ಶ್ರಾವಣಿ,
ವಾರೇನೋಟ ಬೀರಿ ಮನಸೆಳೆಯುವ ನವತರುಣಿ,
ಮುಂಗೋಪದಲ್ಲೇ ಸಿಹಿ ಮಾತನಾಡುವ ಕಣ್ಮಣಿ,
ಮನದಲಿ ಸಾವಿರಾರು ಯೋಚನೆ ಮುಖದಲಿ ಮಂದಹಾಸ,
ಏನೋ ಒಂದು ಮೂನ್ಸಚನೆ ಮನಸೋತು ನಾ ಬಯಸಿದೆ ನಿಮ್ಮ ಸಹವಾಸ,
ಸದಾ ನಿಮ್ಮ ಜೊತೆಗಿರುವ ಸಹನಾ ಆದ್ರೂ ಇರಲಿ ನಮ್ಮ ಕಡೆ ಸ್ವಲ್ಪ ಗಮನ😜
ಕಳೆದುಹೋದ ಕ್ಷಣಗಳ ನೆನೆದು ಕೊರಗದಿರಿ ಶ್ರಾವಣಿ, ಮುಂಬರುವ ಸಿಹಿದಿನಗಳ ಖುಷಿಯಾಗಿ ಸ್ವೀಕರಿಸಿ, ನಿಮ್ಮ ಪ್ರೀತಿ ಬಯಸಿ ಬರುವ ಆ ನಿಮ್ಮೊಲವಿನ ಚೋರನಿಗೆ ನೀವೇ ಧರಣಿ😍
-ಸಾಹಿತ್ಯರಾಜ್-
ಪಡಿಕ್ಕಲ್ ತರ ತಾಳ್ಮೆ ಇರಲಿ,
ಆದರೆ ಕೊಹ್ಲಿ ತರ
ಉಗ್ರ ಕೋಪ ಮರಿಬೇಡ
-ಸಾಹಿತ್ಯರಾಜ್-
ಪಡಿಕ್ಕಲ್ ತರ ತಾಳ್ಮೆ ಇರಲಿ,
ಆದರೆ ಕೊಹ್ಲಿ ತರ
ಉಗ್ರಕೋಪ ಮರಿಬೇಡ💪
: ಸಾಹಿತ್ಯರಾಜ್-
"ನೀನಿಲ್ಲದ ಬೆಂಗಳೂರು,
ಕಡಲಿಲ್ಲದ ಮಂಗಳೂರು;
ನನ್ನ ಎದೆಯ ಅಲೆಯನ್ನೇ ಕುಗ್ಗಿಸಿವೆ,
ನೆನಪುಗಳ ಅಲೆದಾಟ ಹೆಚ್ಚಿಸಿವೆ;
ಬಂದು ಸೇರು ನನ್ನನು ನಿನಗಾಗಿ
ಕಾದಿರುವೆ ನನ್ನೊಡತಿ❤️
-ಮಹಿರಾಜ್-
"ನೆಮ್ಮದಿ ಮನಃಶಾಂತಿಗಿಂತ ದೊಡ್ಡ ಆಸ್ತಿ ಬೇರೊಂದಿಲ್ಲ; ಗಳಿಸುವದಾದರೆ ನೆಮ್ಮದಿಯ ಜೀವನ ಗಳಿಸು."
-ಸಾಹಿತ್ಯರಾಜ್
-
"ಹಣಕ್ಕೆ ಪ್ರಾಮುಖ್ಯತೆ ಕೊಡುವ ಸಂಬಂಧಗಳು ಹೆಣವಾದ್ರೂ ಸರಿ ಹೋಗಲ್ಲ, ಯಾಕಂದ್ರೆ ಹಣವ ನೋಡಿದೊಡೆ ಹೆಣವು ಬಾಯಿ ಬಿಡುವದಯ್ಯ."
-ಸಾಹಿತ್ಯರಾಜ್-
ಅತಿಯಾದ ಅನುಮಾನ;
ಪವಿತ್ರ ಸಂಬಂಧದ ಬಿರುಕುಗಳಿಗೆ ವರಮಾನ;
ಕಷ್ಟ ದುಃಖಗಳಿಗಿದೆ ಒಂದಲ್ಲ ಒಂದು ಕೊನೆ;
ಸಂಬಂಧದಲ್ಲಿ ಅನುಮಾನ ಸಾವಿನಲ್ಲಿ ಕೊನೆ;
ಪರಸ್ಪರ ಪ್ರೀತಿ ವಿಶ್ವಾಸವಿದ್ದರೆ ಅದೇ ಸ್ವರ್ಗಮನೆ:
-ಸಾಹಿತ್ಯರಾಜ್
-
"ಹೆಂಡತಿ ದೂರವಾಣಿ ಕರೆ ಮಾಡಿದಾಗ ಎಲ್ಲಿದೀರಾ ಅಂತ ಕೇಳ್ತಾರೆ;
ಆದರೆ ಅದೇ ತಾಯಿ ಕರೆ ಮಾಡಿದಾಗ ಹೇಗಿದಿಯಾ ಅಂತ ಕೇಳ್ತಾರೆ."
ಇಬ್ಬರ ಪ್ರೀತಿ ತುಲನೆ ಮಾಡುತ್ತಿಲ್ಲ, ಅನುಭವದ ಮಾತಷ್ಟೇ
-ಸಾಹಿತ್ಯರಾಜ್-
ಅಲೆಮಾರಿಯಾಗುವಾಸೆ💛❤️
ಎಲ್ಲ ಮರೆತು ಜಗವ ಅರಿಯುತ ನನ್ನ ನಾ ಅರಿತುಕೊಳ್ಳುವಾಸೆ !!
- ಸಾಹಿತ್ಯರಾಜ್-
"ಭಾವನೆಗಳಿಗೆ ಒಳಗಾಗಬೇಡ ಈ ಸ್ವಾರ್ಥ ಲೋಕದಲ್ಲಿ;
ಸಾವಿಗೆ ಅಂಜಿ ಮಾನವಿಯತೆಯನ್ನೇ ಮರೆತಿದ್ದಾರೆ ಕಪಟ ಮನುಜರಿಲ್ಲಿ:
ನಮ್ಮವರು ನೆರೆಹೊರೆಯವರು ಎಂಬ ಮಾತುಗಳಾಗಿವೆ ಇಲ್ಲಿ ಸುಳ್ಳು;
ಕೊರೊನದಿಂದ ಸಾವಿನ ಘಂಟೆ ಬಾರಿಸುತ್ತಿದೇ ಸರಿದಾಗ ಗಡಿಯಾರದ ಸಣ್ಣ ಮುಳ್ಳು:
ಆಸ್ತಿ ಪಾಸ್ತಿ, ನಾನು ನನ್ನದು ಎಂಬ ಅಹಂಕಾರವೆಲ್ಲ ಮಿಥ್ಯ;
ಶುದ್ದ ಮನಸ್ಸಿನಿಂದ ಧ್ಯಾನ ಮಾಡು ಶ್ರೀರಾಮನಾಮವೇ ಸತ್ಯ."
-ಸಾಹಿತ್ಯರಾಜ್-