Manasa Hegde   (ಹಸನ್ಮುಖಿ 😊...)
88 Followers · 12 Following

read more
Joined 19 August 2021


read more
Joined 19 August 2021
6 MAY 2024 AT 7:12

ಕಾಣದ ದೇವರಲ್ಲಿ ಭಕ್ತಿಯಿಂದ ಬೇಡುವರಯ್ಯ
ಕಣ್ಣಿಗೆ ಕಾಣುವ ದೇವರನ್ನು ಮರೆವರಯ್ಯ
ಕಾಣುವ ದೇವರು ಯಾರೆನ್ನುವರಯ್ಯ
ತಂದೆ - ತಾಯಿಯೇ ದೇವರೆಂದು ಭಕ್ತಿಯಿಂದ ನೆನೆವರು ನಾವು ಕೆಲವರಯ್ಯ!!!

-


6 MAY 2024 AT 7:10

ಕೆಲವೊಂದು ಸಲ ಇದ್ದಿದ್ನ ಇಲ್ಲೆ ಹೇಳಿ ಅಂದ್ಕಂಬದ್ಕಿಂತಾ,,,
ಇಲ್ದೆ ಇದ್ದಿದ್ನಾ ಇದ್ದು ಹೇಳಿ ಅಂದ್ಕಂಡ್ರೆ ಏನೋ ಒಂತರ ಖುಷಿ ಮತ್ತೆ ನೆಮ್ಮದಿ ಆಗ್ತು....

-


17 MAR 2024 AT 13:25

ನಗು ಮೊಗದ ಚೆಲುವೆ..
ಹೃದಯದಲಿ ಭಾವನೆಗಳ ಬಿತ್ತಿದವಳೆ..
ಅತೀ ಪರಿಚಿತವಾದ ಅಪರಿಚಿತಳೇ..
ಮನಸ್ಸಿಗೆ ಹತ್ತಿರವಾದ.. ಸ್ನೇಹಿತೆಯೋ..ಪ್ರೇಮಿಯೂ..ಯಾರೋ ನೀನು.. ನೀ ಯಾರೆ ಆಗಿರು ಆದರೆ
ಎಂದೆಂದಿಗೂ ಜೊತೆ ಇರು..
ನಮ್ಮ ನಿಮ್ಮ ಸ್ನೇಹ ಸದಾ ಹಿಂಗೆ ಇರಲಿ..

-


17 MAR 2024 AT 13:22

ಯಾರವಳು !!
ನಿನಗರಿವಿಲ್ಲದೆಯೇ ನಿನ್ನ ನಿದ್ದೆಯನ್ನೇ ಕದ್ದವಳು!
ನಿನ್ನ ಮುಗ್ಧ ಮನಸ್ಸನ್ನು ಅರೆ ಕ್ಷಣದಲ್ಲಿ ಕದ್ದವಳು!
ನಿನ್ನದೊಂದು ಪ್ರೀತಿಗೆ, ತನ್ನದೊಂದು ಪ್ರೀತಿಯ ಪರಿಚಯಿಸಿದವಳು!
ಇವತ್ತಿನ ಕಲ್ಪನೆಯ ಕೂಸು, ನಿನ್ನ ನಾಳೆಯ ನಿರೀಕ್ಷೆಯ ಕೂಸು ಅವಳಾಗಿರುವಳು!!!

-


16 NOV 2023 AT 15:54

ನನ್ನ ಪ್ರೀತಿಯ...

ನಿನ್ನನ್ನು ವರ್ಣಿಸಲು ಪದಗಳಿಲ್ಲ
ಸಾದಾ - ಸೀದಾ ಬರೆಯಲು ನನಗೆ ಬರುವುದಿಲ್ಲ
ನನ್ನ ಕಲ್ಪನಾ ಲೋಕದಲ್ಲಿ ನಿನ್ನನ್ನು ವರ್ಣಿಸಲು ಬಯಸುತ್ತಿರುವೆ
ಯಾವುದೇ ಮಾತು - ಕತೆಗಳಿಲ್ಲದೆ !!!

ನೀನೊಂದು ಮಾಯೆ,
ಹೇಗೆ ವರ್ಣಿಸಲಿ ನಿನ್ನ ಛಾಯೆ !
ನನ್ನ ಕಲ್ಪನೆಯ ಅಪ್ಸರೆ,
ಅವಳ ಹೆಸರೇ ಇಂದಿರೆ/ರಾ...

-


27 OCT 2023 AT 8:03

ತಂಗಾಳಿಯ ತಂಪಿನಲ್ಲಿ
ಬಿಸಿಯುಸಿರು ಮನದಲ್ಲಿ
ನಾ ಆಲಿಸುತ್ತಿರುವಾಗ,...
ಕೇಳಿ ಬಂದ ಪಿಸು ದ್ವನಿ... ನಿನ್ನದೆಂದು ಪತ್ತೆ ಹಚ್ಚುವುದಕ್ಕೆ ಕೊಂಚ ಸಮಯ ಹಿಡಿಯಿತು...

-


27 OCT 2023 AT 7:59

ಹಸುವಂತೆ, ಸಿರಿವಂತೆ ಇವೆರಡೂ ಊರಿನ ಹೆಸರಂತೆ
ನಾನಂತೆ ನೀನಂತೆ
ಅವರಿಗ್ಯಾಕೆ ನಮ್ಮ ಚಿಂತೆ
ನಮ್ಮನ್ನು ನೋಡಿ ಉರಿದುಕೊಳ್ಳುವುದು ಯಾಕಂತೆ ?

-


30 AUG 2023 AT 21:28

ಮರೆತರೂ ಮರೆಯಲಾಗದಂತಹ ನಿನ್ನ ಮನಸ್ಸು
ಮರೆತೇನೆಂದರೆ ಮರುಗುವುದು ನನ್ನ ಮನಸ್ಸು
ಆಗಾಗ ಕಾಣುತಿರುವೆ ನಾ ನಿನ್ನ ಕನಸು
ಕನಸೆಲ್ಲವೂ ಆಗುವಂತಾಗಲಿ ನನಸು

-


30 AUG 2023 AT 21:26

ಎಲ್ಲವನ್ನೂ ಕಲಿಸಿ ಕೊಟ್ಟೆ
ನನ್ನನ್ನು ಏಕೆ ಹೀಗೆ ಇಟ್ಟೆ
ಹೆಚ್ಚು ಕಮ್ಮಿ ಕಾಲು ಭಾಗ ಕಣ್ಣೀರಿನಲ್ಲೇ ಕಳೆದು ಬಿಟ್ಟೆ
ಪ್ರತಿಯೊಂದು ನೋವನ್ನು ಅನುಭವಿಸಿ ಹೊರಟೆ!!!

-


14 AUG 2023 AT 8:26

ಏನೋ ಒಂದು ರೀತಿಯ ತವಕ ಮನದಲ್ಲಿ
ಸಾಗುತ್ತಿದೆ ಜೀವನ ನಿಧಾನ ಗತಿಯಲ್ಲಿ
ಜೀವನ ಸಾಗದು ನಾವು ಅಂದುಕೊಂಡ ರೀತಿಯಲ್ಲಿ
ಆದರೂ, ಯಾವಾಗಲೂ ಇರುವುದು ನಗು ನನ್ನ ಮುಖದಲ್ಲಿ...

-


Fetching Manasa Hegde Quotes