ಜೊತೆ ಜೊತೆಯಲ್ಲಿ ಕ್ಷಣ ಕ್ಷಣಕ್ಕೂ ಜೊತೆಯಾಗಿ ಅಲೆಯುವ ಅಲೆಗಳು ನಾವು
ಇದ್ದಕಿದ್ದ ಹಾಗೆ ಒಮ್ಮೆಲೆ ಇಬ್ಬರು ಅಪ್ಪಳಿಸಿ ದಡಕ್ಕೆ
ಮರೆಯಾದೆ ನೀನು ಕರಗಿ ದಡದಿ ತಟಸ್ಥವಾದೆ ಧ್ರಢವಾದೆ
ನೀ ಹಿಂತಿರುಗಿ ಬರದೆ ಕಾಯ್ದು ನಿಂತೆ ನಾ ಅಂತರದಿ
ನಿಲುಗಡೆಗೆ ಸ್ಥಳವಿಲ್ಲ ಕಾಯಲು ಸಮಯವಂತೂ ಇಲ್ಲ ಕಾರಣ ಅನಂತ ಸೆಳೆತ ಬರದೆ ಮುಳುಗಲು ಇಲ್ಲದ ಅಳೆತ
ಒಳಗಡೆ ಹೋಗಿ ಹಿಂತಿರುಗಿ ಬಂದು ಮತ್ತೆ ಕಾಯುವ ಆಸೆ
ಅಡೆ ತಡೆಯ ತೊರೆದು ಬಂದು ಮತ್ತೆ ನಿಂತರೂ ನೀ ಸಿಗದೆ ಕಾಣದೆ ಮುನ್ಸೂಚನೆಯ ನಿರಾಸೆ
ಸುತ್ತುವರೆದು ಸುತ್ತಳತೆಯ ಅಳೆದು ಅಳಿಸಿ ನಿನ್ನ ಸೇರಲೇ...?
ತೀವ್ರವಾಗಿ ಬಂದು ಅಪ್ಪಳಿಸಿ ಸೇರಿಸದಿದ್ದರೂ ಕೈ ಮುಗಿದು ದಡಕ್ಕೆ ವಿನಂತಿಸಿ ಸೇರಲೆ...?
ಇಲ್ಲವೇ ಪ್ರತಿ ದಿನ ಬಂದು ಅಪ್ಪಳಿಸಿ ನಿನ್ನ ಪಾದವ ತೊಳೆ ತೊಳೆದು ನಿನ್ನ ಸಾನಿಧ್ಯವ ಸಮೀಪಿಸಿ ಸಾಂಗತ್ಯವ ಬಿಡದೇ ಋಣವ ತೀರಿಸುವ ಚಿರರುಣಿಯಾಗಲೆ...?
ಹೇಳು ನೀ ಕಾರಣ...!
ನಾ ಅದರ ಪರಿಣಾಮ..!-
ಕನಸುಗಳ ಕಡಲಲ್ಲಿ ಈಜುತಿಹೆನು,
ಕಾಣದ ದೇವರ ಹುಡುಕದೆ ಅಂತರಂಗದಲ್ಲಿ ಆರಾಧ... read more
"ಬರಹಗಾರ"
ಹೇಳಬೇಕಾದ್ದನ್ನು ಹೇಳಲು ಸಾಧ್ಯವಾಗದೇ ಇರುವ ವಿಫಲತೆಯ ಮೂರ್ತಿ
"ಬರಹಗಳು"
ಹೇಳಲು ಇಚ್ಛಿಸದ ವಿಷಯ ಅಚ್ಚಳಿಯದೆ ಹಾಗೇ ಉಳಿದ ಸಾವಿರ ಕವಿತೆಗಳು ಅವನ ವಿಫಲತೆಗೆ ಸಾಕ್ಷಿಗಳು
-
ಗಾಯವಾದ ರಾಶಿ ರಾಶಿ ಅರ್ಧ ಸುಳ್ಳು ಅರ್ಧ ಸತ್ಯ
ಬೆನ್ನಲೊಂದು ಗಾಯ ಈ ಗಾಯ
ಬುದ್ಧಿ ಬೀಸಿದೆ ಸಹಾಯ
ಇದ್ದು ಇರದ ದಾರಿ ದಾರಿ ಕಾಣದೆ ಪರಾರಿ
ಪ್ರತಿ ಪುಟಕ್ಕೂ ನೆರಳೊಂದೆ ಆಧಾರ
ಮೆದುಳೆಂಬ ಕುಲುಮೆಲಿ ಕುದಿಯೋದೆ ನಿರ್ಧಾರ
ಆದಿಗೂ ಅಂತ್ಯಕ್ಕೂ ನಡುವಲ್ಲೆ ಅಡಗಿತ್ತು ಬೆಳಕೆಂಬ ಇರುಳಲ್ಲಿ ಸುಳ್ಳೆನ್ನೋ ಆಚಾರ
ನಿಗೂಢ-
ಗಾಯವಾದ ರಾಶಿ ರಾಶಿ ಅರ್ಧ ಸುಳ್ಳು ಅರ್ಧ ಸತ್ಯ
ಬೆನ್ನಲೊಂದು ಗಾಯ ಈ ಗಾಯ
ಬುದ್ಧಿ ಬೀಸಿದೆ ಸಹಾಯ
ಇದ್ದು ಇರದ ದಾರಿ ದಾರಿ ಕಾಣದೆ ಪರಾರಿ
ಪ್ರತಿ ಪುಟಕ್ಕೂ ನೆರಳೊಂದೆ ಆಧಾರ
ಮೆದುಳೆಂಬ ಕುಲುಮೆಲಿ ಕುದಿಯೋದೆ ನಿರ್ಧಾರ
ಆದಿಗೂ ಅಂತ್ಯಕ್ಕೂ ನಡುವಲ್ಲೆ ಅಡಗಿತ್ತು ಬೆಳಕೆಂಬ ಇರುಳಲ್ಲಿ ಸುಳ್ಳೆನ್ನೋ ಆಚಾರ
ನಿಗೂಢ-
ಕೀಲಿ ಕೊಟ್ಟ ಗೊಂಬೆಯಂತೆ ಈ ಭೂಮಿ
ಮಜ ನೋಡುತಿರುವ ಬೇನಾಮಿ
ಬೇಲಿ ಹಾರಿ ಹೊರಟ ಮೆರವಣಿಗೆ
ನಕಾಶೆ ಇರದ ಅಸಾಮಿ
ಕತ್ತಲಾಚೆ ಏನಿದೆ ತಿಳಿಯದೆ ನುಗ್ಗುವ ಈ ತಯಾರಿ
ಬೆಳಕು ನೋಡುವ ಭರದಲಿ ಹಿಂತಿರುಗಿ ನೋಡದ ಸವಾರಿ
ಅಲೆಮಾರಿಯೇ.......-
ತಿರುವಿನ ತುದಿಯಲಿ ತಿಳಿಯದಾ ಸುಳಿಯಿದೆ
ಬಿರುಸಿನಾ ಬದುಕಿಗೆ ನೆಲೆಸದಾ ಬೆಲೆಯಿದೆ
ಬಾಳು ಒಂದು ಖಾಲಿ ಸಂತೆ
ಇಲ್ಲಿ ನಮ್ಮ ಉಳಿವು ಭ್ರಮೆಯಂತೆ
ನಿನ್ನಲ್ಲಿರೋ ಉತ್ತರ ಇನ್ನೇಲ್ಲಿಯೋ ನೀ ಬೇಡುತಾ
ತಿರುಗಿದೆ ವಿಳಾಸವಿಲ್ಲದೆ....
ಅಲೆಮಾರಿಯೇ.......-
ಈ ಬದುಕಿನ ತರ ಬದುಕೋಕೆ ನಮಗೆ ಆಗಲ್ಲಾ
ಈ
ಬದುಕಿಗೆ ನಮ್ಮ ತರಹ ಬದುಕೋಕೆ ಬರಲ್ಲಾ
ಅದರಲ್ಲೂ ಬದುಕಿಗೆ ಬದುಕು ಅಂದ್ರೆ ಏನು ಅಂತಾನೆ ತಿಳಿದಿಲ್ಲಾ
ಈ ತಿಳಿದೇ ಇರೋ
ಬದುಕಲ್ಲಿ ತಿಳಿಯದೇ
ಬದುಕ್ತಾ ಇರೋ ಈ ಜನಗಳ ನಡುವೆ
ಬದುಕ್ತಾ ಇರೋ ನಮ್ಮ
ಬದುಕು ಯಾರಿಗೂ ಅರ್ಥ ಆಗಲ್ಲಾ-
ಒಳಗೊಳಗೆ ಬೇರುಕೊಯ್ದು
ಲೋಕದೆದುರಲ್ಲಿ ನೀರು ಹೊಯ್ದು
ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ
ಗೊತ್ತಿಲ್ಲದಂತೆ ನಟಿಸಿ
ಚಕಾರವೆತ್ತದೆ
ಬಾಳ ತಳ್ಳುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.
-