Manju Bk  
101 Followers · 214 Following

Joined 5 April 2019


Joined 5 April 2019
31 AUG 2022 AT 19:17

ಪ್ರೀತಿಗೆ ಆಗುವುದು,
ಮಾಗುವುದು
ನೆನಪಾಗುವುದು
ಗೊತ್ತೇ ಹೊರತು

ಮರೆಯಾಗುವುದು
ಮರೆತೋಗುವುದು
ಕಳೆದೋಗುವುದು
ಬರಿದಾಗುವುದು
ಮಾಯವಾಗುವುದು .
ಗೊತ್ತಿಲ್ಲ ಗೆಳತಿ....
ನೀ ನನ್ನ ಹೃದಯದ ಒಡತಿ......

-


31 AUG 2022 AT 16:42

ಗೆಳೆಯಾ...‌‌
ಮತ್ತೆ ಮತ್ತೆ ನೆನಪಾಗಿದೆ
ನಮ್ಮ ಚಂದದ ಆ ದಿನಗಳು

ನಿನ್ನ ಕಣ್ಣಂಚಿನ ಕಿರುನೋಟ
ಎದೆಯ ಬಡಿತವನೇ ಇಮ್ಮಡಿಗೊಳಿಸಿತ್ತು

ಸಾವಿರ ಜನರಿರುವ ಜಾತ್ರೆಯಲ್ಲಿ
ನಿನ್ನ ಕಣ್ಣು ಮಾತ್ರ ನನ್ನನೇ ಹುಡುಕುತಿತ್ತು

ಸನಿಹ ಬಂದು ನಿಂತರೆ ಏನೋ
ತಳಮಳ ....
ಬೀಸುವ ತಂಗಾಳಿಯಲ್ಲಿ ಬೆರೆತ
ಆ ನಿನ್ನ ಮಲ್ಲಿಗೆ ಪರಿಮಳ...
ನೀನಿರೆ ನೀರೆ....
ಬದುಕೇ ಒಂದು ಹೂ ಬನ .....

ಹೃದಯದ ಪ್ರತೀ ಬಡಿತದಲಿ ನಿನ್ನದೇ ರಿಂಗಣ
ನೆನಪಾದರೆ .....
ಕೆನ್ನೆಯ ಮೇಲೆ
ಕಣ್ಣೀರಿನ ಹನಿಗಳೇ ಪ್ರತೀದಿನ ......

-


28 JUN 2022 AT 14:51

ಆಸರೆಯಾಗಿ ನೀ ಬಂದೆ
ಹೃದಯವೆಂಬ ಹೆಬ್ಬಂಡೆಯಲ್ಲೂ
ಪ್ರೀತಿಯ ಚಿಗುರ ಅಂಕುರಿಸಿ
ನೀರನೆರೆದು ಹೆಮ್ಮರವಾಗಿ ಬೆಳೆಸಿದೆ

ಒಂಟಿಯಾಗಿ ಇದ್ದ ನನ್ನ ಬಾಳಲಿ
ಗಗನದ ರವಿಯಾಗಿ, ಶಶಿಯಾಗಿ
ಕತ್ತಲೆಯ ಮರೆಸಿ ಬೆಳಕ ಚೆಲ್ಲಿದೆ
ಮನದ ಅಂಗಳದಿ ಬೆಳದಿಂಗಳ ಚಲ್ಲಿದೆ

ನೋವು ತುಂಬಿದ ಹೃದಯಕೆ
ಉತ್ಸಾಹ ಉಲ್ಲಾಸ ತುಂಬಿ
ಅನಂದದಿ ಸಂಭ್ರಮ ನೀಡಿದೆ

ನೂರು ಜನುಮಕೂ ಋಣಿ ನಾನು
ನಿನ್ನ ಈ ಮಧುರವಾದ ಪ್ರೀ ತಿಗೆ...
ಸಾಗುತಿರಲಿ ಈ ಜೀವನ ಎಂದೆಂದಿಗೂ ನಿನ್ನೊಟ್ಟಿಗೆ.

-


28 JUN 2022 AT 14:34

ಪ್ರೀತಿಯ ಜೀವ ....
ದೂರಾದ ಮೇಲೆ ಬದುಕುವುದಾದರೂ ಎಂತು
ಆತ್ಮವಿಲ್ಲದ ದೇಹನಾನು
ಕಮರಿದ ಬಳ್ಳಿ
ಬತ್ತಿ ಹೋದ ಜೀವನದಿ
ಚಂದಿರನಿಲ್ಲ ಅಮಾವಾಸ್ಯೆ ಯ ಕರಾಳ ರಾತ್ರಿ
ಎದೆಯಲ್ಲಿ ಬರೀ ಮೌನ
ಬಿರುಗಾಳಿಗೆ ಸಿಕ್ಕ ತರಗೆಲೆ
ಸಿಡಿಲು ಬಡಿದ ಸತ್ತ ಜೀವ
ಭೂಕಂಪ ,ಜ್ವಾಲಾಮುಖಿ, ಪ್ರವಾಹ. ಒಮ್ಮೆ ರಾಚಿ
ಬಂದು ಎಲ್ಲವನ್ನೂ ಕಳೆದುಕೊಂಡ ಒಂಟಿ
ಪಿಶಾಚಿಯಾಗಿ ನಿಂತಿದೆ ಮನ ಬಿಡುಗಡೆಯ ಬಯಸಿ

-


24 JUN 2022 AT 22:50

ಮರಳಿ ಬಾ ನನ್ನೆದೆಯ ಗೂಡಿಗೆ
ಬಚ್ಚಿಡುವೆ ನಿನ್ನ ಜೋಪಾನವಾಗಿ
ಕಳೆದುಕೊಂಡ ನಗುವ ಮತ್ತೆ
ಹುಡುಕುತಿದೆ ಈ ಮನವು

ಬಾಡಿ ಹೋದ ಮಲ್ಲಿಗೆಯ
ಕಮರಿ ಹೋದ ನೈದಿಲೆಯ
ಮುದುಡಿ ಹೋದ ತಾವರೆಯ
ಮಂದಹಾಸನ ಬೀರಲು
ಮಂಜಿನ ಹನಿಯಾಗಿ ಬಾ

ಉಷೆಯ ರಂಗನು ಬೀರಿ
ಬೆಳದಿಂಗಳ ಚಂದಿರನಂತೆ
ಮನವೆಂಬ ಅಂಗಳದಿ
ರಂಗೋಲಿಯ ಚಿತ್ತಾರವ ಬಿಡಿಸಲು

ನಿನಗಾಗಿ ಕಾದಿರುವೆ..
ಒಮ್ಮೆಯಾದರೂ ಬಂದು..
ಸೇರು ನೀ ನನ್ನ ಹೃದಯದಾ ಗೂಡಿಗೆ.....


-


24 JUN 2022 AT 22:38

ನಿನ್ನದೇ ನೆನಪಾಗಿದೆ
ಈ ಕಡಲ ಅಲೆಗಳ ಮೊರೆತವ ಕೇಳಿ
ನೀ ನಿಟ್ಟ ಕಚಗುಳಿಯ
ನೆನಪಿಸುತಿದೆ ಈ ತಂಗಾಳಿ

ನಿನ್ನ ಮುತ್ತಿನ ಮತ್ತಲಿ
ಮುಂಗಾರು ಮಳೆಯಲಿ
ಚಳಿಯಲಿ ಜೊತೆಯಲಿ
ಅರಳಿ ನಿಂತ ಮಲ್ಲಿಗೆಯ ಪರಿಮಳದಲಿ

ಹಬ್ಬಿ ನಿಂತ ಲತೆಯ ಅಪ್ಪುಗೆಯಲಿ
ನೀನೇ ಬರಿ ನೀನೇ ಕಂಡಕಂಡಲ್ಲಿ
ಬೇರೇನೂ ಕಂಡಿಲ್ಲ
ಮರುಳಾಗಿ ಹೋಯ್ತಲ್ಲ

ತುಂಬಿರುವೆ .....ಮನಸೆಲ್ಲಾ ..
.ನಿನ್ನ ಬಿಟ್ಟು ಏನಿಲ್ಲ...
ಹಗಲಲಿ ಇರುಳಲಿ...
ನೀನಿರದ ಈ ಜಗ ಬೇಕಿಲ್ಲ ಬಾಳಲಿ...

-


24 JUN 2022 AT 18:26

ಪ್ರೀತಿ ಪ್ರೀತಿ
ನಿನ್ನ ಸಹವಾಸ ಸಾಕಾಗಿ
ಬಿಡುಗಡೆಯ ಬಯಸಿ ನಿಂತೆ ನಾ ಈದಿನ

ಅನುಕ್ಷಣವೂ ಕಾಡುವೆ
ಅನುದಿನವೂ ಜಪಿಸುವೆ
ಎದೆಯಲಿ ತುತ್ತೂರಿ ನುಡಿಸುವೆ
ಹಗಲಿರುಳು ಕಾಡಿಸುವೆ ...

ಕಲ್ಪನೆಯಲೆ ಕುಳಿತಿರುವೆ
ವಾಸ್ತವವನೇ ಮರೆಸುವೆ
ಪ್ರತಿದಿನ ಅಳಿಸುವೆ
ಎಲ್ಲೆಲ್ಲೂ ನಿನ್ನದೇ ಛಾಪು ಮೂಡಿಸುವೆ


-


24 JUN 2022 AT 15:56

ಕಳೆದುಕೊಳ್ಳಲು
ಮನಸಿಲ್ಲ ಈ
ಬಿಡಿಸಲಾಗದ ಬಂಧನ...

-


24 JUN 2022 AT 15:50

ನಿನ್ನ ಸನಿಹ ನಿಂತರೆ
ಧರೆಯೆ ನಡುಗಿದಂತಿದೆ
ಎದೆಯ ಮೂಖ ವೇದನೆ
ಹೇಳದೇ ಮನ ಸೋತಿದೆ..

ಕಣ್ಣಂಚಿಗೆ ಹನಿಯೊಂದು
ಜಾರಿ ಹೇಳುತಿದೆ
ಬಿಟ್ಟು ಬಿಡು ನೀ ನನ್ನ
ಮರೆತು ಬಿಡು ನೀ ಚಿನ್ನ
ಅಗಲಿಕೆಯು ಅನಿವಾರ್ಯ ಇನ್ನ.
ಕೂಡಲು ಬಿಡದು ಈ ಜಗ ನಮ್ಮನ

-


17 JUN 2022 AT 22:14

ಕರಗುತಿರುವ ಚಂದಿರನಂತೆ...
ದೂರಾದೆಯಾ ....

ಮುಳುಗುತಿರುವ ನೇಸರನಂತೆ
ಬೇರಾದೆಯಾ....

ಮುಂಜಾನೆಯಾ ಇಬ್ಬನಿಯಂತೆ
ಕರಗಿದೆಯಾ...

ತನುವ ತೊರೆದ ಆತ್ಮದಂತೆ
ಬಿಟ್ಟು ಹೋದೆಯಾ...

ಕಾರಣವಲ್ಲದ ಕಾರಣ ನೀಡಿ ಮೂಕನಂತೆ
ಅಗಲಿದೆಯಾ.....

ನೀ ನನ್ನ ಬಿಟ್ಟು ,ಸುಟ್ಟು,
ಪಟ್ಟು ಬಿಡದೆ ಮರೆಯಾದೆಯಾ .....

ನೆನಪೆಂಬ ದೋಣಿಯಲಿ ಪಯಣಿಗನಂತೆ
ಹೇಳದೆ ನನ್ನ ಮರೆತು ನಡೆದೆಯಾ...







-


Fetching Manju Bk Quotes