ಕನಸಲಿ ನಿನ್ನ ಕಂಡ ಕ್ಷಣವು
ಮಾಯದಂತೆ ಮೂಡಿದೆ.
ಬಿಸಿಲಿಗೆ ಕರಗೋ ಮೊಡವೊಂದು
ಕಡಲ ದಾಟಿ ಸಾಗಿದೆ.
ಕನಸನ್ನು ಮರೆಯುತಲಿ,
ಮನಸನ್ನು ತಡೆಯುತಲಿ,
ಹೊಸದಾಗಿ ಬದುಕಲ್ಲಿ
ನಗಬೇಕಾ ನೋವಿನಲಿ?
ಬದಲಾಗುವಾ ಘಳಿಗೆ
ಬಂದತಿದೆ ಬಳಿಗೆ-
Looser Shree
(ಶ್ರೀ)
48 Followers · 36 Following
Joined 3 April 2018
1 FEB 2021 AT 22:50
1 FEB 2021 AT 22:49
ಕನಸಲಿ ನಿನ್ನ ಕಂಡ ಕ್ಷಣವು
ಮಾಯದಂತೆ ಮೂಡಿದೆ.
ಬಿಸಿಲಿಗೆ ಕರಗೋ ಮೊಡವೊಂದು
ಕಡಲ ದಾಟಿ ಸಾಗಿದೆ.
ಕನಸನ್ನು ಮರೆಯುತಲಿ,
ಮನಸನ್ನು ತಡೆಯುತಲಿ,
ಹೊಸದಾಗಿ ಬದುಕಲ್ಲಿ
ನಗಬೇಕಾ ನೋವಿನಲಿ?
ಬದಲಾಗುವಾ ಘಳಿಗೆ
ಬಂದತಿದೆ ಬಳಿಗೆ-
20 SEP 2020 AT 23:20
ಅಗಲಿಕೆ ಅನಿವಾರ್ಯ ಎಂಬ ಸಿದ್ಧಾಂತವಿದ್ದರೂ ಕೂಡ,
ಜಾರುವ ಕಣ್ಣೀರಿಗೆ ಕಟ್ಟೆ ಕಟ್ಟಲಾದೀತೇ!!!
ಇದ್ದಾಗ ಇರದಿರುವ ಯೋಚನೆಗಳು ಬರುವಾಗ,
ಈಗುಳಿದಿರುವ ನೆನಪಿಗೆ ಬೆಲೆ ಕಟ್ಟಲಾದೀತೇ!!?
-
3 SEP 2020 AT 8:08
ಮುಂದೆಂದೋ ಒಂದು ದಿನ,
ಕಾಲಚಕ್ರ ಬಹಳಷ್ಟು ಮುಂದುರುಳಿದಾಗ,
ಪ್ರಶ್ನೆಗಳಿಗೆಲ್ಲಾ ಉತ್ತರವು ದೊರೆತಾಗ,
ಸತ್ಯವನ್ನು ಎದುರಿಸುವ ಧೈರ್ಯ ದೊರೆತಾಗ,
ನನ್ನೊಲವು ನಿಜವೆಂದು ನಿನಗನಿಸಿದಾಗ,
ಮತ್ತೊಮ್ಮೆ ಯೋಚಿಸದೆ ಹಿಂತಿರುಗಿ ನೋಡು ಸಖಿ !
ನಿನ್ನವನು ನಿನಗಾಗಿ ಕಾಯುತ್ತಿರಬಹುದು,
ನೀನು ತೊರೆದಾಗ ಅವನಲಿದ್ದ ಅದೇ ಪ್ರೀತಿಯೊಂದಿಗೆ,
ಅದೇ ಅಕ್ಕರೆಯೊಂದಿಗೆ,
ಅದೇ ವಿಶ್ವಾಸದೊಂದಿಗೆ,
ಅದೇ ಗೌರವದೊಂದಿಗೆ...!!-