ಮನುಷ್ಯರ ಮೇಲೆ ನಂಬಿಕೆ ಕಳೆದುಕೊಂಡ ನಂತರ ಪ್ರಾಣಿಗಳ ಮೇಲೆ ಪ್ರೀತಿ ಹೆಚ್ಚಾಗುತ್ತದೆ..!!
-
ಹೊಸತು ಮೈ ಮನದ ತುಂಬೆಲ್ಲ ಹಬ್ಬಿದಾಗ ಸಂತೋಷ ಪಡುತ್ತೇವೆ, ಸಂಬಂಧಗಳು ಹಳಸಿದಂತೆ ಹಬ್ಬಿದ ಬಳ್ಳಿಯಿಂದ ಹುಳು ಹುಪ್ಪಟೆಗಳ ತೊಂದರೆ ಎಂದು ಕಿತ್ತು ಬಿಸಾಕುತ್ತೇವೆ!!
-
ಸತ್ಯದ ಹೆಜ್ಜೆಯಿಡುವಾಗ ನೀತಿಯ ದಾರಿ ದೂರವೆನಿಸಿದರೂ ನ್ಯಾಯದ ಗುರಿ ತಲುಪೇ ತಲುಪುತ್ತೇವೆ..!!!
-
ಶಕ್ತಿ,ಯುಕ್ತಿಗಳಿಗಿಂತ ಭಕ್ತಿ-ಮುಕ್ತಿಯೇ ಮೇಲು!
(Statement has changed after visiting many temples 😁)-
ದೂರಾಗದಿರು ಜಾರಿ, ನೆನಪುಗಳನು ಗಾಳಿಗೆ ತೂರಿ!
ಅಂತರಂಗದಲ್ಲಿ ಅವಿತಿದೆ ಅಪರಿಮಿತ ಅನುರಾಗ, ಇದ ತಿಳಿಸಲು, ಯಾವಾಗ ಬರುವುದು ಶುಭಯೋಗ?!
Don't depart, Don't brush off memories
There is an infinite amount of love, am waiting for golden time to covey you!-
ಮಳೆ ಹನಿಗಳು ನಿನ್ನ ನೆನಪುಗಳೊಂದಿಗೆ ಮನದ ನೆಲವ ಸೇರಿ, ಒಲವನ್ನು ಹಸಿರಾಗಿಸಿದವು..
The mixture of rain drops and your memories flowing in to land of my heart and made it green (happy).-
ನಿನ್ನ ನೆನಪುಗಳಲ್ಲಿ ಹಸಿವು ನೀಗಿಸುವ, ದಾಹ ತಣಿಸುವ, ನಿದ್ರೆ ಮರೆಸುವ ಆಗಾಧ ಶಕ್ತಿ ಅಡಕವಾಗಿದೆ!!
The power of thumping hunger, thirst, and sleep are in your memories!!-
ಕೇಳುಗರಿಲ್ಲದೇ ಗಂಟಲಲ್ಲಿ ಸಿಕ್ಕ ಮಾತುಗಳು, ಕೆಲವೊಮ್ಮೆ ಹಾಳೆಗಂಟಿ, ಮನಸ್ಸು ಮುಟ್ಟುತ್ತವೆ!!
-
ಕಷ್ಟಪಟ್ಟು ಸಂಯಮದಿಂದ ಏರಿದರೆ, ಇಳಿಯುವ ಸಂದರ್ಭ ಬಂದರೂ ಆಯ ತಪ್ಪಿ ಬೀಳದೆ ಎಚ್ಚರಿಕೆ ವಹಿಸಬಹುದು!!
-