KUMARSWAMY GHATE   (ಘಾಟೆ)
98 Followers · 40 Following

Joined 10 September 2018


Joined 10 September 2018
14 JUL AT 0:50

ಹೆಗಲಮೇಲೆ ಜವಾಬ್ದಾರಿಗಳನ್ನ ಹೋತ್ತು ಸಾಗುವ ಪಯಣಿಗ ನಾ ಈ ಬದುಕಲ್ಲಿ.
ಬದುಕುವುದೆ ಈ ಪಯಣದ ಮಹಾ ಉದ್ದೇಶವಾಗಿತ್ತು ಪಯಣದ ಮೊದಲಲ್ಲಿ.
ಯಾಕೋ ಕಾಣೆ ಬಯಸಿದಂತೆ ಬದುಕು ಸಾಗುತ್ತಿದ್ದರು,
ಏನೋ ಬದಲಾಗಿದೆ ಬಂದ ದಾರಿಯಲ್ಲಿ.
ಸಮಯಕ್ಕೆ ಕೆಲವೊಂದು ಸಂಬಂಧಗಳು ಅರ್ಧಕ್ಕೆ ಕೊನೆಯಗೊಂಡಿವೆ, ಅರ್ಧಕ್ಕೆ ಶುರುವಾದ ಸಂಬಂಧಗಳು ಮರೆಸಿವೆ ಕಹಿ ಅನುಭವಗಳಿಲ್ಲಿ.
ಸಾಗುತಿರುತಿರಲಿ ಈ ಪಯಣವು ಹೊಸ ಹೊಸ ಸಂಬಂಧಗಳನ್ನು ಹುಡುಕೂತ್ತಾ, ಕಳೆದುಕೊಳ್ಳುತ್ತಾ, ಪಡೆದುಕೊಳ್ಳುತ್ತಾ ಈ ಬದುಕಿನ ನಿಜವಾದ ಅರ್ಥ ಕಂಡುಕೊಳ್ಳುವ ಮಾರ್ಗಗಳಲ್ಲಿ.

-


22 FEB AT 3:09

ಬಾಳೆಂಬ ಈ ಸಾಗರದ ಪಯಣದಲಿ ನಾವಿಕ ನಾನಿಲ್ಲಿ.
ಈ ನಾವಿಕನ ಗುರಿತೋರಿಸುವ ಧ್ರುವತಾರೆ ನೀ ಬಾಳಲ್ಲಿ.
ಜವ್ದಾರಿಗಳೆಂಬ ಅಲೆಗಳಿಗೆ ಸಿಲುಕಿ ದಿಕ್ಕು ಬದಲಿಸಿದರೆ ಭಯಪಡಬೇಡ ನನ್ನ ಮನದೊಡತಿ.
ಈ ನಾವಿಕನ ದಿಕ್ಸೂಚಿ ನೀ.
ಸಾಗುತ್ತಿರಲಿ ಈ ಸುಂದರ ಪಯಣದ ಅಧ್ಯಾಯವು ನಾವಿಬ್ಬರೂ ಜೊತೆಗೂಡಿ ಕೊನೆಗಳಿಸುವ ಅಂತಿಮ ಪುಟಗಳವರೆಗೆ...

-


20 JUN 2024 AT 2:35

ದೂರ ನಿನ್ನ ಕನಸುಗಳಿಂದಾದರೆ, ಆ ಕನಸಿನ ಬದುಕಿಗಾಗಿ ಬದುಕಲೇಬೆಕೆಂಬ ಛಲ.
ದೂರ ನಮ್ಮವರಿಂದಾದರೆ, ಬದುಕು ಬದುಕಲಾರದಷ್ಟು ಭಾರ.
ದೂರ ಬಂಧುಗಳಿಂದಾದರೆ, ಬದುಕಿನಲ್ಲಿ ಭರವಸೆಗಳು ಭಾಗ್ಯದಲ್ಲಿರುವಷ್ಟು.
ದೂರ ನಿನ್ನಿಂದಾದರೆ ನಾ, ಗುರಿ ಕಾಣದಿರುವ ಪಯಣ ನನ್ನದು.

-


22 FEB 2024 AT 1:27

ಈ ಬದುಕಿನ ಬಂಡಿಗೆ ನಾವಿಬ್ಬರೆ ಚಕ್ರಗಳು.
ನಮ್ಮಿಬ್ಬರ ನಡುವಿನ ಭರವಸೆಯೇ ಬಂಡಿಗೆ ಇಂಧನ.
ಈ ಪಯಣದಲ್ಲಿ ಬರಲಿವೆ ನೂರಾರು ಕಷ್ಟ ಸುಖಗಳೆಂಬ ತಿರುವುಗಳು.
ಕಷ್ಟದ ತಿರುವುಗಳಲ್ಲಿ ಬರಲಿ ಬದುಕಿನ ಭಾರ ನನ್ನೆಡೆಗೆ.
ಸುಖದ ತಿರುವುಗಳಲ್ಲಿ ನಾನಿರುವೆ ಆಸರೆಯಾಗಿ ನಿನ್ನ ಗಮ್ಯದೆಡಗೆ.
ಸಾಗುತಿರಲಿ ಪ್ರತಿ ವರ್ಷದ ಮೈಲುಗಲ್ಲು ನಿರಂತರವಾಗಿ.
ನಾವಿಬ್ಬರೂ ಕಂಡ ಕನಸಿನ ನಿಲ್ದಾಣದವರೆಗೆ.

-


22 FEB 2023 AT 4:13

ನಿನ್ನ ಮೊದಲ ಸಲ ಕಂಡಾಗ,
ನೀ ನನ್ನವಳಾಗುವೆಂಬುದು ಅನಿಸಿರಲಿಲ್ಲ.
ನಾ ನಿನ್ನ ನೋಡ ಬಂದಾಗಲೂ,
ನೀನೆ ಯಾಕೆ ಎಂಬುದಕ್ಕೆ ಉತ್ತರ ನನ್ನಲ್ಲಿ ಇರಲಿಲ್ಲಾ.
ನಾವಿಬ್ಬರು ದಂಪತಿಗಳಾಗಿದ್ದಾಗಲೂ,
ನೀ ನನ್ನ ಬಾಳಿನಲ್ಲಿ ಇರುವ ಪ್ರಾಮುಖ್ಯತೆ ತಿಳಿಯಲಿಲ್ಲ.
ನಮ್ಮಿಬ್ಬರ ಕನಸಿಗೆ ನೀ ಜನ್ಮವಿತ್ತಾಗಲೂ,
ನೀನೆಯಾಕೆಂಬ ಉತ್ತರದ ಹುಡುಕಾಟ ನಿಲ್ಲಲಿಲ್ಲ.
ಈ ದಿನದಂದು ಹಿಂತಿರುಗಿ ನೋಡಿದೊಡನೆ,
ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀನೆಂದು ಅನಿಸುತ್ತದೆ.

-


15 SEP 2021 AT 10:32

ಈ ಜೀವನವೇ ಒಂದು ಸಂಬಂಧಗಳನ್ನು ಪೊಣಿಸುವ ಪಯಣ.
ಈ ಪಯಣದ ಉದ್ದಕ್ಕೂ ಒಂದೊಂದು ಸಂಬಂಧಗಳು ಒಂದೊಂದು ಅನುಬಂಧವನ್ನು ಜೋಡಿಸುವುದು.
ಎಲ್ಲಾ ಸಂಬಂಧಗಳು ಅದರದೇ ಆದ ಅನುಭವಗಳನ್ನು ಮನಸ್ಸಿನ ಮೂಲೆಯಲ್ಲಿ ಅಡಗಿರುತ್ತದೆ.
ಆದರೆ ಒಬ್ಬ ತಂದೆ ಮತ್ತು ಮಗಳ ಬಾಂಧವ್ಯ ಮಾತ್ರ ಮನಸ್ಸಿನ ಶ್ರೇಷ್ಟ ಭಾಗದಲ್ಲಿ ಅಡಗಿರುತ್ತದೆ.
ಬಲ್ಲವರಿಗೆ ಮಗಳಿಂದ ಬದುಕು ಹೊಸದಾಗಿ ಆರಂಭವಾದರೆ, ಅರಿಯದವರಿಗೆ ಅವಳೊಂದು ಬದುಕಿಗೆ ಭಾರವಾಗಿ ಭಾಸವಾಗುತ್ತದೆ.

-


12 JUL 2020 AT 22:13

ಬದುಕೆಲ್ಲಾ ನಾನೊಬ್ಬನಿದ್ದೆ, ಬದುಕಿನ ಬಂಡಿ ಚಲಿಸುವಾಗ.
ಬದುಕಾಗಿ ನೀ ಬಂದೆ, ಬದುಕಿನ ಬಂಡಿಯ ಚಾಲಕನ ಸಹಚಾಲಕಳಾಗಿ.
ವೇಗವಾಗಿ ಚಲಿಸುತ್ತಿದ್ದ ಬಂಡಿ, ಬದಲಿಸಿದೆ ಬದುಕಿನ ವೇಗದ ಬಯಕೆಗಳ.
ಮಂದಗತಿ ಮನಸ್ಸೊಳಗೆ ಮುಡಿಸಿವೆ ಹಲವು ಪ್ರೇಶ್ನೆಗಳು, ನೀನಾಗು ಉತ್ತರವ ಪ್ರತಿ ಪ್ರೇಶ್ನೆಗಳಿಗಿಂದು.

-


13 MAR 2019 AT 20:15

ಜಾತಿಯ ಹೆಸರಂಟಿಕೊಳ್ಳದ, ಮಾನವಿಯತೆಯುಳ್ಳ ಮನುಜ.

-


12 MAR 2019 AT 19:37

ಜಗದ ಕಹಿ ಸತ್ಯವ ಬಲ್ಲವನು.
ಮಕ್ಕಳಿಗಳಿಗೆ ಕಷ್ಟವ ಅರಿವಿಗೆ ಅರಿಯ ಬಯಸದವನು.
ಹಗಲಿರುಳು ನಮಗಾಗಿ ದುಡಿಯುವ, ಮೃದು ಮನಸ್ಸುಳವನು ನಮ್ಮಪ್ಪ.


ಅಪ್ಪನ ಎಂಟಾಣೆ ಗಳಿಕೆಯಲ್ಲೂ,
ಹತ್ತಾರು ರುಚಿಯಾದ ಅಡುಗೆಯನ್ನು,
ಹಸಿವು ಅರಿಯುವ ಮುನ್ನವೇ ಉಣಬಡಿಸುವ
ನಮ್ಮನೆ ಅನ್ನಪೂರ್ಣೆ ನಮ್ಮಮ್ಮ.

-


11 MAR 2019 AT 9:29

ಇವತ್ತಿನ ಪ್ರತಿ ಕ್ಷಣಗಳನ್ನು ಸಂದರ್ಭಗಳನೂಸಾರವಾಗಿ ಬದುಕಲು ಕಲಿಬೇಕು.

-


Fetching KUMARSWAMY GHATE Quotes