ಕಳೆದು..ಕೊಂಡದ್ದು.
(ನಷ್ಟದ ನೋವು 👇🏻)
-
Mala N Murthy
(ಮಾಲಾ ಎನ್ ಮೂರ್ತಿ)
291 Followers · 44 Following
ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ.
... read more
... read more
Joined 8 February 2019
7 FEB AT 15:16
ಅನುಕಂಪಕ್ಕಾದರೂ ಅನುರಾಗವಿತ್ತು
ಆದರೆ
ಅನುಕಂಪಕ್ಕೆ ಅನುಸರಿಸುವ ಅಭಿಲಾಷೆಗಳಿರದು
ಅನುಕಂಪಕ್ಕೆ ಅಳತೆಗೋಲಿನ ಆದೇಶವಿರುವುದು
ಅನುಕಂಪಕ್ಕೆ ಅನ್ಯರ ಅಭಿಪ್ರಾಯಗಳ ಆತಂಕವಿವುದು
ಅನುಕಂಪಕ್ಕೆ ಅನ್ಯತೆಯ ಆದಿ ಅಂತ್ಯಗಳಿವುಹುದು
ಅನುಕಂಪಕ್ಕೆ ಅನನ್ಯತೆಯ ಅಂಕಿ ಅಂಶಗಳ ಅರಿವಿರದು
ಅಸಲಿಗೆ
ಅನುಕಂಪಕ್ಕೆ ಅರಳಿದ್ದು ಅಂದಿಗೇ ಅಸುನೀಗಿತ್ತು.-
13 JAN AT 0:53
ಎಲ್ಲವೂ ನಿನ್ನೊಳಗಿನ ಭಾವನೆಗಳೇ ಹೊರಗಿಂದ ಬಂದಿದ್ದು ಉಳಿಯೋಲ್ಲ,
ಒಳಗಿನದ್ದೇ ಉಳಿಯೋದು.
ನೀನೇನೇ ಆಗಿದ್ದರು ಅದು ನಿನ್ನದೇ ನಿಜ ರೂಪ,ವ್ಯಕ್ತಿತ್ವ ಎಲ್ಲವೂ ಒಳಗಿದ್ದದ್ದೇ ಹೊರ ಬರದೇ ಅಳಿದುಳಿದು ನಿನ್ನೇ ಕಾಡುವುದು...!¡-
10 JAN AT 12:31
ಇದುಕ್ಕೆ ಅದುಕ್ಕೆ ನೀನೇನಂತಿ,ನೀನ್ಯಾಕೆ ನಿಂತಿ-ಕುಂತಿ, ಇದೇನ್ ನಿಮ್ ಜಗಳದ್ ಸಂತಿ, ಮುಗಿತ್ ನಮ್ ಪಂಚಾಯಿತಿ
-
8 JAN AT 19:43
ಭವಿಸಿಬಿಡು ಭಾವವೇ ಬದುಕಿನ ಭ್ರಮೆಗಳಲಿ
ಬೇಕು ಬೇಡಗಳ ಬೇಗುದಿ ಭಾರವಾಗಿದೆ ಬಾಳಲಿ
ಭಾವವೇ, ಬಯಸಿ ಬಂಧಿಯಾಗಲಾರೇನಾ
ಭಾವವೇ, ಭಾವಿಸಿ ಭಾರವಾಗಲಾರೇನಾ..!¡-