ಹಿರಿತನ ಎಂಬುದು ವ್ಯಕ್ತಿತ್ವದಿಂದ ಬರುವುದೇ ಹೊರತು ವಯಸ್ಸಿನಿಂದಲ್ಲ.
ಕಾರಣವಿಷ್ಟೇ
ಹೀಯಾಳಿಸುವವರಿಂದಲೇ ಹೋಗಳಿಸಿಕೊಂಡಿದ್ದೆವೆ,
ಕಾಲೆಳೆದವರಿಂದಲೇ ಈಗ ಕೈ ಮುಗಿಸಿಕೊಂಡಿದ್ದೆವೆ.
-
ಬರೆಯುವೆನೊಂದು ಕವಿತೆ
*ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಸಾವಳಗಿ ದೇಶಮಂ,,ಮರಿದುಂಬಿಯಾಗಿ ... read more
"ಪ್ರಯತ್ನ"
ಪರಮಾವಧಿ ತಲುಪಿದರು ಕೂಡ
ಮನಸ್ಸಿನಿಂದ ಶ್ರದ್ದೆಯಿಂದ ಪ್ರಯತ್ನಿಸಿ
ಅದರಿಂದ ದೊರೆಯುವ ಫಲ
ಬಹಳ ಪರಮಾನಂದ ನೀಡುತ್ತದೆ....— % &— % &-
ಕಂಡ ಕನಸೆಲ್ಲ ಖುಷಿಯಾಗಿ,
ಆಕಾಶದ ಎತ್ತರಕ್ಕೆ ಹಾರಿ.
ಮಗುವಿನ ಮನದಂತೆ,
ಚಿಟ್ಟೆಯ ಕಲರವದಂತೆ,
ಎತ್ತೇತ್ತಲು ಹಾರಾಡುತ್ತಿದೆ,
ಈ ಪುಟ್ಟ ಮನ,
ನೀ ಕೊಟ್ಟ ಉತ್ತರಕ್ಕೆ...-
ಎರಡು ವರ್ಷಗಳ ಕಾಲ ನಡೆದ ಕ್ಲಾಸುಗಳು.
ಬಿಡದೆ ಕೇಳಿದ ಪಾಠಗಳು.
ಇಷ್ಟವಿಲ್ಲದಿದ್ದರೂ ಕಷ್ಟದ ಅಸೈನ್ಮೆಂಟ್ಗಳು.
ಅಪರಿಚಿತರು ಪರಿಚಯವಾದ ದಿನಗಳು.
ಹಾಗೆ ಬಂದು ಹೋಗುವ ಸ್ನೇಹಿತರು.
ಒಗ್ಗಟ್ಟನ್ನು ತೋರಿಸುವ ಯುನಿಫಾರ್ಮ್ಗಳು.
ಎಕ್ಸಾಮ್ ಬರೆದು 3 ತಿಂಗಳಿಗೆ ರಿಸಲ್ಟ್ ಗಳು.
ಶಿಸ್ತಿಗೆ ಸ್ವಲ್ಪ ಮೆಚ್ಚುಗೆಗಳು ಅಶಿಸ್ತಿಗೆ ಸ್ವಲ್ಪ ಶಿಕ್ಷೆಗಳು.
ಇದರ ನಡುವೆ ಬೆಳೆದು ಬಂದಿರುವ ಅಪರೂಪದ
ಅಕ್ಕ ತಮ್ಮ ಅಣ್ಣ ತಂಗಿ ಎಂಬ ಸಂಬಂಧಗಳು.
ಎಲ್ಲರೂ ನಮ್ಮವರೇ ಎನ್ನುವ ಸ್ವಾರ್ಥ ದಿನಗಳು.
ನಡುವೆ ಸಣ್ಣ ಮುನಿಸು ಪುಟ್ಟ ಪ್ರೀತಿಗಳು.
ಗೊತ್ತಿಲ್ಲದೆ ನಡೆದ ತಪ್ಪುಗಳಿಗೆ ನನ್ನ ಸ್ವಾರಿಗಳು.
ಇಂತಹ ನೂರು ನೆನಪುಗಳನ್ನು ಬಿಟ್ಟು ಹೊರಟಿರುವೆನು
ಎಸ್ ಡಿ ಎಮ್ ಕಾಲೇಜಿನ ಆವರಣದಿಂದ ಕಣ್ತುಂಬಾ ಕಂಬನಿ ಹನಿಗಳು😭
ಮುಗಿಯದೆ ಬಿಎಡ್ ದಿನಗಳು......-
ನನ್ನ ಕನಸುಗಳೇ ಅದಲಿ ಬದಲಿ ಯಾಗುತ್ತಿರುವಾಗ.
ಹೊಸತನವೆಂಬುದರಲ್ಲಿ ಹೊಲಸುತನವೇ ತುಂಬಿ ತುಳುಕಾಡುತ್ತಾರುವಾಗ.-
ಕನಸೋ,ಆಸೆಯೋ
ಅದೆನೋ ಇರಲಿ,
ಅವರದಾದರೇನು,
ನನ್ನದಾದರೇನು
ನನಸಾಗಿಸುವ ಸಹೃದಯಿ
ಯವರಾಗಬೇಕಷ್ಟೆ.
-
ಹೃದಯ ಬಯಸುವ ಆಸೆಗಳು ನೂರಾರು,
ಮನಸ್ಸಿನ ಭಾವನೆಗಳ ಕೇಳೊವ್ರು ಯಾರು ?
ಹುಚ್ಚು ಹೃದಯದ ಹದಿನೆಂಟು ಕನಸುಗಳು
ಮಾಡಿದರು ಮನವಿ ಮರಣ ಕಾಣುತ್ತಿರುವಾಗ....!
-
ಏನು ಗೋತ್ತಿಲ್ಲದಂತೆ ಸುಮ್ಮನಿದ್ದು
ಎಲ್ಲವನ್ನು ಮಾಡಿರುವ ಜನರಿದ್ದಾರೆ.
ಯಾರ ಚಿಂತೆ ನನಗ್ಯಾಕೆ ಎಂದು ಇನ್ನೊಬ್ಬರನ್ನು
ಹಿಂದೆ ಬೈದು ಹೀಯಾಳಿಸುವವರಿದ್ದಾರೆ.
ನಾವು ಒಳ್ಳೆಯವರಪ್ಪ ಎಂದು
ಬಿಗುವ ಜನ ಬಹಳಷ್ಟಿದ್ದಾರೆ.
ಒಳ್ಳೆತನಾನಾ ಪ್ರೂವ್ ಮಾಡ್ಕೊಳಕ್ಕೆ ಹೋಗ್ಬೇಡಿ
ಸತ್ಯ ಯಾವತಿದ್ರು ಸತ್ಯಾನೆ ಆಗಿರುತ್ತೆ,
ಸುಳ್ಳು ಸತ್ಯದ ಕಾಲ್ ಕೆಳಗೆ ಇರುತ್ತೆ.
-
ಮಗುವಂತ ಮಧುರ ಮನಸ್ಸಿನ
ಮನಮೋಹಕ ಮುಗ್ಧೆ ಅವಳು,
ನಾ ಒಂದು ಹೇಳಿದರೆ
ತಾ ಸಾವಿರ ನುಡಿಯುವ ತುಂಟಿಯವಳು..-