ಮೊದಲ ಪೂಜೆಯು
ಗಣಪತಿಗೆ
ಮನೆಯಲ್ಲಿ
ಹೆಂಡತಿಯಿಂದ
ಮಹಾಪೂಜೆಯು
ಪತಿಗೆ....
ಮನು ಜಿಎಂ....-
Manu Gm
(Gm)
27 Followers · 51 Following
Joined 9 September 2018
13 JUL 2022 AT 19:02
*ಗುರುವಿನ ಸ್ಥಿತಿ *
ಅಂದು ಹೇಳುತ್ತಿದ್ದರು
ಗುರುವಿನ ಗುಲಾಮನಾಗುವ
ತನಕ ದೊರೆಯದಣ್ಣ ಮುಕುತಿ
ಇಂದು ಗುರುವಿಗೆ ಅಂತಹ
ಗೌರವ,ಆದರಗಳಿಲ್ಲದೆ
ಅವರ ಸ್ಥಿತಿಯಾಗುತ್ತಿದೆ ಅಧೋಗತಿ....
ಮನು ಜಿಎಂ....-
11 JUL 2022 AT 20:22
*ಮಕ್ಕಳು*
ಮಕ್ಕಳಿಗೆ ಯಾವುದಕ್ಕೂ
ಕಡಿಮೆ ಮಾಡಲಿಲ್ಲ
ಆ ಜೀವಗಳು ಉಂಡರೂ ತಂಗಳು
ಇಂದು ಆ ಜೀವಗಳಿಗೆ ಬಿಟ್ಟಿಲ್ಲ
ಆ ಮಕ್ಕಳು ಮನೆಯಲ್ಲಿ ತಂಗಲು....
ಮನು ಜಿಎಂ....-
11 JUL 2022 AT 18:05
*ಕೂಸು*
ಪ್ರತಿ ಮನೆಯ ಕೂಸು
ಹೆಚ್ಚಿಸುತ್ತದೆ ಆ ಮನೆಯ
ಸೊಗಸು
ಮನೆಗೆ ಅದು ಭವಿಷ್ಯದ ಕನಸು...
ಮನು ಜಿಎಂ...-
11 JUN 2022 AT 20:26
*ಸಲಹೆ *
ನಿಮ್ಮ ಏಳಿಗೆಗೆ ದುಡಿದ
ಹೆತ್ತವರಿಗೆ ಮಾಡುವ
ಮುನ್ನ ತಾಕೀತು
ದುಡಿದು ಪ್ರೀತಿಯಿಂದ
ನೋಡಿಕೊಳ್ಳುವುದೇ
ನಿಮ್ಮ ತಾಕತ್ತು.....
ಮನು ಜಿಎಂ..
-
5 JUN 2022 AT 9:16
*ಬೇಜಾರು*
ಕಛೇರಿ ಕೆಲಸ ಮುಗಿದೊಡನೆ
ಸೀದಾ ಮನೆಗೆ ಬರಬೇಕೆಂದು
ಗಂಡನಿಗಾಗಿದೆ ಕಾನೂನು ಜಾರಿಗೆ
ಅದುವೇ ಕಾರಣವಾಗಿದೆ
ಅವನ ಮನದ ಬೇಜಾರಿಗೆ....
ಮನು ಜಿಎಂ....
-
27 MAY 2022 AT 6:37
*ಪತ್ತೇದಾರಿ *
ಅವ ಕಛೇರಿ ಕೆಲಸ ಮುಗಿಸಿ
ಎಲ್ಲೂ ಹೋಗದೆ ಮನೆ ಕಡೆ
ಹಿಡಿಯುವ ದಾರಿ
ಏಕೆಂದರೆ ಮನೆಯಲ್ಲಿದ್ದಾಳೆ
ಅವನ ಗಮನಿಸುವ ಪತ್ತೇದಾರಿ....
ಮನು ಜಿಎಂ...-