ಕುಡಿಯುವವರು ಕುಡಿಯಲಿ...
ತಿನ್ನುವವರು ತಿನ್ನಲಿ...
ಕುಡಿದು ತಿನ್ನುವ ಮಿತಿಯಲ್ಲಿ...
ಮಿತಿಮೀರಿ ವರ್ತಿಸುವರು ಹೊಸ ವರ ವರ್ಷದಲಿ...
ಇಂಗ್ಲೀಷರು ಬಿಟ್ಟಿರುವ ಸಂಸ್ಕೃತಿಯನ್ನು...
ತನ್ನದೆಂಬಂತೆ ಬಿಗಿದಪ್ಪಿರುವನು ಭಾರತೀಯನು...
ಬೆಕಾಬಿಟ್ಟಿಯಾಗಿ...
ಕಂಡ ಕಂಡಲ್ಲಿ...
ಮರೆತು ನಮ್ಮ ತನವ...
ಕಾಯುತಿರುವರು ಪಾಶ್ಚಾತ್ಯ ಸಂಸ್ಕೃತಿಯ ಗೌರವ...
ಅವರ ಆಚರಣೆ ಅವರಿಷ್ಟ...
ಅದಾಗಬಾರದು ಬೇರೆಯವರಿಗೆ ಕಷ್ಟ...
ನನಗೆ ನನ್ನ ಹಿಂದೂ ಸಂಸ್ಕೃತಿಯೇ ಶ್ರೇಷ್ಠ...-
ಕಾಯುತ್ತಿರುವೆ ಉತ್ತಮ ದಿನಗಳಿಗೆ...
ನಿಧಾನವಾದರೂ ಸರಿಯೇ ನನ್ನ ದೂರಿದ ಜನರ ನಿದ್ದೆಗೆಡಿಸುವಂತೆ...
ಜೊತೆ ಇದ್ದು ಮುನ್ನಡೆಸಿದವರನ್ನು ಮರೆಸದಂತೆ...
ಎಷ್ಟೇ ದೊಡ್ಡವನಾದರೂ ಅಹಂಕಾರ ಪಡದಂತೆ...
ಕಾಯುತ್ತಿರುವೆ ನಾ ಅಂತಹ ಉತ್ತಮ ದಿನಗಳಿಗೆ...-
ನೀನೆಷ್ಟೇ ಒಳ್ಳೆವನಾಗಿರು...
ಎಷ್ಟೋ ಒಳ್ಳೆಯ ಕೆಲಸ ಮಾಡುತಿರು...
ಎಷ್ಟೇ ಒಳ್ಳೆಯ ದಾರಿಯಲಿ ನಡೆಯುತಿರು...
ನಿನ್ನ ಮೇಲೆ ಕೆಟ್ಟ ಅಭಿಪ್ರಾಯ ಇಟ್ಟುಕೊಂಡವನ ಹತ್ತಿರ ಅದ್ಯಾವುದು ಲೆಕ್ಕಕ್ಕೆ ಬರಲ್ಲ...
ಹಂಗಂತ!!!
ನಿನ್ನ ದಾರಿ,, ನಿನ್ನ ಗುಣ,, ನಿನ್ನ ಮನ ಬದಲಾಯಿಸದಿರು...
ಎಷ್ಟೇ ಕಷ್ಟ ಇದ್ದರೂ ನಿನ್ನ ಕಾಯ್ವ ಕಾಣದ ಕೈಯ ಹೆಸರೇ ದೇವರು...-
ಒಲವಿನ ಸೆಳೆತ...
ಮೋಹದ ಮೊರೆತ...
ಇದೆಲ್ಲದರ ನಡುವೆ ಸಾಧಿಸಬೇಕೆಂಬುದು
ನನ್ನ ಮನದ ಇಂಗಿತ...
ಮನದಲಿರುವ ನೋವು...
ಕಹಿ ಎನಿಸುವ ಬೇವು...
ಎರಡನ್ನು ನುಂಗಿ ಜೀವನ
ನಡೆಸಬೇಕಿದೆ ನಾವು...
ಎಲ್ಲ ನೋವಿಗು ಔಷಧವಿದೆ...
ಎಲ್ಲ ಕಷ್ಟಕೂ ಕೊನೆಯೆಂಬುದಿದೆ...
ನಮ್ಮ ಸ್ವಾರ್ಥಕ್ಕಾಗಿ ಪರಹಿಂಸೆ
ಮಾಡದಿರು ಮಾನವೀಯತೆ ಎಂಬುದೊಂದಿದೆ...-
ನೆನಪುಗಳನು ಕೆದಕುತ್ತಿರುವಾಗ...
ಹಿಂತಿರುಗಿ ಹೋದಂತೆ ಆ ಸವಿಘಳಿಗೆಗೆ...
ಕಳೆದ ದಿನಗಳವು ನಿನ್ನೊಂದಿಗೆ...
ಈ ದಿನ ನಾನು ಕಾಯುತ ಕುಳಿತಿರುವಾಗ...
ಒಬ್ಬಂಟಿಯಾಗಿರುವೆ ನಾ ನನ್ನ ಮನಸೊಂದಿಗೆ...
ಮನಸಾಗಿದೆ ಈಗ ಒಡೆದ ಬಿಂದಿಗೆ...
ನಿನ್ನ ಮರೆಯುವ ಹಾದಿ ಕಂಡುಕೊಂಡಾಗ...
ಕಲ್ಲು ಮಾಡಿಕೊಳ್ಳಬೇಕಿದೆ ನನ್ನ ಎದೆ ಗುಂಡಿಗೆ...
ಸಾಧ್ಯವಾಗದೇ ಶರಣಾಗಬೇಕಿದೆ ಹುಚ್ಚು ಪ್ರೀತಿಗೆ...-
ಪ್ಯಾಶನ್ ಅಂತ ಹರಿದ ಪ್ಯಾಂಟ್ ಕೊಳ್ಳುವ ಮಗನಿಗೆ ಕಾಣಲಿಲ್ಲ ಅಪ್ಪನ ಹರಿದ ಬಟ್ಟೆ...
ಬ್ಯೂಟಿ ಪಾರ್ಲರ್ ಅಂತ ಮುಖಕ್ಕೆ ಬಣ್ಣ ಹಚ್ಚಿಕೊಂಡು ಓಡಾಡುವ ಮಗಳಿಗೆ ಕಾಣಲಿಲ್ಲ ಅಮ್ಮನ ಪಾತ್ರೆ ತಿಕ್ಕಿದ ಮಸಿಯ ಬಣ್ಣ...-
ನನಗೆ ಬೆಳೆಯಬೇಕೆಂಬ ಆಸೆ ಇದೆ...
ಆದರೆ ಮತ್ತೊಬ್ಬರ ಭಾವನೆಗಳ ಗೋರಿಗಳ ಮೇಲಲ್ಲ...
ನನಗೆ ಎಲ್ಲರೊಂದಿಗೆ ಬೆರೆಯಬೇಕೆಂಬ ಆಸೆ ಇದೆ...
ಆದರೆ ಯಾರ್ಯಾರಿಗೋ ನನ್ನ ತನವನ್ನ ಬಿಟ್ಟು ಕೊಡಬೇಕಿಂದಿಲ್ಲ...-
ಕನ್ನಡಿಯಂತಾಗಿಬಿಡುವೆ...
ನನಗೇತಕೆ ಹಿಂದೆ ಬಣ್ಣ ಬಳಿದವರ ಗೊಡವೆ...
ಗಾಜಿಗೂ ಬಳೆದರೆ ತಾನೆ ಬಣ್ಣ...
ಅದಾಗುವುದು ನಿಮ್ಮನ್ನು ತೋರಿಸುವ ದರ್ಪಣ...-
ಮರೆಯುತ್ತಿದೆ ಮನಪೆಟ್ಟಿಗೆ ನೆನೆಸುತ್ತ ಬರಿ ನಿನ್ನನೆ...
ಬೇರಾರನೂ ನೆನಸದೆ ಬೇರೊಂದನೂ ಬಯಸದೆ ಮರೆತಿರುವೆ ನಾ ನನ್ನನೆ...
ಇಷ್ಟೊಂದು ಸ್ವಾರ್ಥಿ ನಾನಾದೆ
ಎಲ್ಲದಕೂ ಕಾರಣ ನೀನಾದೆ...
ಕಡುನೋಟದಲಿ,, ನಡು ಮದ್ಯದಲಿ ನೀನೇತಕೆ ಮರೆಯಾದೆ...-
ಬೇರಾರು ಕಾಣದ ಕಣ್ಣಿಗೆ ಬೆರಗಾದಂತೆ ನೋಡುತಿರುವೆ ನಾ ನಿನ್ನನು...
ಯಾರೂ ಬಂದಿರದ ಹೃದಯದ ಕೋಣೆಯಲಿ ಬೆಳದಿಂಗಳ ಚಂದಿರನನು ಕಂಡೆನು...
ನಿಜವೇನೋ ಸುಳ್ಳೇನು ಎಂಬಂತೆ ಕೇಳುತಿರುವೆ ನನ್ನ ಮನಸನು...
ಸುಳ್ಳಾಗದಿರು,, ನಿಜವಾಗುತಿರು,, ಮರುಳನಾಗಿ ನೋಡುತಿರುವೆ ನಾ ನಿನ್ನ ಮುಂಗುರುಳನು...-