ಅಮ್ಮ
ಅಮ್ಮ ಅಮ್ಮ ಓ ನನ್ನ ಪ್ರೀತಿಯ ಅಮ್ಮ
ನಿನ್ನಿಂದಲೇ ಅಮ್ಮ ಈ ನನ್ನ ಜನ್ಮ
ಅಮ್ಮನೇ ನನ್ನ ಜಗತ್ತು
ನೀನಿದ್ದರೆ ನನ್ನ ಜೊತೆ ಬಾರದು ವಿಪತ್ತು....!
ಅಮ್ಮನ ಮಡಿಲಲ್ಲಿ ನೆಮ್ಮದಿ ಅಡಗಿದೆ
ಕೈತುತ್ತಿನಲಿ ಅಮೃತ ತುಂಬಿದೆ
ಪ್ರತಿ ಕಾರ್ಯಕ್ಕೆ ಅಮ್ಮನೇ ಸ್ಫೂರ್ತಿ
ಅಮ್ಮನ ಖುಷಿಯೇ ಮಕ್ಕಳ ಕೀರ್ತಿ....!!
ಧೈರ್ಯ ಸಾಹಸಕ್ಕೆ ಕನ್ನಡಿಯವಳು
ನನ್ನನ್ನು ಅಂಗೈಯಲ್ಲಿಡಿದು ಆಸರೆಯಾದವಳು
ನಾ ನಕ್ಕಾಗ ನಗುವಳು
ನಾ ಅತ್ತಾಗ ಅಳುವಳು....!!!
ಮಳೆಯಲಿ ಕೊಡೆಯಾಗುವಳು
ಚಳಿಯಲಿ ಹೊದಿಕೆಯಗುವಳು
ಬಿಸಿಲಲಿ ನೆರಳಾಗುವಳು
ಕಣ್ಣ ರೆಪ್ಪೆಯಂತೆ ನನ್ನನ್ನು ಕಾಪಾಡುವಳು...!!!!
ಅಮ್ಮ ಎಂದರೆ ತೋರುವಳು ಔದರ್ಯ
ಮಾತೇ ಎಂದರೆ ಕೊಡುವಳು ಮಾಧುರ್ಯ
ತಾಯಿಯಲ್ಲಿನ ಸುಂದರ ಆಂತರ್ಯ
ಜಗ ಬೆಳಗುವ ಪ್ರಜ್ವಲಿಸುವ ಸೌಂದರ್ಯ....!!!!!
ಉಸಿರು ನೀಡುವ ಮಾತೆಯವಳು
ಪ್ರೀತಿ ವಾತ್ಸಲ್ಯ ತುಂಬಿದ ಜನನಿಯವಳು
ಇಡೀ ಬ್ರಹ್ಮಾಂಡವೇ ನನ್ನಮ್ಮ
ನನ್ನ ಅಮ್ಮನನ್ನು ಹೊಗಳಲು ಪದಗಳೇ ಸಾಲದಮ್ಮ....!!!!!!-
ಮನುಷ್ಯರು ಎಲ್ಲಾ ಮನೆಗಳಲ್ಲೂ ಜನಿಸುತ್ತಾರೆ.....! ಆದರೆ,
ಮನುಷ್ಯತ್ವ ಮಾನವೀಯತೇ ಗುಣವುಳ್ಳವರು ಕೆಲವೇ ಕೆಲವು ಮನೆಗಳಲ್ಲಿ ಜನಿಸುತ್ತಾರೆ.....!!-
ನೊಂದವರಿಗೆ, ಸೋತವರಿಗೆ, ಕಾಯಿಲೆಯಿಂದ ಚೇತರಿಸಿಕೊಳ್ಳುವವರಿಗೆ ಮುಖ್ಯವಾಗಿ ಬೇಕಾಗಿರುವುದು ಆತ್ಮಸ್ಥೈರ್ಯ....,.. ಯಾರಿಲ್ಲದಿದ್ದರೂ ನಾನಿದ್ದೇನೆ ಎನ್ನುವ ಒಂದು ಭರವಸೆ ಬೇಕು ಅಷ್ಟೇ .....ಅವರೆಲ್ಲರನ್ನು ಪ್ರೀತಿಯಿಂದ ಮಾತನಾಡಿಸಿ...ಸ್ನೇಹದಿಂದ ಹುರಿದುಂಬಿಸಿ ಒಳ್ಳೆಯ ಮಾತುಗಳನ್ನಾಡಿ... ಅಷ್ಟೇ ಸಾಕು... ಬಾಡಿ ಹೋದ ಗಿಡಗಳಿಗೆ ನೀರು ಹಾಕಿದಾಗ ಹೇಗೆ ಜೀವ ಕಳೆ ಬರುತ್ತದೆಯೋ ಹಾಗೆ.... ನಾವಾಡುವ ಸ್ಫೂರ್ತಿದಾಯಕ ಮಾತುಗಳಿಂದ ಆ ಎಲ್ಲ ಜೀವಗಳಿಗೂ ಮತ್ತೆ ಬದುಕುವ ಉತ್ಸಾಹ ಬರುತ್ತದೆ... 🥰
-
ಜೀವನದಲ್ಲಿ ದೊಡ್ಡ ಸಾಧನೆ ಏನು ಮಾಡಬೇಕಿಲ್ರಿ
ಯಾರಿಗೂ ತೊಂದ್ರೆ ಕೊಡದೆ, ಕೆಟ್ಟದನ್ನ ಬಯಸದೆ
ನಮ್ಮ ಕಾಯಕದಾಗ ಪ್ರಾಮಾಣಿಕ ಮತ್ತು ನಿಷ್ಠೆ ಇಟ್ಕೊರಿ
ಇರುವವರೆಗೂ ಯಾವುದನ್ನೂ ಹೊತ್ತುಕೊಂಡು ಹೋಗಲ್ರಿ
ಬದುಕಿನುದ್ದಕ್ಕೂ ನಾವು ಖುಷಿಯಾಗಿರಬೇಕ್ರಿ, ನಮ್ಮವರನ್ನ ಹಾಗೂ ನಮ್ಮ ಸುತ್ತ ಮುತ್ತ ಇರುವವರನ್ನು ಖುಷಿ ಪಡಿಸುತ್ತ ಇರಬೇಕ್ರಿ ..... ಅದೇ ದೊಡ್ಡ ಸಾಧನೆ ಕಣ್ರೀ ಮತ್ತು ನೆಮ್ಮದಿ ಜೀವನ ಅದರೊಳಗೆ ಐತ್ರಿ ...... 🥰-
💐💐💐💐ಮಗಳಾಗಿ ಮನೆಯ ಬೆಳಗುವಳು
ತಂಗಿಯಾಗಿ ನೋವನು ಮರೆಸುವಳು
ಅಕ್ಕಳಾಗಿ ಅಕ್ಕರೆಯ ಕಲಿಸುವಳು
ಹೆಂಡತಿಯಾಗಿ ಹೆಗಲುಗೊಟ್ಟು ನಿಲ್ಲುವಳು
ಗೆಳತಿಯಾಗಿ ಸರಿದಾರಿಯ ತೋರುವಳು
ಅಮ್ಮನಾಗಿ ಅಮೃತ ಉಣಿಸುವಳು
ಗುರುವವಳು ಬೆಳಕವಳು ನೆರಳವಳು
ಯುಕ್ತಿಯವಳು ಶಕ್ತಿಯವಳು ಚರಿತ್ರೆಯವಳು
ಮಾತೆಯವಳು ಜಗನ್ಮಾತೆಯವಳು
ವೈರಿಯ ಗುಂಡಿಗೆ ಗುಂಡಿಡುವವಳು
ಸರ್ವವ್ಯಾಪಿಯಾಗಿರುವಳು ಸರ್ವಜ್ಞೆಯಾಗಿರುವಳು
ಹೆಣ್ಣು ಜಗದ ಕಣ್ಣಾಗಿರುವಳು💐💐💐💐
❤️ಸರ್ವಶಕ್ತಿ ಮಹಿಳೆಯರಿಗೆ, ಮಹಿಳಾ ದಿನಾಚರಣೆಯ ಶುಭಾಶಯಗಳು❤️-
ನಮ್ಮ ಅನಿತಾ ಮೇಡಮ್ ತುಂಬಾ ಮೂಡಿ
ಆಗಾಗ ಅಲ್ಪ ಸ್ವಲ್ಪ ಮಾಡ್ತಾರೆ ಗಡಿಬಿಡಿ
ಖುಷಿಯಲ್ಲಿ ಮುಖ ನೋಡಲು ಸುಂದರ ನೋಡಿ
ಮಾತಲ್ಲೇ ಮಾಡ್ತಾರೆ ವಕೀಲರನ್ನು ಮೋಡಿ
ಸರ್ ದು ಅವರದು ಸೂಪರ್ ಜೋಡಿ
ನಿಮ್ಮ ಮಕ್ಕಳೇ ನಿಮಗೆ ಜೀವನಾಡಿ
ಅನಿತಮ್ಮ ನಮ್ಮೆಲ್ಲರಿಗೂ ಆದರ್ಶದ ಕನ್ನಡಿ
ಬೇರೆ ಕಡೆ ಹೋದಾಗ ನಮ್ಮನ್ನ ಮರಿಬೇಡಿ
ನಿಮ್ಮದೇ ನೆನಪು ನಮಗೆ ಇದೇ ವಾಗ್ದಾನ ನೋಡಿ-
🧑🎓ಅನಿತಾ ಮೇಡಮ್ ಸ್ವಲ್ಪ ಮೂಡಿ
🤷ಒಂದೊಂದು ಸಲ ಆಗ್ತೀರಾ ಗಡಿಬಿಡಿ
😄ಖುಷಿಯಾಗಿದ್ರೆ ಚೆಂದ ನೋಡಿ
🥰ಮಾತಾಡಿ ಎಲ್ಲರಿಗೂ ಮಾಡ್ತೀರಾ ಮೋಡಿ
👩❤️👨ತಮ್ಮ ಮತ್ತು ಸರ್ ಜೋಡಿ
❤️❤️ಸೂಪರ್ ಬಲು ಜೋಡಿ
👩❤️👨ಎಲ್ಲರಿಗೂ ಆದರ್ಶವಾಗಿರಲಿ ಕೂಡಿ
👰👰ತಮ್ಮ ಮಕ್ಕಳು ಯಶಸ್ಸು ಎತ್ತರಕ್ಕೆರುವುದು ನೋಡಿ
🐕ಮಿನ್ನು ಬರುತ್ತಿದೆ ದಾರಿ ಬಿಡಿ
🏃🏃ಹೀಗೆ ದಿನಗಳು ಉರುಳುವುದು ಓಡಿ
🚕ಎಲ್ಲರಂತೆ ವರ್ಗಾವಣೆಯಾಗುವುದು ನೋಡಿ
😘ಆಗ ನಮ್ಮನ್ನ ಎಂದಿಗೂ ಮರೆಯಬೇಡಿ
-
ಯಾವುದೇ ಸಾಧನೆ ಇರಲಿ
ಮಾಡಬೇಕೆಂಬ ಅಚಲ ಮನಸಿದ್ದು
ಆ ಸಾಧನೆಗೆ ಪರಿಶ್ರಮ ಪಟ್ಟರೆ
ಗೆಲವು ನಮ್ಮದೇ ಆಗಿರುತ್ತದೆ... 😊
-
ಕೆಲವೇ ಕೆಲವು ತಿಂಗಳುಗಳಲ್ಲಿದ್ದು ಕದ್ದಿರಾ ಎಲ್ಲರ ಮನಸಂತೆ
ನಿಮ್ಮ ಮಾತುಗಳು ಸಿಹಿತಿಂಡಿಯ ಹೂರಣವಂತೆ
ಅಕ್ಕರೆಯ ಸಕ್ಕರೆಯ ಭಾತೃತ್ವ ತುಂಬಿದ ಸಹೋದರಿಯಂತೆ
ಸದಾ ನಗು ಮೊಗದ ಸುಂದರ ಕೋಮಲೆಯಂತೆ...!
ಕಾಯಕದಲ್ಲಿ ನಿಮ್ಮನ್ನು ಮೀರಿಸುವಂತಿಲ್ಲ
ಶಿಸ್ತಿನಲ್ಲಿ ಯಾರಿಗೂ ಸರಿಸಾಟಿಯಿಲ್ಲ
ಮಾಡುವ ಕಾಯಕ & ಮನಸು ಶುದ್ಧವಿದ್ದರೆ ಯಾರಿಗೂ ಅಂಜುವಂತಿಲ್ಲ...
ಒಗ್ಗಟಾಗಿದ್ದರೆ ಯಾವುದೇ ಭಯವಿಲ್ಲ....!!
ಎಲ್ಲರನ್ನು ಗೌರವಿಸುವ ನಿಮ್ಮ ಸರಳತೆಯನ್ನ
ಕಪಟ ಮೋಸವಿಲ್ಲದ ನಿಮ್ಮಯ ಹೃದಯವನ್ನ
ಪ್ರಾಣಿ ಪಕ್ಷಿಗಳಿಗೂ ತೋರಿಸುವಿರಾ ಪ್ರೀತಿಯನ್ನ
ಹಸಿರಿದ್ದರೆ ಉಸಿರು ಎಂದು ಗಿಡ ಮರಗಳಿಗೆ ಉಣಿಸಿದಿರಿ ಪ್ರೇಮವನ್ನ......!!"
ನನ್ನೊಂದಿಗೆ ಎಲ್ಲರು ಖುಷಿ ಇರುವಂತೆ
ಚಿಕ್ಕವರೆನ್ನದೆ ದೊಡ್ಡವರೆನ್ನದೆ ಎಲ್ಲರೊಂದಿಗೆ
ಬೆರೆಯುವಂತೆ...
ಜನವರಿ 26, 2025ರ ಗಣರಾಜ್ಯೋತ್ಸವ ಎಂದಿಗೂ
ಮರೆಯಲಾಗದ ದಿನವಂತೆ....
ಹಿರೇಕೆರೂರಿನ ನ್ಯಾಯಾಲಯದಲ್ಲಿ
ಇತಿಹಾಸ ಸೃಷ್ಟಿಸಿದಿರಿ ಯಾರು ಮರೆಯಲಾರದ
ನೆನಪು ಉಳಿಯುವಂತೆ....
ಆ ನೆನಪು ಇನ್ನು ಮರೆಯಲಾರದಂತೆ....!!!!🥰🙏💐
-