ನಿನ್ನಯ ಹೆಜ್ಜೆಯ ಜೇಂಕಾರವ
ಕೇಳಲೆಂದು ಮಳೆಯು ಬಂದಿದೆ...
ಈ ಸಖಿಯ ಕಣ್ಣ ಕಾಂತಿಯ ಕಂಡು,
ಕಾಮನ ಬಿಲ್ಲಿಗೆ ರಜೆ ಬಂದಿದೆ...
ನಿನ್ನಯ ನಗು ಮೊಗವ ಕಾಣಲೆಂದು,
ಈ ನನ್ನ ಮನವು ಕಾಯುತಲಿದೆ...
ಆ ನಗುವಿಗಾಗಿ ಈ ನನ್ನಯ ಜೀವವೇ
ಮುಡಿಪಾಗಿಡಲು ನಾ ನಿರ್ಧಾರ ಮಾಡಿದೆ...
ನಿನ್ನಯ ಸವಿ ನೆನಪುಗಳ ಜೊತೆಯಲಿ
ಹುಚ್ಚು ಕನಸುಗಳ ಆಟವು ಶುರುವಾಗಿದೆ...-
ಯಾವ ಒಬ್ಬ ಗುರುನೂ ಸಹ ತನ್ನ ವಿದ್ಯಾರ್ಥಿಗಳನ್ನು ಚೌಕಟ್ಟಿನ ಒಳಗೆ ಇರಿಸಿ ಪಠ್ಯವನ್ನು ಕಲಿಸಿ,
ಜೀವನದ ನಿಜ ಸಂಗತಿಗಳನ್ನು ತಿಳಿಸುವುದಿಲ್ಲವೋ ಆ ವ್ಯಕ್ತಿ ಗುರು ಎಂಬ ಸ್ಥಾನಕ್ಕೆ ಕಳಂಕವನ್ನು ತರುತ್ತಾನೆ....
ಹಾಗೆಯೇ ತನ್ನ ವಿದ್ಯಾರ್ಥಿಗಳನ್ನೇ ತಾನೇ ತಮ್ಮ ಸ್ವಾರ್ಥಕ್ಕಾಗಿ ಪ್ರಪಾಥಕ್ಕೆ ದೂಡಿರುತ್ತಾನೆ....-
ಕನ್ನಡ ಮಣ್ಣಿನ "ರಾಜ" ಮನೆತನದ ಕುವರ,
ಈ ನಮ್ಮಯ ಪ್ರೀತಿಯ "ರಾಜಕುಮಾರ"ನು....
ನಮ್ಮಯ ನಾಡಿನ ಕೀರ್ತಿ ಪುರುಷನ,
ಉತ್ತರಾಧಿಕಾರಿಯಾಗಿ ಬೆಳೆದು ಬಂದನು....
ನಾಡಿನ ಮನೆ ಮನಗಳಲ್ಲಿ ಅಭಿಮಾನದ,
ಜ್ಯೋತಿ ಹಚ್ಚಿಸಿ ಬೆಳಕಾಗಿ ಮರೆದವನು.....
ಅಭಿಮಾನಿಗಳ ಹೃದಯ ಸಾಮ್ರಾಜ್ಯದ,
ಸಿಂಹಾಸನವನ್ನು ಏರಿದ "ಯುವ ರಾಜ"ನು....
ತಂದೆಗೆ ತಕ್ಕ ಮಗನಂತೆ ಜಗತ್ತು ನೋಡದ,
ಜೀವಗಳಿಗೆ ದೃಷ್ಟಿ ನೀಡಿ ಮರೆಯಾದನು....
ಪ್ರೀತಿಸುವ ಅಭಿಮಾನಿಗಳನ್ನು ತೊರೆದು,
ತಂದೆ ತಾಯಿಯ ಮಡಿಲಿಗೆ ಸೇರಲೆಂದು ಹೋದನು....-
ಕೆಲವೊಮ್ಮೆ ನಾವೇ ಬುದ್ದಿವಂತರು 😎 ಎಂದು ತಿಳಿದಿರುತ್ತೇವೆ...😃
ಆದರೆ ಜೀವನದಲ್ಲಿ ಎಡವಿದಾಗ ಮಾತ್ರ ನಮ್ಮಲ್ಲಿ ಇದ್ದಂತಹ ದಡ್ಡತನಗಳು ಕಾಣುತ್ತವೆ...🤭
🤔.......ಕಾರಣ.....🤔
ಇಲ್ಲಿ ನಮ್ಮ ತಪ್ಪುಗಳನ್ನು ತಪ್ಪು ಎಂದು ಹೇಳಲು ಯಾರೂ ಇಲ್ಲದಿರುವುದು...😊
🤔........ಅಥವಾ.....🤔
ಹೇಳುವವರು ಇದ್ದರೂ ಸಹ ಕೇಳುವವರು ಕಿವುಡಾಗಿರುವುದು...🙉-
ಬಲವಾದ ಕಾರಣದಿಂದಲೇ ಬದಲಾದವನು ನಾನು...🤠
ಬಲವಂತವಾಗಿ ಕರೆದರೂ ಮರಳಿ ಬಾರಲಾರೆನು ನಾನು...🙂
ನಿಮ್ಮಯ ಖುಷಿಗಾಗಿ ಮರಳಿ ಬಂದರೂ ಮೊದಲನಂತೆ ಇರಲಾರೆ ನಾನು...🤠
ಕಾರಣ ನಿಮ್ಮಿಂದಲೇ ಬದಲಾದವನು ನಾನು...🙂
-
ಎಷ್ಟೇ ಹಂಚಿದರೂ ಖಾಲಿ ಆಗದಂತೆ ಇರುವ ಪ್ರೀತಿಯನ್ನು ಹೊಂದಿದ ಸಾಹುಕಾರನಾಗು...
ಒತ್ತಾಯದಿಂದ ದೂರ ಹೋಗುವವರನ್ನು ತಡೆದು ಪ್ರೀತಿ ಕೇಳುವ ಭಿಕ್ಷುಕನಂತೆ ನೀನಾಗಬೇಡ...
ಅದು ಗೆಳೆಯರಲ್ಲಾಗಲಿ ಅಥವಾ ಸಂಬಂಧಗಳಲ್ಲಾಗಲಿ ಯಾರೊಂದಿಗೂ ಭಿಕ್ಷೆಯ ರೂಪದಲ್ಲಿ ಪ್ರೀತಿ ಪಡೆಯದಿರಿ....-
ಈ ಮನದ ಭಾವನೆಗಳಿಗೆ ಸ್ಪಂದಿಸುವ,
ನಿನ್ನನ್ನು ಮರೆಯಲಾರೆನು ಕ್ಷಣಮಾತ್ರ...
ಈ ಜೀವನವೆಂಬ ಸುಂದರ ಕಾವ್ಯದೊಳಗೆ,
ನೀನೋಂದು ಜೀವನಕ್ಕೆ ಜೀವ ತುಂಬುವ ಪಾತ್ರ...
ಈ ಜೀವನದ ಪಯಣದಲಿ ಮರೆಯಾಗಿ,
ಆಗದಿರು ನನಗೆ ನೀನೊಂದು ಕೈಗೆಟುಕದ ನಕ್ಷತ್ರ...
-
My friends life is so boring that
Because sometimes some of the
Friends living with me for their needs..-
The sky feels lonely when
I feels lonely...
I feels lonely when
If you turn away from me....-
Your smile like a moon...
It is inspection to be shine...
The night is incomplete without,
To see your brightest smile...-