ಕೆಲವೊಂದು ಸಂಬಂಧಗಳೇ ಹಾಗೇ
ಶಬ್ಧಕ್ಕೆ ನಿಲುಕದ್ದು....
ಒಡಹುಟ್ಟಿದ
ರಕ್ತ ಸಂಬಂಧವನ್ನೂ ಮೀರಿದ್ದು....
ಪ್ರೀತಿ,ಪ್ರೇಮ, ಸ್ನೇಹಕ್ಕೂ
ಮಿಗಿಲಾದದ್ದು.....
ತಾಯಿ ಮಮತೆಯ, ಹಾರೈಕೆಗೆ
ಅಕ್ಕರೆಯ ವಾತ್ಸಲ್ಯಕೆ ಸನಿಹದ್ದು....
ಭಗವಂತನಿಗೂ
ಅಸೂಯೆ ಹುಟ್ಟಿಸುವಂತದ್ದು.....
ಅದಕ್ಕೋ ಏನೂ ಬೇಗನೇ
ದೂರ ಮಾಡಿಬಿಡುವ...ಸುಳಿವಿಲ್ಲದೇ
ಈ ಅಳಿಸಲಾಗದ ಬಂಧಗಳ
ನಡುವೆ ಸಿಲುಕಿಸಿ...
ಗಹಗಹಿಸಿ ನಗುವನು.
.... ಎಲ್ಲರ ಅಳಿಸಿ....ಅಗಲಿಸಿ..
-
10 AUG 2019 AT 20:38