ಮೈನಾ ...   (ಕಾಡ ಹೂ..!)
101 Followers · 32 Following

read more
Joined 17 August 2020


read more
Joined 17 August 2020
1 JUN 2021 AT 6:01

ಹುಣ್ಣುಮೆಯ ಹಂದರದಿ ತರಂಗಗಳ ನತ೯ನ
ಆದರೂ ತೇವ ಮರೆತು ಬಿರುಕು ಬಿಟ್ಟ ಸಾಗರ ತಟ
ಇದಕೆ ಕಾರಣ ಕಡಲ್ಗಳ್ಳರ ಒಳಸಂಚೋ ಅಥವ
ಒಳಿತಿಗೆ ಸ್ವಇಚ್ಛೆಯ ಮಾಪಾ೯ಡೋ ತಿಳಿಯದಾಗಿದೆ...

-


29 MAY 2021 AT 2:32

ನಿದ್ದೆ ಬರದ ರಾತ್ರಿಯಲಿ
ಡ್ರೈಫ್ರೂಟ್ ತಿಂತಾ ಕುಳಿತಿರುವ
ನಿರುದ್ಯೋಗಿ ನಾ
ನಕ್ಷತ್ರ ಇರದಿದ್ದರೂ ಅದನೆಣಿಸುತ
ನೈಂಟಿ ಹೊಡೆದು ನಶೇಲಿ
ತೇಲುತಿರುವ ಅಲೆಮಾರಿ ನೀ
ನಸುಕಿನ ಚಳಿಯ ಕನಸಲಿ
ಯದ್ವ ತದ್ವ ಕಾಡೊ ನೀನು
ನಿನ್ನ ಯಾಮಾರಿಸಿ ಅಪಹರಿಸಲು
ಹೊಂಚಾಕುತ್ತಿರುವ ನಾನು
ಹಾಳಾಗಿರೊ ಎಲ್ಲಾ ಲಕ್ಷಣ
ಒಂದೊಂದಾಗಿ ಪಟ್ಟಿ ಮಾಡಿದೆ ನಾ
ನನಗಾಗಿ ಚಂದ್ರ ಸೆರೆ ಹಿಡಿದು ತಂದ
ನಿನ್ನ ಚಿತ್ರ,ದೃಷ್ಟಿಯಾದೀತು ಜೋಪಾನ

-


21 MAY 2021 AT 12:39

ನನ್ಮನಸ್ಥಿತಿಯ
ಮಾಗ೯ಸೂಚನದಿ
ಮಾಪಾ೯ಡಾಗುವೆ
ನೀ ಮುದನೀಡುವ
ಮಲ್ಲಿಗೆಯೊ
ಮೈಗಂಟಿ ಚುಚ್ಚುವ ಮುಳ್ಳೊ?
ಮಂದಹಾಸದ ಮಂಪರಿನಲಿ
ಮಾರ್ದನಿಸುವೆ
ನೀ ಖುಷಿಯಿದ್ದು
ನಗುವವಳೊ
ನೋವಿದ್ದು ನೆಮ್ಮದಿಯ
ನಟಿಸುವವಳೊ?

-


9 MAY 2021 AT 23:23

ನಿತ್ಯಮೌನ ಭಾವಭಿಕ್ಷುಕನಿಂದ ರಾಕ್ಷಸನಾದ ದಾರಿ
ನಿಮ್ಮ ಕೇಳಿ ಇದ ಮಾಡಬೇಕಿದೆ ಡಾಕ್ಯುಮೆಂಟರಿ...!

-


8 MAY 2021 AT 16:20

ಕಡಲ ಕಿನಾರೆಗೆ ಕಚ್ಚಿಕೊಂಡಿರುವ ಕಿನ್ನರಿ
ಕುಂಚದ ಕೋಲ್ಮಿಂಚಿನ ಕೈಚಳಕದ ಕುವರಿ

ಬದುಕಿನ ಬವಣೆಯ ಬರೆವ ಬಣ್ಣದ್ಬಳಪ
ಬೊಗಸೆಯಲಿ ಬಾನಿಗೆ ಬಲೆಬೀಸುವ ಭೂಪ

ಛಿದ್ರವಾದ ಛಾಯೆಯ ಚಿತ್ರಿಸುವ ಚಾಕ್piece
ಚಂಚಲ ಚುಕ್ಕಿ ಚಂದ್ರನನ್ನು ಚಂದಾದಾರರನ್ನಾಗಿಸಿ
ಚೈತ್ರವ ಚಿಮ್ಮುವ ಛಾಪಲಿ ಚಲಿಸಿದೆ

ಅಚ್ಚಳಿಯದೆ ಆಭ೯ಟಿಸಲಿ ಅನಘ ಅರಿತ
ಆರದಿರಲಿ ಅರಳಿದ ಅಲರು ಅಲೆದಾಡುತ್ತ ಅತ್ತಿತ್ತ
ಅಕ್ಷರಗಳ ಅಕ್ಕರೆಯ ಅರಸಿ ಅಸ್ಮಿತಾ... ಅಸ್ಮಿತಾ...

-


21 APR 2021 AT 16:24

ಕಾಯ ಕುಗ್ಗಿದೆ ಕರಗಬೇಕಿದೆ ಕಾದ
ಕಾಮನೆಯ ಕಂಗಳ ಕುಲುಮೆಯಲಿ

ತುಟಿಯು ತರಗೆಲೆಯಾಗಿದೆ ತೇಲಿಸು
ತೇವದಲಿ ತೂಗುತ ತೋಳ ತೊಟ್ಟಿಲಿನಲಿ

ನವಿರಾಗಿ ನೇವರಿಸು ನಿನ್ನ ನಶೆಯೇರುತ
ನಾಭಿ ನಾಚಿ ನಗಲಿ ನಡು ನಡುಗಲಿ

ಅಡಿ ಅರಸಲಿ ಅರಸನ ಅಂದವ
ಅಣು ಅಣುವು ಅಪ್ಪಲಿ ಅಂಗವ

ಬಿಗಿದಪ್ಪಿದ ಬೆನ್ನಿನ ಬೆವರ ಬಿರುಸು
ಭೋದಿಸಲಿ ಬೆತ್ತಲ ಬಣ್ಣದ ಬವಣೆಯ

ರಗಳೆಯಿರದ ರವಿಕೆಯ ರಮಿಸು ರೋಮ
ರೋಮದಲಿ ರಂಜಿಸುವ ರಾಸಲೀಲೆಯ

-


23 MAR 2021 AT 23:03

Reality is 'life and feelings'
has negligible potential difference
but don't know how we manage
to imagine huge current flow
between them...!

-


23 MAR 2021 AT 1:52

ತೊಗಲು ಆವರಿಸಿದ ಅತೃಪ್ತ ತೆರಿಗೆದಾರ
ತೃಷೆಯಲೆ ತೆವಳುತ್ತಿರುವವನಿವನು ಮುಟ್ಟದೆ ತೀರ
ಬಾಲ್ಯ ಯೌವ್ವನ ಮುಪ್ಪಿಗೆ ಸೊಪ್ಪಾಕಿ ಸವಿಯುವ ಸೊಗಸುಗಾರ
ಆತ್ಮವ ಹಿಡಿದಿರುವೆನೆಂದು ಮೆರೆವ ಮೋಜುಗಾರ
ನೈಜವಾಗಿ ತನ್ನಸ್ತಿತ್ವವೇ ಇಲ್ಲವೆಂದು ಮರೆತಿರುವ ಕಾಲ್ಪನಿಕ ಲಂಚಕೋರ

-


14 MAR 2021 AT 1:22

ನೆನಪು ಅಟ್ಟಹಾಸದಿ ಬೆನ್ನಟ್ಟಿದೆ ಈ ಭೀಕರ ರಾತ್ರಿ
ಸೂಯ೯ನು ಮುನಿದು ಹೊರಟ ಮಾಯೆಯ ಸಂಚಿರಬೇಕು
ಚೂರಾದ ಚಂದ್ರ ಕೇಳಲಾಗದೆ ತಾರೆಗಳಿಂದ ಬೆಳಕ ಸಾಲ
ಮತ್ತದೆ ಕಗ್ಗತ್ತಲು ಜೊತೆಗೆ ಕಣ್ಣೀರೊಡನೆ ಜಿನುಗುವ ಕ್ಯಾಂಡಲು

-


17 FEB 2021 AT 15:47

ಒಲವ ಸೋನೆಗೆ ಒಲಿದ ಮನದಲ್ಲಿ
ಬೆಸೆದ ನಂಟಿಗೆ ಬಿರುಸು ಮುನಿಸಂತೆ

ಕಳೆದ ಕ್ಷಣಗಳ ಕಡಲ ತಟದಲ್ಲಿ
ನೆನಪಿನ ಅಲೆಯು ಕಿಸಕ್ಕೆಂದು ನಕ್ಕಂತೆ

ಕುಣಿವ ಮದಿರೆಯ ಕೊನೆ ಹನಿಯಲ್ಲಿ
ಕೆಣಕಿ ಕಾಡುವ ಧನಿಯು ಕೇಳಿತಂತೆ

ಕಾಗದವ ಕಾದ ಲೇಖನಿಯ ಮೊನೆಯಲ್ಲಿ
ಶಾಯಿ ತೊಟ್ಟಿಕ್ಕದೆ ರಕ್ತದಂತೆ ಒಸರಿತಂತೆ

ಒಂಟಿ ಬಿದ್ದಿದ್ದ ಗೋರಿಯ ಸಂದಿಯಲ್ಲಿ
ನಾನಿರುವೆನೆಂದು ಒಂದು ಕಾಡಹೂ ಹುಟ್ಟಿತಂತೆ!!!

-


Fetching ಮೈನಾ ... Quotes