Laxmikant Nayak  
18 Followers · 7 Following

Joined 20 November 2017


Joined 20 November 2017
28 MAY 2022 AT 14:10

ಹಂಗಲ್ಲ,ನಾವೇ ರೊಕ್ಕ ಕೊಟ್ಟು ಕಾರ್ಯಕ್ರಮಗಳನ್ನು ಏರ್ಪಡಿಸಿ ಆ ಆ ಗ್ರಾಮಗಳ ನಾಲ್ಕು ನಾಲ್ಕು ಪುಡಾರಿಗಳನ್ನು ಸೇರಿಸಿ ಯಾವುದೇ ರಾಜಕೀಯ ಸಾಂವಿಧಾನಿಕ ಮತ್ತು ವಾಸ್ತವದ ಆಡಳಿತದ ಪರಿಜ್ಞಾನವಿಲ್ಲದೆ ಕೆಸರು ಎರಚಾಟದ ಭಾಷಣ ಮಾಡಿ ಜನರನ್ನು ವಶೀಕರಿಸಿಕೊಳ್ಳುವುದು ಸುಲಿಗೆಗೆ ತಯಾರಾಗುವ ಪೂರ್ವಭಾವಿ ಸಂಚು ಅಂತನ್ನಿಸುತ್ತದೆ.ನಿಜವಾದ ನಾಯಕ ದುಷ್ಟ ಆಡಳಿತದ ವಿರುದ್ಧ ದಂಗೆ ಏಳುವ ಮೂಲಕ ಜನರ ಹೃದಯದಲ್ಲಿ ಸ್ಥಾನ ಪಡೆದು ಉದ್ಭವಿಸಿ ಬರಬೇಕು.ನಾಟಕ ಅರ್ಥವಾಗುತ್ತದೆರಿ,ಜನ ಜಾಗೃತರಾಗಿದ್ದಾರೆ.ನಾವೀಗ ಜನರನ್ನು ಏಮಾರಿಸಲು ಬಿಜೆಪಿ ಸರಿ ಇಲ್ಲ,ಕಾಂಗ್ರೆಸ್ ಸರಿ ಇಲ್ಲ,ಜೆಡಿಎಸ್ ಸರಿ ಇಲ್ಲ,ಶಿವನಗೌಡ ಸರಿ ಇಲ್ಲ,ರಾಜುಗೌಡ ಸರಿ ಇಲ್ಲ,ಮುದ್ನಾಳ್ ಸರಿ ಇಲ್ಲ ಅಂತಾನೆ ತಾನೇ ಭಾಷಣ ಮಾಡಬೇಕಿರುವುದು?ಈ ಮೇಲಿನ ಸರಿ ಇಲ್ಲದ ಜನ ಸರಿ ಇಲ್ಲದ ಪಕ್ಷಗಳು ರಾಜಕೀಯ ಅಸ್ತಿತ್ವವನ್ನು ಪಡೆದುಕೊಳ್ಳಲು ಬಳಸಿಕೊಂಡ ಮಾರ್ಗ ಈಗ ನಾವು ಮಾಡುತ್ತಿರುವ ಭಾಷಣವೇ ಅಲ್ಲವೇ?ಆ ಪಕ್ಷದಲ್ಲಿ ಪಕ್ಷಾಂತರಿಗಳಿಲ್ಲ?ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೋ ಆ ಪಕ್ಷದ ಬೂಟ್ ನೆಕ್ಕಲು ಎಲ್ಲರೂ ಕಾಯುತ್ತಿರುತ್ತಾರೆ!

-


28 MAY 2022 AT 9:41

ವೇದಿಕೆಯ ಮೇಲೆ ನನ್ನ ದಂದೆ ಏನು,ನನಗಿರುವ ಆದಾಯ ಎಷ್ಟು,ನಾನ್ಯಾಕೆ ಹೋರಾಟ ಸಮಾಜ ಸೇವೆ ಮಾಡುತ್ತಿದ್ದೇನೆ ಎನ್ನುವುದನ್ನು ಪಾರದರ್ಶಕವಾಗಿ ಹೇಳುವವರು ಇದ್ದಾರೆಯೇ?ಖ್ಯಾತ ಶ್ರೀಮಂತರು ಸಮಾಜ ಸೇವೆ ಮಾಡುತ್ತೇವೆ ಎಂದು ಹೇಳುವುದಿಲ್ಲ,ಅವ್ಯಕ್ತವಾಗಿ ಮಾಡುತ್ತಿರುತ್ತಾರೆ.ಅವರಿಗೆ ಯಾವ ಲಾಭದ ಆಸೆಯೂ ಇರುವುದಿಲ್ಲ.ಈ ದೇಶದಲ್ಲಿ ಭಿಕ್ಷೆ ಬೇಡುವುದು ತಪ್ಪು,ಅದು ಕಾನೂನಿನ ಪ್ರಕಾರ ಅಪರಾಧ.ಭಿಕ್ಷಾಟನೆಗೆ ಪ್ರೇರೇಪಿಸುವುದೂ ಅಪರಾಧ.ಸಮಾಜ ಸೇವೆಯ ಹೆಸರಿನಲ್ಲಿ ತಮ್ಮಲ್ಲಿರುವ ಭ್ರಷ್ಟ ಹಣದಿಂದ ಬಡವರಿಗೆ ಸಹಾಯ ಎಂದು ಹಣದ ನೆರವು ಇತ್ಯಾದಿ ಮಾಡುವುದು ಜನರ ಸ್ವಾಭಿಮಾನಿ ಬದುಕುನ್ನು ಹಾಳು ಮಾಡುವುದು!ಸಮಾಜ ಸೇವೆ ಪಡೆಯುವವರೂ ಒಂದು ವಿಷಯವನ್ನು ಗುರುತಿಟ್ಟುಕೊಳ್ಳಬೇಕು:ಕೊಡುತ್ತಿರುವ ಈ ಬೋಳಿಮಕ್ಕಳ ಉದ್ದೇಶವೇನು?ಇವರಿಗೆ ಹಣ ಎಲ್ಲಿಂದ ಬಂತು?ಏಕೆ ಈ ನಾಟಕ ಆಡುತ್ತಿದ್ದಾರೆ?ಪಾಪದ ಹಣದಿಂದ ಹೆಂಡತಿ ಮಕ್ಕಳು ಅನ್ನ ತಿನ್ನಬೇಕೆ?ಯಾವ ಉದ್ದೇಶವಿಲ್ಲದೆ ಈ ಸೂಳೆಮಕ್ಕಳು ಏಕೆ ಈ ರೀತಿಯ ಆಟಗಳನ್ನು ಆಡುತ್ತಿದ್ದಾರೆ ಎನ್ನುವ ಅಂಶಗಳನ್ನು ಯೋಚಿಸಬೇಕು.ಮುಲಾಜಿಗೆ ಬಿದ್ದು ಎಪ್ಪತ್ತೈದು ವರ್ಷಗಳಿಂದ ನರಕದ ಜೀವನವನ್ನು ಜೀವಿಸುತ್ತಿದ್ದೇವೆ.ಬ್ರಿಟಿಷರಿಂದ ಆದಷ್ಟಯ ಕೆಲಸಗಳು ಸ್ವತಂತ್ರ ಭಾರತದ ಸರ್ಕಾರಗಳಿಂದ ಆಗಿಲ್ಲ.

-


26 MAY 2022 AT 19:17

ಮನೆಗೆ ನೂರಾರು ಲಗ್ನ ಪತ್ರಿಕೆಗಳು ಬರುತ್ತಿವೆ,ಅವು ಕೊಡಲು ಬಂದವರೊಂದಿಗೆ ನಯವಾಗಿ ಮಾತಾಡಿ ಬರ್ತೀನಿ ಅಂತ ಹೇಳಿ‌ ಕಳುಹಿಸುತ್ತೇನೆ.ಅವರು ಕೊಂಚ ಮರೆಯಾದದ್ದೇ ತಡ ಲಗ್ನ ಪತ್ರಿಕೆಯನ್ನು ಲಕೋಟೆಯಿಂದ ಹೊರ ತೆಗೆಯುತ್ತೇನೆ,ವಿಪರೀತ ಕುತೂಹಲ;ನಿರೀಕ್ಷಿಸಿದಂತೆ ತಮ್ಮ ಸುಖಾಗಮನ ಬಯಸುವವರು ಎನ್ನುವ ಲಿಸ್ಟಿನಲ್ಲಿ ಕರ್ನಾಟಕ ರಾಜ್ಯದ ಅಷ್ಟೂ ಪಕ್ಷಗಳ ಮುಖಂಡರ ಹೆಸರುಗಳಿರುತ್ತವೆ!ಈಗ ಇನ್ನೊಂದು ಟ್ರೆಂಡು ಪ್ರಾರಂಭವಾಗಿದೆ,ಸಚಿವರ ಹೆಸರುಗಳನ್ನೂ ಹಾಕತೊಡಗಿದ್ದಾರೆ!ಪಾಪ ರಾಜ್ಯದ ಮುಖ್ಯಮಂತ್ರಿಗಳು ದೇಶದ ಪ್ರಧಾನ ಮಂತ್ರಿಗಳು ಯಾವ ಪಾಪ ಮಾಡಿದ್ದಾರೋ?ಅವರಿಬ್ಬರ ಹೆಸರುಗಳನ್ನು ಕೈ ಬಿಡಲಾಗುತ್ತಿದೆ.ಅದೇ ಲಿಸ್ಟಿನಲ್ಲಿ ವೈಯುಕ್ತಿಕವಾಗಿ ಹಾದರದ ಜೀವನ ನಡೆಸುವ ವ್ಯಭಿಚಾರಿಗಳ ಹೆಸರೂ ಇರುತ್ತವೆ.ಹೆಸರು ಹಾಕಿದ ಮಾತ್ರಕ್ಕೆ ಯಾರು ಬರುತ್ತಾರೆ?ಸ್ಥಳೀಯ ಕೆಲಸವಿಲ್ಲದ ರಾಜಕೀಯ ಆಕಾಂಕ್ಷಿಗಳು,ಲೂಟಿಕೋರರು 'ಪಾರ್ಟಿ ಸ್ವಲ್ಪ ವಜ್ಜಿ'ಅಂತನ್ನಿಸಿದರೆ ಬರುತ್ತಾರೆ.ಐದು ಸಾವಿರ ಹತ್ತು ಸಾವಿರ ರೂಪಾಯಿಯ ಮುಯ್ಯಿ ಬೊಕ್ಕ!ಇನ್ಮುಂದೆ ಒಟ್ಟು ಸಗಟಾಗಿ ತಮ್ಮ ಸುಖಾಗಮನ ಬಯಸುವವರು ಆಡಳಿತ ಪಕ್ಷದ ಮುಖಂಡರು,ವಿರೋಧ ಪಕ್ಷದ ನಾಯಕರು,ರಾಜ್ಯ ಮತ್ತು ಕೇಂದ್ರ ಸರ್ಕಾರ ಎಂದು ಬರೆದರೆ ಸೂಕ್ತವಾದೀತು!

-


12 MAY 2022 AT 20:22

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸಂವಿಧಾನದ ಅನುಚ್ಛೇದ 371(j) ರೀತಿಯಲ್ಲಿ ರಚಿತವಾಗಿದೆ.ಈ ಪ್ರದೇಶ ಹಿಂದುಳಿದ ಕಾರಣ ಅನೇಕ ಹೋರಾಟಗಾರರ ಒತ್ತಾಸೆಯಿಂದ ಲಭಿಸಿದ ಫಲಶೃತಿ.ಇದಕ್ಕೆ ನಿರ್ದಿಷ್ಟವಾದ ಅನುದಾನವಿದ್ದು ಆ ಅನುದಾನವನ್ನು ಈ ಪ್ರದೇಶದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು.ಪ್ರಸ್ತುತ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಈ ಮಂಡಳಿಗೆ ಶಾಸಕರು,ಸಚಿವರು,ಜಿಲ್ಲಾಧಿಕಾರಿಗಳು,ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸದಸ್ಯರು ಮತ್ತು ನಿರ್ದೇಶಕರು.ಒಬ್ಬ ಕ್ಯಾಬಿನೆಟ್ ದರ್ಜೆಯ ಸಚಿವ ಅಧ್ಯಕ್ಷನಾಗಬೇಕು.ವಾರ್ಷಿಕ ಹದಿನೈದು ನೂರು ಕೋಟಿ ಹಣ ನಿಗದಿ ಮಾಡಲಾಗಿದೆ.ಆಡಳಿತಾತ್ಮಕ ವೆಚ್ಚ ಕಳೆದು ಹನ್ನೊಂದು ನೂರು ಕೋಟಿ ಅಭಿವೃದ್ಧಿಗೆ ಮಿಗುಲುತ್ತದೆ.2013ರಿಂದ ಕಾರ್ಯಾರಂಭ ಮಾಡಿರುವ ಈ ಮಂಡಳಿ ಇಪ್ಪತ್ತೈದರಿಂದ ಮೂವತ್ತು ಸಾವಿರ ಕಾಮಗಾರಿಗಳ ಲೆಖ್ಖ ಹೇಳುತ್ತದೆ.ಎಲ್ಲವೂ ಶಾಸಕರು ಸೂಚಿಸುವ ಕಾಮಗಾರಿಗಳು.ಒಂಬತ್ತು ವರ್ಷಗಳಿಂದ 120 ಸಾವಿರ ಕೋಟಿ ಹಣ ಹರಿದಿದೆ.ಯಾವ ಹಳ್ಳಿ ಉದ್ದಾರವಾಗಿಲ್ಲ,ಯಾವ ರಸ್ತೆ ಸುಧಾರಣೆಯಾಗಿಲ್ಲ,ಯಾವ ಅಭಿವೃದ್ಧಿ ಕಾಣಿಸುತ್ತಿಲ್ಲ.ಹಾಗಾದರೆ ಹಣ ಏನಾಗಿ ಹೋಯಿತು?ಉತ್ತರ:ಕಠಿಣವೇನು ಅಲ್ಲ!

-


17 APR 2022 AT 16:40

ಬಡ್ಡಿ‌ಮಕ್ಳು ಅದು ಫ್ರೀ ಕೊಡ್ತೀವಿ,ಇದು ಫ್ರೀ ಕೊಡ್ತೀವಿ ಅಂದ್ರೆ ನಂಬಬೇಡಿ.ಈ ಸೂಮಕ್ಕಳು ದೇಶದ್ರೋಹಿಗಳು.ಅಧಿಕಾರದ ದುರಾಸೆಗಾಗಿ ಹಾಗೆ ಹೇಳುತ್ತಾರೆ.ಹೀಗೆ ಉಚಿತ ಯೋಜನೆಗಳು ಭವಿಷ್ಯದ ದೇಶವನ್ನು ನಾಶ ಮಾಡುತ್ತವೆ.ವಾಸ್ತವವಾಗಿ ಈ ದೇಶದ ಪ್ರಜೆ ಬುದ್ದಿವಂತನಿದ್ದರೆ ಹಾಗೆ ಹೇಳುವವರಿಗೆ ಹೇಲು ಮೆತ್ತಿದ ಚಪ್ಪಲಿಯಿಂದ ಹೊಡೆಯುತ್ತಾನೆ.ಏನು ಮಾಡುವುದು?ಕಳಪೆ ಶಿಕ್ಷಣ,ಕಳಪೆ ಜ್ಞಾನ,ಕಳಪೆ ಬದುಕಿಗೆ ಹೊಂದಿಕೊಂಡ ಭಾರತದ ಪ್ರಜೆ ಬಹುತೇಕ ಇನ್ನೂ ಅಕ್ಷರದಿಂದ ವಂಚಿತನಾಗಿಯೇ ಇದ್ದಾನೆ.ಸರ್ಕಾರಿ ಆಸ್ಪತ್ರೆಗಳು ಸರಿ ಇಲ್ಲ,ಸರ್ಕಾರಿ ಶಾಲೆಗಳು ಸರಿ ಇಲ್ಲ.ಸರ್ಕಾರದ ಉದ್ಯಮಗಳು ನೆಟ್ಟಗಿಲ್ಲ.ಜನರ ಬಗ್ಗೆ ನಿಜವಾದ ಕಾಳಜಿ ಇದ್ದವರು ಮೊದಲು ಇವುಗಳನ್ನು ಸುಧಾರಿಸುತ್ತಾರೆ.ಈಗ ರೇಷನ್ ಅಂಗಡಿಯಲ್ಲಿ ದೊರೆಯುವ ಉಚಿತ ಅಕ್ಕಿ ಹೇಗಿದ್ದಾವೆ ಎನ್ನುವುದು ನಿಮಗೆ ಗೊತ್ತು,ಆ ಅಕ್ಕಿಯನ್ನು ಹಂದಿಯೂ ತಿನ್ನುವುದಿಲ್ಲ.ಪುಗಸಟ್ಟೆ ಸಿಗುವ ಅವನ್ನು ಜನ ಹದಿನೈದು ರೂಪಾಯಿಗೆ ಕೆಜಿಯಂತೆ ಮಾರಾಟ ಮಾಡಿಕೊಳ್ಳುತ್ತಾರೆ,ಉಣ್ಣುವವರು ಕಡಿಮೆ!

-


16 APR 2022 AT 8:09

Indian motors act 1988(u/s 187):ಮೂರು ತಿಂಗಳ ಶಿಕ್ಷೆ,ಅಥವಾ ಐದು ಸಾವಿರ ದಂಡ,ಅಥವಾ ಇವೆರಡೂ. IPC 1860 (u/s 279)ಆರು ತಿಂಗಳ ಶಿಕ್ಷೆ,304a ಎರಡು ವರ್ಷ ಶಿಕ್ಷೆ.
ಇವೆಲ್ಲವೂ ವಾಹನದಿಂದ ವ್ಯಕ್ತಿಯೊಬ್ಬನನ್ನು ಕೊಂದಾಗ ಪ್ರಾಸಿಕ್ಯೂಷನ್ ಗೆದ್ದಾಗ ವಾಹನ ಚಾಲಕನಿಗೆ ವಿಧಿಸಬಹುದಾದ ಶಿಕ್ಷೆಗಳು!ನಿಮ್ಮ ಹೆಣ ಚಿಂದಿ ಚಿಂದಿಯಾದರೂ ನಿಮ್ಮ ಜೀವಕ್ಕಿರುವ ಕಾನೂನಾತ್ಮಕ ಬೆಲೆ.ದಂಡವನ್ನು ವಿಮಾ ಕಂಪನಿ ಭರಿಸುತ್ತದೆ.ಆ ಮೂರೂ ಕಲಂನಲ್ಲಿ ಜೈಲು ಶಿಕ್ಷೆಯಾದರೆ ಜಸ್ಟ್ ಎರಡು ವರ್ಷದ ಏಳು ತಿಂಗಳ ಜೈಲು ವಾಸ!ಅದು ವರ್ಷಾನುಗಟ್ಟಲೆ ನಡೆಯಬಹುದಾದ ವಿಚಾರಣೆಯ ನಂತರ.ಇಲ್ಲಿ ವಾಹನದ ಮಾಲೀಕನಿಗೆ ಯಾವುದೇ ತೊಂದರೆ ಇಲ್ಲ.ಜೀವಕ್ಕೆ ಬೆಲೆ ಇಲ್ಲ.ಮೊನ್ನೆ ದೇವದುರ್ಗದ ಜಾಲಹಳ್ಳಿ ವ್ಯಾಪ್ತಿಯಲ್ಲಿ ಮರಳು ಕಳ್ಳ ಸಾಗಾಣಿಕ ವಾಹನವೊಂದು ಉಂಡು ಮಲಗಿದ ಹುಡುಗನೊಬ್ಬನ ಜೀವ ಬಲಿ ಪಡೆದಿದೆ.ಪೋಲಿಸರು ಜಸ್ಟ್ ಎಂಟುವರೆ ಸಾಲಿನ ವಿಷಯ ಸ್ಪಷ್ಟವಿರದ ಪ್ರಥಮ ವರ್ಥಮಾನ ವರದಿ ದಾಖಲಿಸುತ್ತಾರೆ.ಆರೋಪಿತ unknown ಎಂದು ಬರೆಯುತ್ತಾರೆ.ಒಂದು ದಾರುಣ ಮರಣ ಮರಳು ಮಾಫಿಯಾದ ಪ್ರಾಬಲ್ಯಕ್ಕೆ ಮಣಿದು ಗಾಳಿಲೋ ಕಲಿಸಿ ಪೋತುಂದಿ!ಅಂದಹಾಗೆ ಆ ಟ್ರಕ್ಕಿಗೆ ಇನ್ಸುರೆನ್ಸ್ ಕೂಡಾ ಇಲ್ಲ!

-


10 APR 2022 AT 21:52

ಒಬ್ಬ ಸೂಳೆಮಗ ಮತ್ತೊಬ್ಬ ಸೂಳೆಮಗನನ್ನು ಕೊಂದು ಹಾಕಿದಾಗ ಸತ್ತು ಹೋದ ಸೂಳೆಮಗನ ಕುಟುಂಬದವರು ನಮಗೆ ನ್ಯಾಯಬೇಕು ಎನ್ನುತ್ತಾರೆ,ಯಾವ ನ್ಯಾಯ?ಕೊಂದವನನ್ನು ಜೈಲಿಗೆ ಹಾಕುವುದು ನ್ಯಾಯವಾ?ಕೊಲೆಗೆ ಹತ್ತನ್ನೆರಡು ವರ್ಷಗಳ ಶಿಕ್ಷೆಯಾಗಬಹುದು,ಅದೂ ಸುದೀರ್ಘವಾದ ವಿಚಾರಣೆಯ ನಂತರ,ಎವಿಡೆನ್ಸ್ ಸ್ಟ್ರಾಂಗಾಗಿರುವಾಗ.fine,ಸತ್ತವನ ಮನೆಗೆ ನ್ಯಾಯ ಸಿಕ್ಕಿತು,ಸತ್ತವನ ಆತ್ಮ(?)ತೃಪ್ತಿ ಹೊಂದಿತು.

ಸಂಗತಿ ಇದಲ್ಲ.ಸಮಾಜದಲ್ಲಿ ಕೊಲೆ ಸುಲಿಗೆಯಾಗದಂತೆ ನೋಡಿಕೊಳ್ಳುವ ಜವಬ್ದಾರಿ ಸರ್ಕಾರದ್ದು.ಸರ್ಕಾರ ಅಪರಾಧಿಗಳನ್ನು ಶಿಕ್ಷಿಸಲೇಬೇಕು,ಇದಕ್ಕಾಗಿ ಸಂತ್ರಸ್ತರು ಪರದಾಡಬೇಕಿಲ್ಲ.ದುರಂತ ನೋಡಿ ಭಾರತದಲ್ಲಿ?ಅನ್ಯಾಯಕ್ಕೆ ಒಳಗಾದವರು ನ್ಯಾಯಕ್ಕಾಗಿ ಅಲೆದಾಡಬೇಕು.ಪೋಲಿಸ್ ಠಾಣೆ,ನ್ಯಾಯಾಲಯ,ಸರ್ಕಾರಿ ಕಚೇರಿಗಳಿಗೆ!ಇಲ್ಲೊಂದು ಸುಸರ್ಜಿತ ಆಡಳಿತ ವ್ಯವಸ್ಥೆ ಇದೆ ಎಂದು ನಾವು ನಂಬುವುದಾದರೂ ಹೇಗೆ?

ಸರ್ಕಾರ ತನ್ನ ಜವಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸುವುದಿಲ್ಲ.ಪ್ರಕರಣಗಳ ಇತ್ಯರ್ಥಕ್ಕೆ ಸಮಯ ನಿಗದಿ ಮಾಡುವುದಿಲ್ಲ.ಪ್ರಕರಣಗಳ ಚಲನವಲನದ ಮಾಹಿತಿ ಪಡೆಯುವುದಿಲ್ಲ.ಹಣವುಳ್ಳವರ ಅಪರಾಧಗಳ ವಿಚಾರಣೆ ದಶಮಾನಗಳ ವರೆಗೆ ನಡೆಯುತ್ತವೆ,ಸತ್ತವನ ಕುಟುಂಬ ಊರ್ಜಿತವಾಗಿರುತ್ತದೆ!

-


9 APR 2022 AT 10:15

ನನ್ನ ಮೆದುಳಿನಲ್ಲಿ create ಆಗುವ ವಿಚಾರಗಳನ್ನು ಹಂಗಂಗೇ ಬರೆದಿರುತ್ತೇನೆ,ಅದಕ್ಕೆ ಹಿನ್ನೆಲೆ,ಮುನ್ನೆಲೆ,ಯಾರದಾದರೂ ಬೆಂಬಲ,ಯಾರದೋ ಕುತಂತ್ರ ಅವುಗಳ ಹಿಂದೆ ಇರುವುದಿಲ್ಲ.ನನ್ನ ಬಹುತೇಕ ಬರಹಗಳು ಬಿಸಿಲಿನಲ್ಲಿ ಬೆವರು ಸುರಿಸುತ್ತಾ ದುಡಿಯುತ್ತಿರುವಾಗ ಹುಟ್ಟುತ್ತವೆ.ಈ ವಿಚಾರಗಳು ಯಾರನ್ನೋ ಉದ್ದೇಶಿಸಿ ಉದ್ದೇಶಪೂರ್ವಕವಾಗಿ ಬರೆದಂತವುಗಳಾಗಿರುವುದಿಲ್ಲ.ವಾಮಮಾರ್ಗದಿಂದ ಹಣ ಸಂಪಾದಿಸುವುದು ನನಗೆ ಗೊತ್ತಿಲ್ಲ.ದುಡಿಯಬೇಕು,ನಮ್ಮಲ್ಲಿರುವ ಕೌಶಲ್ಯವನ್ನು ಉಪಯೋಗಿಸಿಕೊಂಡು ದುಡಿಯವೇಕು.ಅದು ನೂರರ ಕೆಲಸವಾಗಿರಲಿ ಸಾವಿರದ ಕೆಲಸವಾಗಿರಲಿ.ನನ್ನ ಉದ್ಯೋಗ ನನಗೆ ಒಂದು ದಿನ ನೂರು ರೂಪಾಯಿ ಸಂಪಾದಿಸಿಕೊಟ್ಟರೆ ಇನ್ನೊಂದು ದಿನ ಸಾವಿರ ಐದು ಸಾವಿರ ಹತ್ತು ಸಾವಿರಗಳವರೆಗೆ ಸಂಪಾದಿಸಿಕೊಡುತ್ತದೆ.ಕೆಲವು ಸಂದರ್ಭಗಳಲ್ಲಿ ತಿಂಗಳುಗಟ್ಟಲೆ ಕೆಲಸವಿಲ್ಲದೆ ಅಲೆಯುತ್ತಿರುತ್ತೇನೆ.ಒಟ್ಟಿನಲ್ಲಿ ನನ್ನ ವೃತ್ತಿ ನನ್ನನ್ನು ಸ್ವಾವಲಂಬನೆ ಮತ್ತು ಘನತೆಯಿಂದ ಜೀವಿಸುವಂತೆ ಮಾಡಿದೆ.ಸ್ವಯಂ ಉದ್ಯೋಗದ ಕೌಶಲ್ಯಗಳನ್ನು ರೂಢಿಸಿಕೊಂಡ ವ್ಯಕ್ತಿ ಯಾರ ಕಾಲನ್ನೂ ಹಿಡಿಯಬೇಕಿಲ್ಲ.ಅವಶ್ಯಕತೆ ಇದ್ದವರು ಅವನ ಕಾಲನ್ನೇ ಹಿಡಿಯುತ್ತಾರೆ.

-


10 MAR 2022 AT 16:10

*_ನಿಮ್ಮ ನಂಬರ್‌ಗಳಿಗೆ(ಸರ್ಕಾರಿ ಅಧಿಕಾರಿ,ಪಿಡಿಓ ಇತ್ಯಾದಿ)ಫೋನ್ ಹಿಂಗ್ ಬರುತ್ತದೆ:ಸರ್ ನಾವು ಪತ್ರಿಕೆಯವರು ತಮ್ಮನ್ನು ಭೇಟಿಯಾಗಬೇಕಿತ್ತು ಅಂತ.ಏನಾಗಬೇಕಿತ್ತು ಅಂತ ನೀವು ಕೇಳ್ತೀರಿ,ಕಾಣ್ಬೇಕಿತ್ತು ಸರ್ ಅಂತಾನೆ.ಏನ್ ಹೇಳಿ ಅಂತ ನೀವು ಹೇಳಿದಾಗ ಪತ್ರಿಕೆಗೆ ಹೆಲ್ಪ್ ಸರ್ ಅಂತಾರೆ.ಪತ್ರಿಕೆ ಪ್ರಿಂಟಿಗೆ ಹಣ ಕಡಿಮೆ ಬಿದ್ದಿವೆ ಅಂತಾನೆ.ಪದೇಪದೇ ಪೀಡಿಸುತ್ತಾನೆ.ಮೊದಲು ಹತ್ತು ಸಾವಿರದ ಬೇಡಿಕೆ ಇಡುತ್ತಾನೆ,ಐದು ನೂರು ಕೊಟ್ಟರೂ ತಗೋತಾನೆ.ನೆನಪಿರಲಿ:ಈತ ನಕಲಿ ವರದಿಗಾರ,ಈತನ್ಯಾವ ಪತ್ರಕರ್ತನೂ ಅಲ್ಲ.ಈಗ ವಿಷಯಕ್ಕೆ ಬರೋಣ,ಜನ ಆಕ್ರೋಶ ಪತ್ರಿಕೆ ಈ ರೀತಿಯ ಕೆಲಸವನ್ನು ಮಾಡುವುದಿಲ್ಲ.ನನ್ನ ಪತ್ರಿಕೆಗೆ ವರದಿಗಾರರಿಲ್ಲ.ಎಲ್ಲೋ ಒಬ್ಬರು ವರದಿಗಾರರು ಇದ್ದರೂ ಅವರು ಸಂಪೂರ್ಣವಾದ ಸ್ವಾವಲಂಬಿಗಳು,ಅವರು ಇಂತಹದ್ದರ ವಿರುದ್ಧ ಹೋರಾಡುತ್ತಾರೆ.ಈ ರೀತಿ ನನ್ನ ಪತ್ರಿಕೆಯ ಹೆಸರನ್ನು ಯಾರಾದರೂ ಬಳಸಿದರೆ ಮುಖಕ್ಕೆ ಥೂ ಎಂದು ಉಗಿದು ಕಳುಹಿಸಿ.ಪತ್ರಿಕೋದ್ಯಮದ ಮೇಲೆ ಗೌರವವಿದ್ದರೆ ಜಸ್ಟ್ ಆ ಪತ್ರಿಕೆಯ ಮೇಲಿರುವ ನಂಬರಿಗೆ ಕೇವಲ 240 pay ಮಾಡಿ.ಅದು ವಾರ್ಷಿಕ ಚಂದಾ._*

*_ಲಕ್ಷ್ಮೀಕಾಂತ ನಾಯಕ,ಸಂಪಾದಕರು:ಜನ ಆಕ್ರೋಶ ಪತ್ರಿಕೆ 9845968164_*

ಈ ವಿಷಯವನ್ನು ಹಂಚಿಕೊಳ್ಳುವ ಮೂಲಕ ಭ್ರಷ್ಟಾಚಾರ ಮತ್ತು ಸುಲಿಗೆಯನ್ನು ತಪ್ಪಿಸಿರಿ.

-


6 MAR 2022 AT 7:58

14-12-2021ರಂದು ವಿಧಾನಸಭೆ ಅಧಿವೇಶನದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರಕ್ಕೆ ಚುಕ್ಕಿ ಗುರುತಿಲ್ಲದ ಪ್ರಶ್ನೆಯನ್ನು ಕೇಳುತ್ತಾರೆ:ಎಸಿಬಿ ರಚನೆಯ ಉದ್ದೇಶ,ಅದು ಇದುವರೆಗೆ ದಾಖಲಿಸಿದ ಕೇಸುಗಳು,ಆ ಪೈಕಿ ಬಿ ರಿಪೋರ್ಟ್ ಹಾಕಿದ ಕೇಸುಗಳ ವಿವರ ನೀಡಬೇಕು ಎಂದು.ಇದಕ್ಕೆ ಸರ್ಕಾರ ಉತ್ತರಿಸುತ್ತಾ ಆಡಳಿತ ಯಂತ್ರವನ್ನು ಭ್ರಷ್ಟಾಚಾರ ರಹಿತಗೊಳಿಸಲು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಅನ್ವಯ ರಚಿಸಲಾಗಿದ್ದು ಅದು ಇದುವರೆಗೆ 1366 ಪ್ರಕರಣಗಳನ್ನು ದಾಖಲಿಸಿದೆ.ಆ ಪೈಕಿ 22 ಪ್ರಕರಣಗಳಿಗೆ ಬಿ ರಿಪೋರ್ಟ್ ಹಾಕಲಾಗಿದೆ ಎಂದು ವಿವರಗಳನ್ನು ನೀಡುತ್ತಾರೆ.ಎಸಿಬಿ ಯಾದಗಿರಿ ಜಿಲ್ಲೆಯಲ್ಲಿ ಹತ್ತೊಂಬತ್ತು ಪ್ರಕರಣಗಳನ್ನು ದಾಖಲಿಸಿಕೊಂಡಿದೆ.ಕೆಲವು ವಿಚಾರಣೆಯ ಹಂತದಲ್ಲಿದ್ದರೆ ಕೆಲವು ನ್ಯಾಯಾಲಯದಲ್ಲಿವೆ.ಇಡೀ ರಾಜ್ಯಾದ್ಯಂತ ಕೇವಲ 1366 ಪ್ರಕರಣಗಳು-ಅದು ರಚನೆಯಾದ ದಿನದಿಂದ-ಅಂದರೆ ಕರ್ನಾಟಕದಲ್ಲಿ ಭ್ರಷ್ಟಾಚಾರ ಇಲ್ಲವಾ?ಅಥವಾ ಅದನ್ನು ನಾಮಕಾವಸ್ತೆ ಸ್ಥಾಪಿಸಲಾಗಿದೆಯಾ ಅನ್ನುವ ಅನುಮಾನ ಮೂಡುತ್ತದೆ,ಅಲ್ಲವೇ?

-


Fetching Laxmikant Nayak Quotes