ಪುನರುಜ್ಜೀವನಕೆ ಅಣಿಯಾಗಬೇಕಿದೆ
ಪದೇಪದೇ ಕೇಳಿಕೊಂಡರು ಒಪ್ಪುತ್ತಿಲ್ಲ ಮನವು..
ನೀಡಬೇಕಿದೆ ಅಲ್ಪ ವಿರಾಮವ
ಕಂಗೆಟ್ಟು ಹೋಗಿರುವ ಹೃದಯಕ್ಕೆ ಮರುಜೀವ ತುಂಬಲು..
ಸೌಜನ್ಯಯುತ ಸೋಮಾರಿತನ ಮುಳುವಾಯಿತೇ?
ರಾತ್ರಿಯಲ್ಲಿನ ದೀಪದಂತೆ ಕೃತಕವಾಯಿತೆ!!
ದಾರಿಯುದ್ದಕ್ಕೂ ಬೆಳದಿಂಗಳಿದೆ, ದೀಪಾಲಂಕಾರವಿದೆ
ಒಂಟಿಯಾಗಿ ಸಾಗುತಿರುವೆನಗೆ ಮರೆಯಾಗಿದೆ..
ಗುಂಪು ಗುಂಪಾಗಿ ಜನ ಸೇರಿದ್ದರೇನು!
ನನಗಾಗಿ ಇರುವ ನೀನೇ ಇಲ್ಲದೆ ಹೋದಲ್ಲಿ!!-
ವಾಸ್ತವದಂಚಿನ ಸತ್ಯವೇ ನಾನು
ELECTRICAL ENGINEER 🔌📘💡
ಕೀರ್ತಿ ಎಂದರೆ ಮೊದಲು ನಮ್ಮನ್ನು ನಾವು ಗುರುತಿಸಿಕೊಳ್ಳುವುದು. ಆಮೇಲೆ ಬೇರೆಯವರಿಂದ ಗುರುತಿಸಲ್ಪಡುವುದು.
-
ಹೆಣ್ಣು ಸುಂದರವಾಗಿದ್ದಾಳೆ ಎಂದು ಪ್ರೀತಿಸಬೇಡ. ನೀನು ಪ್ರೀತಿಸಿರುವುದರಿಂದ ಅವಳು ಸುಂದರವಾಗಿದ್ದಾಳೆ.
-
ಚಿಕ್ಕವರು ಚಿಕ್ಕವರನ್ನೇ ಲವ್ ಮಾಡ್ತಿದ್ದಾರೆ.
ದೊಡ್ಡವರು ದೊಡ್ಡವರನ್ನೇ ಲವ್ ಮಾಡ್ತಿದ್ದಾರೆ.
ಚಿಕ್ಕ ವಯಸ್ಸವರು ಅಂಕಲ್ ಹಿಂದೆ ಬಿದ್ದಿದ್ದಾರೆ.
ನಾವು ಸಿಂಗಲ್ ಆಗೇ ಇದೀವಿ
ನಾವು ಸಿಂಗಲ್ ಆಗೇ ಇರ್ತೀವಿ
ನಾವು ಸಿಂಗಲ್ ಆಗೇ ಸಾಯ್ತಿವಿ..😕-
Wow!! ಅನ್ನೋ ತರ ಇರೋಕೆ ಆಗ್ದೇ ಇದ್ರು ಪರ್ವಾಗಿಲ್ಲ..
Wyaa ಅನ್ನೋ ತರ ಇರ್ಬೇಡ..
(ಈ ಮೇಲಿನ ಸಾಲು ಯಾರ ವೈಯಕ್ತಿಕ ಜೀವನಕ್ಕೆ ಸಂಬಂಧಿಸುವುದಿಲ್ಲ. ಹಾಗಿದಲ್ಲೂ ಸಂಬಂಧಿಸಿದರೆ ಕಾಕತಾಳೀಯವಷ್ಟೇ.😜)-
ನಕ್ಕಿ ನಾಚಲೊ!!
ಅಥವಾ
ನಾಚಿ ನಗಲೋ!!
ಹೆಣ್ಣು ಸಿಗುವುದೋ!!
ಅಥವಾ
ಹೆಣವ ಹೊರುವುದೋ!!-
ಸಾಕೆನಿಸಿದೆ ಆಸ್ಪತ್ರೆಯ ಸಹವಾಸ,
ಕೇಡು ಮಾಡಿ ಬಂದಿರುವವರ ನಾವು?..
ಊಟದಿಂದಲೇ ಆರೋಗ್ಯ ಕಂಡುಕೊಳ್ಳಬಹುದು,
ತಿಳಿದಿಲ್ಲ ಯಾವುದನ್ನು ಸೇವಿಸಬೇಕು ಎಂದಿನ್ನು!!
ವೈದ್ಯರೇನು ದೇವರೊ!
ನಮ್ಮ ಹಣದ ಒಡೆಯರೊ
ಕಂಫ್ಯೂಸ್ ಆಗಿದೆ..
ಹಣದ ಜೊತೆಗೆ ರಕ್ತ ಹೀರುವುದ ನೋಡಿ
ಕೊಂಚ ಭಯವೂ ಮೂಡಿದೆ..
ಚೂಪಾದ ಸೂಜಿಗೆ ದೇಹ ಅದುರಿತು
ಕಹಿಯಾದ ಗುಳಿಗೆಗೆ ನಾಲಿಗೆ ಮುನಿಸಿತು
ಹೇಳುವುದ್ಯಾರಿಗೆ ನನ್ನ ನೋವನು
ನನಗೂ ಕಾಣದೆ ನನ್ನೇ ಕಾಡುತಿರಲು..
#ಡೆಂಗ್ಯೂಜ್ವರ-
ವಿಶೇಷ ಸೂಚನೆ!!
ಹೋಟೆಲಲ್ಲಿರೋ ವಾಶ್-ಬೇಸಿನ್ ಕೈ ತೊಳಿಯೋಕೆ ಇರೋದು..
ನಿಮ್ಮ ಬಾಯಿ, ಕತ್ತು, ಮುಖ ಇತ್ಯಾದಿ ತೋಳಿಯೋಕೆ ಅಲ್ಲ..
ಏನು ಕರ್ಮ ಗುರು😡-