ಕಡು ಪಾಪಿ ಅಂಗುಲಿಮಾಲನೆದುರು
ಮಂಡಿಯೂರಿ ಕುಳಿತ ದಟ್ಟ ದಾರಿದ್ರ್ಯನೊಬ್ಬನ ಕೈಯಲ್ಲಿ ಬೆರಳುಗಳಿರಲಿಲ್ಲ....!
-
ಬದುಕು ಬದುಕಿನೊಂದಿಗೆ ಬದುಕುವ
ಬದುಕನ್ನು ಬದುಕಿನುದ್ದಕ್ಕೂ ಬದುಕಿಸುತ್ತದೆ
ಅರ್ಥಾತ್ ವಿಚಿತ್ರವೆನಿಸಬಹುದು...!!
ಹೆಸರೇ ತಿಳಿಸುವ ಹಾಗೆ ಬದುಕುವ
ನೀರ್ಕಾಗೆಗಳು ಇಡುವ ಮೊಟ್ಟೆಗಳು
ಮಳೆಯ ನೀರಿನೊಂದಿಗೆ ಮರಿಗಳಾಗಿಬಿಡುತ್ತದೆ...!!!
-
ನಿರೀಕ್ಷೆಯೊಂದಿಗೆ ಆರಂಭವಾಗುವ
ಮುಂಜಾವುಗಳು...
ಅನಿರೀಕ್ಷಿತವಾಗಿ ಇಳಿಸಂಜೆಯೊಂದಿಗೆ
ಕದನಕ್ಕೆ ನಿಂತುಬಿಡುತ್ತದೆ...!!!
-
ಬದುಕಿನುದ್ದಕ್ಕೂ ಕಣ್ಣಾಮುಚ್ಚಾಲೆ
ಆಡಬಯಸುವ ನೋವು ನಲಿವುಗಳ ಪೈಕಿ
ನೋವಿನ ಕಣ್ಣಿಗೆ ಬಟ್ಟೆ ಕಟ್ಟುವ ನಾವುಗಳು
ನಲಿವನ್ನು ಹುಡುಕತೊಡಗುತ್ತೇವೆ...!!!
-
ಸಾವು
ಸಾವು ಸಾಯಲಿರದವನ
ಸಾಯಿಸುವ ಜೊತೆಗೆ....
ಸತ್ತವನ ಮನೆಯ
ಸ್ಮಶಾನ ಮೌನವಾಗಿ ಬಿಡುತ್ತದೆ...!-
ಪ್ರತಿಭಟನೆಯ ಪ್ರತಿಕೃತಿ
ಪ್ರತೀಕಾರವಾದಾಗ...
ಪರಿಸ್ಥಿತಿ ಮತ್ತು ಮನಸ್ಥಿತಿ
ತದ್ವಿರುದ್ಧ ದಿಕ್ಕಿನೆಡೆಗೆ...
ಒಂದೇ ಸಮಯದಲ್ಲಿ
ಚಲಿಸಲಾರಂಭಿಸುತ್ತದೆ...!-
ವೇದನೆಯಲ್ಲಿ ಅಡಗಿರುವ "ವೇದ" ಕ್ಕಿಂತ...
ನಿವೇದನೆಯಲ್ಲಿ ಅವಿತಿರುವ "ವೇದ" ವಿಭಿನ್ನ...!-
ಪದಗಳಿಗೆ ಸಿಗದ ಗುಣದವಳು
ಬರೆಯಲಿ ನಾ ಹೇಗೆ ಇತಿಹಾಸ...!
(ಎಕ್ಸ್ ಕ್ಯೂಸ್ ಮೀ)
HAPPY MOTHER'S DAY-