ಭಾರತ ತಂಡವೆಂಬ ರೋಲ್ಸ್ ರಾಯ್ಸ್ ಕಾರನ್ನು ಆಫ್ಘಾನಿಸ್ತಾನ ತಂಡವೆಂಬ ಟ್ರಾಫಿಕ್ ಪೇದೆ ಇಂದು ನಿಲ್ಲಿಸಿ ಡಾಕ್ಯುಮೆಂಟ್ಸ್ ಚೆಕ್ ಮಾಡಿದ್ದು ಒಳ್ಳೆಯದೇ ಆಯಿತು..☺ R129
-
' ನಾ ಹೊರಡುತ್ತೆನೇ.. '
ಅಂತ ನೀ ಕಳಿಸಿದ ಆ ಕೊನೆಯ
ಸಂದೇಶವೊಂದನ್ನ ಮಾತ್ರ ನಾ
ಯಾವತ್ತಿಗೂ ತೆರೆದು ಓದುವುದಿಲ್ಲ..!! R129-
ಮತ್ತೆ ಯಾಕೋ ನೀ ನೆನಪಾಗಲು..
ಕಮರಿ ಹೋದ ಕನಸುಗಳು ಮತ್ತೆ
ಬಂದು ಅಣಕಿಸಿದಂತಾಯಿತು…
ಬತ್ತಿ ಹೋದ ಕಣ್ಣ ಗುಡ್ಡೆಗಳಲ್ಲಿ ಮತ್ತೆ
ನೀರಿನ ಆರ್ದ್ರತೆ ಪುಟಿದಂತಾಯಿತು..
ಅರ್ಧ ಕಟ್ಟಿದ್ದ ಕನಸೀಗ
ಕೈ ಬೀಸಿ ಕರೆದಂತಾಯಿತು…
ಅರ್ಧಕ್ಕೆ ನಿಲ್ಲಿಸಿದ್ದ ಕವನವೀಗ
ಮತ್ತೆ ಸೆಳೆದಂತಾಯಿತು..
ಒಡೆದು ಚೂರಾದ ಹೃದಯಕ್ಕೆ ಮತ್ತೆ
ಈಟಿಯಿಂದ ತಿವಿದಂತಾಯಿತು…
ಬಯಕೆಗಳೇ ಇಲ್ಲದ ಜೀವಕೆ ಮತ್ತೆ
ಸಾವಿನ ಆಸೆ ಮೂಡಿಸಿದಂತಾಯಿತು.! R129
ಮರೆಯಾಗಿ ಹೋದ ನಂತರ ಮತ್ತೆ ನಿನ್ನ ನೋಡಿದಾಗ...-
ಸೋತರೆ ಹತಾಶೆ ಏಕೆ.?
ಯಶಸ್ಸಿನ ಕಥೆಗಳಿಂದ
ಸಂದೇಶಗಳು ಸಿಗುತ್ತವೆ.
ಜತೆಗೆ ಸೋಲಿನ ಕಥೆಗಳನ್ನೂ
ಕೇಳಿ ಅನುಭವದ ಪಾಠಗಳನ್ನು
ಕಲಿಯೋಣ ಅಲ್ವ..!! R129
ಎಲ್ಲ ಸೋಲಿಗೂ,
ಸಣ್ ಸಣ್ಣ ವಿಷಯಕ್ಕು,
ಸಾವೇ ಪರ್ಯಾಯವಲ್ಲ...
ಸೋಲಿನ ಹಿಂದೆ ಗೆಲುವಿದೆ ನಮ್ಮಯ ಧೃಡನಿರ್ಧಾರ ಮೇಲೆ..-
ಬಾಳು ನನ್ನದು, ನಿರ್ಧಾರ ಅವಳದು.
ಕನಸು ನನ್ನದು, ನನಸು ಅವಳದು.
ಜೀವ ನನ್ನದು, ಜೀವನ ಅವಳದು.
ಬಾಳಪಯಣಿಗ ನಾನು,..
ಸೂತ್ರಧಾರಿಣಿ ಅವಳು..!! 😊🙂 R129-
ಹುಟ್ಟಿದ್ದು ಸಾಯಕ್ಕಲ್ಲ
ಸಾಧಿಸೋಕೆ..
ಬದುಕಿದ್ದು ದ್ವೇಷ ಬೆಳಸೊಕಲ್ಲ
ಪ್ರೀತಿಗಳಿಸೊಕೆ..
ಜೀವ, ಜೀವನ ಎಲ್ಲವೂ ನೋವ ಮರೆಸೋ
ಸ್ನೇಹಕ್ಕಾಗಿ..!! R129
ಮನುಷ್ಯನಾಗಿ ಹುಟ್ಟಿದ್ದು ನನ್ನ ಭಾಗ್ಯ.
ಹಿಂದೂವಾಗಿ ಹುಟ್ಟಿದ್ದು ನನ್ನ ಸೌಭಾಗ್ಯ.
ಸ್ನೇಹಕ್ಕೊ ಬದ್ಧ...ಸಮರಕ್ಕೊ ಸಿದ್ಧ
-
ವಿಶ್ವಾಸಕ್ಕೂ, ಆತ್ಮವಿಶ್ವಾಸಕ್ಕೂ ಇರುವ ವ್ಯತ್ಯಾಸ ಏನ್ ಗುರುಗಳೆ.?
ವಿಶ್ವಾಸ ಅಂದ್ರೆ..
ನಮ್ಮ ಬಗ್ಗೆ ಬೇರೆಯವರಲ್ಲಿ
ನಂಬಿಕೆ ಮೂಡಿಸೋದು/
ಬೇರೆಯವರ ಬಗ್ಗೆ
ನಾವ್ ಇಡೋದು.
ಆತ್ಮವಿಶ್ವಾಸ ಅಂದ್ರೆ..
ನಮ್ಮಲ್ಲಿ ನಾವು ನಂಬಿಕೆ
ಮೂಡಿಸಿಕೊಳ್ಳೋದು ಅಷ್ಟೇ..!!
ಇಲ್ಲಾಂದ್ರೆ...
ವಿಶ್ವಾಸ ಇನ್ನೊಬ್ಬರಲ್ಲಿ ನಾವಿರಿಸುವುದು.
ಆತ್ಮವಿಶ್ವಾಸ ನಾವಿಟ್ಟುಕೊಳ್ಳುವುದು.. R129-
ಕಣ್ಣಲ್ಲೇ ಇವೆ ಎಲ್ಲಾ ಕಾಗದ
ನೀನೇ ನನ್ನಯ ಅಂಚೆ ಪೆಟ್ಟಿಗೆ..
ಏನೇ ಕಂಡರೂ ನೀನೆ ಜ್ಞಾಪಕ
ನೀನೇ ಔಷಧಿ ನನ್ನ ಹುಚ್ಚಿಗೆ..
ತೆರೆದು ನೀನು ಮುದ್ದಾದ ಅಧ್ಯಾಯ
ಸಿಗದೆ ಇದ್ರೆ ತುಂಬಾನೆ ಅನ್ಯಾಯ..
ನನ್ನಯ ನಡೆ ನುಡಿ ನಿನ್ನನೇ ಬಯಸುತಾ
ಬದಲಾಗುವುದು ಇನ್ನೂ ಖಚಿತ...
ಸರಿಯಾಗಿ ನೆನಪಿದೆ ನನಗೆ
ಇದಕ್ಕೆಲ್ಲ ಕಾರಣ ಕಿರುನಗೆ..!!🌷R129-
ನೀನು ಜೀವನದಲ್ಲಿ ಅತಿ ಹೆಚ್ಚು ಭಯ ಪಡುವುದು
ಯಾವುದಕ್ಕೆ.? ಎಂದು ಅವಳು ಕೇಳಿದಳು...
* ನಿನ್ನನ್ನು ಕಳೆದುಕೊಳ್ಳುವುದು * ಎಂದು ಅವಳ
ಕಣ್ಣಲ್ಲಿ ಕಣ್ಣಿಟ್ಟು ಇವನು ಉತ್ತರಿಸಿದ... 😒 R129-
ಎಲ್ಲರೂ ಯಾವಾಗಲೂ ಆನ್ಲೈನ್ ನಲ್ಲಿ ಇರ್ತಾರೆ ಆದ್ರೆ.. ಸಂಬಂಧಗಳ ಮೌಲ್ಯ ತಿಳಿದವರು ಮಾತ್ರ ನಮಗೆಂದು ಸಮಯ ಮಾಡ್ಕೊಂಡು ಮೇಸೆಜ್ ಮಾಡ್ತಾರೆ ಅಲ್ವ..!? R129
-