Laxmikant Nayak  
18 Followers · 7 Following

Joined 20 November 2017


Joined 20 November 2017
1 MAR 2022 AT 11:08

೧೯೮೦ರಲ್ಲಿ ಹುಟ್ಟಿದ ನನಗೆ ನಂತರದ ಐದು ವರ್ಷಗಳಿಂದ ನೆನಪು ಸ್ಪಷ್ಟವಾಗಿದೆ.ತೊಡಲು ಬಟ್ಟೆ ಇರಲಿಲ್ಲ ನಮಗೆ.ನಮ್ಮ ಜನಾಂಗಕ್ಕೆ ಅಕ್ಷರವೂ ಇರಲಿಲ್ಲ.ಕೂಲಿನಾಲಿ ಮಾಡಲು ಹೋಗುವ ತಂದೆತಾಯಿಗಳು ಮಕ್ಕಳು ತಮಗೆ ಮೂಲವಾಗಬಾರದು ಎಂದು ಸರ್ಕಾರಿ ಶಾಲೆಯಲ್ಲಿ ಕೂಡಿಸಿ ಹೋಗುತ್ತಿದ್ದರು,ಅದರ ಪರಿಣಾಮವೇ ಈ ನಾಲ್ಕಕ್ಷರ.ಆಗ ಜಾತೀಯತೆ ಎಷ್ಟು ಇತ್ತು ಎಂದರೆ ಮೇಲ್ವರ್ಗದ ಶಿಕ್ಷಕರು ನಮ್ಮನ್ನು ಉದ್ದ ಕೋಲಿನಿಂದ ಹೊಡೆಯುತ್ತಿದ್ದರು.ಕಾಟಿಗರು ಎಂದು ಕರೆಯಿಸಿಕೊಳ್ಳುತ್ತಿದ್ದ ನಾವು ಕೀಳರಿಮೆಯಲ್ಲೇ ಹುಟ್ಟಿ ಕೀಳರಿಮೆಯಲ್ಲೇ ಬೆಳೆದು ಕೀಳರಿಮೆಯಲ್ಲೇ ಬದುಕುತ್ತಿದ್ದೇವೆ.ಒಬ್ಬ ಕಾಟಿಗ ಎಷ್ಟೇ ಬುದ್ದಿವಂತನಿದ್ದರೂ ಆತ ಸಮಾಜದ ಮುಖ್ಯವಾಹಿನಿಗೆ ಬರುವುದಿಲ್ಲ.ಕಾಟಿಗರಲ್ಲಿ ಶತಶತಮಾನದ ಹಸಿವು ಇರುವುದರಿಂದ ವಿಪರೀತವಾದ ಸ್ವಾರ್ಥಿಗಳಾಗಿದ್ದಾರೆ.ತಾವು ಬೆಳೆಯುವುದಿಲ್ಲ ತಮ್ಮ ನೆರೆ ಮನೆಯ ಕಾಟಿಗನನ್ನೂ ಬೆಳೆಸುವುದಿಲ್ಲ.ಕಾಟಿಗ ಎಂದರೆ ಕೀಳು ಕುಲದವನು ಮಾಂಸ ಮಡ್ಡಿ ತಿನ್ನುವವನು ಎಂದರ್ಥ.ಕೆಲ ಕಡೆ ಇವರನ್ನು ಕರಿ ಮಂದಿ ಅಂತಾನೂ ಕರೆಯುತ್ತಾರೆ.ಈಗ ಬಿಡಿ,ಕರಿ ಮಂದಿ ಬಿಳಿ ಮಂದಿಯಾಗಿದ್ದಾರೆ.

-


23 FEB 2022 AT 15:58

ಈ ಹಾದರ ಮಾಡುವುದನ್ನು ಆ ಆ ಧರ್ಮಗಳು ತಪ್ಪಿಸಬೇಕು.ತಮ್ಮ ಸಂಗಾತಿಯೊಂದಿಗೆ ಲೈಂಗಿಕ ತೃಪ್ತಿ ಸಾಧ್ಯವಾಗದ ಸಂದರ್ಭದಲ್ಲಿ ಬಿಡುಗಡೆಗೆ ಮುಕ್ತ ಅವಕಾಶ ಒದಗಿಸಬೇಕು.ಇದಕ್ಕೂ ಮುನ್ನ ಸ್ತ್ರೀಯರಿಗೆ ಈ ದೇಶದಲ್ಲಿ ಭದ್ರತೆಯ ಭಾವನೆಯನ್ನು ಒದಗಿಸಬೇಕು.ಈ ದೇಶಕ್ಕೆ ಶಿಕ್ಷಣದ ಅಗತ್ಯವಿದೆ,ಶಿಕ್ಷಣ ಎಂದರೆ ವೈಚಾರಿಕ ಶಿಕ್ಷಣ.ಲೈಂಗಿಕ ಅತೃಪ್ತಿ ಹಾದರಕ್ಕೆ ಕಾರಣ.ಲೈಂಗಿಕ ವಿಕೃತಿಯೂ ಹಾದರಕ್ಕೆ ಅತ್ಯಾಚಾರಕ್ಕೆ ಕಾರಣ.ನಾವು ದೇವರನ್ನು ಧರ್ಮವನ್ನು ಮತ್ತು ವೇದ ಪುರಾಣಗಳನ್ನು ನಂಬುವವರಾದರೆ ಅದು ವಿಧಿಸಿದ ಸಾಮಾಜಿಕ ಮೌಲ್ಯಗಳಿಗೂ ಬೆಲೆ ಕೊಡಬೇಕು.ಆದರೆ...

ಅಕ್ಕ ತಂಗಿಯರನ್ನು,ಸಹ ಕುಟುಂಬಗಳ ಸದಸ್ಯರನ್ನು,ಮಿತ್ರರ ಮನೆಗೆ ಕನ್ನ ಹಾಕುವುದನ್ನು ಈ ದೇಶದ ಅನೇಕ ಜನ ದೈವ ಸಾಕ್ಷಿಯಾಗಿ ಮಾಡುತ್ತಿದ್ದಾರೆ.ಇದನ್ನು ಕಲಿಸಿದ ಧರ್ಮ ಯಾವುದು?ಹೆಣ್ಣಿನ ದಾರುಣ ಬದುಕಿನ ಕುರಿತು ಯಾರು ಏಕೆ ಯೋಚಿಸುತ್ತಿಲ್ಲ?

-


23 FEB 2022 AT 15:46

ಬಹಳ ಚೆಂದ ಮಾತಾಡುತ್ತಾಳೆ ಆ ಶಿವಮೊಗ್ಗದ ಕೊಲೆಯಾದ ಹುಡುಗನ ಅಕ್ಕ.ಹೀಗೆ ಮಾಡಬೇಡಿ,ಹೀಗೆ ಮಾಡಿದರೆ ನನ್ನ ತಮ್ಮನಂತೆ ಬೀದಿ ಹೆಣವಾಗುತ್ತೀರಿ ಎಂದು!ಆಕೆಯ ಮಾತಿನಲ್ಲಿ ದುಃಖವಿಲ್ಲ.ಆದರೆ ಆಕೆಯ ಮಾತು ವೈರುದ್ಧ್ಯವನ್ನು ಸೃಷ್ಟಿಸುತ್ತದೆ.ದ್ವಂದ್ವನ್ನು ಸೃಷ್ಟಿಸುತ್ತದೆ.ಈಗ ಹಿಂದೂ ಯುವಕರು ಧರ್ಮ ರಕ್ಷಣೆಗಾಗಿ ಹೋರಾಡಬೇಕಾ ಬಿಡಬೇಕಾ ಎನ್ನುವುದನ್ನು ಆಕೆ ಸ್ಪಷ್ಟವಾಗಿ ಹೇಳುತ್ತಿಲ್ಲ.ಆಕೆ ಬೇಡ ಎನ್ನುತ್ತಾಳೆ.ಆದರೆ ಕರ್ನಾಟಕದ ಬಲಪಂಥೀಯ ನಿಲುವುಗಳ ಜನ ಆ ಮನೆಗೆ ದಟ್ಟಂಡಿ ದಾರುಂಡಿ ಇಡುತ್ತಿದೆ.ಮಾತಿನ ಮೂಲಕ ಬದುಕು ಕಟ್ಟಿಕೊಂಡ ಆ ಚಕ್ರವರ್ತಿ ಸೂಲಿಬೆಲೆ ಎಂಬುವವನು ಮಾತಾಡುತ್ತಾ ಮಾತಾಡುತ್ತಾ ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕಾ ಎಂದು ಹೇಳಿಕೆ ಕೊಡುತ್ತಾನೆ.ಅಂದರೆ ಇವನು ಶಸ್ತ್ರಾಸ್ತ್ರ ಗಳನ್ನು ಉದ್ರಿಕ್ತ ಯುವಕರ ಕೈಗೆ ಕೊಡುವ ಮೂಲಕ ಈ ದೇಶದ ಕಾನೂನನ್ನು ನಾಶ ಮಾಡುವ ಮಾತಾಡುತ್ತಾನೆ.ಇವನ ಮಾತನ್ನು ಈ ಇಪ್ಪತ್ತು ಮೂವತ್ತು ವರ್ಷ ವಯಸ್ಸಿನ ಯುವಕರು ಗಂಭೀರವಾಗಿ ಪರಿಗಣಿಸಿದರೆ ಇಡೀ ಕರ್ನಾಟಕ ಕುರುಕ್ಷೇತ್ರವಾಗಿ ಬದಲಾಗುತ್ತದೆ.ಹೆಣಗಳನ್ನು ನಾಯಿ ನರಿಗಳು ತಿನ್ನಲ್ಪಡುತ್ತವೆ.(ಮೊದಲು ಪ್ರಾಣಿಯೊಂದರ ಹೆಣ ಊರಾಚೆ ಬಿದ್ದಾಗ ಹದ್ದುಗಳು ಬರುತ್ತಿದ್ದವು,ಅವೀಗ ಬರುತ್ತಿಲ್ಲ.ನರಿಗಳೂ ಈ ಬರುವುದಿಲ್ಲ.ಮನುಷ್ಯ ಶವ ಎಂದರೆ ಆ ಶವವನ್ನು ನಾಯಿಯೂ ಮುಟ್ಟುವುದಿಲ್ಲ.ನಾಯಿಗೆ ಮನುಷ್ಯನೆಂಬ ಪ್ರಾಣಿಯ ಬಗ್ಗೆ ಭಯ.ರಾಜಕಾರಣಿಗಳು,ಪ್ರಚಾರ ಪ್ರಿಯರು ತಿನ್ನುತ್ತಾರೆ!)

-


23 FEB 2022 AT 15:44

ನೀವು ವಿಧಾನಸೌಧದಲ್ಲಿ ಮಾತ್ರ ವಿರೋಧ ಪಕ್ಷ ವಿರೋಧ ಪಕ್ಷದ ನಾಯಕ ಮತ್ತವನ ಘರ್ಷಣೆಯನ್ನು ಅರಚುವಿಕೆಯನ್ನು ಕಾಣಬಲ್ಲಿರಿ.ಸ್ಥಳೀಯವಾಗಿ ಅಂದರೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಈ ಸೂಳೆಮಕ್ಕಳು ಸಮಾನವಾಗಿಯೇ ಹೇಲನ್ನು ಮೇಯುತ್ತಾರೆ!ಆದರೆ ಒಂದಂತೂ ಸತ್ಯ:ಗ್ರಾಮ ಪಂಚಾಯತಿಗಳು ಅಪ್ಪಟ ವಿಧಾನಸೌಧ,ಅಲ್ಲಿ ಆ ಪಕ್ಷ ಈ ಪಕ್ಷ ಎಂದು ಜನ ಕಿತ್ತಾಡುತ್ತಾ ಸಾಯುತ್ತಾರೆ.ಈಗ ಆಡಳಿತ ಪಕ್ಷವು ಅಧಿಕಾರವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಭ್ರಷ್ಟಾಚಾರ ನಡೆಸುವಾಗ ಅದನ್ನು ಬಯಲು ಮಾಡುವವರು,ಅದರ ವಿರುದ್ಧ ಹೋರಾಡಬೇಕಿರುವವರು ಯಾರು?ವಿರೋಧ ಪಕ್ಷದ ನಾಯಕರುಗಳು ತಾನೇ?ಆದರೆ ಇಡೀ ಕರ್ನಾಟಕವನ್ನು ಗಮನಿಸಿ ನೋಡಿ:ಸಾಮಾನ್ಯ ಜನರು ಧ್ವನಿ ಎತ್ತುತ್ತಿದ್ದಾರೆ.ಈ ಮಕ್ಕಳು ಮೇಯುತ್ತಿದ್ದಾರೆ!

-


20 FEB 2022 AT 18:56

ಪತ್ರಕರ್ತನನ್ನು ಸೃಷ್ಟಿಸಲಾಗುವುದಿಲ್ಲ ಎನ್ನುವ ಮಾತೊಂದಿದೆ.ಆತ ಹುಟ್ಟುತ್ತಲೇ ಪತ್ರಕರ್ತ.ಆದರೆ ಆಡಳಿತ ವ್ಯವಸ್ಥೆ ಅದಕ್ಕಾಗಿ ಕೆಲವು ಮಾನದಂಡಗಳನ್ನು ಹಾಕಿದೆ.ಇದುವರೆಗೆ ಪತ್ರಿಕೆಯ ಶೀರ್ಷಿಕೆ ದೃಢೀಕರಣಗೊಂಡಿತ್ತು,ಅದೀಗ ನೋಂದಣಿಯಾಗಿದೆ.ನಾನೀಗ ಪೂರ್ಣ ಪ್ರಮಾಣದ ಸಂಪಾದಕ,ಪ್ರಕಾಶಕ,ಮುದ್ರಕ.ಆದಾಗಿಯೂ ನಾನು ವರದಿಗಾರ,ಲೇಖಕ,ಪತ್ರಕರ್ತ.ನಾನು ಪತ್ರಿಕೋದ್ಯಮವನ್ನು ಅಧಿಕೃತವಾಗಿ ಓದಿಕೊಂಡಿಲ್ಲ,ಆದರೆ ಇದಕ್ಕೆ ಸಂಬಂಧಿಸಿದ ಎಲ್ಲವನ್ನೂ ಅಧ್ಯಯನ ಮಾಡಿದ್ದೇನೆ.ಖಾಸಗಿಯಾಗಿ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಎಲ್ಲಾ ಸಿಲಬಸ್‌ಗಳನ್ನು ನನ್ನ ಸಮ್ಮಿತ್ರ ವಿಧ್ಯಾರ್ಥಿಗಳು ಅಭಿಮಾನಕ್ಕಾಗಿ ಒದಗಿಸಿದ್ದಾರೆ.ನೋಂದಣಿಗಾಗಿ ದಾರಿ ಕಾಯುತ್ತಿದ್ದೆ,ಅದೀಗ ಲಭ್ಯ.ಪತ್ರಿಕೆಯನ್ನು ನಿಯಮಿತವಾಗಿ ಮುದ್ರಿಸಲಿದ್ದೇನೆ.ಇದಕ್ಕಾಗಿ ಚಂದಾದರರ ಅಗತ್ಯವಿದೆ,ಕನಿಷ್ಠ ಸಾವಿರ ಸಂಖ್ಯೆಯಲ್ಲಿ.ನೀವು ನೀಡುವ ಹತ್ತು ರೂಪಾಯಿಗಳಿಗೆ ಉತ್ತಮ ಮಾಹಿತಿ ನೀಡುವ ಜವಬ್ದಾರಿ ನನ್ನದು.ಪತ್ರಿಕೆಯನ್ನು ಮನೆಗೆ ತರಿಸಿಕೊಳ್ಳಬಯಸುವವರು ದಯವಿಟ್ಟು ಈ ನಂಬರಿಗೆ ನಿಮ್ಮ ವಿಳಾಸವನ್ನು ಸಂಪರ್ಕ ಸಂಖ್ಯೆಯನ್ನು ಕಳುಹಿಸಿ.ನೀವೇ ಪತ್ರಿಕೆಯ ಮಾಲೀಕರು,ಅದು ನಿಮ್ಮ ಇಷ್ಟದಂತೆಯೇ ಪ್ರಕಟವಾಗುತ್ತದೆ. 9448388064 ಇದು ವಾಟ್ಸಪ್ ನಂಬರ್..ಸಂಪರ್ಕಿಸಿ...

-


18 FEB 2022 AT 17:52

ಅಕ್ಕಿನೇನಿ ನಾಗಾರ್ಜುನ ನಿರ್ಮಿಸಿದ ಬಂಗಾರ್ರಾಜು ಎನ್ನುವ ಸಿನೆಮಾದಲ್ಲಿ ನಾಗಲಕ್ಷ್ಮೀ ಎನ್ನುವ ಪಾತ್ರವಿದೆ.ಪ್ರಸ್ತುತ ಆತ್ಮರತಿಯ ಲೌಕಿಕ ಜನಗಳನ್ನು ಗಮನಿಸಿಯೇ ಆ ಪಾತ್ರವನ್ನು ಸೃಷ್ಟಿಸಿರಬಹುದು.ಆಕೆಗೆ ರಾಜಕೀಯದ ಹುಚ್ಚು,ಖ್ಯಾತಿಯ ಹುಚ್ಚು.ಇದಕ್ಕಾಗಿ ಫೇಸ್‌ಬುಕ್‌ ವಾಟ್ಸಪ್,ಇನಟ್ರಾಗ್ರಾಂಗಳನ್ನು ಆಶ್ರಯಿಸುವ ಈ ನಾಯಕಿ ಸುತ್ತಲೂ ಹತ್ತಾರು ಜನರನ್ನು ಫೋಟೋ ತೆಗೆಯಲು ಮತ್ತವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲು ನೇಮಿಸಿಕೊಂಡಿರುತ್ತಾಳೆ.ಈ ಪಾತ್ರವೂ ತನ್ನ ಬೆನ್ನನ್ನು ತಾನೇ ಶಹಬ್ಬಾಸ್ ಎಂದು ಚಪ್ಪರಿಸಿಕೊಳ್ಳುವ ಗುಣವನ್ನು ಹೊಂದಿದೆ.ಇದಕ್ಕಾಗಿ ಆಕೆ ಸ್ವಂತ ಹಣವನ್ನು ಖರ್ಚು ಮಾಡುತ್ತಾ ಸಮಾಜ ಸೇವೆಯ ನಾಟಕವಾಡುತ್ತಾಳೆ.ತನ್ನನ್ನು ಸರ್‌ಪಂಚ್(ಗ್ರಾಮ ಪಂಚಾಯತಿ ಅಧ್ಯಕ್ಷ)ಎಂದು ಹೇಳುತ್ತಾ ತಿರುಗುತ್ತಾಳೆ.ಪ್ರಸ್ತುತ ದಿನಗಳಲ್ಲಿ ಸಮಾಜ ಸೇವೆ ಎನ್ನುವ ನಾಟಕವೂ ಈ ಮಾದರಿಯಲ್ಲೇ ನಡೆಯುತ್ತಿದೆ.ಫೇಸ್‌ಬುಕ್‌ ವಾಟ್ಸಪ್ ತೆಗೆದರೆ ಸಾಕು,ಬರೀ ಈ ಮಾದರಿಯ ವಿಷಯಗಳು,ಫೋಟೋಗಳಿರುತ್ತವೆ.ಆತ್ಮರತಿ!ಈ ಸಿನೆಮಾವನ್ನು ನೀವೊಮ್ಮೆ ನೋಡಿ.ಅದೀಗ ಜೀಫೈವ್‌ನಲ್ಲಿ ಲಭ್ಯವಿದೆ.

-


18 FEB 2022 AT 9:56

ಏಕೆ ಈ ಅವಿಶ್ರಾಂತತೆ?ಏಕೆ ಈ ನಿರಾಶೆ,ಏಕೆ ಈ ಅಸಂತೃಪ್ತಿ,ಏಕೆ ಮನುಷ್ಯ ಬುದ್ದಿ ಶೂನ್ಯನಾಗುತ್ತಾನೆ,ಏಕೆ ಮನುಷ್ಯ ತನ್ನನ್ನು ತಾನೇ ಕೊಂದುಕೊಳ್ಳಲು ಅವ್ಯಕ್ತವಾಗಿ ದೀಪದ ಹುಳುವಿನಂತೆ ಪ್ರಯತ್ನಿಸುತ್ತಾನೆ?ಆಸೆಯೇ ಇವೆಲ್ಲವಕ್ಕೂ ಕಾರಣ ಎನ್ನುವ ಬುದ್ಧನ ಮಾತಿನ ಮೇಲೆ ವಿಚಾರ ಮಾಡ ಹೊರಟರೆ ಮನುಷ್ಯನೊಬ್ಬ ಸಂಸಾರ ನಿರ್ವಹಣೆ ಮಾಡುವುದು ಹೇಗೆ ಸಾಧ್ಯ?ಪರಸ್ಪರ ನಂಬಿಕೆಗಳು ಮೂಡದಿರುವುದಕ್ಕೆ ಕಾರಣವೇನು?ಮನುಷ್ಯನ ಮನಸ್ಸನ್ನು ನಿಯಂತ್ರಿಸುವ ಮಾನದಂಡಗಳ್ಯಾವು?ಅದೇಕೆ ಇಷ್ಟೊಂದು ದುಷ್ಚಟಗಳನ್ನು ಮನುಷ್ಯನ ಮೇಲೆ ಪ್ರಯೋಗಿಸಲಾಗುತ್ತಿದೆ,ಮನುಷ್ಯನನ್ನು ಆ ಆಡಳಿತ ವ್ಯವಸ್ಥೆ ಏಕೆ ಕಾಡುತ್ತಿದೆ?ಏನಿದು ಧೂಳು ತುಂಬಿದ ಭಾರತ,ಏನಿದು ಮಲಮೂತ್ರಗಳ ಮಧ್ಯೆ ವಾಸಿಸಬೇಕಾದ ಅನಿವಾರ್ಯತೆ?ಪ್ರಶ್ನೆಗಳು ನನ್ನನ್ನು ಹುಚ್ಚನನ್ನಾಗಿಸಿ ಅಂತರ್ಮುಖತೆಗೆ ದೂಡುತ್ತಿವೆ.ಮೆದುಳು ಜೀಂ ಎನ್ನತೊಡಗುತ್ತದೆ.ಏಕಾಕಿತನ ಕ್ರೂರ ಭಯವನ್ನು ಮುಡಿಸುತ್ತದೆ.ಉತ್ತಮ ಸ್ನೇಹಿತರು,ಆತ್ಮಬಂಧುಗಳು ಎಲ್ಲಿದ್ದೀರಿ,ಹೇಗೆ ಹುಡುಕಲಿ ನಿಮ್ಮನ್ನು?

-


16 FEB 2022 AT 15:08

Actually ಈ ಎಲ್ಲಮ್ಮ ಎಂಬಾಕಿ ಜಮದಗ್ನಿ ಮುನಿಯ ಪತ್ನಿ.ಈಕೆಗೆ ಎಂಟು ಜನ ಮಕ್ಕಳು.ಈ ಯಮ್ಮ ಪತಿ ಸೇವೆಯಲ್ಲಿ ಏಕಾಗ್ರತೆಯನ್ನು ಕಳೆದುಕೊಂಡಾಗ ಪತಿಯ ಶಾಪಕ್ಕೆ ಒಳಗಾಗುತ್ತಾಳೆ,ಪತಿ ಕೊಟ್ಟ ಶಾಪದಿಂದ ಮಹಾರೋಗ ಪೀಡಿತಳಾಗಿ ಅಲೆಯುತ್ತಾಳೆ,ಕಾಡು-ಮೇಡು!ನಂತರ ಶಾಪ ವಿಮುಕ್ತಳಾಗಿ ಜಮದಗ್ನಿಯ ಹತ್ತಿರ ಬಂದಾಗ ಕೋಪಿಷ್ಠನಾದ ಆತ ತಿರಸ್ಕರಿಸುತ್ತಾನೆ.ತನ್ನ ಏಳು ಜನ ಮಕ್ಕಳಿಗೆ ಅವಳ ರುಂಡ ಕತ್ತರಿಸುವಂತೆ ಆದೇಶಿಸುತ್ತಾನೆ,ಮಾತೃಭಕ್ತಿಯನ್ನು ಹೊಂದಿರುವ ಅವರು ಅದನ್ನು ತಿರಸ್ಕರಿಸುತ್ತಾರೆ.ಎಂಟನೆಯ ಮಗ ಪರಶುರಾಮನಿರುತ್ತಾನಲ್ಲ?ಅವನು ಪಿತೃಭಕ್ತಿಗೆ ಗೌರವಕೊಟ್ಟು ತಾಯಿಯ ತಲೆ ಕತ್ತರಿಸುತ್ತಾನೆ!ನಂತರ ಅವನು ತಂದೆಯಿಂದ ಪಡೆದ ವರಗಳಿಂದ ತಾಯಿಯನ್ನು ಬದುಕಿಸಿಕೊಂಡ ಎನ್ನುವುದು ಕಥೆ!ಆದರೆ ಈ ಎಲ್ಲಮ್ಮ ಕಜ್ಜಿಗೆ ಕಾರಣ,ಈ ಎಲ್ಲಮ್ಮ ತದ್ದಿಗೆ ಕಾರಣ,ಈ ಎಲ್ಲಮ್ಮ ಚರ್ಮ ರೋಗಗಳಿಗೆ ಕಾರಣ.ಆ ಭಯಗಳನ್ನು ಜನರಲ್ಲಿ ತುಂಬಿ ಈಕೆಯ ಆಚರಣೆ ಮಾಡಲಾಗುತ್ತಿದೆ.ಈ ಸಮಸ್ಯೆಗಳು ಸಾಪಟ್ ಲೋಷನ್,ಕ್ಯಾಂಡಿಡ್ ಬಿ ಔಷಧಿಗಳಿಂದ ಪರಿಹಾರವಾಗುತ್ತವೆ.ಆದರೆ ಈ ಯಮ್ಮನ ಹೆಸರಿನಿಂದ ದೇವದಾಸಿ ಪದ್ಧತಿ ಎಲ್ಲಿಂದ ಆರಂಭವಾಯಿತು?— % &

-


13 FEB 2022 AT 14:26

ಜನ ಆಕ್ರೋಶ ಪತ್ರಿಕೆ ರೋಲ್ಕಾಲ್ ಮಾಡುವುದಿಲ್ಲ.ಈ ಪತ್ರಿಕೆ ಇನ್ನೂ ಯಾರನ್ನೂ ವರದಿಗಾರರನ್ನಾಗಿ ನೇಮಿಸಿಲ್ಲ.ಇರುವ ಎಂಟು ಪುಟಗಳನ್ನು ಬರೆಯಲಿಕ್ಕೆ ನನಗೆ ಎರಡರಿಂದ ಮೂರು ಗಂಟೆಯ ಸಮಯ ಸಾಕು.ನಾನು ನನ್ನ ಮನೆಯಲ್ಲಿಯೇ ಕುಳಿತು ರಾಜ್ಯಾದ್ಯಂತ ವರದಿಗಾರಿಕೆ ಮಾಡುತ್ತೇನೆ,ಮಾಹಿತಿ ಸಂಗ್ರಹಣೆ ನನಗೆ ಕಷ್ಟದ ಕೆಲಸವಲ್ಲ.ಈ ಪತ್ರಿಕೆಯ ಹೆಸರು ಹೇಳಿಕೊಂಡು ರೋಲ್ಕಾಲ್ ಮಾಡುವುದು ಬಹುದೊಡ್ಡ ಅಪರಾಧ.ನನಗೆ ತಿಕ್ಕ ರೇಗಿದರೆ ದೂರುಗಳನ್ನು ನೀಡುತ್ತೇನೆ.ಮತ್ತು ಅಂಥವರ ಜಾತಕವನ್ನು ಬಟಾಬಯಲು ಮಾಡುತ್ತೇನೆ.ಪತ್ರಿಕೆ ಹಿಡಿದುಕೊಂಡು ಸರ್ಕಾರಿ ಕಚೇರಿಗಳಿಗೆ ಯಾರಾದರೂ ಹಣ ಕೇಳಿ ಬಂದರೆ ದಯವಿಟ್ಟು ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿ.ಸಾಧ್ಯವಾದರೆ ಒದೆಯಿರಿ.ನನ್ನ ಪತ್ರಿಕೆಗೆ ವರದಿಗಾರರಿಲ್ಲ.ಉತ್ತಮ ವ್ಯಕ್ತಿಗಳು ಸಿಕ್ಕರೆ ಅವರನ್ನು ಪತ್ರಿಕೆಯಲ್ಲಿ ಘೋಷಿಸುತ್ತೇನೆ.ಸದ್ಯಕ್ಕೆ ಯಾದಗಿರಿ ಜಿಲ್ಲೆಗೆ ಸಾಬಯ್ಯ ಕಲ್ಯಾಣಿ ಅಂತಿದ್ದಾರೆ.ದಯವಿಟ್ಟು ಈ ಪೋಸ್ಟನ್ನು ಹಂಚಿಕೊಳ್ಳುವ ಮೂಲಕ ಮತ್ತು ಕಾಪಿ ಪೇಸ್ಟ್ ಮಾಡುವ ಮೂಲಕ ಭ್ರಷ್ಟ ಪತ್ರಿಕೋದ್ಯಮವನ್ನು ನಿಲ್ಲಿಸಿ.

ಲಕ್ಷ್ಮೀಕಾಂತ ನಾಯಕ— % &

-


10 FEB 2022 AT 20:39

ಮನೆಯಲ್ಲಿ ನಾಲ್ಕು ಜನರಿದ್ದರೆ ಪಾವು ಹೋಳಿಗೆ ಸಾಕು,ಪಾವು ಹೋಳಿಗೆ(ಬೇರೆ ಕಡೆ ಹೊಬ್ಬಟ್ಟು ಎಂದು ಕರೆಯುತ್ತಾರೆ) ಎಂದರೆ ಪಾವು ತೊಗರಿ ಬೇಳೆ,ಅರ್ಧ ಕೆಜಿ ಬೆಲ್ಲ,ಪಾವು ಕಿಲೋ ಮೈದಾ ಹಿಟ್ಟು,ಒಂತಟಕು ಅಡುಗೆ ಎಣ್ಣೆ!ಅದೇ ಕಾಟಿಗ ನೋಡಿ:ಒಂದು ಬ್ಯಾಟಿ ಸುಮಾರು ಹತ್ತು ಸಾವಿರ,ಅರ್ಧ ಕ್ವಿಂಟಾಲ್ ಅಕ್ಕಿ,ಸುಮಾರು ಐದು ಕೆಜಿ ಅಥವಾ ಹತ್ತು ಕೆಜಿ ಅಡುಗೆ ಎಣ್ಣೆ,ಮಸಾಲೆ ಸಾಮಗ್ರಿಗಳು,ದೀಡು ನಮಸ್ಕಾರ,ಜ್ಯೋತಿ ಹೊರುವವರಿಗೆ ಬಟ್ಟೆ,ಕೊನೆಗೆ ಕಟುಕರವನಿಗೂ ಚಾಜ!ಒಟ್ಟು ಮೂವತ್ತರಿಂದ ನಲವತ್ತು ಸಾವಿರ ಹಣ.ಮನೆ ತುಂಬಾ ಎಲುಬು,ಜೀರ್ಣವಾಗದ ಮಾಂಸ ತರುವ ಹೊಟ್ಟೆ ನೋವು,ಕುಡಿತ!ಹೇಗಿದೆ ನೋಡಿ ಬಂಡವಾಳ ಶಾಹಿಗಳ ಮರ್ಮ!ಬ್ಯಾಟಿ ವಿಷಯ ಬಿಡೋಣ.ಈ ಕಾಟಿಗ ಪ್ರತಿ ಹಬ್ಬ,ಪ್ರತಿ ಅಮಾವಾಸ್ಯೆಯ ನಂತರ ಮರುದಿನ ಕರಿ ಅಂತ ಒಂದು ಕಿಲೋ ಮಾಂಸ ತಿನ್ನುತ್ತಾನೆ.ಒಂದು ಕಿಲೋ ಮಾಂಸದ ಅಡುಗೆ ಎಂದರೆ ಒಂದು ಸಾವಿರ ರೂಪಾಯಿ!ಜನಕ್ಕೆ ವೈಚಾರಿಕತೆ ಬೇಕಿಲ್ಲ.ಉತ್ತಮ ಬದುಕು ಬೇಕಿಲ್ಲ.ತುಂಬಾ ಜನ ಸಂವಿಧಾನ ಎನ್ನುತ್ತಾರೆ,ಬಾಬಾ ಸಾಹೇಬರನ್ನು ಸ್ಮರಿಸುತ್ತಾರೆ,ಬುದ್ಧರ ಬಗ್ಗೆ ಮಾತನಾಡುತ್ತಾರೆ.ಆದರೆ ಉತ್ತಮ ಬದುಕೆಂದರೆ ಏನು ಎಂದು ಯೋಚಿಸುವುದಿಲ್ಲ.ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಡು ಸಾಯುವವರೆ ಎಲ್ಲರೂ!ಬಿಳಿ ಮಂದಿಯ ಮಾತಿನ ಹೊರತು ಇಲ್ಲೇನು ನಡೆಯದು‌.ನಾವು ಸ್ವಾವಲಂಬಿಗಳೂ ಅಲ್ಲ.ಸ್ವತಃ ವಿಚಾರಕರೂ ಅಲ್ಲ.(ಈ ಪೋಸ್ಟು ಬಹಳ ಮಂದಿಗೆ ನೋವುಂಟು ಮಾಡುತ್ತದೆ,ನಂಗೊತ್ತು)— % &

-


Fetching Laxmikant Nayak Quotes