Kumari Chandu  
12 Followers · 5 Following

ನಿಮಗೆಂದು....ಸ್ಪಂದಿಸುವ ಹುಡುಗಿ...ಪಕ್ಕ ಕನ್ನಡತಿ ಚಂದು 💃
Joined 7 June 2019


ನಿಮಗೆಂದು....ಸ್ಪಂದಿಸುವ ಹುಡುಗಿ...ಪಕ್ಕ ಕನ್ನಡತಿ ಚಂದು 💃
Joined 7 June 2019
5 NOV 2024 AT 23:31


ನನ್ನ ಒಲವಿನ ಚಿಲುಮೆ ಇದು
ನನ್ನ ಬದುಕಿನ ಫಲವು ಇದು
ನನ್ನ ಮಾತಿನ ಚಿರತೆ ಇದು
ನನ್ನ ತನುವಿನ ಚೋರ ಇದು
ನನ್ನ ಜೀವಕೆ ಚಾಲ್ತಿ ಇದು
ನನ್ನ ಜನುಮಕೆ ಜೊತೆಗಾರ್ತಿ ಇದು

-


29 MAR 2024 AT 20:35

Cry today, End it here itself,
Don't carry it any further,

What happened, Is a past now,
Don't take it to future,

Live life, As it comes ahead,
Unfolding it every other moment,

Don't panic, It's not a trap,
This will make you stronger,

Because life, It is our techer,
Never partial to anyone ever,

Do everything, What your heart wants,
Because never is never good,

Because today, Will never come back,
It will become yesterday tomorrow.

-


16 MAR 2024 AT 0:00

ನವ್ಯ ಕಾವ್ಯಗಳ ಹರಿಕಾರ್ತಿ...
ಸೋಜಿಗದ ಮನದ ಮಾಯಗಾತಿ...

ಈ ಕವಿತೆಯ ಒಡೆತಿ...
ಮನಸ್ಸುಗಳ ಒಲವಿನ ಗೆಳೆತಿ...

ಉದಯಕೆ ಮೆರುಗಿತ್ತು...
ಮಮತೆಗೆ ಪ್ರೀತಿಯ ಮಡಿಲಿತ್ತು...

ಅಳತೆಗು ಸಿಗದಷ್ಟು ಅಪರಿಮಿತ
ಅಕ್ಕರೆಯನ್ನು ಉಣ ಬಡಿಸಿದ ನಲ್ಮೆಯ ಜೀವಕ್ಕೆ
ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು ಅಕ್ಕ....❤️

-


13 MAR 2024 AT 21:14

ಉಮ್ಮಳಿಸಿ ಬರುವ ದುಃಖವನು...
ತಡೆ ತಡೆದು ಬಂದು ಕಾಡುತಿಹ ನಿನ್ನ ನೆನಪುಗಳನ್ನು...
ಹೇಗೆ ತಡೆಯಲಿ ಹೇಳು...
ನಿನ್ನ ನೆನಪಲಿ ಹೆಚ್ಚಿದ ಹೃದಯ ಬಡಿತವನು...
ಕೇಳು ನೀನು ಏದುಸಿರ ಈ ಎನ್ನ ಕಾತರವನು...
ಉತ್ತರಿಸು ಒಮ್ಮೆ ತಡೆಯಲು...
ಒತ್ತರಿಸಿ ಬರುವ ಈ ಕಣ್ಣೀರನು...

-


31 DEC 2023 AT 23:58

ಬದಲಾಗುವ ಕ್ಯಾಲೆಂಡರಿನ ಜೊತೆಗೆ
ಬದಲಾಗ ಬಯಸುವ ಮನಸ್ಸುಗಳು
ಹೊಸತನ ಹುಮ್ಮಸ್ಸಿನೊಂದಿಗೆ ಬದಲಾಗಿ
ಬದುಕು ಬವಣೆಯಾಗದೆ
ಬದಲಾವಣೆಯಾಗಿ ವರುಷವಿಡಿ
ಹರುಷದಿಂದ ಕೂಡಿರಲಿ...
ಎಲ್ಲರ ಆಸೆ-ಆಕಾಂಕ್ಷೆಗಳೆಲ್ಲವೂ ಈಡೇರಲಿ...❤

-


21 AUG 2023 AT 23:26

ಜಗದಗಲ ಮಮತೆಯ ಮಡಿಲಲ್ಲೆ ಇಟ್ಟವಳ
ಜೀವನದ ಜವಬ್ದಾರಿ ಹೆಗಲಲ್ಲೆ ಹೊತ್ತವಳ
ಜನುಮದಿನ ಇಂದು, ಮನ ತುಂಬಿ ಹರಸಿ ಬಂಧು..

ಹೆಣ್ಣಾಗಿ ಹುಟ್ಟಿ ಕಣ್ಣಾದಳು ಇತರರ ಬದುಕಿಗೆ
ಹಣ್ಣಾಗಿ ಗಂಡನಿಗೆ ಹುಣ್ಣಾಗದೆ ಸಮಾಜಕ್ಕೆ
ಸುಣ್ಣದಂತೆ ನೊಂದು ಕರಗಿ
ಬಣ್ಣ ಕಳೆಯದಂತೆ ಚೆಂದದಿ ಬದುಕಿ
ಗುಣದಲ್ಲೆ ಎಲ್ಲರ ಗೆದ್ದವಳು
ನಾ ಕಂಡ ದೇವತೆ ಇವಳು.

ವಸಂತಗಳು ಉರುಳಿದರು ಸಾವಿರ ...
ಅಮ್ಮ ನಿನ್ನ ನೆನಪು ಮಾಸದ ಮನ್ವಂತರ...!!!

ಹುಟ್ಟು ಹಬ್ಬದ ಶುಭಾಶಯಗಳು ಅಮ್ಮ.

-


10 AUG 2023 AT 6:31

ಮಾತಿಗೆ ಬೆಲೆ ಇಲ್ಲ ಅಂದಾಗ
ಮೌನವಾಗಿ ಇರಬೇಕು....
ಮೌನಕ್ಕೂ ಬೆಲೆ ಇಲ್ಲ ಅಂದಾಗ
ಅವರಿಂದ ದೂರ ಇದ್ದುಬಿಡಿ....
ಯಾಕಂದ್ರೆ
ಅಲ್ಲಿ ಪ್ರೀತಿಯನ್ನು
ಪಡೆಯೋಕಾಗಲ್ಲ!
ನೆಮ್ಮದಿ ಅಂತೂ
ಸಿಗೋದೆ ಇಲ್ಲ.

-


3 AUG 2023 AT 23:25

ಮಗಳು ಹುಟ್ಟಿದ್ದಾಳೆ,
ಬಗೆಬಗೆಯ ಕನಸು ಕೊಟ್ಟಿದ್ದಾಳೆ.

ನಗುವ ಬೆಳಗಿದ್ದಾಳೆ, ಮನೆ-ಮನಕೆ
ಸಂತೃಪ್ತಿಯ ಚಿಲುಮೆಯಾಗಿದ್ದಾಳೆ.

ಪ್ರೀತಿ ಬೆಸೆದಿದ್ದಾಳೆ,
ಬದುಕು ಗೆಲ್ಲುವ ಒರತೆ ಚಿಮ್ಮಿದ್ದಾಳೆ.

ಹೆಸರು ಇಟ್ಟಿದ್ದೇವೆ, ಬೆಳದಿಂಗಳೆರಚಿ
"ಸಾನಿಧ್ಯ" ತಿಳಿತಂಪು ಮಾಡಲಿದ್ದಾಳೆ.

-


3 AUG 2023 AT 23:16

ಮಗಳು ಹುಟ್ಟಿದ್ದಾಳೆ,
ಬಗೆಬಗೆಯ ಕನಸು ಕೊಟ್ಟಿದ್ದಾಳೆ.

ನಗುವ ಬೆಳಗಿದ್ದಾಳೆ, ಮನೆ-ಮನಕೆ
ಸಂತೃಪ್ತಿಯ ಚಿಲುಮೆಯಾಗಿದ್ದಾಳೆ.

ಪ್ರೀತಿ ಬೆಸೆದಿದ್ದಾಳೆ,
ಬದುಕು ಗೆಲ್ಲುವ ಒರತೆ ಚಿಮ್ಮಿದ್ದಾಳೆ.

ಹೆಸರು ಇಟ್ಟಿದ್ದೇವೆ, ಬೆಳದಿಂಗಳೆರಚಿ
"ಸಾನಿಧ್ಯ" ತಿಳಿತಂಪು ಮಾಡಲಿದ್ದಾಳೆ.

-


15 JUL 2023 AT 0:55

MY 🌍

It was you that reduced me to
the rubble of myself,
and then built me back up stronger.
It was you that stopped me in
my tracks, and paved new ones for me.
It was you who has been
kicking me inside.
It was you that made me a mother.

HAPPY BIRTHDAY my 🌍

-


Fetching Kumari Chandu Quotes