Mahadeva Patil  
30 Followers · 37 Following

Joined 22 July 2017


Joined 22 July 2017
27 SEP 2023 AT 10:31

ಬಿಡದ ಚಳಿ
ಬೆಚ್ಚನೆಯ ಉಸಿರು
ನಿನ್ನ‌ ನೆನಪು
ಮಹಾದೇವ ಎಸ್. ಪಾಟೀಲ

-


23 AUG 2023 AT 9:14

ಇಲ್ಲಿ ಯಾರಿಗೂ
ಯಾರಿಲ್ಲ; ನಿನ್ನಂತೆಯೇ
ನಾನು ಅನಾಥೆ!

ಮಹಾದೇವ ಎಸ್.ಪಾಟೀಲ
ರಾಯಚೂರು

-


23 AUG 2023 AT 6:26

ನನ್ನೆದೆಯಲಿ
ಅನುರಾಗ ಮೂಡಲು
ಕಾರಣ ನೀನೆ!

-


18 AUG 2023 AT 18:38

ಕತ್ತಲಿಗೆ
ಬೆಳಕು ಸೃಷ್ಟಿಸುವ
ಬೆಳಕಿಗೆ
ಕತ್ತಲು ಸೃಷ್ಟಿಸುವ
ಬಂಧಾನುಬಂಧವಿದೆ.

-


6 DEC 2021 AT 20:23

ಹಾಡ ಹಾಡಿ ಬಿಡೋಣವೆಂದರೆ ದನಿಯೇ ಬರುತ್ತಿಲ್ಲ
ಕೂಡಿ ಬಾಳೋಣವೆಂದರೆ ಪ್ರೀತಿಯೇ ಕಾಣುತ್ತಿಲ್ಲ.

-


6 DEC 2021 AT 20:18

ಯುದ್ಧ ನಡೆಯುವಾಗ ಒಂದು ಕ್ಷಣ ಬುದ್ಧನಾಗಿಬಿಡು
ಮೌನದಿಂದಲೇ ಜಗದ ಯುದ್ಧವನ್ನು ಗೆಲ್ಲಬಹುದು.

-


6 DEC 2021 AT 20:15

ಕಾನೂನುಗಳು ಸಡಲಿಕೆಯಾಗುತ್ತಿವೆ ಮಹಾದೇವ
ಹೀಗಾಗಿ ಕತ್ತಲ ಮನೆಯ ಬಗ್ಗೆ ಯಾರಿಗೂ ಭಯವಿಲ್ಲ.

-


6 DEC 2021 AT 20:12

ಈ ರಾತ್ರಿ ಬೆಳದಿಂಗಳು ಬಸುರಿಯಾಗಿದೆ ಮಹಾದೇವ
ಈ ವರ್ಷದ ಕೊನೆಯ ಗ್ರಹಣದ ಸಂಕೋಲೆಯಿಂದ

-


6 DEC 2021 AT 20:09

ಬಿರುಗಾಳಿಗೆ ಬದುಕಿನ ದೀಪವು ಆರಬಹುದು
ಕತ್ತಲಾದ ಮೇಲೆ ಕಾರುಣ್ಯದ ದೀಪ ಹಚ್ಚಿಬಿಡು
ಮಹಾದೇವ

-


6 DEC 2021 AT 20:05

ಮೌನದ ಹಾಡಿಗೆ ಗುನುಗಿದರೇನು ಬಂತು ಲಾಭ
ಹಾಡಿದ ಸ್ವರಗಳು ನರಗಳ ತಂತಿ ಮೀಟಬೇಕು
ಮಹಾದೇವ

-


Fetching Mahadeva Patil Quotes