Mani Swan   (Mäñi swan)
193 Followers · 19 Following

Joined 23 May 2020


Joined 23 May 2020
2 DEC 2023 AT 20:31

ಅವಳು ಆರಾಧನೆ
ನಾನು ಆರಾಧಕ
ಆರಾಧಿಸುವೆ ಹೃದಯದಲ್ಲಿಟ್ಟು ಪ್ರತಿ ಬಡಿತಕೆ ಪ್ರೀತಿಯ ರಾಗ ಕೊಟ್ಟು
ಆರಾಧಿಸುವುದೆ ನನ್ನ ಕಾಯಕ
ಉಸಿರಿನ ದೀಪ ಆರುವ ತನಕ
........♥️

-


22 JAN 2021 AT 12:11

ಹುಟ್ದಬ್ಬ

-


26 DEC 2020 AT 10:20

ನಿನ್ನ ಮುಕುಟದಲ್ಲಿರುವ
ನವಿಲು
ಗರಿಯಾಗಬೇಕೆಂದ್ದೆನಿಲ್ಲಾ
ಎನಗೆ ..
ನಿನ್ನ ಪಾದದ
ಧೂಳಿನ
ಕಣವಾದರು ಸಾಕೆನಗೆ.
ನಿನ್ನ ಕೊಳಲಿನ
ರಾಗದಲಿ
ಬೆರೆತು
ಸ್ವರವಾಗಬೇಕೆಂದ್ದೆನಿಲ್ಲಾ
ಎನಗೆ...
ನಿನ್ನ ಉಸಿರಿನ
ಬಾವದಲ್ಲಿರುವ
ಪ್ರೀತಿಯ
ಕಣವಾದರು ಸಾಕೆನಗೆ..

-


24 DEC 2020 AT 22:26

ಹುಟ್ಟುಹಬ್ಬದ ಶುಭಾಶಯಗಳು ತಂಗಿ..

-


10 DEC 2020 AT 22:14

ನನ್ನ ಪ್ರಾರ್ಥನೆಗಳ ವರವೆಲ್ಲಾ
ಸುಮಗಳಾಗಿ ಕಾಯುತ್ತಿವೆ ಸಖಿ..
ನನ್ನ ಮನದೊಳಗಿನ ನಿನ್ನ
ಉತ್ಸವ ಮೂರ್ತಿಯ ಮುಡಿ ಸೇರಲು..
ನನ್ನ ಕನಸೆಲ್ಲಾ ಕವನಗಳಾಗಿ
ಕೂಗಿ ಹೇಳುತ್ತಿವೆ ಸಖಿ..
ನನ್ನ ಬಾಳ ಪುಟದಲಿ
ನಿನ್ನ ಹೆಸರೆ ಚಿರ ಶಾಶ್ವತ ನೆಲೆಸಲು..

-


28 NOV 2020 AT 16:47

ನನ್ನಂತ್ತೆ ನೀನು ಯೋಚಿಸಿವೆಯೊ ಅಥವಾ
ನಿನ್ನಂತ್ತೆ ನಾನು ಯೋಚಿಸಿವೆನೆನು ಕಾಣೆ..
ನಮ್ಮಿಬ್ಬರ ಮನದ ಬಾವನೆ ಒಂದೆ ಅನ್ನಿಸುತ್ತಿದೆ.



-


27 NOV 2020 AT 9:00

ಕಾಲ ಚಕ್ರವು ಉರುಳಿ ಮತ್ತೆ ನಿನ್ನ ಮುಂದೆ ನನ್ನನ್ನು ನಿಲ್ಲಿಸಿದಾಗ..ನಾನು ಮೂಕನಾಗಿ ಬಿಟ್ಟೆ.ಸತ್ತು ಹೋಗಿದ್ದ ನನ್ನ ನಗುವು ಮತ್ತೆ ಏದ್ಧು ಸಾವಿರ ಸಂಬಾಷಣೆಯ ಮೂಟೆ ಕಟ್ಟಿ ಮುಗುಳ್ನಗೆಯೊಳಗೆ ನಿನಗೆ ಎಲ್ಲವನ್ನು ಹೇಳ ಬಯಸಿತ್ತು.

-


10 NOV 2020 AT 8:30

ದೇವರಿಲ್ಲದ ದೇಗುಲದಂತೆ
ರೆಕ್ಕೆ ಇಲ್ಲದ ಹಕ್ಕಿಯಂತೆ
ನೀರಿಗಾಗಿ ಪರಿತಪಿಸುವ ಮೀನಿನಂತೆ
ವರ್ಷದಾರೆ ನೋಡದ ಇಳೆಯಂತೆ
ದಡವಿರದ ಕಡಲಂತೆ
ತಾಯಿ ಇಲ್ಲದ ತಬ್ಬಲಿಯಂತೆ
ಜಗವೆ ನೋಡದ ಅಂಧನಂತೆ
ತುಂಬು ಜಾತ್ರೆಲಿ ಕಳೆದು ಹೋದ ಮಗುವಂತೆ. ನೀನಿರದೆ ನಾ..


-


2 NOV 2020 AT 22:28

ಮುರಿದು ಹೋದ ಹಳೆ ವೀಣೆಯ
ಕೊನೆಯ ತಂತಿ ನಾನು !
ಮುರಿದು ಹೋಗುವ ಮುನ್ನ
ನಿನ್ನ ಕೈ ಬೆರಳು ತಾಕಿ ಹೋಗಲಿ ಚಿನ್ನ !!
........

-


30 OCT 2020 AT 0:08

ಪ್ರೀತಿಸುವ ಕಣ್ಗಳು,
ಕಣ್ಣಿಗು ಒಂದು ಕೊನೆಯ ಆಸೆ ಇದೆ
ಕನಸ ಕೋಟೆ ಕಟ್ಟಿ ಕಾಯುತ್ತಿದೆ
ನಿನ್ನ ಕಾಣುವ ಹಂಬಲ ಮಿತಿ ಮೀರಿದೆ
ಕಣ್ಣೀರಿನ ಕಾವು ಕಣ್ರೆಪ್ಪೆಯನು ಸುಟ್ಟಂತ್ತಿದೆ
ಕಣ್ಣೀರೆ ನಿನ್ನೆಡೆಗೆ ಹರಿದು ಬಂದಂತ್ತಿದೆ
ಧಣಿವಾರ ಅತ್ತು ಧಣಿವಾಗಿದೆ
ಈ ಕಣ್ಣಿಗೆ ನೀನೆ ಬೇಕಾಗಿದೆ.



-


Fetching Mani Swan Quotes