ಕನಸು ಕಟ್ಟಿ ಕುಂತಿರುವೆನು
ಓ ಗೆಳತಿ ನಿನ್ನ ಮೇಲೆ ನಾನು
ನಿನ್ನ ಮೇಲಿನ ಪ್ರೀತಿಯನ್ನು
ನಾ ಎಂದಿಗೂ ಬಿಟ್ಟು ಕೊಡೆನು ಗೆಳತಿ.-
Local writer MG 8746907567
ನನ್ನವಳು
ಒಳಗೊಳಗೆ ನಗುವವಳು
ತಾ ನಕ್ಕು ನನ್ನನೂ ನಗಿಸುವವಳು
ಮಾತು-ಮಾತಿಗೆ
ಮುನಿಸಿಕೊಂಡರೂ
ಮುನಿಸಲ್ಲೂ ಚಂದ ಕಾಣುವಳು
ದೇವತೆ ಅವಳು
ನನ್ನ ಹೃದಯದ ಪಲ್ಲಕ್ಕಿಯಲಿ
ಸೌಂದರ್ಯ ರಾಣಿ ನನ್ನವಳು
ಯಾರಿಗೂ ಸರಿಸಾಟಿ ಅಲ್ಲದವಳು
ಪ್ರೀತಿಗೆ ಮತ್ತೊಂದು ಹೆಸರೆ ಅವಳು
ನನ್ನವಳು ಗಿಳಿಮೂಗಿನವಳು.-
ಸೋತು ಸೊರಗದಿರು ನನ್ನಾಕೆ
ಸುಮ್-ಸುಮ್ನೆ ಅಳುವೆ ನೀನೆಕೆ
ನಿನ್ನ ಮೊಗದಲಿ ಕಾಣಬೇಕು ಚಂದದ ನಗಿ
ಚಿಂತಿಸದಿರು ನಾನಿರುವೆ ನಿನಗಾಗಿ.-
ನಿನ್ನ ಬರುವಿಕೆಗಾಗಿ
ಕಾಯುತಿರುವೆ ಬಸ್ಸಿನ ನಿಲ್ದಾಣದಲ್ಲಿ
ನೀನು ನಡೆದ ಹೆಜ್ಜೆಯ ಗುರುತುಗಳು
ಅಚ್ಚಳಿಯದೆ ಮೂಡಿವೆ
ನನ್ನ ಹೃದಯದ ಕಡಲ ದಡದಲಿ.-
ನೀ ಬರೊ ದಾರಿ ಕಾಯುತ
ನಾ ಇಲ್ಲೆ ನಿಂತಿರುವೆ
ಹೇಳು ಚಲುವೆ ನೀನು ಎಲ್ಲಿರುವೆ
ಈ ಕಣ್ಣುಗಳು ನಿನ್ನನೆ ಹುಡುಕಾಡುತಿವೆ
ನೀನು ಬಂದೆ ಬರುವೆ ಎಂಬ ಹಂಬಲದಲಿ
ಮನಸ್ಸು ಉತ್ಸಾಹದಲ್ಲಿ ಕುಣಿಯುತಿದೆ
ಎರಡು ಗಂಟೆಗಳ ಕಾಲ ( 2 hours )
ಸ... ಬಾವಿ ಹತ್ತಿರ
ಕಾದು - ಕಾದು ಸಾಕಾಗಿ ಹೋಯಿತು
ಅಂತೂ ನೀನು ಬರಲೆ ಇಲ್ಲಾ
ಮರಳಿ ಹೋದರೆ ಆಯ್ತು ಎಂದು
ಮರಳಿ ನಾನು ತಿರುಗಿ ಬರಲು
ಮನಸ್ಸು ಕೂಡ ಒಪ್ಪಲಿಲ್ಲ
ಅಲ್ಲೆ ನಿಂತು ಬಿಡಲೇನು? ಎನಿಸಿಬಿಟ್ಟಿತು ;-
ನಿನ್ನ ಕಣ್ಣುಗಳು
ಸದಾ ಕಾಡುತಿವೆ ನನ್ನ
ಪ್ರೇಮದ ಮಗು ನೀನು
ನಿನ್ನ ಕಾಡಿಗೆ ಕಣ್ಣಿನ ಪಕ್ಕಕೆ
ಕೂದಲ ಹೆಳಲು
ನೋಡುತಿದ್ದರೆ
ನುಡಿಸಿದ ಹಾಗಾಯ್ತು
ಕೊಳಲು
ನಿನಗ್ಯಾರೂ ಕೂಡ ಸಮವಿಲ್ಲ
ನೀನೊಂದು ದೇವತೆ ;-
ನಿನ್ನ ಮುದ್ದಾದ ನಗುವಿಗೆ
ಹಾಗೆ ಕಳೆದು ಹೋದೆ ನನ್ನಲಿ ನಾನೆ
ಅಂದಕೆ ಮತ್ತೊಂದು ಹೆಸರೆ ನೀನು
ಹಣೆಬಿಂದಿಯ ಕೆಂಪುಬಣ್ಣದ
ಚುಕ್ಕಿಇಟ್ಟವಳು ನೀನು,
ಕಾಡಿಗೆ ಹಚ್ಚಿದ ನೀಲಿಕಣ್ಗಳಲಿ
ಪ್ರೀತಿ ಭಾವತುಂಬಿ ಹರಿಯುತಿತ್ತು,
ನೆತ್ತಿಮೇಲಿನ ಕೂದಲು
ಕಣ್ಣ ರೆಪ್ಪೆಯ ಸೋಕುತಿತ್ತು
ಎದೆಯಲ್ಲಿ ಶುರುವಾಯ್ತು
ನನಗೆ ಭೂಕಂಪನದ ಹೊನಲು ||-
ಕನಸಿನ್ಯಾಗ ಕಾಡತಾಳ
ನಿದ್ದಿ ಹತ್ತದ್ಹಂಗ ಮಾಡ್ತಾಳ
ಕಣ್ಣ ಪಿಳಕಸದಂಗ್ ನನ್ನ ನೋಡ್ತಾಳ
ಗಿಳಿಮೂಗಿನ ಪೋರಿ
ಮನಸಿಗಿ ಭಾಳ ಹಿಡಿಶ್ಯಾಳ ||-
ನೀ ನನ್ನ ಜೀವ ಸಂಗೀತಾ
ನೀನೆ ನನ್ನ ಹೃದಯದ ಮಿಡಿತ
ನನಗಾಗಿ ನಿನ್ನನು ಭುವಿಗೆ ತಂದ ಆ ಭಗವಂತ
ನೀನೆ ನನ್ನ ಪುಟ್ಟ ಕಂದ (ಗಿಳಿಮೂಗು) ____ತಾ.-