಡುವಾಗ ಕಾವಲಾದಾಕಿ
ಮನೆಗೆ ಬರಲು ತಡವಾದಾಗ ಗಾಬರಿಯಾದಾಕಿ
ಮಳೆಯಲ್ಲಿ ತನ್ನ ಸೆರಗನ್ನೇ ಛತ್ರಿ ಮಾಡಿದಾಕಿ
ಒಳ್ಳೆಯ ಸಂಸ್ಕಾರ ಕಲಿಸಿದಾಕಿ
ನನ್ನಾಸೆಗಳ ಪೂರೈಸಲು ಹಗಲು-ರಾತ್ರಿ ದುಡಿದಾಕಿ
ಮನ ನೊಂದು ಅಳುವಾಗ ಸಮಾಧಾನ ಮಾಡಿದಾಕಿ
ಎಲ್ಲವನ್ನೂ ಮುಗ್ಧತೆಯಿಂದ ಸಹಿಸಿಕೊಳ್ಳಾಕಿ
ನೋವಿನಲ್ಲೂ ನಗುವ ಕಲೆಯ ಹೇಳಿಕೊಟ್ಟಾಕಿ
ನನ್ನ ಕನಸಿಗೆಲ್ಲಾ ಸ್ಪೂರ್ತಿ ಆದಾಕಿ
ನನ್ನ ಪ್ರತಿ ಹೆಜ್ಜೆಗೂ ಧೈರ್ಯ ಕೊಡಾಕಿ
ಎಂದೆಂದಿಗೂ ದೇವರಿಗಿಂತಲೂ ದೊಡ್ಡಾಕಿ...!-
Everybody see the mistake but nobody is willing to see the pure intentions behind them🙂..
-
ಓ ದೇವನೇ... ನನದೊಂದು ಕೋರಿಕೆ ನಿನಗಿಲ್ಲ..!
ಆ ಒಂದು ದಿನವನ್ನು ಅಳಿಸಿ ಬದಲಿಸುವ ಶಕ್ತಿ ಕೊಡು; ಇಲ್ಲ, ನನ್ನ ಉಸಿರಾಟವನ್ನ ಈ ಕ್ಷಣವೇ ನಿಲ್ಲಿಸಿ ಬಿಡು.-
ಗೊತ್ತಿಲ್ಲದೇ ಅಂದೆಂದೋ ಆದ ತಪ್ಪಿಗೆ ಇಂದಿಗೂ ನೋವು - ಕಣ್ಣೀರೆಂಬ ಶುಲ್ಕ ಕಟ್ಟುತ್ತಿರುವೆ ಆದರೆ ಅದು ಎಂದಿಗೂ ಭರಿಸಲು ಆಗದಷ್ಟು ಶುಲ್ಕವಂತೆ🙂..!
-
ಮನಸಿಲ್ಲದ ಮನಸ್ಸಿನಿಂದ ತಿರಸ್ಕರಿಸಿ ಎನ್ನ ಗುರಿಯೆತ್ತ ನಡೆಯುವಂತೆ ಪ್ರೇರೇಪಿಸಿ ಜೀವನದುದ್ದಕ್ಕೂ ದಾರಿ ತಪ್ಪದಂತೆ ಕಾಯುತ್ತಾ ಕಾಳಜಿವಹಿಸುವವನು "ಅವನು" ಎಂದಿಗೂ ನಗುತಿರಲಿ... ಅವನ ಕಷ್ಟಗಳೆಲ್ಲ ಸೂರ್ಯನಂತೆ ಕಂಗೊಳಿಸುವ ಅವನ ನಗು ಮೊಗದ ಶಾಖದಿಂದ ಬೆಣ್ಣೆ ಕರಗುವಂತೆ ಕರಗಲಿ..!
-
ನನ್ನ ಹುಡುಗ ಒಂತರಾ ನನ್ನವನೇ ಆದರೆ ನನಗೆ ಸ್ವಂತವಲ್ಲ;
ಅವನ ಖುಷಿಗೆ ಹಂಬಲಿಸೋದು ನಾನೇ ಆದರೆ ಆ ಖುಷಿಗೆ ಕಾರಣ ನಾನಾಗಿರಲ್ಲ;
ಅವನಿಗಾಗಿ ಮಿಡಿಯುವುದು ನನ್ನ ಹೃದಯ ಆದರೆ ಅವನ ಹೃದಯಕ್ಕೆ ಬೇಡವಾದ ವ್ಯಕ್ತಿ ನಾನಾದೇನಲ್ಲ;
ಅವನ ಕಷ್ಟಗಳ ವಿರುದ್ಧ ಹೋರಾಡೋದು ನನಗೆ ಇಷ್ಟ ಆದರೆ ಅವನ ಜೀವನಕ್ಕೆ ನಾನೇ ಕಷ್ಟ ಅಂತ ಗೊತ್ತಿರ್ಲಿಲ್ಲ..!-
ನನ್ನವರಾರು ನನ್ನವರಾಗಿ ಉಳಿಯಲಿಲ್ಲ;
ನನ್ನವರಲ್ಲದ ನನ್ನವರು ನನಗೆ ಸಮಾಧಾನ ಹೇಳಲು ಹಿಂಜರಿಯಲಿಲ್ಲ.-
ನಾ ಸತ್ತಾಗ ನಿನ್ನ ಕಣ್ಣಲ್ಲಿ ನೀರು ಬರಬಾರದು
ಏಕೆಂದರೆ
ನಾ ಬದುಕಿದ್ದಾಗ ಅಳುವಾಗ ನಿನ್ನ ಕಡೆಯಿಂದ ಸಮಾಧಾನದ ಮಾತುಗಳು ಕೂಡ ಬಂದಿಲ್ಲ..!-