ಮೋಸದ ಬಲೆ
-
mani😎ji
(Maniji 😎)
1.3k Followers · 2.0k Following
ನನ್ನೆಸ್ರು ಮಣಿ ಎಲ್ಲರೂ ನನ್ನ ಪ್ರೀತಿಯಿಂದ ಮಣಿಜಿ ಅಂತಲೂ ಕರೀತಾರೆ ನೀವೇನೇ ಕರೆದರೂ ಅದು ನಿಮಗೆ ಬಿಟ್ಟಿದ್ದ... read more
Joined 31 May 2020
18 SEP 2022 AT 19:02
ಈ ಸಂಜೆ
ಆ ದಿನ ಸಂಜೆ ಎಂದು ಕೆಲಸ ಮಾಡದ ಆ ಮನೆಯ ಯಜಮಾನ ಅಂದು ಮುಂಬಾಗಿಲಿಗೆ ನೀರು ಹಾಕಿ, ಉದ್ದಿನಕಡ್ಡಿ ಬೆಳಗಿ,ಲಕ್ಷ್ಮಿ ಬರುವಳೆಂದು ಬಾಗಿಲು ತೆಗೆದೆಟ್ಟು. ಒಳಗೆ ಹೋದ ತಕ್ಷಣವೇ ಅವನ, ಹಿಂದೆಯೇ ನಾ ಒಳಹೋದೆ.
ಆ ಮನೆ ಯಜಮಾನಿಗೆ ನನ್ನ ಗಾಯನ ಕೇಳಿಸಿದಾಗ ಆವಳಿಗೆ ಗಾಯನ ಇಷ್ಟವಾಗಿ ಕೈಯೆತ್ತಿ ಕೊಂಡಾಡುವುದನ್ನು ನೋಡಿ ಸಂತೋಷಿತನಾದ,
ನಾನು ಆವಳಿಗೆ ಮುತ್ತು ಕೊಡಲು ಹೋದಾಗ
" ಪಟ್", ಎಂಬ ಸಪ್ಪಳದೊಡನೆ ಮನೆ ಯಜಮಾನಿ
"ರೀ... ಎಲ್ಲಿ ಹೋದ್ರಿ ಸಂಜೆ ಬಾಗಿಲು ತೆಗಿಬೇಡಿ ಎಂದು ಎಷ್ಟು ಹೇಳಿದರು ತೆರೆದಿಟ್ಟು ಬರುತ್ತೀರಾ ಈಗ ಸೊಳ್ಳೆಗಳು ನನ್ನ ಕಡಿತವೆ" ಅಂದಳು..
-