1 JUN 2022 AT 13:51

ಗರ್ಭದಿ ನಗುತ ನಾನಿರಲು
ಕಡು ಕಷ್ಟದಿ ಬೆಂದವಳು ನೀನು,
ಅಂಬೆಗಾಲಿಡುತ್ತಾ ನಾ ಬಿದ್ದಾಗ
ಕೈಯಿಡಿದು ನಡೆಸಿದವಳು ನೀನು,
ಅಮ್ಮ ಎಂದು ತೊದಲಿಸಿದಾಗ
ಸಂತೋಷದಿ ಹಿಗ್ಗಿದವಳು ನೀನು,
ನಿನಗಾಗಿ ಏನನ್ನೂ ಬಯಸದೆ
ನನಗಾಗಿ ದುಡಿದವಳು ನೀನು,
ಮಮತೆಯ ಮಡಿಲಿನಲ್ಲಿ ಮಲಗಿಸಿ
ಜೋಗುಳ ಹಾಡಿದ ದೈವ ನೀನು...

-